One N Only Exclusive Cine Portal

ಪೈಲ್ವಾನನಿಗಾಗಿ ಜಿಮ್ ಸೇರಿಕೊಂಡ ಕಿಚ್ಚಾ ಸುದೀಪ್!

ಸುದೀಪ್ ಕನ್ನಡ ಚಿತ್ರರಂಗದ ಚೆಂದದ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆಸುಪಾಸಿನ ನಟರು ಜಿಮ್ಮು ಸೇರಿಕೊಂಡು ಬೆವರಿಳಿಸಿ ಅಂಗಸೌಷ್ಠವ ವೃದ್ಧಿಸಿಕೊಳ್ಳುತ್ತಿದ್ದರೂ ಸುದೀಪ್ ಮಾತ್ರ ಅಷ್ಟಾಗಿ ಬಾಡಿ ಟ್ಯೂನಿಂಗ್‌ನತ್ತ ಗಮನ ಹರಿಸಿದವರಲ್ಲ. ಆದರೆ, ಇತ್ತೀಚೆಗೆ ಅವರ ದೇಹಾಕಾರದಲ್ಲಿ ಅದ್ಭುತ ಎಂಬಂಥಾ ಬದಲಾವಣೆಗಳಾಗಿವೆ. ಇದು ಕನ್ನಡ ಮೀಡಿಯಂ ರಾಜು ಮೂಲಕ ಎಲ್ಲರ ಗಮನಕ್ಕೂ ಬಂದಿದೆ. ಇದೀಗ ಅವರು ಮೊದಲ ಬಾರಿ ಸೀರಿಯಸ್ಸಾಗಿಯೇ ಜಿಮ್‌ನತ್ತ ಮುಖ ಮಾಡಿದ್ದಾರೆ!

ಆದರೆ, ಈ ದೈಹಿಕ ಬದಲಾವಣೆಗಳ ಮೂಲಕ ಸುದೀಪ್ ಪೈಲ್ವಾನ್ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬುದು ಅಸಲೀ ಸಂಗತಿ!

ಈವರೆಗೆ ಸುದೀಪ್ ಥರ ಥರದ ಪಾತ್ರ ಮಾಡಿದ್ದರೂ ಮೊದಲ ಸಲ ಗೆಸರಿಗೆ ತಕ್ಕಂತೆ ಈ ಚಿತ್ರದಲ್ಲಿ ಪೈಲ್ವಾನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಕ್ಗಸಿಂಗ್‌ಗೆ ಪ್ರಧಾನ್ಯತೆ ಇದೆ. ಆದ್ದರಿಂದಲೇ ಬಾಡಿ ಶೋ ಮಾಡಲೇ ಬೇಕಾದ ಅನಿವಾರ್ಯವೂ ಎದುರಾಗಿದೆ. ಆದ್ದರಿಂದಲೇ ಸುದೀಪ್ ಬಹುಕಾಲದಿಂದ ಮಾಡುತ್ತಿದ್ದ ಪವರ್ ಯೋಗವನ್ನು ಮತ್ತಷ್ಟು ಶ್ರದ್ಧೆಯಿಂದ ಮಾಡುತ್ತಿದ್ದರಂತೆ. ಇದಲ್ಲದೇ ವೃತ್ತಿಪರ ಬಾಕ್ಸಿಂಗ್ ತರಬೇತುದಾರರಿಂದಲೇ ಸುದೀಪ್ ಬಾಕ್ಸಿಂಗ್ ಪಟ್ಟುಗಳನ್ನೂ ಕಲಿಯಬೇಕಿದೆ. ಅದಕ್ಕಾಗಿ ನುರಿತ ಮಂದಿ ಹುಡುಕಾಟ ಸಾಗಿದೆ. ಸ್ಟಂಟ್ ಮಾಸ್ಟರ್ ರವಿವರ್ಮಾ ವಿಶೇಷ ಸಾಹಸಗಳ ತರಬೇತಿಯನ್ನೂ ನೀಡಲಿದ್ದಾರಂತೆ.

ಹೊಸಾ ವಿಚಾರವೇನೆಂದರೆ, ಇದೀಗ ಪೈಲ್ವಾನ್ ಚಿತ್ರಕ್ಕಾಗಿಗೇ ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಳ್ಳಲು ಸುದೀಪ್ ಜಿಮ್ ಸೇರಿಕೊಂಡಿದ್ದಾರೆ. ಪವರ್ ಯೋಗದಿಂದ ದೇಹವನ್ನು ಒಂದಷ್ಟು ಸಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯಾದರೂ ದೇಹಾಕಾರವನ್ನು ಟ್ಯೂನ್ ಮಾಡಿಕೊಳ್ಳೋದು ಕಷ್ಟ. ಆದ್ದರಿಂದ ಪೈಲ್ವಾನ್ ಚಿತ್ರಕ್ಕೆಂದೇ ಮೊದಲ ಸಲ ಸುದೀಪ್ ವರ್ಕೌಟ್‌ನತ್ತ ಮುಖ ಮಾಡಿದ್ದಾರೆ.

ಅವರೀಗಾಗಲೇ ಜೆಪಿ ನಗರದ ಪ್ರಸಿದ್ಧ ಜಿಮ್ ಒಂದಕ್ಕೆ ಸೇರಿಕೊಂಡು ವಕೌಟ್ ಆರಂಭಿಸಿದ್ದಾರೆ. ಈಗಾಗಲೇ ಒಂದಷ್ಟು ನಟರು ಇದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಅವರೆಲ್ಲರೂ ಕಿಚ್ಚನ ಆಗಮನದಿಂದ ಹೊಸಾ ಹುರುಪು ತಂದುಕೊಂಡಿದ್ದಾರಂತೆ. ಅಂತೂ ಸುದೀಪ್ ಪೈಲ್ವಾನ್ ಚಿತ್ರದ ಮೂಲಕ ಹೊಸಾ ಬಗೆಯಲ್ಲಿ ಪ್ರೇಕ್ಷಕರ ಮುಂದೆ ಬರೋದಂತೂ ಗ್ಯಾರೆಂಟಿ!

Leave a Reply

Your email address will not be published. Required fields are marked *


CAPTCHA Image
Reload Image