One N Only Exclusive Cine Portal

ಮೇಜರ್ ಕ್ಯೂರಿಯಾಸಿಟಿ ಸೃಷ್ಟಿಸಿದ ಸೀಜರ್!

ಈ ಬಾರಿ ಚಿರಂಜೀವಿ ಸರ್ಜಾ ಪುಷ್ಕಳವಾದ ಗೆಲುವೊಂದನ್ನು ತಮ್ಮದಾಗಿಸಿಕೊಳ್ಳುತ್ತಾರಾ? ಅಂತೊಂದು ಪ್ರಶ್ನೆಯನ್ನು ಮತ್ತು ಸಕಾರಾತ್ಮಕವಾದ ಉತ್ತರವನ್ನೂ ಒಟ್ಟೊಟ್ಟಿಗೇ ಹೊಮ್ಮಿಸುತ್ತಿರುವ ಚಿತ್ರ `ಸೀಜರ್’. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ ಒಂದಷ್ಟು ಸುದ್ದಿಯಲ್ಲಿದ್ದ ಈ ಚಿತ್ರ ಪ್ರಕಾಶ್ ರೈ ರಗಡ್ ಪಾತ್ರವೂ ಸೇರಿದಂತೆ ನಾನಾ ಕಾರಣಗಳಿಂದ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ.

ಈ ಚಿತ್ರದ ಆಡಿಯೂ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ಅಷ್ಟರಲ್ಲೇ ಸೀಜರ್ ಹಾಡುಗಳು ಎಲ್ಲರ ಮನಸುಗಳನ್ನೂ ತಾಕಿದೆ. ಅಂದಹಾಗೆ ಇದು ಈ ಬಾರಿಯ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಮೊದಲ ಬಾರಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರ. ಇದುವರೆಗೆ ರ್‍ಯಾಪ್ ಸಾಂಗುಗಳಿಗಷ್ಟೇ ಸೀಮಿತವಾಗಿದ್ದ ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ನೆಲೆ ನಿಲ್ಲುವ ಲಕ್ಷಣಗಳೂ ಕಾಣಿಸಿವೆ.

ವಿನಯ್ ಕೃಷ್ಣ ಮೊದಲ ಬಾರಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ತ್ರಿವಿಕ್ರಮ್ ಸಾಫಲ್ಯ ನಿರ್ಮಾಣ ಮಾಡಿದ್ದಾರೆ. ಬಹುಶಃ ಚಿರಂಜೀವಿ ಸರ್ಜಾ ಈ ಹಿಂದೆ ಯಾವತ್ತೂ ಕಾಣಿಸಿಕೊಂಡಿರದಂಥಾ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಅತಿರಥ ಮಹಾರಥ ನಟರುಗಳೇ ಸಾಥ್ ನೀಡಿರೋದರಿಂದ ಸೀಜರ್ ಖದರ್ ಮತ್ತಷ್ಟು ಹೆಚ್ಚಿಕೊಂಡಿದೆ. ಪಾರುಲ್ ಯಾದವ್ ಬಹು ಕಾಲದ ನಂತರ ಈ ಚಿತ್ರದ ಮೂಲಕ ನಾಯಕಿಯಾಗಿ ಮರಳಿದ್ದಾರೆ. ಇನ್ನುಳಿದಂತೆ ರಮೇಶ್ ಭಟ್, ಶೋಭರಾಜ್ ಮುಂತಾದವರ ಅದ್ದೂರಿ ತಾರಾಗಣ ಈ ಚಿತ್ರಕ್ಕಿದೆ.

ರವಿಚಂದ್ರನ್ ಪೋಷಕ ಪಾತ್ರದಲ್ಲಿ ಅಭಿನಯಿಸಿರುವ ಮಾಣಿಕ್ಯವೂ ಸೇರಿದಂತೆ ಒಂದಷ್ಟು ಚಿತ್ರಗಳು ಸೂಪರ್ ಹಿಟ್ಟಾಗಿವೆ. ಸೀಜರ್ ಚಿತ್ರದಲ್ಲಿಯೂ ರವಿಮಾಮಾ ಮೇಜರ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರೋದರಿಂದ ಈ ಚಿತ್ರವೂ ಕೂಡಾ ಸೂಪರ್ ಹಿಟ್ಟಾಗೋ ನಿರೀಕ್ಷೆಗಳಿದ್ದಾವೆ. ಕನ್ನಡದ ಮಟ್ಟಿಗೆ ಒಂದು ಹೊಸಾ ಥರದ ಕಥೆಯನ್ನು ನಿರ್ದೇಶಕರು ಈ ಚಿತ್ರಕ್ಕಾಗಿ ಆರಿಸಿಕೊಂಡಿದ್ದಾರಂತೆ. ಸದ್ಯ ಈ ಚಿತ್ರಕ್ಕಾಗಿ ಪ್ರೇಕ್ಷಕರೂ ಕಾತರಾಗಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image