One N Only Exclusive Cine Portal

ಸಿಂಗಮ್ ಸೀರೀಸ್ ನಂತರ ಮತ್ತೊಂದು ಚಿತ್ರಕ್ಕೆ ತಯಾರಿ!

ತಮಿಳಿನಲ್ಲಿ ಸೂಪರ್ ಹಿಟ್ಟಾಗುತ್ತಲೇ ಬೇರೆ ಬಾಷೆಗಳಿಗೂ ರಿಮೇಕ್ ಆಗೋ ಮೂಲಕ ಭರಪೂರ ಯಶಸ್ಸಿಗೆ ರೂವಾರಿಯಗಿದ್ದು ಸಿಂಗಮ್ ಚಿತ್ರಗಳ ಸರಣಿ. ಈ ಮೂಲಕ ನಿರ್ದೇಶಕ ಹರಿ ಮತ್ತು ಸೂರ್ಯ ಯಶಸ್ವೀ ಜೋಡಿಯಾಗಿ ಹೊರ ಹೊಮ್ಮಿದ್ದರು. ಇದೀಗ ಒಂದಷ್ಟು ವಿರಾಮದ ಬಳಿಕ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಎಂಬ ಬಗ್ಗೆ ಕಾಲಿವುಡ್ ತುಂಬಾ ನಾನಾ ಥರದ ರೂಮರುಗಳು ಹರಡಿಕೊಂಡಿವೆ.

ಸಿಂಗಮ್ ಚಿತ್ರ ಆರಂಭಿಕವಾಗಿಯೇ ಯಶ ಕಂಡ ನಂತರ ಅದೇ ಚಿತ್ರದ ಸರಣಿಗಳು ರೆಡಿಯಾಗಿದ್ದವು. ಒಂದಕ್ಕೊಂದು ಭಿನ್ನವಾಗಿದ್ದ ಅ ಎಲ್ಲ ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೆ ಬರೆದಿದ್ದವು. ಅದರೆ ಅ ನಂತರ ಹರಿ ಬೇರೆ ಪ್ರಾಜೆಕ್ಟಿನಲ್ಲಿ ಬ್ಯುಸಿಯಾದರೆ ಸೂರ್ಯ ಕೂಡಾ ಬೇರೊಂದಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಅದರೆ ಈ ಹಂತದಲ್ಲಿ ಸೂರ್ಯನ ಅಭಿಮಾನಿಗಳು ಮತ್ತು ತಮಿಳು ಪ್ರೇಕ್ಷಕರು ಸಿಂಗಂ ಜೋಡಿಯ ಮತ್ತೊಂದು ಮೋಡಿಗಾಗಿ ಕಾತರರಾಗಿದ್ದದ್ದು ಸುಳ್ಳೇನಲ್ಲ.

ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಇತ್ತೀಚೆಗೆ ಹರಿ ಮತ್ತು ಸೂರ್ಯ ಭೇಟಿಯಾಗಿ ಮುಂದಿನ ಚಿತ್ರದ ಬಗ್ಗೆ ಸಾಧ್ಯಂತವಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿಯೇ ಹರಿ ಸೂರ್ಯನಿಗೆ ಒಂದು ಕಥೆ ಹೇಳಿದ್ದಾರಂತೆ. ಅದನ್ನು ಸೂರ್ಯ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಅಂದಹಾಗೆ ಇದು ಖಂಡಿತಾ ಸಿಂಗಂ ಸರಣಿಯ ಕಥೆಯಲ್ಲ. ಈ ಜೋಡಿ ಡಿಫರೆಂಟಾದೊಂದು ಕತೆಯ ಮೂಲಕ ಇಷ್ಟರಲ್ಲಿಯೇ ಪ್ರೇಕ್ಷಕರ ಮುಂದೆ ಬರಲಿದೆ.

ಹರಿ ಇದುವರೆಗೂ ಸಾಮಿ ಸ್ಕ್ವೇರ್ ಎಂಬ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು. ಇತ್ತ ಚಿತ್ರರಂಗದ ನಿರ್ಮಾಪಕರು ಸ್ಟ್ರೈಕ್‌ನಲ್ಲಿ ತೊಡಗಿರೋ ಹೊತ್ತಿನಲ್ಲಿಯೇ ಹರಿ ಸದರಿ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಅದರ ಕೆಲಸ ಕಾರ್ಯಗಳು ಪೂರ್ಣಗೊಂಡ ತಕ್ಷಣವೇ ಸೂರ್ಯನ ಹೊಸಾ ಚಿತ್ರದ ಬಗ್ಗೆ ಸಂಪೂರ್ಣ ವಿವರ ಜಾಹಿರಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image