Connect with us

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಸದ್ದಿಲ್ಲದೆ ರೆಡಿಯಾಯ್ತು ಅರವಿಂದ್ ಕೌಶಿಕ್ ಶಾರ್ದೂಲ!

Published

on

ನಮ್ ಏರಿಯಾಲ್ ಒಂದಿನ, ತುಘ್ಲಕ್ ಮತ್ತು ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದವರು ಅರವಿಂದ್ ಕೌಶಿಕ್. ಸದ್ಯ ಕಮಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ನಿರ್ದೇಶನವನ್ನೂ ಮಾಡುತ್ತಿರುವ ಅರವಿಂದ್ ಶಾರ್ದೂಲ ಎಂಬ ಸಿನಿಮಾದೊಂದಿಗೆ ಮರಳಿದ್ದಾರೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯೊಂದಿಗೆ ಅರವಿಂದ್ ಕೌಶಿಕ್ ಮರಳಿದ್ದಾರೆ!

ಅರವಿಂದ್ ಕೌಶಿಕ್ ಚಿತ್ರವೆಂದ ಮೇಲೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತದೆಂಬುದು ಪ್ರೇಕ್ಷಕರ ನಂಬಿಕೆ. ಅದಕ್ಕನುಗುಣವಾಗಿಯೇ ಸದ್ದೇ ಇಲ್ಲದಂತೆ ಈ ಚಿತ್ರವನ್ನವರು ಮುಗಿಸಿಕೊಂಡಿದ್ದಾರೆ. ಈ ಹಂತದಲ್ಲಿ ಮಾಧ್ಯಮವನ್ನು ತಮ್ಮ ತಂಡದೊಂದಿಗೆ ಮುಖಾಮುಖಿಯಾಗಿರೋ ಅರವಿಂದ್ ಕೌಶಿಕ್ ಶಾರ್ದೂಲನ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮನುಷ್ಯ ಪ್ರತೀ ನಿತ್ಯದ ಆಗುಹೋಗುಗಳ ಬಗ್ಗೆ ನಿಖರವಾದ ಅರಿವು ಹೊಂದಿರುವಾತ. ಬೆಳಗ್ಗೆ ಎದ್ದಾಗಿನಿಂದ ಅವರವರ ಕೆಲಸ ಕಾರ್ಯಕ್ಕೆ ಇಳಿಯುವವರೆಗೂ ಇಂಥಾದ್ದೇ ಘಟಿಸುತ್ತದೆಂಬ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅದರ ಬಗ್ಗೆ ಯಾರಿಗೂ ಕುತೂಹಲವಿರೋದಿಲ್ಲ. ಆದರೆ ಹೊಸಾ ಜಾಗ, ಗುರುತಿರದ ಜನರ ಮಧ್ಯೆ ಹೋಗಿ ನಿಂತಾಗ ಪ್ರತೀ ಕ್ಷಣಗಳೂ ಎದೆಗೆ ಸವರಿಕೊಂಡೇ ಚಲಿಸಿದಂತಾಗುತ್ತದಲ್ಲಾ? ಅಂಥಾದ್ದೊಂದು ಸೂಕ್ಷ್ಮವನ್ನಿಟ್ಟುಕೊಂಡು ಪ್ರಯಾಣದ ಜೊತೆ ಜೊತೆಗೇ ಕಥೆ ಹೇಳಲು ಅರವಿಂದ್ ಮುಂದಾಗಿದ್ದಾರೆ.

ರವಿತೇಜಾ ಮತ್ತು ಚೇತನ್ ಚಂದ್ರ ಈ ಚಿತ್ರದ ನಾಯಕರು. ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಈ ಚಿತ್ರದ ನಾಯಕಿಯರು. ನಿರ್ದೇಶಕ ಅರವಿಂದ್ ಕೌಶಿಕ್ ಅವರಿಗೆ ದಶಕಗಳಿಂದಲೂ ಸ್ನೇಹಿತರಾಗಿರುವ ರೋಹಿತ್ ಕಲ್ಯಾಣ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ಕಾಲದಿಂದಲೂ ಒಂದೊಳ್ಳೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ರೋಹಿತ್ ಈ ಕಥೆ ಕೇಳಿದಾಕ್ಷಣವೇ ನಿರ್ಮಾಪಕರಾಗಲು ಒಪ್ಪಿಕೊಂಡಿದ್ದರಂತೆ. ಇನ್ನು ಸದಭಿರುಚಿಯ ಚಿತ್ರ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಕಲ್ಯಾಣ್ ಅವರನ್ನು ನಿರ್ಮಾಪಕರನ್ನಾಗಿ ಮಾಡಿದ್ದೂ ಕೂಡಾ ಅರವಿಂದ್ ಕೌಶಿಕ್ ಅವರ ಚೆಂದದ ಕಥೆಯೇ!

