One N Only Exclusive Cine Portal

ವಿಜಯನಗರದ ವೀರಪುತ್ರನ ಮಡದಿಗೆ ಇದೆಂಥಾ ಗತಿ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಿತ್ರರಂಗದಲ್ಲಿ ಕಲಾವಿದರಾಗಿ ಮಿಂಚಿದ ಕೆಲವರ ಬದುಕಿನ ಸಂಧ್ಯಾಕಾಲ ಯಾಕಿಷ್ಟೊಂದು ಯಾತನಾಮಯವಾಗುತ್ತೋ ಗೊತ್ತಿಲ್ಲ. ಆದರೆ ಕಲಾವಿದರಾಗಿ, ನಾನಾ ವಿಭಾಗಗಳಲ್ಲಿ ಹೆಸರು ಮಾಡಿದವರೂ ಕೂಡಾ ವೃದ್ಧಾಪ್ಯದಲ್ಲಿ ಅವರಿವರ ಮುಂದೆ ಅಂಗಲಾಚೋ ಸ್ಥಿತಿ ಬಂದು ಬಿಡುತ್ತದೆ. ಆದರೆ ಚಿತ್ರರಂಗದಲ್ಲಿ ಮಿಂಚುತ್ತಿದ್ದರೆ ಮಾತ್ರವೇ ಬೆಲೆ. ಕೈಕಾಲು ಸೋತು, ಬಣ್ಣ ಮಾಸಲಾದಾಗ ಅಂಥವರು ಅಭಿಜಾತ ಕಲಾವಿದರಾಗಿದ್ದರೂ ಮೂಲೆಗುಂಪಾಗುತ್ತಾರೆ. ಆರ್ಥಿಕವಾಗಿಯೂ ಸಂಕಷ್ಟವಿದ್ದರಂತೂ ಸಂಧ್ಯಾಕಾಲವೆಂಬುದು ಪ್ರತೀ ಕ್ಷಣವೂ ಸುಡಲಾರಂಭಿಸುತ್ತೆ. ಅಂಥಾ ಬದುಕಿನ ಸ್ಥಿತಿ ಏನೆಂಬುದಕ್ಕೆ ತಾಜಾ ಉದಾಹರಣೆ ಶೈಲಶ್ರೀ ಸುದರ್ಶನ್. ಇವರೀಗ ಇರೋ ದಯನೀಯ ಸ್ಥಿತಿಯ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಮನ ಮಿಡಿಯುವ ಬರಹ ಇಲ್ಲಿದೆ. ಚಿತ್ರರಂಗದ ಮಂದಿ ಈ ಹಿರಿಯ ಜೀವದತ್ತ ಸಹಾಯಹಸ್ತ ಚಾಚುವಂತಾಗಲಿ ಎಂಬ ಆಶಯದೊಂದಿಗೆ ಇದನ್ನಿಲ್ಲಿ ಪ್ರಕಟಿಸುತ್ತಿದ್ದೇವೆ…

 – ಅರುಣ್

ಗಣೇಶ್ ಕಾಸರಗೋಡು

ಮಹಾತಾರೆಯಾಗಿ ಮೆರೆದುಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಚಲನಚಿತ್ರ ಪಿತಾಮಹ ಆರ್.ನಾಗೇಂದ್ರರಾಯರ ಸೊಸೆ ಈಗಅನಾಥೆಒಬ್ಬಂಟಿಒಂದು ಕಾಲದಲ್ಲಿ ತಮ್ಮದೇ ಸ್ವಂತ ಬ್ಯಾನರಿನ ಚಿತ್ರಗಳಲ್ಲಿ ಅಭಿನಯಿಸಲು ಕಲಾವಿದರನ್ನು ಕರೆ ಕರೆದು ಅವಕಾಶ ಮಾಡಿಕೊಟ್ಟಈ ಧೀಮಂತ ಮಹಿಳೆ ಈಗ ಸ್ವತಃ ಅವಕಾಶಗಳಿಗಾಗಿ ನಿರ್ಮಾಪಕರ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿರುವ ದುರಂತ ನಡೆದಿದೆ!

ಮುಂದಿನ ದಿನಗಳ ಬದುಕಿಗಾಗಿ ಅಭಿನಯದ ಅವಕಾಶಗಳನ್ನು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ ಇವರು ಬೇರೆ ಯಾರೂ ಅಲ್ಲಇತ್ತೀಚೆಗೆವಿಧಿವಶರಾದ ‘ವಿಜಯನಗರದ ವೀರಪುತ್ರ‘ ಆರ್.ಎನ್.ಸುದರ್ಶನ್ ಅವರ ಧರ್ಮಪತ್ನಿ ಶ್ರೀಮತಿ ಶೈಲಶ್ರೀ ಸುದರ್ಶನ್.

