One N Only Exclusive Cine Portal

ಬಾಲಿವುಡ್ ಕಡೆಗೆ ಶ್ರದ್ಧಾ ಯು-ಟರ್ನ್!


ಸಿನಿಮಾವೆಂದರೆ ಹಾಗೇ… ಕೆಲವರು ಎಷ್ಟು ವರ್ಷ ಇಲ್ಲಿ ಚಪ್ಪಲಿ ಸವೆಸಿದರು, ಎಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ, ಅವರಿಗೆ ಸಿಗುವ ಮಾನ್ಯತೆ, ಸ್ಟಾರ್ ವ್ಯಾಲ್ಯೂ ಅಷ್ಟಕ್ಕಷ್ಟೆ. ಆದ್ರೆ ಅದೃಷ್ಠವೊ ಏನೋ ಎಂಬಂತೆ, ಕೆಲವರು ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಂತೆ ಸ್ಟಾರ್ ಪಟ್ಟ ಮುಡಿಗೇರಿಸಿಕೊಂಡು ಬಿಡುತ್ತಾರೆ. ಇತ್ತೀಚೆಗೆ ಅಂಥದ್ದೆ, ಸ್ಟಾರ್ ಹಿರೋಯಿನ್ ಪಟ್ಟ ಗಿಟ್ಟಿಸಿಕೊಂಡು ಬೀಗುತ್ತಿರುವ ನಟಿ ಶ್ರದ್ಧಾ ಶ್ರೀನಾಥ್.

ಯೂ-ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಶ್ರದ್ಧಾ ಶ್ರೀನಾಥ್ ಇಲ್ಲಿಯವರೆಗೆ ನಟಿಸಿದ್ದು ಕೇವಲ ಬೆರಳೆಣಿಕೆ ಸಿನಿಮಾಗಳಾದರೂ, ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ತನ್ನ ಡಿಮ್ಯಾಂಡ್ ಮತ್ತು ಸ್ಟಾರ್ ವ್ಯಾಲ್ಯೂ ಎರಡನ್ನು ಹೆಚ್ಚಿಸಿಕೊಂಡ ಬುದ್ಧಿವಂತ ನಟಿ. ಸದ್ಯಕ್ಕೆ ಕನ್ನಡಕ್ಕಿಂತ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಶ್ರದ್ಧಾ, ಶೀಘ್ರದಲ್ಲಿಯೆ ಬಾಲಿವುಡ್ ಕಡೆಗೆ ಹಾರಲಿದ್ದಾರಂತೆ.

ಚಿತ್ರರಂಗದ ಮೂಲಗಳ ಪ್ರಕಾರ, ತಿಗ್ಮಾಂಶು ದುಲಿಯಾ ನಿರ್ದೇಶನದ `ಮಿಲನ್ ಟಾಕೀಸ್’ ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್‌ಗೆ ನಾಯಕಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೇಳಿ ಪ್ರಾಜೆಕ್ಟ್‌ಗೆ ಸಹಿ ಹಾಕಿರುವ ಶ್ರದ್ಧಾ, ಮುಂಬರುವ ಮಾರ್ಚ್ ಮೊದಲ ವಾರದಿಂದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರಂತೆ. ಲಕ್ನೋ, ಮಥುರಾ ಮತ್ತು ಉತ್ತರ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ.

ಬಾಲಿವುಡ್‌ನಲ್ಲಿ ಅವಕಾಶ ದೊರೆತಿರುವುದಕ್ಕೆ ಸಾಕಷ್ಟು ಖುಷಿಯಾಗಿರುವ ಶ್ರದ್ಧಾ, ದಕ್ಷಿಣದ ಎ ಚಿತ್ರರಂಗಗಳೂ ಒಂದೇ ರೀತಿ. ಆದರೆ ಬಾಲಿವುಡ್ ಮಾತ್ರ ವಿಭಿನ್ನ, ಅಲ್ಲಿನ ಕಾರ್ಯ ಶೈಲಿಯಲ್ಲಿಯೂ ಭಿನ್ನವಾಗಿದೆ. ದಕ್ಷಿಣ ಸಿನಿಮಾ ರಂಗದಲ್ಲಿ ೨ ವರ್ಷ ಕೆಲಸ ಮಾಡಿದ್ದೇನೆ, ಬಾಲಿವುಡ್ ಆಸಕ್ತಿದಾಯಕವಾಗಿದೆ. ಸರಾಗವಾಗಿ ಹಿಂದಿ ಮಾತನಾಡಲು ಗೊತ್ತಿರುವುದರಿಂದ ಸಿನಿಮಾಕ್ಕೆ ಪ್ಲಸ್ ಆಗಲಿದೆ ಎಂದು ಹೇಳಿಕೊಂಡಿzರೆ. ಅಂದಹಾಗೆ, ನಿರ್ದೇಶಕರೊಬ್ಬರ ಶಿ-ರಸ್ಸಿನ ಮೇಲೆ ಆಡಿಶನ್‌ಗೆ ಹೋಗಿದ್ದ ಶ್ರದ್ಧಾ ನಿರೀಕ್ಷಿತವಾಗಿ ಈ ಸಿನಿಮಾಕ್ಕೆ ಸೆಲೆಕ್ಟ್ ಆಗಿದ್ದಾರಂತೆ.

ಅದೇನೆಯಿರಲಿ, ಕನ್ನಡದಿಂದ ಬಾಲಿವುಡ್‌ಗೆ ಹಾರಿದ ಕೆಲ ನಟಿಯರು ದೊಡ್ಡ ಹೆಸರು ಮಾಡಿದರೆ, ಉಳಿದ ಕೆಲವು ನಾಯಕಿಯರು ಮುಂಬಯಿಯಲ್ಲಿಯೇ ಸೆಟಲ್ ಆಗಿzರೆ. ಇನ್ನುಳಿದ ಅದೆಷ್ಟೋ ನಟಿಮಣಿಯರು ಹೇಳ ಹೆಸರಿಲ್ಲದೆ ಅಲ್ಲಿಂದಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಇದರಲ್ಲಿ ಶ್ರದ್ದಾ ಏನಾಗಬಹುದು ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

Leave a Reply

Your email address will not be published. Required fields are marked *


CAPTCHA Image
Reload Image