Connect with us

ರಿಯಾಕ್ಷನ್

Published

on

ಕಿಚ್ಚಾ ಸುದೀಪ್ ಕನ್ನಡದಾಚೆಗೂ ಕೀರ್ತಿ ಪತಾಕೆ ಹಾರಿಸಿರುವ ಪ್ರತಿಭಾವಂತ ನಟ. ನಿರ್ದೇಶನ, ಗಾಯನ ಸೇರಿದಂತೆ ಅವರ ಪ್ರತಿಭೆಗೆ ನಾನಾ ಮುಖಗಳಿವೆ. ಆದರೆ ಅವರೊಳಗಿನ ಬರಹಗಾರನನ್ನು ಶೋಧಿಸಿದ ಕೀರ್ತಿ ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರಿಗೇ ಸಲ್ಲಬೇಕು. ಸದಾಶಿವ ಶೆಣೈ ಅವರು ವಿಷ್ಣುವರ್ಧನ್ ಅವರ ಬಗ್ಗೆ ಬರೆದಿರುವ `ಮುಗಿಯದಿರಲಿ ಬಂಧನ ಎಂಬ ಕೃತಿಗೆ ಸುದೀಪ್ ಅವರಿಂದ ಬೆನ್ನುಡಿ ಬರೆಸಿದ ರಸವತ್ತಾದ ಅನುಭವವನ್ನು ಹಂಚಿಕೊಂಡಿದ್ದಾರೆ…

ಇದು ವ್ಯಕ್ತಿ ಚಿತ್ರಣ ಅಲ್ಲ. ವ್ಯಕ್ತಿ ಗೌರವದ ಸಣ್ಣ ಟಿಪ್ಪಣಿ. ನಾನು ನನ್ನ ಗೆಳೆಯರಲ್ಲಿ ಅನೇಕ ಬಾರಿ ಹೇಳಿದ್ದೆ.., ವರ್ಕೋಹಾಲಿಕ್​​ ವ್ಯಕ್ತಿತ್ವದಲ್ಲಿ ಶಂಕರ್​ನಾಗ್​ ಎತ್ತಿದ ಕೈ. ಕ್ರೀಯಾಶೀಲತೆಯಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರದ್ದು ಮೇಲುಗೈ. ಇದು ಸ್ಯಾಂಡಲ್​ವುಡ್​ನಲ್ಲಿ ಎಲ್ಲರೂ ಒಪ್ಪುವ ಮಾತು. ಈ ಎರಡು ವ್ಯಕ್ತಿಗಳ ಕಾಂಬಿನೇಶನ್​ ತರಹ ನನಗೆ ಸುದೀಪ್ ಕಾಣಿಸುತ್ತಿದ್ದಾರೆ. ನಾನಿಲ್ಲಿ ಅವರ ನಟನೆಯ ವಿಷಯ ಪ್ರಸ್ತಾಪಿಸಲು ಹೋಗುವುದಿಲ್ಲ. ಅವರ ನಟನಾ ಶೈಲಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕೆಲವರು ಅವರಲ್ಲಿ ವಿಷ್ಣುವರ್ಧನ್​ ಅವರನ್ನು ಕಂಡರೆ, ಮತ್ತೆ ಕೆಲವರು ಅವರೊಳಗೆ ಕಮಲ್​ ಹಾಸನ್​​ ಅವರನ್ನು ಕಾಣುತ್ತಾರೆ.

ಇತ್ತೀಚೆಗೆ ಅವರ ಜೊತೆ ಕೆಸಿಸಿ ಕ್ರಿಕೆಟ್​ ಟೂರ್ನಮೆಂಟ್​ನ ಆಯೋಜಕರಲ್ಲೊಬ್ಬನಾಗಿ ಕೆಲಸ ಮಾಡಿದಾಗ ನನಗೆ ಶಂಕರ್​ನಾಗ್​ ನೆನಪಿಗೆ ಬಂದರು. ಮೂರ್ನಾಲ್ಕು ದಿನ ರಾತ್ರಿ ಸುಮಾರು ಎರಡು ಗಂಟೆಯಾಗಲು ಕ್ರಿಕೆಟ್​ ಸ್ಟೇಡಿಯಂನಲ್ಲಿ ಅವರು ಟೂರ್ನಮೆಂಟ್​ಗೆ ಫೈನಲ್​ ಟಚ್​ ನೀಡುವುದರಲ್ಲಿ ಮಗ್ನರಾಗಿದ್ದರು. ತಾನೊಬ್ಬ ಸೂಪರ್​ ಸ್ಟಾರ್​ ಎಂಬುದನ್ನು ಮರೆತು ಸಾಮಾನ್ಯ ಶ್ರಮಿಕನಂತೆ ಡೇ & ನೈಟ್​​ ಅಲ್ಲೇ ಓಡಾಡುತ್ತಿರುವುದನ್ನು ಕಂಡು ಚಕಿತಗೊಂಡೆ. ಇದನ್ನು ಕಮಿಟ್​ಮೆಂಟ್​ ಅಥವ ಕಾರ್ಯ ತತ್ಪರತೆ ಎಂದು ಹೇಳಬಹುದು. ಪ್ರತಿಯೊಂದು ಸಣ್ಣ ಸಣ್ಣ ವಿಷಗಳತ್ತವೂ ಗಮನ ಹರಿಸುವ ಅವರ ಶೈಲಿ ಮೆಚ್ಚುಗೆಯಾಯ್ತು.

ಅಂದಹಾಗೆ ನಾನೀಗ ಹೇಳಲು ಹೊರಟ್ಟಿದ್ದು ಅವರ ಪ್ರತಿಭೆಯ ಮತ್ತೊಂದು ಮಜಲನ್ನು. ನಟ, ನಿರ್ದೇಶಕ, ನಿರೂಪಕ, ಸಂಘಟಕ,ಕ್ರಿಕೆಟಿಗ… ಹೀಗೆ ಹತ್ತು ಹಲವು ಮುಖಗಳನ್ನು ಹೊಂದಿರೋದು ನಿಮಗೆ ಗೊತ್ತೇ ಇದೆ. ಆದರೆ ಅವರೊಬ್ಬ ಉತ್ತಮ ಬರಹಗಾರ ಕೂಡ ಎಂಬುದು ನನಗೆ ಮೊನ್ನೆ ಗೊತ್ತಾಯ್ತು. ನಾನು ಬರೆದ ‘ಮುಗಿಯದಿರಲಿ ಬಂಧನ’ ಎಂಬ ವಿಷ್ಣುವರ್ಧನ್​ ಅವರ ಆತ್ಮಚರಿತ್ರೆಯ ಮೂರನೇ ಆವೃತ್ತಿಗೆ ‘ಒಂದು ಬೆನ್ನುಡಿ ಬರೆದು ಕೊಡುತ್ತಿರಾ?’ ಎಂದು ಅತ್ಯಂತ ಮುಜುಗರದಿಂದಲೇ ಅವರ ವಾಟ್ಸಪ್​​ಗೆ ಮೆಸೇಜ್​ ಮಾಡಿದೆ. ಆ ಕಡೆಯಿಂದ ‘Yes sure’ ಎಂಬ ಉತ್ತರ ಕ್ಷಣಾರ್ಧದಲ್ಲಿ ಬಂತು. ‘ಮುಂದಿನ ವಾರ ಮನೆಗೆ ಬನ್ನಿ..’ ಎಂದು ಮತ್ತೆ ಸಂದೇಶ ಕಳಿಸಿದರು. ‘ಸಾರ್​ ನಾಳೆ ಬೆಳಗ್ಗೆ ಪ್ರಿಂಟ್​​ಗೆ ಹೋಗಬೇಕು: ಬೆಳಗ್ಗೆ ಕೊಟ್ಟರೆ ಒಳ್ಳೆದಿತ್ತು’ ಎಂದು ಮತ್ತೆ ಮಸೇಜ್​ ಹಾಕಿದೆ. ಆಗ ಅವರು ಹೈದರಾಬಾದ್​​ನಲ್ಲಿ ಚಿರಂಜೀವಿ ಜೊತೆ ಶೂಟಿಂಗ್​ನಲ್ಲಿ ಇದ್ದರು. ನನ್ನ ಪ್ರೀತಿಯ ಒತ್ತಾಯಕ್ಕೆ ಮಣಿದೋ ಏನೋ ಬೆಳಗ್ಗೆ ಕಳುಹಿಸುತ್ತೇನೆ ಎಂದು ರಾತ್ರಿ ಹತ್ತು ಗಂಟೆಗೆ ಮಸೇಜ್​ ಮಾಡಿದ್ರು.

ನಾನು ಸುದೀಪ್​ ಅವರ ಬರವಣಿಗೆ ಸಿಗುವುದು ಕಷ್ಟ ಎಂದೇ ಅಂದುಕೊಂಡಿದ್ದೆ. ಆದ್ರೆ ಬೆಳಗಿನ ಜಾವ ಎಂದಿನಂತೆ ಐದೂವರೆಗೆ ಎದ್ದು ವಾಟ್ಸಪ್​ ನೋಡಿದಾಗ ನನಗೆ ನಿಜಕ್ಕೂ ಆಶ್ಚರ್ಯ ಕಾದಿತ್ತು. ಕಿಚ್ಚ, ವಿಷ್ಣು ಬಗ್ಗೆ ಒಂದು ಟಿಪ್ಪಣಿ ಕಳುಹಿಸಿಕೊಟ್ಟಿದ್ದರು.ಅದನ್ನು ಓದಿ ನಾನು ಥ್ರಿಲ್​ ಆದೆ. ಒಬ್ಬ ಸೂಪರ್​ ಸ್ಟಾರ್​ ಇನ್ನೊಬ್ಬ ಸೂಪರ್​ ಸ್ಟಾರ್​ ಬಗ್ಗೆ ಇಷ್ಟೊಂದು ಭಾವಪೂರ್ಣವಾಗಿ ಬರೆಯಲು ಸಾಧ್ಯವೇ ಎಂದು ಬೆಳಗ್ಗಿನ ಕಾಫಿ ಹೀರುತ್ತಾ ಯೋಚಿಸುತ್ತಾ ಕುಳಿತೆ. ಸುದೀಪ್​ ಅವರೊಳಗೆ ಒಬ್ಬ ಅದ್ಬುತ ಬರಹಗಾರನೂ ಇದ್ದಿದ್ದು ನೋಡಿ ಖುಷಿಯಾಯ್ತು. ಅವರು ವಿಷ್ಣುವರ್ಧನ್​​ ಬಗ್ಗೆ ಬರೆದಿರುವ ಆ ಅಭಿಮಾನದ ಸಾಲುಗಳ ಬಗ್ಗೆ ನಾನು ಇನ್ನೇನು ಹೇಳಲಾರೆ… ನೀವೇ ಓದಿ ಆನಂದಿಸಿ… Thank You Sudeep Sir for the wonderful write-up..

Continue Reading
Advertisement
Click to comment

Leave a Reply

Your email address will not be published. Required fields are marked *

ರಿಯಾಕ್ಷನ್

ಎಂಥೋಳನ್ನು ಹಿಡ್ಕೊಂಡ್ಬಂದ್ರಿ ಭೈರೇಗೌಡ್ರೇ!

Published

on

ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್‌ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. ಆದರೆ ವಿಲನ್‌ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆಮಿ ಜಾಕ್ಸನ್ ಎಂಬ ಅವಿವೇಕಿಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿಲ್ಲ!