ಸಂಧ್ಯಾರಾಗ‘ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶೈಲಶ್ರೀ ಒಂದು ಕಾಲದಲ್ಲಿ ಇಂಡಿಯನ್ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದವರು. 1971ರಲ್ಲಿ ಸುದರ್ಶನ್ ತಯಾರಿಸಿದ ‘ನಗುವ ಹೂವು‘ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರು. 1974ರಲ್ಲಿ ‘ಬಂಗಾರದ ಪಂಜರ‘ ಚಿತ್ರದಲ್ಲಿನಟಿಸುತ್ತಿದ್ದಾಗ ಸುದರ್ಶನ್ ಅವರನ್ನು ಪ್ರೀತಿಸಿ ಮದುವೆಯಾದವರುಕಾಡಿನ ರಹಸ್ಯಮನಸ್ಸಿದ್ದರೆ ಮಾರ್ಗಬಂಗಾರದ ಹೂವು,ವಾಗ್ದಾನ..ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಶೈಲಶ್ರೀ ಅವರಿಗೆ ಇಂಥಾದ್ದೊಂದು ಬದುಕು ಎದುರಾದದ್ದಾದರೂ ಹೇಗೆ?

ನರ್ತಕಿಯೂಗಾಯಕಿಯೂ ಆಗಿರುವ ಶೈಲಶ್ರೀ ಇದೀಗ ಅನಿವಾರ್ಯವಾಗಿ ಮಲ್ಲತ್ತಹಳ್ಳಿಯ ಬಾಡಿಗೆ ಮನೆಯಲ್ಲೇ ಅಕ್ಕಪಕ್ಕದ ಮನೆಯ ಮಕ್ಕಳಿಗೆನೃತ್ಯ ಹೇಳಿಕೊಡುತ್ತಿದ್ದಾರೆಜೊತೆಗೆ ಸಂಗೀತ ಪಾಠವನ್ನೂ ಮಾಡುತ್ತಿದ್ದಾರೆಆದರೆ  ದುಡಿಮೆಯಿಂದ ಬೆಂಗಳೂರಿನಂತಹ ಸಿಟಿಯಲ್ಲಿ ಬದುಕುಸಾಗಿಸುವುದು ಕಷ್ಟಸಾಧ್ಯಹೀಗಾಗಿ ಸಿನೆಮಾಗಳ ಅಭಿನಯದ ಅವಕಾಶಕ್ಕಾಗಿ ತಮ್ಮ ಇಷ್ಟಮಿತ್ರರ ಮೊರೆ ಹೋಗಿದ್ದಾರೆ ಶೈಲಶ್ರೀಪ್ರಸ್ತುತರವಿಗರಣಿಯವರ ಧಾರಾವಾಹಿಯೊಂದರಲ್ಲಿ ನಟಿಸುತ್ತಿರುವ ಶೈಲಶ್ರೀ ಜೊತೆ ಜೊತೆಗೇ ಸಿನೆಮಾಗಳ ಅವಕಾಶ ಸಿಕ್ಕರೆ ಬದುಕು ಸಾಗಿಸುವುದುಕಷ್ಟವಾಗದು ಎಂಬ ನಂಬಿಕೆಯಿಂದ ದಿನ ದೂಡುತ್ತಿದ್ದಾರೆ!

