One N Only Exclusive Cine Portal

ಬಾಯ್‌ಫ್ರೆಂಡ್ ಜೊತೆ ಬಾಲಿವುಡ್ ನಟಿಯ ಬೆಚ್ಚಿ ಬೀಳಿಸೋ ಫೋಸ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಾಲಿವುಡ್ ನಟ ನಟಿಯರ ಪಾಲಿಗೆ ಬೆಡ್ ರೂಮಿಗೂ ಸೋಷಿಯಲ್ ಮೀಡಿಯಾಕ್ಕೂ ದಿನೇ ದಿನೇ ಅಂತರ ಕಡಿಮೆಯಾಗುತ್ತಿದೆ. ಖಾಸಗೀ ಬದುಕಿನ ಕ್ಷಣ ಕ್ಷಣದ ಮಾಹಿತಿಯಲ್ಲಿ ಸಾಮಾಜಿಕ ಜಾಲತಾಣಕ್ಕೆ ತುಂಬಿಸಿ ಭರ್ಜರಿ ಪ್ರಚಾರ ಪಡೆಯೋ ರೂಟು ಕಂಡುಕೊಂಡಿರೋ ನಟಿಯರೇ ಬಾಲಿವುಡ್ ತುಂಬಾ ತುಂಬಿ ತುಳುಕುತ್ತಿದ್ದಾರೆ. ಇದೀಗ ಬಾಲಿವುಡ್‌ನಲ್ಲಿ ಐಲಾಟಗಳ ಮೂಲಕವೇ ಒಂದಷ್ಟು ಗುರುತಿಸಿಕೊಂಡಿರೋ ಶಮಾ ಸಿಕಂದರ್ ಸರದಿ!


ಈ ಶಮಾ ಸಿಕಂದರ್ ಬಾಲಿವುಡ್‌ನಲ್ಲಿ ಭಾರೀ ಫೇಮಸ್ ನಟಿಯೇನಲ್ಲ. ಆದರೆ ಈಕೆ ಭಾರೀ ಫೇಮಸ್ ಆಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಬಿಕಿನಿ ಫೋಟೋಗಳನ್ನು ಹಾಕಿ ಪಡ್ಡೆಗಳನ್ನು ಬಿಸಿಯೇರಿಸೋ ಮೂಲಕ!


ಶಮಾ ಸಿಕಂದರ್ ಈಗ್ಗೆ ವರ್ಷದ ಹಿಂದೆ ಭಾರೀ ಸುದ್ದಿಯಲ್ಲಿದ್ದದ್ದು ಅಮೆರಿಕಾ ಹುಡುಗನೊಂದಿಗಿನ ಅಫೇರಿನ ಮೂಲಕ. ಕಂಡ ಕಂಡಲ್ಲಿ ಜೇಮ್ಸ್ ಡಿ ಮಿಲ್ರನ್ ಎಂಬೋ ನಟನೊಂದಿಗೆ ಕಾಣಿಸಿಕೊಳ್ಳಲಾರಂಭಿಸಿದ್ದ ಶಮಾ ಪೇಜ್ ಥ್ರೀ ಗಾಸಿಪ್‌ಗಳ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಳು. ಅದರೆ ಕಡೆಗೂ ಜೇಮ್ಸ್ ಜೊತೆ ಅಧಿಕೃತವಾಗಿಯೇ ಎಂಗೇಜ್ ಆಗೋ ಮೂಲಕ ಅಚ್ಚರಿ ಹುಟ್ಟಿಸಿದ್ದಳು.


ಇದೀಗ ತನ್ನ ಬಾಯ್‌ಫ್ರೆಮಡ್ ಜೊತೆ ಬರೀ ಬಿಕಿನಿ ಪೋಸಿನ ಬೀಚ್ ಫೋಟೋಗಳನ್ನನು ಇಸ್ಟಾಗ್ರಾಮ್‌ಗೆ ಹಾಕೋ ಮೂಲಕ ಶಮಾ ಸಖತ್ ಸೌಂಡ್ ಮಾಡಿದ್ದಾಳೆ. ಮೈಮಮೇಲೆ ಬರೀ ಟೂ ಪೀಸ್ ಇದ್ದರೂ ಮುದ್ದಾಗಿ ಕಾಣೋ ಮೂಲಕ ಬಾಲಿವುಡ್‌ನ ಇತರೆ ನಟಿಯರ ಮಿದಿಳು ಉರಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಶಮಾ ಫೋಟೋಗಳು ಹುಟ್ಟಿಸಿರೋ ಸಂಚಲನ ನಿಜಕ್ಕೂ ದಂಗು ಬಡಿಸುವಂತಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image