One N Only Exclusive Cine Portal

ಶ್ರುತಿ ಹರಿಹರನ್‌ಳನ್ನು ಮಂಚಕ್ಕೆ ಕರೆದ ನಿರ್ಮಾಪಕ ಯಾರು?

ಎಲ್ಲಿಂದಲೋ ಬಂದವರು ಇಲ್ಲಿನ ನೀರು ಗಾಳಿ ಅನ್ನಾಹಾರ ತಿಂದುಂಡು ಕೊಬ್ಬಿ ವಾಪಾಸು ಗುಮ್ಮೋದು ನಮಗೆ ಮಾಮೂಲು ಸಂಗತಿ. ಅದೆಷ್ಟು ಸಲ ಕನ್ನಡಿಗರಾದ ನಾವುಗಳು ಹೀಗೆ ಗುಮ್ಮಿಸಿಕೊಂಡಿದ್ದೇವೋ. ಇದೀಗ ಕನ್ನಡದ ಮೂಲಕವೇ ನಟಿಯಾಗಿ ರೂಪುಗೊಂಡು ಒಂದಷ್ಟು ಚಿಗುರಿಕೊಂಡಿರೋ ಶ್ರುತಿ ಹರಿಹರನ್ ಕೂಡಾ ಅಂಥಾದ್ದೇ ಕೆಲಸ ಮಾಡೋ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾಳೆ!

ನಿನ್ನೆ ಇಂಡಿಯಾ ಟುಡೆಯಲ್ಲಿ ಚಿತ್ರರಂಗದಲ್ಲಿ ನಟಿಯರನ್ನು ಕಾಡುತ್ತಿರೋ ಕಾಸ್ಟ್ ಕೌಚಿಂಗ್ ಬಗ್ಗೆ ಒಂದು ಚರ್ಚೆ ಆಯೋಜಿಸಿದ್ದರು. ಅದರಲ್ಲಿ ಶ್ರುತಿ ಹರಿಹರನ್ ಮತ್ತು ಪ್ರಣೀತಾ ಡೆಲ್ಲಿಗೆ ತೆರಳಿ ಪಾಲ್ಗೊಂಡಿದ್ದರು. ಅವಕಾಶಕ್ಕಾಗಿ ಮಂಚ ಏರುವಂತೆ ಕಿರುಕುಳ ಕೊಡುವ ಕಾಸ್ಟ್ ಕೌಚಿಂಗ್ ಬಗ್ಗೆ ಪ್ರಣೀತಾ ಅದೇನೇನೋ ಮಾತಾಡಿದ್ದಾಳೆ. ಆದರೆ ಈ ಶ್ರುತಿ ಹರಿಹರನ್ ಮಾತ್ರ ಅನ್ನ ಕೊಟ್ಟ ಕನ್ನಡಕ್ಕೇ ಗುನ್ನ ಕೊಡುವಂಥಾ ಮಾತಾಡಿದ್ದಾಳೆ!


ತಾನು ಕನ್ನಡ ಚಿತ್ರರಂಗದಲ್ಲಿ ಅವಕಾಶಕ್ಕೆ ಹುಡುಕಾಡುತ್ತಿದ್ದ ಸಂದರ್ಭದಲ್ಲಿ ನಿರ್ಮಾಪಕನೊಬ್ಬ ಮಂಚಕ್ಕೆ ಕರೆದಿದ್ದ. ನಾನು ಉಗಿದು ವಾಪಾಸು ಬಂದಿದ್ದೆ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಸರಿ, ಶ್ರುತಿಗೆ ಇಂಥಾದ್ದೊಂದು ಕಿರುಕುಳವಾಗಿದ್ದರೆ ಅದು ನಿಜಕ್ಕೂ ದುಃಖದ ವಿಚಾರ. ಅದು ಕನ್ನಡಿಗನಿಂದ ಆಗಿದ್ದರೂ, ಯಾವ ಭಾಷೆಯವರಿಂದ ಆಗಿದ್ದರೂ ಖಂಡನಾರ್ಹ. ಆದರೆ ಕನ್ನಡದಲ್ಲಿ ಅಪ್ಪಿತಪ್ಪಿಯೂ ಇಂಥಾದ್ದೊಂದು ವಿಚಾರದ ಬಗ್ಗೆ ತುಟಿ ಬಿಚ್ಚದ ಶ್ರುತಿ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಇದನ್ನು ಜಾಹೀರು ಮಾಡುವ ಅವಶ್ಯಕತೆ ಏನಿತ್ತು? ಅದು ಹಾಳುಬಿದ್ದು ಹೋಗಲಿ ತನಗೆ ಕ್ವಾಟಲೆ ಕೊಟ್ಟ ಕಿರಾತಕನ್ಯಾರೆಂಬ ಬಗ್ಗೆ ಹೇಳಲು ಶ್ರುತಿಗೇನು ಧಾಡಿ?


ಕನ್ನಡದಲ್ಲಿ ಚೆಂದದ ಅವಕಾಶಗಳು ಸಿಗುತ್ತಲೇ ಬಾಲಿವುಡ್ ಮಟ್ಟದಲ್ಲಿ ಬೆಳೆಯ ಬೇಕೆಂಬ ಆಸೆ ಹೊಂದಿರೋ ಶ್ರುತಿ ಗಮನ ಸೆಳೆಯುವ ಉದ್ದೇಶದಿಂದಲೇ ಇಂಥಾದ್ದೊಂದು ಹಾವು ಬಿಟ್ಟಿದ್ದಾಳೆ ಅಂತಲೇ ಗಾಂಧಿನಗರದ ಮಂದಿ ಹೇಳುತ್ತಿದ್ದಾರೆ. ವಿದ್ಯಮಾನಗಳನ್ನು ಗಮನಿಸಿದರೆ ಶ್ರುತಿಗೆ ಅಂಥಾದ್ದೊಂದು ದುರುದ್ದೇಶ ಇಲ್ಲ ಅನ್ನಲಾಗುತ್ತಿಲ್ಲ. ಹಾಗೊಂದು ವೇಳೆ ಕನ್ನಡದ ನಿರ್ಮಾಪಕನಿಂದ ತನಗೆ ಕಿರುಕುಳವಾಗಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಬಹುದಿತ್ತಲ್ಲಾ? ಈ ಹಿಂದೆ ಕನ್ನಡ ಚಿತ್ರ ರಂಗದಲ್ಲಿಯೇ ನಟಿಯರು ಮಂಚಕ್ಕೆ ಕರೆದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶ್ರುತಿ ಕೂಡಾ ಹಾಗೆ ಮಾಡಲು ಯಾವ ಅಡೆತಡೆಯಿತ್ತು? ತೀರಾ ಇತ್ತೀಚೆಗೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿಯೊಬ್ಬಳು ಬಹಿರಂಗವಾಗಿಯೇ ಕಾಸ್ಟ್ ಕೌಚಿಂಗ್ ಬಗ್ಗೆ ಮಾತಾಡಿದ್ದಳು. ಆಗ ಅಂಥಾದ್ದೇ ಕಿರುಕುಳ ಅನುಭವಿಸಿರೋ ಶ್ರುತಿ ಸಪೋರ್ಟು ಮಾಡಿ ಮಾತಾಡಬಹುದಿತ್ತಲ್ಲಾ?

ಇದ್ಯಾವುದನ್ನೂ ಮಾಡದ ಶ್ರುತಿ ಏಕಾಏಕಿ ಡೆಲ್ಲಿಗೆ ಹೋಗಿ ಕನ್ನಡದ ನಿರ್ಮಾಪಕ ತನಗೆ ಕಾಟ ಕೊಟ್ಟಿದ್ದ ಅಂತ ಬಾಯಿ ಬಡಕೊಂಡಿರೋದರ ಹಿಂದೆ ಪ್ರಚಾರ ಪಡೆಯೋ ಹಿಕ್ಮತ್ತಿನ ಹೊರತಾಗಿ ಬೇರೇನೂ ಇದ್ದಂತಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image