ಅವಕಾಶಗಳ ಮಹಾಪೂರವೇ ಹರಿದು ಬರುತ್ತದೆ ಎಂದು ಯಾರೋ ಹೇಳಿದ ಮಾತು ಕೇಳಿ ಚೆನ್ನೈನಲ್ಲಿರುವ ಬಂಗಲೆಯನ್ನು ಮಾರಿ ಬೆಂಗಳೂರಿಗೆಬಂದ ಸುದರ್ಶನ್ ದಂಪತಿಗಳಿಗೆ ನಿರಾಸೆ ಕಾದಿತ್ತುಜೊತೆಗೆ ಪತಿಯ ಅನಾರೋಗ್ಯದಿಂದಾಗಿ ಕೈಲಿದ್ದ ಲಕ್ಷಾಂತರ ಹಣವೆಲ್ಲಾ ಖರ್ಚಾಗಿ ಹೋಯಿತು.ಒಂದೆರಡು ಅವಕಾಶಗಳನ್ನು ಬಿಟ್ಟರೆ ಸುದರ್ಶನ್ ಖಾಲಿಯಾಗಿಯೇ ಕುಳಿತುಬಿಟ್ಟರುಆಗಲೇ ಆರ್ಥಿಕವಾಗಿ ಕಂಗಾಲಾದ ದಂಪತಿಗಳು ಮುಂದೇನುಎಂಬ ಚಿಂತೆಯಿಂದ ಕಂಗಾಲಾಗಿದ್ದರುಕಾಯಿಲೆ ಉಲ್ಬಣಿಸಿ ಪತಿ ತೀರಿಕೊಂಡ ಮೇಲೆ ಆಕಾಶವೇ ಕಳಚಿ ಬಿದ್ದಂತಾದ ಶೈಲಶ್ರೀ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆಅವರಿವರು ಸನ್ಮಾನಿಸಲು ಕರೆಯುತ್ತಾರಾದರೂ  ಬರೀ ಶಾಲುಹಾರಸಂಭ್ರಮಗಳಿಂದ ಹೊಟ್ಟೆ ತುಂಬುತ್ತದೆಯೇ? “ಅವರಿರುವಾಗ ಸನ್ಮಾನಕ್ಕೆ ಹೋದರೆ ಅಲ್ಪಸ್ವಲ್ಪ ಆರ್ಥಿಕ ಸಹಾಯ ಸಿಗುತ್ತಿತ್ತುಅಷ್ಟರಲ್ಲೇ ಹೇಗೋ ಬದುಕು ಸಾಗಿಸುತ್ತಿದ್ದೆವುಈಗ ಅವರಿಲ್ಲ.ಪರಿಸ್ಥಿತಿ ವಿಕೋಪಕ್ಕೆ ಹೋಗಿದೆನಾನು ಒಬ್ಬಂಟಿವಯಸ್ಸು 70 ದಾಟಿದರೂ ಶಕ್ತಿಗುಂದಿಲ್ಲಗಾಡ್ ಈಸ್ ಗ್ರೇಟ್ಚೆನ್ನಾಗಿ ಕನ್ನಡ ಮಾತಾಡುತ್ತೇನೆ.ರವಿಗರಣಿ ಸೀರಿಯಲ್ನಲ್ಲಿ ನನ್ನ ಪರ್ಫಾಮೆನ್ಸ್ ನೋಡಿದ ತಂಡದ ಎಲ್ಲರೂ ಒಳ್ಳೆಯ ಮಾತಾಡುತ್ತಿದ್ದಾರೆಹೀಗಿರುವಾಗ ಸಿನೆಮಾಗಳಲ್ಲಿ ಅವಕಾಶಸಿಕ್ಕರೆ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ನಂಬಿಕೆ ನನ್ನದುದಯವಿಟ್ಟು ಯಾರಾದರೂ ನಿರ್ಮಾಪಕನಿರ್ದೇಶಕರಿಗೆ ನನ್ನ ಬಗ್ಗೆ ಮತ್ತುನನ್ನ ಆರ್ಥಿಕ ದುಃಸ್ಥಿತಿಯ ಬಗ್ಗೆ ಹೇಳಿ ಸಿನೆಮಾಗಳಲ್ಲಿ ಅಭಿನಯಿಸುವ ಅವಕಾಶ ಮಾಡಿಕೊಡಿ ಪ್ಲೀಸ್…” – ಎಂದು ಹೇಳಿ ತಮ್ಮ ದಾರಿದ್ರ್ಯಕ್ಕೆ ತಾವೇಮರುಗುವ ಶೈಲಶ್ರೀ ಅವರಿಗೆ ಯಾರಾದರೂ ಅವಕಾಶ ನೀಡಬಾರದೇ?

ಬಾಡಿಗೆ ಮನೆ ಓನರ್ ಅನುಕಂಪದ ಆಧಾರದ ಮೇಲೆ ಮುಂದಿನ 6 ತಿಂಗಳ ಕಾಲ ಬಾಡಿಗೆ ಏರಿಸುವುದಿಲ್ಲವೆಂದು ಪ್ರಾಮಿಸ್ ಮಾಡಿದ್ದಾರಂತೆ.ಇದರಿಂದಾಗಿ ಶೈಲಶ್ರೀಯವರಿಗೆ ಅಷ್ಟರ ಮಟ್ಟಿಗೆ ಸಮಾಧಾನ ತಂದಿದೆಮುಂದೇನು ಯಕ್ಷ ಪ್ರಶ್ನೆಗೆ ಇವರಲ್ಲಿ ಉತ್ತರವಿಲ್ಲಎಂಥಾ ಕಲಾವಿದರಕುಟುಂಬ ಅದಿನ್ನೆಂಥಾ ದುಃಸ್ಥಿತಿಗೆ ಇಳಿದು ಬಿಟ್ಟಿತಲ್ಲಾ?

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image