One N Only Exclusive Cine Portal

ಶ್ರೀದೇವಿ ಸಾವಿಗೆ ಅಸಲೀ ಕಾರಣವೇನು?

ಭಾರತದ ಸೂಪರ್‌ಸ್ಟಾರ್ ನಟಿಯಾಗಿ ಮೆರೆದಿದ್ದ ಶ್ರೀದೇವಿ ಅಕಾಲಿಕ ಮರಣಕ್ಕೀಡಾಗಿದ್ದಾಳೆ. ಬದುಕಿರುವಷ್ಟೂ ದಿನ ಅದೆಂಥಾದ್ದೋ ಮಾನಸಿಕ ಸಂದಿಗ್ಧದಿಂದ ನರಳಾಡಿದ ಶ್ರೀದೇವಿ ಸಾವಿನ ನಂತರವೂ ಸಾಲು ಸಾಲು ವಿವಾದಗಳಿಂದಲೇ ಸದ್ದು ಮಾಡಿದ್ದಾಳೆ. ಆಕೆಯದ್ದು ಸಹಜ ಸಾವಲ್ಲ ಎಂಬುದರ ಸುತ್ತಾ ನಾನಾ ರೂಮರುಗಳೇ ಹರಿದಾಡುತ್ತಿವೆ. ದೃಷ್ಯ ಮಾಧ್ಯಮಗಳು ಕೂಡಾ ಶ್ರೀದೇವಿಯ ಸಾವಿನ ಹಿಂದಿರೋದೇನು ಎಂಬ ಬಗ್ಗೆ ಕೆದಕುತ್ತಾ ಥರ ಥರದ ಸುದ್ದಿ ಮಾಡುತ್ತಿವೆ. ಆದರೆ ಲೇಡಿ ಅಮಿತಾಬ್ ಬಚ್ಚನ್ ಎಂದೇ ಹೆಸರಾಗಿದ್ದ ಶ್ರೀದೇವಿ ಮರಣ ಹೊಂದಿರೋದು ದುಬೈನಲ್ಲಿ ಅಲ್ಲಿ ಕಾನೂನಾತ್ಮಕವಾಗಿ ಆಟ ಕಟ್ಟೋದು ಕಷ್ಟದ ವಿಚಾರ. ಆದ್ದರಿಂದಲೇ ಈ ಸಾವಿಗೆ ಕಾರಣವೇನೆಂಬ ನಿಖರ ಮಾಹಿತಿ ಸ್ಪಷ್ಟವಾದ ನಂತರವೇ ಮೃತ ದೇಹವನ್ನು ಭಾರತಕ್ಕೆ ಕಳಿಸಲಾಗಿದೆ. ಆ ಪ್ರಕಾರವಾಗಿ ನೋಡ ಹೋದರೆ ಶ್ರೀದೇವಿಯದ್ದು ಹೃದಯಾಘಾತದಿಂದ ಸಂಭವಿಸಿದ್ದ ಸಾವೆಂಬುದೂ ಪಕ್ಕಾ ಆಗಿದೆ!

ಆದರೆ ಹೃದಯಾಘಾತವಾದೇಟಿಗೆ ಒಂದೇ ಸಲಕ್ಕೆ ಆಸ್ಪತ್ರೆಗೆ ಕರೆದೊಯ್ಯುವ ಅವಕಾಶವೂ ಇಲ್ಲದಂತೆ ಶ್ರೀದೇವಿ ಉಸಿರು ಚೆಲ್ಲಿದ್ದರ ಹಿಂದೆ ಮಾತ್ರ ನಾನಾ ಕಾರಣಗಳಿದ್ದಾವೆ!

