One N Only Exclusive Cine Portal

ಪತ್ರಕರ್ತ ಶ್ಯಾಮ್ ಪ್ರಸಾದ್ ಕೃತಿ ಲೋಕಾರ್ಪಣೆ

ಬೆಂಗಳೂರು ಮಿರರ್ ಪತ್ರಿಕೆಯ ಸಿನಿಮಾ ವರದಿಗಾರರಾಗಿ, ಮನರಂಜನಾ ವಿಭಾಗದ ಸಂಪಾದಕರಾಗಿ, ಚಿತ್ರವಿಮರ್ಶಕರಾಗಿ ಮತ್ತು ಕೋರ್ಟ್ ವರದಿಗಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿರುವವರು ಶ್ಯಾಮ್ ಪ್ರಸಾದ್. ಆರಂಭದ ದಿನಗಳಲ್ಲಿ ತಾವೇ ಒಂದು ಪತ್ರಿಕೆ ಮಾಡಹೊರಟು ಕೈಸುಟ್ಟುಕೊಂಡಿದ್ದವರು. ನಂತರ ಬೆಂಗಳೂರು ಮಿರರ್ ಪತ್ರಿಕೆಗೆ ಸೇರಿ, ತಮ್ಮನ್ನು ತಾವು ಹೊಸತನಕ್ಕೆ ತೆರೆದುಕೊಳ್ಳುತ್ತಾ ಪತ್ರಿಕೋದ್ಯಮದ ಹೊಸ ಪಟ್ಟುಗಳನ್ನು ಅನುಸರಿಸಿದ ಶ್ಯಾಮ್ ಸಾಕಷ್ಟು ಶ್ರಮಿಸಿದ್ದಾರೆ; ಅಷ್ಟೇ ಹೆಸರು ಮಾಡಿದ್ದಾರೆ.


ಸದ್ಯ ಶ್ಯಾಮ್‌ಪ್ರಸಾದ್ ಇತಿಹಾಸ ಕುರಿತ ಎನಿಗ್ಮಾಸ್ ಆಫ್ ಕರ್ನಾಟಕ’ ಎನ್ನುವ ಕೃತಿಯನ್ನು ರಚಿಸಿದ್ದಾರೆ. ಹೊಯ್ಸಳರ ರಾಜ ವಿಷ್ಣುವರ್ಧನನಿಂದ ಹಿಡಿದು ಜಕಣಾಚಾರಿ, ಕಡಲೇಕಾಯಿ ಪರಿಶೆಯತನಕ ಕರ್ನಾಟಕವನ್ನು ಕುರಿತ ಸಾಕಷ್ಟು ವಿಚಾರಗಳನ್ನು ಶ್ಯಾಮ್ ತಮ್ಮ ಕೃತಿಯಲ್ಲಿ ಚರ್ಚಿಸಿದ್ದಾರೆ. ಪ್ರತಿಭಾವಂತ ಬರಹಗಾರರಾಗಿರುವ ಶ್ಯಾಮ್ ಅವರಿಂದ ಇನ್ನಷ್ಟು ಕೃತಿಗಳು ಓದುಗರಿಗೆ ದಕ್ಕಲಿ ಅನ್ನೋ ಆಶಯ ನಮ್ಮದು.
ಈ ಕೃತಿ ಫ್ಲಿಪ್ ಕಾರ್ಟ್, ಅಮೆಜ಼ಾನ್, ಕೋಬೋ, ಐ ಬುಕ್ ಸೇರಿದಂತೆ ಗೂಗಲ್ ಪ್ಲೇ ಬುಕ್ ನಲ್ಲೂ ಲಭ್ಯವಿದೆ.

Leave a Reply

Your email address will not be published. Required fields are marked *


CAPTCHA Image
Reload Image