ಇದೊಂದು ಪ್ರಯಾಣದಲ್ಲಿ ನಡೆಯೋ ಕಥೆ. ಆದರೆ ಇದು ಮಾಮೂಲಿ ಪಯಣವಾಗಿರಲಿಕ್ಕಿಲ್ಲ ಎಂಬ ಅಂದಾಜು ನಿರ್ದೇಶಕ ಅರವಿಂದ್ ಕೌಶಿಕ್ ಆಲೋಚನಾ ಕ್ರಮ ಗೊತ್ತಿರುವವರಿಗೆಲ್ಲ ಪಕ್ಕಾ ಆಗಿರುತ್ತದೆ. ಅದು ಈ ಹಿಂದೆ ಹುಲಿರಾಯ ಚಿತ್ರದ ಮೂಲಕವೂ ಸ್ಪಷ್ಟವಾಗಿಯೇ ಸಾಬೀತಾಗಿದೆ. ಸಂತೋಷ್ ರಾಧಾಕೃಷ್ಣನ್ ಸೃಷ್ಟಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಚಿತ್ರದ ಸಾರವನ್ನು ಹೇಳುವಂತಿದೆ. ಇನ್ನೇನು ಟ್ರೈಲರ್, ಹಾಡು ಮುಂತಾದವನ್ನು ಪ್ರೇಕ್ಷಕರಿಗೆ ತಲುಪಿಸಿ ಶೀಘ್ರದಲ್ಲೇ ತೆರೆಗಾಣಲು ಶಾರ್ದೂಲ ಸಿದ್ಧವಾಗುತ್ತಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ವೀರಾಧಿವೀರ ಸಿನಿಮಾದ ಹಾಡುಗಳ ಧ್ವನಿಸುರುಳಿ ಬಿಡುಗಡೆ

Published

on

ಇಷ್ಟಾರ್ಥ, ಗಾಯಿತ್ರಿ, ಚಿತ್ರಗಳನ್ನು ನಿರ್ದೇಶಿಸಿದ್ದ, ಸತ್ಯ ಸಾಮ್ರಾಟ್‌ರವರ ನಿರ್ದೇಶನದ ಮೂರನೇ ಚಿತ್ರ ವೀರಾಧಿವೀರ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ನಡೆಸುತ್ತಿರುವ ವಿಜಯಾನಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸ್ಮೈಲ್ ಶಿವು, ಅಶ್ವಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಿರ್ಮಾಪಕ ವಿಜಯಾನಂದ ನಾಯಕಿಯ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಲಹರಿ ಸಂಸ್ಥೆ ಈ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿರ್ದೇಶಕ ಸತ್ಯಸಾಮ್ರಾಟ್ ಮಾತಾನಾಡಿ ಗಾಯಿತ್ರಿ ಎಂಬ ಹಾರರ್ ಚಿತ್ರದ ನಂತರ ಪಕ್ಕ ಹಳ್ಳಿ ಸೊಗಡಿನ ಲವ್ ಸ್ಟೋರಿ ಮಾಡಬೇಕೆಂದು ಈ ಚಿತ್ರ ಕೈಗೆತ್ತಿಕೊಂಡೆ, ಈ ಸಿನಿಮಾ ಆರಂಭವಾಗಲು ಕಾರಣ ಸ್ಮೈಲ್ ಶಿವು ಗಾಯಿತ್ರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಬೆಂಗಳೂರು, ಸಕಲೇಶಪುರ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ನಾಯಕನ ಪಾತ್ರಕ್ಕೆ ೩ ಶೇಡ್ ಇದೆ, ಕಳ್ಳ, ಪ್ರೇಮಿ ಹಾಗೂ ಅಘೋರಿಯಾಗಿ ನಾಯಕ ಕಾಣಿಸಿಕೊಂಡಿದ್ದಾರೆ. ನಾನು ಹಿಂದಿನಿಂದಲೂ ವಿಷ್ಣು ಅವರ ಅಭಿಮಾನಿ ಹಾಗಾಗಿ ಈ ಚಿತ್ರದ ಕಥೆಗೆ ಸೂಟ್ ಆಗುತ್ತೆ ಎಂದು ವೀರಾಧಿವೀರ ಟೈಟಲ್ ಇಟ್ಟಿದ್ದೇನೆ.

ನಾಯಕ ಬದುಕಿಗೋಸ್ಕರ ಕಳ್ಳತನ ಮಾಡಿಕೊಂಡಿರುತ್ತಾನೆ. ಒಬ್ಬ ಹುಡುಗಿಯ ಮೇಲೆ ಲವ್ ಆಗುತ್ತದೆ. ಅವರ ಪ್ರೀತಿಗೆ ಏನೆಲ್ಲಾ ಅಡೆತಡೆಗಳುಂಟಾದವು ಎಂಬುವುದೇ ಈ ಚಿತ್ರದ ಕಥೆ. ಇಡೀ ಸಿನಿಮಾದಲ್ಲಿ ಹಳ್ಳಿ ಸೊಗಡಿನ ಕಥೆ ಇದೆ ಎಂದು ಹೇಳಿದರು.

ನಿರ್ಮಾಪಕರಾದ ವಿಜಯಾನಂದ ಮಾತಾನಾಡಿ ನಾನು ಕೂಡ ವಿಷ್ಣುವರ್ಧನ ಅವರ ಅಭಿಮಾನಿ ನಾಯಕಿಯ ತಂದೆ ಹಾಗೂ ವಿಲನ್ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ. ನಾಯಕಿ ಅಶ್ವಿನಿ ಮಾತಾನಾಡಿ ಹಿಂದೆ ರೋಜಾ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದೆ ಹಳ್ಳಿ ಹುಡುಗಿ ಹಾಗೂ ಬಜಾರಿ ತರಹದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದು ಹೇಳಿದರು. ನಾಯಕ ಶಿವು ಮಾತಾನಾಡಿ 12 ವರ್ಷಗಳಿಂದ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೆ, ಗಾಯಿತ್ರಿ ಚಿತ್ರದ ನಂತರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಒಬ್ಬ ಕಳ್ಳನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ ಕೊನೆಗೆ ಅಘೋರಿಯಾಗುತ್ತೇನೆ ಎಂದು ಹೇಳಿದರು.

ಮತ್ತೊಬ್ಬ ನಟ ಪಳನಿ ಮಾತಾನಾಡಿ ನಾನು ನಾಯಕ ಮಾವನ ರೋಲ್ ಮಾಡಿದ್ದು, ಆತನ ಕಳ್ಳತನಕ್ಕೆ ಐಡಿಯಾ ಹೇಳಿಕೊಡುತ್ತೇನೆ ಎಂದು ಹೇಳಿದರು. ಲಹರಿ ವೇಲು ಮಾತಾನಾಡಿ ಈ ಚಿತ್ರದಲ್ಲಿರುವ ನಾಲ್ಕು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು.

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಬರಲಿದೆ ನಟೋರಿಯಸ್ ಲೇಡಿಯ ಭಯಾನಕ ಟೀಸರ್!

Published

on

ವರ್ಷಾಂತರಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಲೇಡಿ ಸೀರಿಯಲ್ ಕಿಲ್ಲರ್ ಕೆ.ಡಿ ಕೆಂಪಮ್ಮ. ಒಂದೊಂದೂರಿನಲ್ಲಿ ಒಂದೊಂದು ಹೆಸರಿನಿಂದ ಕಾಣಿಸಿಕೊಳ್ಳುತ್ತಿದ್ದ ಈಕೆಯ ಟಾರ್ಗೆಟ್ ಮಹಿಳೆಯರೇ. ಸೈನೈಡ್ ಮೂಲಕ ಮಹಿಳೆಯರನ್ನು ಕೊಂದು ಚಿನ್ನಾಭರಣ ದೋಚುತ್ತಿದ್ದ ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಪಡೆದಿದ್ದಾಳೆ.

ಇದೀಗ ಜೈಲುವಾಸಿಯಾಗಿರೋ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾಳ ರೌದs ಕಥೆ ಚಿತ್ರವಾಗುತ್ತಿದೆ. ಅದಕ್ಕೆ ಸೈನೈಡ್ ಮಲ್ಲಿಕಾ ಎಂದೇ ಟೈಟಲ್ ಇಡಲಾಗಿದೆ!

ಈ ಚಿತ್ರದಲ್ಲಿ ಸಂಜನಾ ಪ್ರಕಾಶ್ ಸೈನೈಡ್ ಮಲ್ಲಿಕಾ ಆಗಿ ಕಾಣಿಸಿಕೊಳ್ಳಲಿದ್ದಾಳಂತೆ. ಗುರು ಎಂಟರ್‌ಟೈನ್ಮೆಂಟ್ ಬ್ಯಾನರಿನಡಿ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರವನ್ನು ಗುರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಬಲರಾಮ್ ಬೈಸಾನಿ ಜಂಟಿ ನಿರ್ಮಾಪಕರಾಗಿರೋ ಈ ಚಿತ್ರದ ಬೆಚ್ಚಿ ಬೀಳಿಸುವಂಥಾ ಟೀಸರ್ ಒಂದು ಇಷ್ಟರಲ್ಲಿಯೇ ಬಿಡುಗಡೆಯಾಗೋ ಸನ್ನಾಹದಲ್ಲಿದೆ!

೧೯೯೯ರಿಂದಲೂ ಕೆಂಪಮ್ಮ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಅದೆಷ್ಟೋ ಮಹಿಳೆಯರನ್ನು ಕೊಲೆ ಮಾಡಿದ್ದಳು. ಮಹಿಳೆಯರನ್ನು ನಂಬಿಸಿ ದೇವಸ್ಥಾನಗಳ ಆವರಣದಲ್ಲಿಯೇ ಸೈನೈಡ್ ಮೂಲಕ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದವಳು ಕೆಂಪಮ್ಮ. ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಗಳಿಸಿದ್ದಳು. ವರ್ಷಗಳ ಹಿಂದೆ ಬಂಧನಕ್ಕೊಳಗಾಗಿ ಕಂಬಿ ಎಣಿಸುತ್ತಿರೋ ಈಕೆ ಇಂಡಿಯಾದ ಮೊದಲ ಸೀರಿಯಲ್ ಕಿಲ್ಲರ್ ಎಂಬ ಕುಖ್ಯಾತಿಗೂ ಪಾತ್ರಳಾಗಿದ್ದಾಳೆ.

ದಂಡುಪಾಳ್ಯ ಮಾದರಿಯ ರಕ್ತಸಿಕ್ತ ಕಥಾನಕ ಹೊಂದಿರೋ ಈ ಚಿತ್ರದ ಮೋಷನ್ ಪೋಸ್ಟರ್ ಈ ಹಿಂದೆಯೇ ಬಿಡುಗಡೆಯಾಗಿದೆ. ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗುತ್ತಿದೆ.

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

 ನಾವೇ ಭಾಗ್ಯವಂತರು ಅಂದವರ ಹಾಡು-ಪಾಡು!

Published

on

ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಾವೇ ಭಾಗ್ಯವಂತರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು.  ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ನಾವೇ ಭಾಗ್ಯವಂತರು ಎಂಬ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಎಂ.ಹರಿಕೃಷ್ಣ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರು, ಚಲನಚಿತ್ರ ನಿರ್ಮಾಪಕರಾದ ಡಾ. ಬೆಂ ಕೋ ಶ್ರೀನಿವಾಸ್ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯರಂತಹ ದಿಗ್ಗಜರೆಲ್ಲಾ ಸೇರಿ ನಾವೇ ಭಾಗ್ಯವಂತರು ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಈ ಚಿತ್ರದ ೩ ಜನ ನಾಯಕರು ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ|| ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್‌ನಾಗ್ ರವರ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಆದರ್ಶಗಳನ್ನು ತಪ್ಪದೇ ಪಾಲಿಸುವ ಈ ಹುಡುಗರಲ್ಲಿರುವ ಕೆಟ್ಟ ಅಭ್ಯಾಸ ಎಂದರೆ ಮದ್ಯಪಾನ ಎನ್ನುವುದನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳಲಾಗಿದೆ. ಹರಿಕೃಷ್ಣ ಮೂಲತಃ ಒಬ್ಬ ಛಾಯಾಗ್ರಾಹಕರು. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ಸೂರಜ್ ಶ್ರಾವಂತ್, ಲೋಕೇಶ್, ದಿವ್ಯ, ಚಂದನಗೌಡ ಹಾಗೂ ಶಿಲ್ಪ ರವಿ ಈ ಚಿತ್ರದ ನಾಯಕ – ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರ ಪ್ರಸಾದ್, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಪಿ.ಬಸವಣ್ಣ ಈ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂ.ಪ್ರಕಾಶ್ ಹಾಗೂ ಹೆಚ್.ಎಸ್. ಅಶ್ವಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹರಿಕೃಷ್ಣ ಮಾತನಾಡಿ ಬೆಂಕೋಶ್ರೀ ಅವರಿಗೆ ಹಾಡನ್ನು ಕೇಳಿಸಿದಾಗ ತುಂಬ ಇಷ್ಟಪಟ್ಟರು. ಮದರ್ ಸೆಂಟಿಮೆಂಟ್ ಸಾಂಗ್ ಕೇಳಿ ನನಗೆ ತುಂಬಾ ತಾಯಿ ನೆನಪಾದರು ಎಂದು ಭಾವುಕರಾದರು. ರಾಜವಿಸ್ಕಿಯಿಂದಾಗುವ ಅನಾಹುತವನ್ನು ಹೇಳುವ ಚಿತ್ರವಿದು. ೩ ಜನ ನಾಯಕರಾದರೂ ಒಂದೊಂದು ಕಥೆ ಇರುತ್ತದೆ. ಈ ೩ ಜನರ ಕಥೆಯಲ್ಲಿ ಮದ್ಯಪಾನದ ದುಷ್ಪರಿಣಾಮ ಹಾಗೂ ತಾಯಿ ಸೆಂಟಿಮೆಂಟ್ ಕಾಮನ್ನಾಗಿದೆ. ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಅಭಿಮಾನಿಗಳಾಗಿದ್ದ ಇವರು ಹೇಗೆ ತಮ್ಮ ತಪ್ಪನ್ನು ತಿದ್ದಿಕೊಂಡು ಬದಲಾದವರು ಭಾಗ್ಯವಂತರು ಎನ್ನುವುದೇ ಈ ಚಿತ್ರ ಕಥೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಕೋಶ್ರೀ ಮಾತನಾಡಿ ಈ ಚಿತ್ರರಂಗದಲ್ಲಿ ಶ್ರಮಪಟ್ಟರೆ ಯಾರು ಬೇಕಾದರೂ ಬೆಳೆಯಬಹುದು. ಅದಕ್ಕೆ ನಾನು ಸ್ಪಷ್ಟ ಉದಾಹರಣೆ. ಶಾಂತಲ ಚಿತ್ರಮಂದಿರಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನಂತರ ವಿತರಕನಾದೆ ನಿರ್ಮಾಪಕನಾದೆ. ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಕಂಡ ಸಮಾಜದಲ್ಲಿ ನಾನೇನಾದರೂ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಚಿತ್ರರಂಗ ಹಾಗೂ ಮಾಧ್ಯಮಗಳೇ ಕಾರಣ. ಇಲ್ಲಿ ಎಲ್ಲರೂ ಬೆಳೆಯಲು ಅವಕಾಶವಿದೆ. ಚಿನ್ನೇಗೌಡರು ನನಗೆ ತುಂಬಾ ಆತ್ಮೀಯರು. ವಜ್ರೇಶ್ವರಿ ಸಂಸ್ಥೆಯನ್ನು ಬೆಳೆಸಿದವರು. ಈಗ ಫಿಲಂ ಛೇಂಬರ‍್ಸ್ ಅಧ್ಯಕ್ಷರಾಗಿದ್ದಾರೆ. ಅವರ ಮುಂದೆ ಬಹಳಷ್ಟು ಸಮಸ್ಯೆಗಳಿವೆ ಎಂದು ಹೇಳಿದರು. ನಂತರ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಚಿನ್ನೇಗೌಡರು ಚಿತ್ರದ ಬಗ್ಗೆ ಮಾತನಾಡಿದರು.
      

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz