One N Only Exclusive Cine Portal

ನಾಗಾಭರಣರ ಜೊತೆ `ಸೋನೂ’ರಾಯಣ!

ಗುಳ್ಟು ಚಿತ್ರದಲ್ಲಿನ ಸೋನು ಗೌಡ ಅವರ ಪಾತ್ರ ಮತ್ತು ಅದನ್ನವರು ನಿರ್ವಹಿಸಿದ ರೀತಿ ಕಂಡವರೆಲ್ಲ ಮತ್ತೊಮ್ಮೆ ಕನ್ನಡದಲ್ಲಿ ಅವರ ಶಕೆ ಆರಂಭವಾಗುತ್ತದೆಂಬ ನಿರೀಕ್ಷೆ ಹೊಂದಿದ್ದರು. ಸದ್ಯ ಸೋನು ಕೈಲಿರುವ ಚಿತ್ರಗಳ ಪಟ್ಟಿ ನೋಡಿದರೆ ಆ ನಿರೀಕ್ಷೆ ನಿಜವಾಗಿರುವುದು ಸ್ಪಷ್ಟವಾಗುತ್ತದೆ.

ಸೋನು ಗೌಡ ಬಹುಶಃ ಇನ್ನೊಂದು ವರ್ಷಕ್ಕಾಗಿವಷ್ಟು ಬ್ಯುಸಿಯಾಗಿದ್ದಾರೆ. ರಂಭೂಮಿ ಹಿನ್ನೆಲೆಯಿಂದ ಬಂದ ಕಾರಣದಿಂದ ಈ ಹಿಂದಿನಿಂದಲೂ ವಿಶೇಷವಾದ ಪಾತ್ರವೊಂದುಕ್ಕಾಗಿ ಕಾಯುತ್ತಾ ಬಂದಿದ್ದ ಸೋನುಗೆ ಇದೀಗ ಅಂಥಾದ್ದೇ ಒಂದು ಪಾತ್ರ ಸಿಕ್ಕಿದೆ. ಅಂದಹಾಗೆ ಖ್ಯಾತ ನಿರ್ದೇಶಕ ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಕಾನೂರಾಯಣ’ ಚಿತ್ರದಲ್ಲಿ ಸೋನು ನಾಯಕಿಯಾಗಿ ನಟಿಸಲಿದ್ದಾರೆ.

ಈ ಚಿತ್ರದಲ್ಲಿ ಸೋನು ಗೌರಿ ಎಂಬ ಮಧ್ಯಮವರ್ಗದ ಗಟ್ಟಿಗಿತ್ತಿ ಹೆಣ್ಣುಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅಕಾರಣವಾಗಿ ಆ ಊರಿನ ಸಂಘ ಸಂಸ್ಥೆಗ ಸಾಹಚರ್ಯಕ್ಕೆ ಬಂದು ತನ್ನ ಶಕ್ತಿ ಏನೆಂಬುದನ್ನು ಅರಿವಾಗಿಸಿಕೊಂಡು ಎತ್ತರಕ್ಕೇರುವ, ಪುರುಷಾಧಿಪತ್ಯದ ಸಂಚುಗಳನ್ನೆದುರಿಸುವ ಚೇತೋಹಾರಿ ಹಳ್ಳಿ ಘಮಲಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆಯಂತೆ.

ಇದರ ಜೊತೆ ಜೊತೆಗೇ ಸೋನು ದಿಗಂತ್ ಜೊತೆಗೆ ಫಾರ್ಚುನರ್ ಎಂಬ ಚಿತ್ರದಲ್ಲಿಯೂ ನಟಿಸಲು ಒಪ್ಪಿಕೊಂಡಿದ್ದಾರೆ. ಅದಾದೇಟಿಗೆ ಕಿರಣ್ ಶ್ರೀನಿವಾಸ್ ಜೊತೆಗೆ ಒಂಥರಾ ಬಣ್ಣಗಳು ಎಂಬ ಚಿತ್ರದಲ್ಲಿಯೂ ನಟಿಸಲಿದ್ದಾರೆ. ಇದೆಲ್ಲದರಲ್ಲಿಯೂ ವಿಶೇಷವಾದ ಮತ್ತೊಂದು ಗೆಟಪ್ಪಿನಲ್ಲಿಯೂ ಸೋನು ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ.

ಖ್ಯಾತ ಐಪಿಎಸ್ ಅಧಿಕಾರಿಣಿ ಶಾಲಿನಿ ಅವರ ಜೀವನಾಧಾರಿತ ಚಿತ್ರದಲ್ಲಿ ಸೋನು ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ. ಅದರ ಹೆಸರೂ ಕೂಡಾ ಶಾಲಿನಿ ಐಪಿಎಸ್. ನಿಖಿಲ್ ಮಂಜು ನಿರ್ದೇಶನದ ಈ ಚಿತ್ರದ ಅಸಲೀ ಪಾತ್ರ ಕೂಡಾ ಸೋನು ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿ ದಾಖಲಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image