ವಿಲನ್ ಚಿತ್ರ ತೆರೆಕಾಣುತ್ತಿರೋ ವಿಷಯವೊಮದನ್ನು ಅರ್ಥ ಮಾಡಿಕೊಂಡಿರುವ ಲಂಡನ್ ರಾಣಿ ಆಮಿ ಟ್ವಟರ್ ಮೂಲಕ ಕಾಟಾಚಾರಕ್ಕೊಂದು ವಿಶ್ ಮಾಡಿದ್ದಾಳೆ. ತಾನೇ ನಟಿಸಿದ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಹಾಜರಿರೋ ಸೌಜನ್ಯವೂ ಇಲ್ಲದ ಈಕೆ ಲಂಡನ್‌ನಲ್ಲಿ ಕೂತೇ ವಿಶ್ ಮಾಡಿ ಅದರಲ್ಲಿಯೂ ಮಹಾ ಯಡವಟ್ಟೊಂದನನು ಮಾಡಿಕೊಂಡಿದ್ದಾಳೆ. ತನಗೆ ಕಾಲಿವುಡ್ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಪ್ರೇಮ್‌ಗೆ ಆಮಿ ಧನ್ಯವಾದ ಸಮರ್ಪಿಸಿದ್ದಾಳೆ!

`ಈವತ್ತು ವಿಲನ್ ದಿನ. ಇಡೀ ತಂಡ ಪ್ರೀತಿಯಿಂದ ನಿರ್ಮಿಸಿರೋ ದಿ ವಿಲನ್ ಚಿತ್ರ ಇಂದು ತೆರೆ ಕಾಣುತ್ತಿದೆ. ಈ ಚಿತ್ರದ ಮೂಲಕ ಕಾಲಿವುಡ್ಡಲ್ಲಿ ನಟಿಸೋ ಅವಕಾಶ ಮಾಡಿಕೊಟ್ಟ ನಿರ್ದೇಶಕ ಪ್ರೇಮ್‌ಜೀಗೆ ಧನ್ಯವಾದ!’ ಅಂತ ಆಮಿ ಬರೆದುಕೊಂಡಿದ್ದಾಳೆ. ಈಕೆಗೆ ತಾನು ನಟಿಸಿದ್ದು ಸ್ಯಾಂಡಲ್‌ವುಡ್ ಚಿತ್ರದಲ್ಲಿ, ಕಾಲಿವುಡ್ ಚಿತ್ರದಲ್ಲಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದರೆ ಅದಕ್ಕೇನನ್ನಬೇಕೆಂಬುದನ್ನು ಗಿಮಿಕ್ ಪ್ರೇಮ್ ಅವರೇ ಹೇಳಬೇಕು.

ಅಷ್ಟಕ್ಕೂ ವಿಲನ್ ಚಿತ್ರದ ಈ ಪಾತ್ರಕ್ಕೆ ಲಂಡನ್ ನಟಿ ಆಮಿ ಜಾಕ್ಷನ್‌ಳನ್ನು ಕರೆತರುವ ಯಾವ ದರ್ದೂ ಇರಲಿಲ್ಲ. ತಾನು ಲಂಡನ್ ನಟಿಯನ್ನು ಹೀರೋಯಿನ್ ಮಾಡಿದ್ದೇನೆ ಅಂತ ಅಲ್ಲೊಂದಷ್ಟು ಪ್ರಚಾರ ಗಿಟ್ಟಿಸೋ ದರ್ದು ಪ್ರೇಮ್‌ಗಿತ್ತು. ಆದರೆ ಅದ್ಯಾವುದೂ ವರ್ಕೌಟ್ ಆಗಿಲ್ಲ. ಆಮಿ ನಟನೆಯೂ ಅಷ್ಟಕ್ಕಷ್ಟೇ ಎಂಬಂತಿದೆ. ಇಂಥಾ ನಟಿಯರನ್ನು ಕರೆತಂದು ಹೀಗೆಲ್ಲ ಅವಮಾನ ಅನುಭವಿಸುವ ದುರ್ಗತಿ ಕನ್ನಡದ ಕೆಲ ನಿರ್ದೇಶಕರಿಗೆ ಅದ್ಯಾಕೆ ಬಂದಿದೆಯೋ…

cinibuzzಅನ್ನು ಇನಸ್ ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿ

https://www.instagram.com/cinibuzzsandalwood

Continue Reading

ರಿಯಾಕ್ಷನ್

ತುಪ್ಪದ ಹುಡುಗಿಗೂ ತಪ್ಪಲಿಲ್ಲವೇ ಕಿರುಕುಳದ ಕಂಟಕ?

