One N Only Exclusive Cine Portal

ನಿರ್ಜೀವ ಕಾರು ಹೇಗೆ ಎರಡು ಹೃದಯಗಳನ್ನು ಬೆಸೆದ ಸೋಜಿಗ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಟ ಆರ್.ಎನ್. ಸುದರ್ಶನ್ ಅವರಿಗೆ ಪ್ರಿಯವಾಗಿದ್ದ ಪ್ರೀಮಿಯರ್ ಪದ್ಮಿನಿ!

ಹೆಂಡತಿ ಜೊತೆ ಮುನಿಸಿಕೊಂಡಾಗಲೂ ಮಡಿಲಾಗುತ್ತಿದ್ದದ್ದು ಇದೇ ಪದ್ಮಿನಿ!

ನಟ ಸುದರ್ಶನ್ ಅತಿಯಾಗಿ ಪ್ರೀತಿಸುವ ಎರಡು ಜೀವಗಳೆಂದರೆ : ಶೈಲಶ್ರೀ ಮತ್ತು ಪದ್ಮಿನಿ! ಶೈಲಶ್ರೀ ಅಂದರೆ ಯಾರೂಂತ ನಿಮಗೆ ಗೊತ್ತು. ಆದರೆ ಯಾರು ಈ ಪದ್ಮಿನಿ? ಇದು ಸುದರ್ಶನ್ ಅವರ ಪ್ರೀತಿಯ ಪ್ರೀಮಿಯರ್ ಪದ್ಮಿನಿ ಕಾರು! ಪದ್ಮಿನಿ ಅಂದರೆ ಸುದರ್ಶನ್ ಅವರಿಗೆ ಜೀವ, ಅಂತೆಯೇ ಶೈಲಶ್ರೀ ಅಂದರೆ ಪ್ರಾಣ! ಕರ್ನಾಟಕದ ಆ ಕಾಲದ ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಈ ಕಾರನ್ನು ಸುಮಾರು 40 ವರ್ಷಗಳ ಹಿಂದೆ ಖರೀದಿಸಿದ್ದೆಂದು ಶೈಲಶ್ರೀ ಅವರ ಅಂದಾಜು! ಮಕ್ಕಳಿಲ್ಲದ ಈ ತಾರಾ ದಂಪತಿಗಳಿಗೆ ಈ ಕಾರು ಮತ್ತು ಸ್ಕೂಟರ್ ಮಕ್ಕಳು! ನಿಮ್ಮ ಮಗಳ ಹೆಸರೇನು ಎಂದು ಕೇಳಿದರೆ ಥಂಟ್ಟಂತ ಸುದರ್ಶನ್ ಉತ್ತರಿಸುತ್ತಿದ್ದರು: ಪದ್ಮಿನಿ!

ಯಾರಾದರೂ ಬಂದು ಬೆಂಜ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ, ಬನ್ನಿ ಅಂದರೆ ಸುತರಾಂ ಒಪ್ಪದ ಸುದರ್ಶನ್ ಅವರಿಗೆ ಈ ಪ್ರೀಮಿಯರ್ ಪದ್ಮಿನಿ ಕಾರೇ ಬೆಂಜ್, ರೋಲ್ಸ್’ರಾಯ್…ಎಲ್ಲಾ!!! ಈ ಕಾರನ್ನು ಮಾರಿ ಬೇರೆ ಹೊಚ್ಚ ಹೊಸ ಕಾರನ್ನು ಕೊಂಡುಕೊಳ್ಳಿ, ನಾನು ಕೊಡಿಸುತ್ತೇನೆ ಅಂದರೆ ಅವರು ಇವರಿಗೆ ಬದುಕು ಪೂರ್ತಿ ಶತ್ರು ಆದಂತೆಯೇ! “ನಿಮ್ಮ ಕೋಟಿ ಬೆಲೆ ಬಾಳುವ ಕಾರು ಓಡುವುದು ಇದೇ ರಸ್ತೆ ಮೇಲೆ, ನನ್ನ ಈ ಪದ್ಮಿನಿ ಓಡುವುದೂ ಇದೇ ರಸ್ತೆ ಮೇಲೆ…”- ಎಂದು ಸಮಜಾಯಿಷಿ ನೀಡುವ ಸುದರ್ಶನ್ ತಮ್ಮ ಈ ಪ್ರೀತಿಯ ಕಾರನ್ನು ಮಾರುವ ಯೋಚನೆಯನ್ನು ಎಂದೂ ಮಾಡಿಲ್ಲ. ಹತ್ತಾರು ಮಂದಿ ಈ ಆಂಟಿಕ್ ಕಾರನ್ನು ಕೊಂಡುಕೊಳ್ಳಲು ಮುಂದೆ ಬಂದರೂ ಸುದರ್ಶನ್ ಕೊಟ್ಟಿರಲಿಲ್ಲ. ಈಗ ಈ ನೀಲ ವರ್ಣದ ಚೆಲುವೆ ಅನಾಥವಾಗಿ ಮಲ್ಲತ್ತಹಳ್ಳಿಯ ಶೈಲಶ್ರೀ ಮನೆಯ ಸೆಲ್ಲರ್’ನಲ್ಲಿ ನಿಂತುಕೊಂಡಿದೆ!

 “ಇದು ಬರಿಯ ಕಾರಲ್ಲ, ನನ್ನ ಯಜಮಾನರ ಜೀವ..”- ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶೈಲಶ್ರೀ ತಾವೇ ಖುದ್ದು ಡ್ರೈವ್ ಮಾಡಿ ಕಾರಿನ ಕಂಡೀಷನ್ ಬಗ್ಗೆ ಸರ್ಟಿಫಿಕೇಟ್ ಕೊಡುತ್ತಾರೆ! ಎಷ್ಟೇ ಕಷ್ಟ ಬಂದರೂ ಈ ಕಾರನ್ನು ತಾವು ಮಾರುವುದಿಲ್ಲ ಎನ್ನುವುದು ಶೈಲಶ್ರೀ ಗಟ್ಟಿ ನಿಲುವು. ಆದರೆ ತಂದೆಯನ್ನು ಕಳೆದುಕೊಂಡ ಈ ಮಗಳನ್ನು ನೋಡುವಾಗ ಶೈಲಶ್ರೀ ಕರುಳು ಚುರುಕ್ಕೆನ್ನುತ್ತದೆಯಂತೆ. ಒಂದು ನಿರ್ಜೀವ ಕಾರು ಹೇಗೆ ಎರಡು ಹೃದಯಗಳನ್ನು ಬೆಸೆದು ತನ್ನದೇ ಆದ ಇಮೋಷನಲ್ ಬೈಂಡಿಂಗ್’ಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಪ್ರೀಮಿಯರ್ ಪದ್ಮಿನಿಯೇ ಸಾಕ್ಷಿ….

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image