ಬಾಲಿವುಡ್ನ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ ಕರಣ್ಜೋಹರ್ನ ’ಸ್ಟೂಡೆಂಟ್ಆಫ್ ದಿ ಇಯರ್’ ಚಿತ್ರ ನೆನಪಿದೆತಾನೆ? ಈಗ ಭಾಗ-೨ ಅನ್ನು ೨೦೧೮ರ ನವೆಂಬರ್ಗೆ ತೆರೆಗಾಣಿಸಲು ಕರಣ್ ಯೋಜಿಸಿದ್ದಾನೆ. ಅಚ್ಚರಿ ಎಂದರೆ ಭಾಗ-೧ರಲ್ಲಿ ಓರ್ವ ನಾಯಕಿ ಹಾಗೂ ಇಬ್ಬರು ನಾಯಕರಿದ್ದರೆ ಭಾಗ-೨ರಲ್ಲಿ ಒಬ್ಬ ಹೀರೋಗೆ ಇಬ್ಬರು ಬೆಡಗಿಯರು ಸಾಥ್ ನೀಡಲಿದ್ದಾರೆ. ಭಾಗ-೨ ಸಕ್ಸಸ್ನಲ್ಲಿ ತೇಲುತ್ತಿರುವ ಟೈಗರ್ ಶ್ರಾಫ್ ನಾಯಕನಾಗಿ ಹಾಗೂ ನಾಯಕಿಯಾಗಿ ಅನನ್ಯ (ಭಾವನ-ಚಂಕಿಪಾಂಡೆ ಹಿರಿಯ ಪುತ್ರಿ) ಹಾಗೂ ಗಾಯಕಿ ತಾರಾ ಸುತಾರಿಯ ನಟಿಸಲಿದ್ದಾರೆ. ಮಾಡರ್ನ್ ಯುವತಿಯರ ಹಾರ್ಟ್ಥ್ರೋಬ್ಆದ ಮರಿ ಶ್ರಾಫ್ ಸ್ಟೂಡೆಂಟ್ಆಫ್ ದಿ ಇಯರ್ ಭಾಗ-೨ರಲ್ಲಿ ಹಂಡ್ರೆಡ್ ಕ್ರೋರ್ ಕ್ಲಬ್ ಸೇರಬಹುದೆಂಬುದು ಬಾಲಿವುಡ್ ಪಂಡಿತರ ಅಂಬೋಣ.
ಕರಣ್ ಜೋಹರ್ ಈ ಹಿಂದೆ ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಮೂವರು ಯುವ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಎಂಟ್ರಿ ಮಾಡಿಸಿದ್ದರು. ೨೦೧೨ರಲ್ಲಿ ತೆರೆಗೆ ಬಂದ ಸ್ಟುಡೆಂಟ್ ಆಫ್ ದಿ ಇಯರ್ ಸ್ಟುಡೆಂಟ್’ಗಳಾದ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಸದ್ಯ ಬಾಲಿವುಡ್’ನಲ್ಲಿ ತಮ್ಮ ಚಾರ್ಮ್’ನಿಂದ ಕಂಗೊಳಿಸುತ್ತಿದ್ದಾರೆ.
ಹಿಂದಿ ಸಿನಿಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಕರಣ್ಜೋಹರ್ ಈ ಚಿತ್ರದ ಬೆನ್ನೆಲುಬಾಗಿದ್ದು ಅದ್ಧೂರಿತನ, ಗಟ್ಟಿಕಥಾ ಹಂದರ ಹಾಗೂ ತಾರಾಣದಲ್ಲಿ ಕೊರತೆಯಾಗುವಂತಹ ಸಾಧ್ಯತೆಯೇ ಇಲ್ಲ. ಪ್ರೇಕ್ಷಕ ಮಹಾಪ್ರಭು ಇನ್ನೂ ಏಳು ತಿಂಗಳು ಕಾಯಬೇಕು. ಆಸ್ಟ್ ವೇಯ್ಟ್ಅಂಡ್ ವಾಚ್!!!