ಬಹುಶಃ ಶ್ರೀದೇವಿಯ ಗ್ಲಾಮರ್ ಕಾಪಾಡಿಕೊಳ್ಳುವ ಹುಚ್ಚೇ ಆಕೆಯನ್ನು ಇಷ್ಟು ಬೇಗನೆ ಸಾವಿನ ದವಡೆಯತ್ತ ನೂಕಿದ್ದರೂ ಅಚ್ಚರಿಯೇನಿಲ್ಲ. ಹೇಳಿ ಕೇಳಿ ಶ್ರೀದೇವಿ ದಂತದ ಬೊಂಬೆಯಂಥಾ ಚೆಲುವೆ. ಆಕೆ ಅಪ್ಪಟ ನಟಿಯಾಗಿದ್ದರೂ ಶ್ರೀದೇವಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಕ್ಷಣ ಜನ ಹುಚ್ಚೆದ್ದಿದ್ದು ಸೌಂದರ್ಯದ ಕಾರಣದಿಂದ. ಇಂಥಾ ಶ್ರೀದೇವಿ ಅದಾಗಲೇ ಮದುವೆಯಾಗಿದ್ದ ಬೋನಿ ಕಪೂರ್ ಎಂಬಾತನನ್ನು ಮದುವೆಯಾದ ಬಳಿಕ ಅಂಂಡ ಹನ್ನೊಂದು ವರ್ಷಗಳ ಕಾಲ ಬಾಲಿವುಡ್‌ನಿಂದ ದೂರವಾಗಿದ್ದಳು. ಅಂಥಾ ಶ್ರೀದೇವಿ ದಶಕದ ಗ್ಯಾಪಿನ ನಂತರ ಮತ್ತೆ ಎಂಟ್ರಿ ಕೊಟ್ಟಿದ್ದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ. ಹಾಗೆ ಸುದೀರ್ಘಾವಧಿಯ ನಂತರ ಮರಳಿದ ಈಕೆಯನ್ನು ಕಂಡು ಅಭಿಮಾನಿಗಳೆಲ್ಲ ಮತ್ತೊಮ್ಮೆ ಹುಚ್ಚೆದ್ದಿದ್ದರು. ಯಾಕೆಂದರೆ ಆಕೆ ಇನ್ನೂ ಅದೇ ಸೌಂದರ್ಯವನ್ನ ಕಾಪಾಡಿಕೊಂಡಿದ್ದಳು. ಅಂಥಾ ಅಪ್ರತಿಮ ಸೌಂದರ್ಯದಲ್ಲೇ ಆಕೆಯ ಸಾವು ಅಡಗಿತ್ತಾ ಎಂಬುದು ಸದ್ಯದ ಪ್ರಶ್ನೆ.

ಒಂದು ಮೂಲದ ಪ್ರಕಾರ ಹೇಳೋದಾದರೆ ಶ್ರೀದೇವಿಯ ಸೌಂದರ್ಯದ ಹಿಂದಿದ್ದದ್ದು ಥರ ಥರದ ದುಬಾರಿ ಔಷಧಗಳ ಬಲ. ಆಕೆ ಎರಡು ತಿಂಗಳಿಗೊಮ್ಮೆ ಭರ್ತಿ ಒಂದೂವರೆ ಲಕ್ಷ ರೂಪಾಯಿಗಳ ಇಂಜೆಕ್ಷನ್ ಹೆಟ್ಟಿಸಿಕೊಳ್ಳುತ್ತಿದ್ದಳು. ಅದು ಮುಖ ಸೇರಿದಂತೆ ಮೈಯ ಚರ್ಮವನ್ನು ಸುಕ್ಕಗಟ್ಟದಂತೆ ತಡೆದು ಬಿಗಿಯಾಗಿಡೋ ಔಷಧಿ. ಇನ್ನು ಒಂಚೂರೂ ಊಡಿಕೊಳ್ಳದೆ ಬಳುಕೋ ಬಳ್ಳಿಯಂತಿದ್ದ ಶ್ರೀದೇವಿ ಆ ಫಿಟ್ನೆಸ್ ಅನ್ನು ಕಾಪಾಡಿಕೊಂಡಿದ್ದು ಕೂಡಾ ಔಷಧಗಳ ಮೂಲಕವೇ. ತೂಕವನ್ನು ಕಾಯ್ದುಕೊಳ್ಳಲು ಡಯೆಟ್ ಮಾಡಿದ್ದರೆ ಶ್ರೀದೇವಿಗೆ ಇಂಥಾ ಸಾವು ಬರುತ್ತಿರಲಿಲ್ಲವೇನೋ. ಆದರೆ ಆಕೆ ಊದಿಕೊಳ್ಳೋ ದೇವಹವನ್ನು ಸಹಜವಾಗಿಟ್ಟುಕೊಳ್ಳಲು, ದಪ್ಪಗಾದಾಗ ತೆಳ್ಳಗಾಗಲು ಸ್ಟೆರಾಯ್ಡ್ ಲಸಿಕೆಗಳನ್ನು ನೆಚ್ಚಿಕೊಳ್ಳುತ್ತಿದ್ದಳು. ಏನೇ ದೈಹಿಕ ಸಮಸ್ಯೆಗಳಿದ್ದರೂ ಔಷಧಿಯನ್ನೇ ಪರಿಹಾರ ಅಂದುಕೊಂಡಿದ್ದ ಶ್ರೀದೇವಿಯ ದೇಹದೊಳಗೆ ಔಷಧಿಯ ವಿಷ ತುಂಬಿಕೊಂಡಿತ್ತು. ಸಾಮಾನ್ಯವಾಗಿ ಹೃದಯಾಘಾತವಾದಾಗ ಆಸ್ಪತ್ರೆಗೆ ದಾಖಲಿಸುವಷ್ಟಾದರೂ ಸಮಯ ಉಸಿರು ಉಳಿದಿರುತ್ತೆ. ಆದರೆ ಆಕೆಯ ದೇಹ ಅದಾಗಲೇ ಔಷಧ ವಿಷದ ಕಟಾಂಜನದಂತಾಗಿದ್ದರಿಂದ ಹೃದಯಾಘಾತಕ್ಕೆ ಫಟಕ್ಕನೆ ಪ್ರಾಣ ಹೋಗಿದೆ.

ಆ ದಿನ ದುಬೈನ ಮನೆಯಲ್ಲೇ ಇದ್ದವಳು ಶ್ರೀದೇವಿ. ಆವತ್ತು ರಾತ್ರಿ ಒಂದು ಪಾರ್ಟಿಗೆ ಈಕೆಯನ್ನು ಕರೆದುಕೊಂಡು ಹೋಗಬೇಕೆಂಬ ಇರಾದೆಯಿಂದ ಶ್ರೀದೇವಿ ತಂಗಿದ್ದ ಮನೆಗೆ ಬಂದ ಬೋನಿ ಕಪೂರ್ ಇಪ್ಪತ್ತು ನಿಮಿಷಗಳ ಕಾಲ ಆಕೆಯೊಂದಿಗೆ ಮಾತಾಡಿದ್ದಾನೆ. ಶ್ರೀದೇವಿಯಲ್ಲಿ ಕೊಂಚವೂ ಬಳಲಿಕೆ ಕಂಡು ಬಂದಿರಲಿಲ್ಲ. ಆಕೆ ಎಂದಿನಂತೆಯೇ ಉತ್ಸಾಹದಿಂದಿದ್ದಳು. ಇಂಥಾ ಶ್ರೀದೇವಿ ಸ್ನಾನ ಮಾಡಲು ಬಾತ್ ರೂಮಿಗೆ ಹೋದವಳು ಬಾತ್ ಟಬ್ಬಿನಲ್ಲೇ ಪ್ರಾಣ ಬಿಟ್ಟಿದ್ದಳು. ಆದರೆ ಆಕೆ ಕುಡಿದ ಮತ್ತಿನಲ್ಲಿ ಬಾತ್ ಟಬ್ಬಿಗೆ ಬಿದ್ದ ಉಸಿರುಗಟ್ಟಿ ಸತ್ತಿದ್ದಾಳೆಂಬುದೂ ಸೇರಿದಂತೆ ನಾನಾ ರೂಮರುಗಳು ಹರಿದಾಡುತ್ತಲೇ ಇದ್ದಾವೆ. ಶ್ರೀದೇವಿಯಂಥಾ ದೈತ್ಯ ನಟಿಯೊಬ್ಬಳು ಅಕಾಲಿಕವಾಗಿ ನಿರ್ಗಮಿಸಿದಾಗ ಇಂಥವೆಲ್ಲ ನಡೆಯದಿರಲು ಸಾಧ್ಯವೂ ಇಲ್ಲವೇನೋ. ಆಕೆ ನಡೆದು ಬಂದ ಹಾದಿ, ಏರಿಕೊಂಡ ಗೆಲುವಿನ ಉತ್ತುಂಗ ಸ್ಥಿತಿಗಳೇ ಅಂಥಾದ್ದಿವೆ!

Leave a Reply

Your email address will not be published. Required fields are marked *


CAPTCHA Image
Reload Image