Published

on

ಇದೀಗ ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಇಂಥಾ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಈಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡಾ ಇದರ ಬಗ್ಗೆ ಬಿಡುಬೀಸಾಗಿ ಮಾತಾಡಿದ್ದಾರೆ.

ರಾಗಿಣಿ ದ್ವಿವೇದಿ ಮೀಟೂ ಅಭಿಯಾನದ ಬಗ್ಗೆ ಮಾತಾಡಿರೋದು ಹುಬ್ಬಳ್ಳಿಯಲ್ಲಿ. ಮಾಧ್ಯಮದವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ರಾಗಿಣಿ ನೇರವಾಗಿಯೇ ಉತ್ತರಿಸಿದ್ದಾರೆ. ಈ ಅಭಿಯಾನ ಹುಟ್ಟಿದ ಬಗೆ, ಅದರ ಉದ್ದೇಶಗಳ ಬಗ್ಗೆ ಗಂಭೀರವಾಗಿಯೇ ಅರಿತುಕೊಂಡಿರೋ ರಾಗಿಣಿ ಕೆಲವರು ಇದನ್ನು ಪ್ರಚಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.

ಮೀಟೂ ಎಂಬುದು ಕಿರುಕುಳಕ್ಕೊಳಗಾದವರು ಅದಕ್ಕೆ ಕಾರಣರಾದವರ ವಿರುದ್ಧ ಸಮರ ಸಾರಲು ಹುಟ್ಟಿಕೊಂಡ ಅಭಿಯಾನ. ಇಂಥಾದ್ದೊಂದು ಧೈರ್ಯ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಮೂಲಕ ಈ ಸಮಾಜದಲ್ಲಿ ಒಂದು ಬದಲಾವಣೆಯ ಗಾಳಿ ಬೀಸುವಂತಾಗಬೇಕು. ಆದರೆ ಕೆಲ ಮಂದಿ ಇದನ್ನೇ ಸ್ವಾರ್ಥಕ್ಕೆ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿದೆ. ಆದರೆ ಇಂಥಾ ಕೆಲಸದ ಮೂಲಕ ಈ ಅಭಿಯಾನವನ್ನು ದಿಕ್ಕು ತಪ್ಪಿಸಬಾರದೆಂದು ರಾಗಿಣಿ ಹೇಳಿದ್ದಾರೆ.

ಇದೆಲ್ಲ ಇರಲಿ, ರಾಗಿಣಿಯವರೇನಾದರೂ ಇಂಥಾ ಕಿರುಕುಳಕ್ಕೆ ಈಡಾಗಿದ್ದಿದೆಯಾ? ಎಂಬ ಪ್ರಶ್ನೆಗೂ ಕೂಡಾ ರಾಗಿಣಿ ಅಷ್ಟೇ ನೇರವಾದ ಉತ್ತರವನ್ನೇ ಕೊಟ್ಟಿದ್ದಾರೆ. ತಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ಈ ವರೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೂ ಆಗಿದೆ. ಆದರೆ ತನಗ್ಯಾರೂ ಅಂಥಾ ಕಿರುಕುಳ ಕೊಟ್ಟಿಲ್ಲ ಎಂದೂ ರಾಗಿಣಿ ಹೇಳಿದ್ದಾರೆ!

Continue Reading

ರಿಯಾಕ್ಷನ್

ಅಂಬಿಯನ್ನು ನೋಡಿದ ಅಪ್ಪು ಏನಂದ್ರು ಗೊತ್ತಾ?

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್‌ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ.


ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್‌ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳುತ್ತಲೇ ಇಂಥಾ ಚೆಂದದ ಚಿತ್ರವೊಂದನ್ನು ನಿರ್ಮಾಣ ಮಾಡಿರುವ ಜಾಕ್ ಮಂಜು ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ಇತ್ತೀಚೆಗೆ ಈ ಚಿತ್ರವನ್ನು ನೋಡಿ ಪ್ರೀತಿಯ ಮಾತುಗಳನ್ನಾಡಿದ್ದರು. ಈಗಾಗಲೇ ಹಲವು ತಾರೆಯರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ನೋಡುವ ಹಾದಿಯಲ್ಲಿದ್ದಾರೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz