ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಟ್ಟು ನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ. ತಮಿಳು ಚಿತ್ರರಂಗದಲ್ಲಿ ಇಂಥಾದ್ದರ ವಿರುದ್ಧ ಹೋರಾಡಲಾರದೆ ಅನೇಕ ನಟಿಯರು ಸಾವನ್ನು ಅಪ್ಪಿಕೊಂಡಿದ್ದಾರೆ. ಕೆಲವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿರುವ ಇಂಥಾ ಕಾಮ ಕಾಯಿಲೆಯ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿರುವ ನಟಿ ಕಂ ಟಿವಿ ಆಂಕರ್ ಶ್ರೀ ರೆಡ್ಡಿ ಸಂಚಲನವನ್ನೇ ಸೃಷ್ಟಿಸಿದ್ದಾಳೆ.
ಬಹುಶಃ ಶ್ರೀ ರೆಡ್ಡಿ ಕಾಮುಕರ ವಿರುದ್ಧ ದೂರು ಕೊಟ್ಟಿದ್ದರೆ, ಮಾಮೂಲಿ ಹಾದಿಯಲ್ಲಿ ಧರಣಿ ನಡೆಸಿದ್ದರೆ ಈ ಪಾಟಿ ಪಬ್ಲಿಸಿಟಿ ಸಿಗುತ್ತಿರಲಿಲ್ಲ. ಮಾಧ್ಯಮಗಳೂ ಅತ್ತ ಫೋಕಸ್ ಮಾಡುತ್ತಿರಲಿಲ್ಲ. ಆದರೆ ಈಕೆ ಈ ಧರಣಿಗೆ ಬೆಚ್ಚಿ ಬೀಳಿಸುವಂಥಾ ದಾರಿಯನ್ನು ಆರಿಸಿಕೊಂಡಿದ್ದಾಳೆ. ಇದರ ಮೊದಲ ಭಾಗವಾಗಿ ಅರೆಬೆತ್ತಲೆ ಪ್ರತಿಭಟನೆಗೆ ಆಕೆ ಚಾಲನೆ ನೀಡಿದ್ದಾಳೆ!
ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಅವರಣದಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಮುಂದೆ ಶ್ರೀ ರೆಡ್ಡಿ ಮೊನ್ನೆ ಕಾಸ್ಟ್ ಕೌಚಿಂಗ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಳು. ಆದರೆ ಯಾರೊಬ್ಬರೂ ಆಕೆಯ ಧರಣಿಗೆ ಸ್ಪಂದಿಸಲೇ ಇಲ್ಲ. ಇದರಿಂದಾಗಿ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದಾಳೆ. ಓಪನ್ ಪ್ಲೇಸಿನಲ್ಲಿಯೇ ತಾನು ಧರಿಸಿದ್ದ ಟಾಪ್ ಕಿತ್ತೆಸೆದು ತೆರೆದೆದೆಯಲ್ಲಿಯೇ ಧರಣಿ ಆರಂಭಿಸಿದ್ದಾಳೆ. ಕಾಮುಖರ ವಿರುದ್ಧ ತನ್ನ ಹೋರಾಟಕ್ಕೆ ಯಾರೂ ಬೆಂಬಲ ಸೂಚಿಸುತ್ತಿಲ್ಲ. ಆದ್ದರಿಂದಲೇ ಹೀಗೆ ನಡುರಸ್ತೆಯಲ್ಲಿ ಬೆತ್ತಲಾಗಿ ಕುಳಿತಿರೋದಾಗಿ ಶ್ರೀ ಹೇಳಿಕೊಂಡಿದ್ದಾಳೆ. ಈ ಮೂಲಕ ದೇಶ ಮಟ್ಟದಲ್ಲಿಯೂ ತೆಲುಗು ಚಿತ್ರರಂಗದಲ್ಲಿರುವ ಕಾಸ್ಟ್ ಕೌಚಿಂಗ್ ವಿಚಾರ ಚರ್ಚೆಗೀಡಾಗಿದೆ.
ತೆಲುಗು ಚಿತ್ರರಂಗದಲ್ಲಿ ಇಂಥಾ ಕಾಮ ಕಾಯಿಲೆಗಳು ಅಗಾಗ ಉಲ್ಬಣಿಸುತ್ತಿರುತ್ತವೆ. ಆದರೆ ಶ್ರೀ ರೆಡ್ಡಿಯಂತೆ ಅದರ ವಿರುದ್ಧ ಹೋರಾಡುವವರಿಗೆ ಸಪೋರ್ಟು ಸಿಗುವುದು ಕಡಿಮೆ. ಈ ಬಾರಿಯೂ ಶ್ರೀ ರೆಡ್ಡಿ ಬೆತ್ತಲಾಗಿ ಪ್ರತಿಭಟನೆ ನಡೆಸುವಂಥಾ ಮಾನಸಿಕ ಸಂಘರ್ಷದಲ್ಲಿದ್ದರೂ ಬೇರೆಯವರಿರಲಿ ತೆಲುಗಿನ ನಟೀಮಣಿಯರೇ ಈ ಬಗ್ಗೆ ತುಟಿ ಬಿಚ್ಚದೆ ಮುಗುಮ್ಮಾಗಿದ್ದಾರೆ.
ಅದರೆ ಶ್ರೀ ರೆಡ್ಡಿ ಟಾಪ್ಲೆಸ್ ಆಗಿ ಧರಣಿ ಕೂತಿರೋದು ತನ್ನ ಪ್ರತಿಭಟನೆಯ ಮೊದಲ ಹಂತ ಅಂದಿದ್ದಾಳೆ. ಮುಂದೆ ಆಕೆ ಪೂರ್ತಿ ಬೆತ್ತಲಾಗೋ ಮುನ್ನವೇ ಸಂಬಂಧಿಸಿದವರು ನ್ಯಾಯ ಕೊಡಿಸೋ ಕೆಲಸ ಮಾಡದಿದ್ದರೆ ತೆಲುಗು ಚಿತ್ರರಂಗವೇ ಬೆತ್ತಲಾಗಿ ನಿಲ್ಲಬೇಕಾಗಿ ಬಂದರೂ ಅಚ್ಚರಿಯೇನಿಲ್ಲ!