One N Only Exclusive Cine Portal

ಶ್ರದ್ಧಾ ಮೇಲೆ ಕೇಸು ಜಡಿದ ದಾವೂದ್ ಭಂಟ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮುಂಬೈ ಸ್ಫೋಟದ ಆರೋಪಿ ಪಾತಕಿ ದಾವೂದ್ ಇಬ್ರಾಹಿಂ ಕಥೆಯ ಬೇಸ್ ಹೊಂದಿರೋ ಬಾಲಿವುಡ್‌ನ ವಿವಾದಾತ್ಮಕ ಚಿತ್ರ ಹಸೀನಾ ಪಾರ್ಕರ್. ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್ ನಟಿಸುತ್ತಿರೋದು ಗೊತ್ತಿರೋ ಸಂಗತಿ. ಆದರೆ ವಿನಾಕಾರಣ ವಿವಾದಗಳಿಂದ ಸದಾ ದೂರವಿದ್ದ ಶ್ರದ್ಧಾ ಈಗ ಸದರಿ ಚಿತ್ರದ ನಿರ್ಮಾಪಕನ ಕೆಂಗಣ್ಣಿಗೆ ಗುರಿಯಾಗಿ ಕೋರ್ಟ್ ಮೆಟ್ಟಿಲೇರೋ ಸ್ಥಿತಿ ತಲುಪಿಕೊಂಡಿದ್ದಾಳೆ!


ಶ್ರದ್ಧಾ ಸದ್ಯ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯಲ್ಲಿರೋ ನಟಿ. ಪ್ರಭಾಸ್ ಬಾಹುಬಲಿ ಚಿತ್ರದ ನಂತರ ಅಭಿನಯಿಸುತ್ತಿರೋ ಸಾಹೂ ಚಿತ್ರಕ್ಕೂ ಈಕೆಯೇ ನಾಯಕಿ. ಈ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಶ್ರದ್ಧಾಗೆ ಹಸೀನಾ ಪಾರ್ಕರ್ ಚಿತ್ರದ ನಿರ್ಮಾಪಕ ಶಹೀದ್ ಮೋಸ, ನಂಬಿಕೆ ದ್ರೋಹ ಮತ್ತು ನಷ್ಟ ಮಾಡಿದ ಆರೋಪ ಹೊರಿಸಿ ಕೇಸು ಜಡಿಯೋ ಮೂಲಕ ಶಾಕ್ ಕೊಟ್ಟಿದ್ದಾನೆ.


ಹಸೀನಾ ಪಾರ್ಕರ್ ಪಾತಕಿ ದಾವೂದ್‌ಗೆ ಸಂಬಂಧಿಸಿದ ಕಥೆ ಹೊಂದಿರೋ ಚಿತ್ರವಾದ್ದರಿಂದ ಆ ಬಗ್ಗೆ ಬಾಲಿವುಡ್ ಸೇರಿದಂತೆ ಹೊರ ಜಗತ್ತಿನಿಂದಲೂ ವಿರೋಧಗಳು ಕೇಳಿ ಬಂದಿದ್ದವು. ಆ ಚಿತ್ರದಲ್ಲಿ ಪಾತ್ರ ಮಾಡಲೂ ಕೂಡಾ ನಟ ನಟಿಯರು ಹಿಂದೇಟು ಹಾಕಿದ್ದರು. ಆದರೆ ಈ ಶ್ರದ್ಧಾ ಮಾತ್ರ ಅದನ್ನೊಂದು ಪಾತ್ರ ಅಂತ ಮಾತ್ರ ಪರಿಗಣಿಸಿ ದಾವೂದ್ ತಂಗಿಯ ಪಾತ್ರವನ್ನು ಮಾಡಿದ್ದಳು. ಆದರೆ ಭಾರೀ ಹಿಟ್ ಆಗುತ್ತದೆ ಅಂತೆಲ್ಲ ನಿರೀಕ್ಷೆ ಹೊಂದಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ಳಲಾಗದಂತೆ ಗೋತಾ ಹೊಡೆದಿತ್ತು.


ಇಂಥಾದ್ದೊಂದು ಮಹಾ ಸೋಲಿನ ಆಘಾತ ಅನುಭವಿಸಿದ್ದ ನಿರ್ಮಾಪಕ ಕಂ ದಾವೂದ್ ಭಂಟ ಶಾಹೀದ್ ಶ್ರದ್ಧಾ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಶ್ರದ್ಧಾ ಹೇಳಿದ ರೀತಿಯಲ್ಲಿ ನಡೆದುಕೊಂಡಿಲ್ಲ, ಪ್ರಮೋಷನ್‌ಗಳಿಗೂ ಬಾರದೆ ಸತಾಯಿಸಿದ್ದರಿಂದಲೇ ಚಿತ್ರ ಸೋತು ನಷ್ಟುವಾಗಿದ್ದಕ್ಕೆ ಆಕೆಯೇ ಕಾರಣ ಅಂತೆಲ್ಲ ನಾನಾ ಆರೋಪ ಮಾಡಿದ್ದಾನೆ.
ಶ್ರದ್ಧಾ ಈಗ ಪಾತಕಿ ದಾವೂದ್ ಗ್ಯಾಂಗಿನ ಚಿತ್ರವೊಂದರಲ್ಲಿ ಅಭಿನಯಿಸಿದ ತಪ್ಪಿಗೆ ಮಾನಸಿಕ ನೆಮ್ಮದಿಯನ್ನೇ ಪಣಕ್ಕಿಡೋ ಸಂದರ್ಭ ಬಂದೊದಗಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image