One N Only Exclusive Cine Portal

ಎಸ್ನಾಣಿ ಚಿತ್ರದಲ್ಲಿ ನಾಯಕಿಯಾಗ್ತಾಳಾ ಶ್ರುತಿ ಪ್ರಕಾಶ್?

ಬಿಗ್‌ಬಾಸ್ ಸೀಸನ್ ಐದರ ಕಡೇ ತನಕ ನಿರೀಕ್ಷೆ ಹುಟ್ಟಿಸಿದ್ದಾಕೆ ಶ್ರುತಿ ಪ್ರಕಾಶ್. ಅತ್ಯಂತ ಸಹಜವಾದ ವರ್ತನೆ, ಸೂಕ್ಷ್ಮ ಮನಸ್ಥಿತಿಯಿಂದ ಬಿಗ್‌ಬಾಸ್ ಪ್ರೇಕ್ಷಕರ ಮನ ಗೆದ್ದಿದ್ದ ಶ್ರುತಿ ಬಿಗ್‌ಬಾಸ್ ಶೋನಲ್ಲಿ ಗೆಲ್ಲದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಗೆದ್ದಿದ್ದಾಳೆ. ಆಕೆ ಬಿಗ್‌ಬಾಸ್ ಶೋನಿಂದ ಹೊರ ಬರುತ್ತಲೇ ಅವಕಾಶಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಅದ್ಯಾವುದರತ್ತಲೂ ಮನಸು ಮಾಡದ ಶ್ರುತಿ ಇದೀಗ ಚಿತ್ರವೊಂದರಲ್ಲಿ ನಾಯಕಿಯಾಗುವ ಎಲ್ಲ ಲಕ್ಷಣಗಳೂ ಇದ್ದಾವೆ.


ಹಾಗಾದರೆ ಶ್ರುತಿ ಪ್ರಕಾಶ್ ನಟಿಸಲಿರೋ ಚಿತ್ರ ಯಾವುದು? ಅದರ ನಿರ್ದೇಶಕರು ಯಾರು? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜವೇ. ಈ ನಿಟ್ಟಿನಲ್ಲಿ ನೋಡ ಹೋದರೆ, ಈ ಸಂಭಾವ್ಯ ಚಿತ್ರದ ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್. ಸದರಿ ಚಿತ್ರದ ಬಗ್ಗೆ ಇದೀಗ ಮಾತುಕತೆಗಳು ಚಾಲ್ತಿಯಲ್ಲಿವೆ. ಇದರ ಕಥೆ ಕೇಳಿರೋ ಶ್ರುತಿ ಹೆಚ್ಚೂಕಮ್ಮಿ ಒಪ್ಪಿಗೆ ಸೂಚಿಸಿದ್ದಾಳೆ.


ಆದರೆ, ಈ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಪುತ್ರ ಪಂಕಜ್‌ನನ್ನು ಹೀರೋ ಮಾಡಲು ಮುಂದಾಗಿರೋ ಭಯಂಕರ ಸುದ್ದಿಯೂ ಹರಿದಾಡುತ್ತಿದೆ. ಈ ಹಿಂದೆ ಒಂದಷ್ಟು ಸಲ ನಾಣಿ ಇಂಥಾ ಪ್ರಯತ್ನ ಮಾಡಿ ಪ್ರೇಕ್ಷಕರಿಗೆ ರೋದನೆ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಆ ಪ್ರಯತ್ನಕ್ಕೆ ಮುಂದಾಗಿರೋ ನಾಣಿ ಶ್ರುತಿಯನ್ನು ನಾಯಕಿಯನ್ನಾಗಿಸೋ ಪ್ರಯತ್ನ ನಡೆಸಿದ್ದಾರೆ. ಈ ಚಿತ್ರಕ್ಕಾಗಿನ ತಯಾರಿಯಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರಂತೆ.

ಅಂದಹಾಗೆ ಶ್ರುತಿ ಎಂಬ ಬೆಳಗಾವಿಯ ಕನ್ನಡದ ಹುಡುಗಿ ಕನ್ನಡಿಗರಿಗೆ ಪರಿಚಯವಾದದ್ದೇ ಬಿಗ್‌ಬಾಸ್ ಶೋ ಮೂಲಕ. ಆದರೆ ಆಕೆ ಹಿಂದಿ ಕಿರುತೆರೆಯಲ್ಲಿ ಭಾರೀ ಪ್ರಸಿದ್ಧಿ ಹೊಂದಿರೋ ನಟಿ. ಕೆಲ ಹಿಂದಿ ಕವರ್ ಸಾಂಗ್‌ನಲ್ಲಿ ನಟಿಸೋ ಮೂಲಕವೂ ಶ್ರುತಿ ಭರ್ಜರಿಯಾಗಿ ಚಾಲ್ತಿಯಲ್ಲಿದ್ದಾಳೆ. ಆದರೆ ತನ್ನ ತಾಯಿ ನೆಲವಾದ ಕರ್ನಾಟಕದಲ್ಲೇ ಏನಾದರೊಂದು ಸಾಧಿಸಬನೇಕೆಂಬ ಮನಸ್ಥಿತಿಯ ಶ್ರುತಿ ನಾಯಕಿಯಾಗಿ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗುತ್ತಾ ಎಂಬುದೇ ಸದ್ಯದ ಕುತೂಹಲ!

 

Leave a Reply

Your email address will not be published. Required fields are marked *


CAPTCHA Image
Reload Image