One N Only Exclusive Cine Portal

ಸೆಕ್ಸ್, ಗಾಡ್, ಟ್ರುತ್ ಮತ್ತು ಟ್ರಬಲ್!

ಬಾಲಿವುಡ್‌ನ ವಿಕ್ಷಿಪ್ತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಮತ್ತೆ ವಿವಾದವೆಬ್ಬಿಸಿದ್ದಾರೆ. ವರ್ಮಾ ಂತಿeಭಾವಂತ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವರು ಇತ್ತೀಚೆಗೆ ಮಾತ್ರ ಚಿತ್ರಗಳ ಮೂಲಕ ಸದ್ದು ಮಾಡುವ ಬದಲಾಗಿ ವಿವಾದಗಳ ಮೂಲಕವೇ ರಾಡಿ ಎಬ್ಬಿಸುತ್ತಿದ್ದಾರೆ. ಅವರೀಗ ಪದೇ ಪದೆ ಸುದ್ದಿಯಲ್ಲಿರೋದು ಸೆಕ್ಸ್ಷ್, ಗಾಡ್ ಆಂಡ್ ಟ್ರುತ್ ಚಿತ್ರದ ಮೂಲಕ.
ನೀಲಿ ಚಿತ್ರತಾರೆಯನ್ನಿಟ್ಟಿಕೊಂಡು ಈ ಚಿತ್ರ ಮಾಡುತ್ತಿರೋ ವರ್ಮಾಗೆ ಇದೀಗ ಮತ್ತೊಂದು ಸಂಕಟ ಎದುರಾಗಿದೆ. ಭಾರತದಲ್ಲಿ ನೀಲಿ ಚಿತ್ರಗಳ ಚಿತ್ರೀಕರಣ ನಡೆಸೋದು ಕಾನೂನು ಪ್ರಕಾರ ಸಮ್ಮತವಲ್ಲ ಆದ್ದರಿಂದ ಇಲ್ಲಿ ಸದರಿ ಚಿತ್ರದ ಚಿತ್ರೀಕರಣ ನಡೆಸುವಂತಿಲ್ಲ. ಹೈದ್ರಾಬಾದ್ ಮುಂತಾದೆಡೆಗಳಲ್ಲಿ ರೀಲು ಸುತ್ತುವ ಪ್ಲಾನು ಮಾಡಿಕೊಂಡಿದ್ದ ವರ್ಮಾ ಈಗ ವಿದೇಶದಲ್ಲಿಯೇ ಚಿತ್ರೀಕರಣ ನಡೆಸುವ ಅನಿವಾರ್ಯತೆಗೆ ಬಿದ್ದಿದ್ದಾರೆ.


ವರ್ಮಾ ಇಂಥಾದ್ದದೊಂದು ಚಿತ್ರ ನಿರ್ದೇಶನ ಮಾಡುತ್ತಾರೆ ಅಂದಾಕ್ಷಣ ಸದರಿ ಚಿತ್ರ ಟೈಟಲ್ ಕಾರಣದಿಂದಲೇ ಗಮನ ಸೆಳೆದಿತ್ತು. ಆದರೆ ಈ ಚಿತ್ರದ ಹೀರೋಯಿನ್ ಯಾರೆಂಬ ಬಗ್ಗೆ ವರ್ಮಾ ಬಾಯಿ ಬಿಟ್ಟಿದ್ದೇ ಇಡೀ ಭಾರತೀಯ ಚಿತ್ರರಂಗವೇ ವರ್ಮಾನತ್ತ ಅಚ್ಚರಿಯ ನೋಟ ನೆಟ್ಟಿತ್ತು. ಏನನ್ನೇ ಮಾಡಿದರೂ ಅದರಲ್ಲೊಂದು ವಿಚಿತ್ರ ಅನ್ನುವಂಥಾದ್ದನ್ನು ಸೃಷ್ಟಿಸೋದು ಆರ್‌ಜಿವಿ ಶೈಲಿ. ಈ ಚಿತ್ರದ ಹೀರೋಯಿನ್ ವಿಚಾರದಲ್ಲಿಯೂ ಅವರು ಅಂಥಾದ್ದೇ ವಿಚಿತ್ರವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾಕೆಂದರೆ ವರ್ಮಾರ ಈ ಚಿತ್ರದ ಹೀರೋಯಿನ್ ನಮ್ಮ ಸನ್ನಿ ಲಿಯೋನ್‌ಳನ್ನೇ ಮೀರಿಸಿರೋ ಪ್ರಖ್ಯಾತ ನೀಲಿ ಚಿತ್ರಗಳ ನಟಿ ಮಿಯಾ ಮಲ್ಕೋವಾ!


ಅಮೆರಿಕಾದ ಕ್ಯಾಲಿಫೋರ್ನಿಯಾ ಮೂಲದ ಈಕೆ ಬ್ಲೂಫಿಲಂಗಳಲ್ಲಿ ನಟಿಸುತ್ತಲೇ ಭಾರೀ ಖ್ಯಾತಿ ಮತ್ತು ಭರಪೂರವಾಗಿ ಕಾಸು ಸಂಪಾದಿಸಿಕೊಂಡಿರುವಾಕೆ. ಇಂಥವಳ ಮೇಲೆ ಕಣ್ಣು ಹಾಕಿರೋ ವರ್ಮಾ ಯೂರೋಪಿನಲ್ಲಿಯೇ ‘ಗಾಡ್, ಸೆಕ್ಸ್ ಆಂಡ್ ಟ್ರುಥ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಳಂತೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಮಿಯಾ ಮಲ್ಕೋವಾಳೇ ಇತ್ತೀಚೆಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಜಾಹೀರು ಮಾಡಿದ್ದಳು. ಮೈಮೇಲೆ ಒಂದು ಚೂರೂ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಸೋಫಾ ಮೇಲೆ ಕೂತ ಮಿಯಾ, ಅಳೆದುರಲ್ಲಿ ಮಾತಾಡುತ್ತಾ ಕುಂತಿರೋ ವರ್ಮಾ… ಈ ಫೋಟೋವನ್ನೂ ಅಶ್ಲೀಲ ಅನ್ನಿಸದಂತೆ ಜಾಹೀರು ಮಾಡಿರೋದು ವರ್ಮಾನ ಅಸಲೀ ಟ್ಯಾಲೆಂಟಾಗಿ ಗಮನ ಸೆಳೆದಿತ್ತು. ಆದರೆ ಅದೇ ಭಾರೀ ವಿವಾದವೆಬ್ಬಿಸಿದ್ದೀಗ ಹಳೇ ವಿಚಾರ.
ಇದೀಗ ಈ ಚಿತ್ರದ ಟ್ರೈಲರ್ ಒಂದು ಬಿಡುಗಡೆಯಾಗಿ ಅದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ವರ್ಮಾ ಮತ್ತೆ ಮಹಾ ಗೆಲುವೊಂದರ ಮೂಲಕ ಮೇಲೆದ್ದು ನಿಲ್ಲ ಬಹುದಾ ಅಂತೊಂದು ಕಾತರವೂ ಹುಟ್ಟಿಕೊಂಡಿದೆ. ಆದರೆ ವರ್ಮಾ ವಿಚಾರದಲ್ಲಿ ಯಾವುದನ್ನೂ, ಯಾವ ಸಂದರ್ಭದಲ್ಲಿಯೂ ಬಲವಾಗಿ ನಂಬಿ ಕೂರುವಂತಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image