ಹಾಟ್ ಎಂಬ ಪದಕ್ಕೆ ಬಿಸಿ ಎಂಬ ಅರ್ಥವಿದೆಯಲ್ಲಾ? ಅದಕ್ಕೆ ಸನ್ನಿ ಲಿಯೋನ್ ಎಂಬ ಹೆಸರು ರಿಪ್ಲೇಸ್ ಆಗಿ ವರ್ಷಾಂತರಗಳೇ ಕಳೆದು ಹೋಗಿವೆ. ಈಕೆ ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತೆ. ಅವಳ ಹಿಂದೆ ವಿವಾದಗಳೂ ಕೂಡಾ ಗಸ್ತು ಹೊಡೆಯುತ್ತಲೇ ಇರುತ್ತವೆ. ಹಾಗಿರುವಾಗ ಬೆಂಗಳೂರಿಗೆ ಸನ್ನಿ ಕುಣಿಯಲು ಬರುತ್ತಾಳೆಂದಾಕ್ಷಣ ವಿವಾದವೇಳದೇ ಇರಬಹುದೇ?

ಅದೇಕೋ ಸನ್ನಿ ಕುಣಿತವನ್ನು ಲೈವ್ ಆಗಿ ನೋಡೋ ಪಡ್ಡೆ ಕನಸಿಗೆ ಪದೇ ಪದೆ ಕಂಟಕಗಳೇ ಎದುರಾಗುತ್ತಿವೆ. ಈ ಬಾರಿ ಮಾನ್ಯತಾ ಟೆಕ್ ಪಾರ್ಕಿನಲ್ಲಿ ನಡೆಯೋ ರಘು ಧೀಕ್ಷಿತ್ ಕಾರ್ಯಕ್ರಮಕ್ಕೆ ಸನ್ನಿ ಬರೋದು ಪಕ್ಕಾ ಆಗಿದೆ. ಪೊಲೀಸ್ ಇಲಾಖೆಯೂ ಇದಕ್ಕೆ ಒಪ್ಪಿಕೊಂಡಿದೆಯಾದರೂ ಕನ್ನಡ ಪರ ಸಂಘಟನೆಗಳು ಮಾತ್ರ ಕೆಂಡ ಕಾರಿವೆ. ಇದೀಗ ಆಕೆಯ ವೀರಮಹಾದೇವಿ ಚಿತ್ರಕ್ಕೂ ವಿರೋಧ ವ್ಯಕ್ತವಾಗಿದೆ. ಕೆಲ ಕನ್ನಡ ಪರ ಸಂಘಟನೆಗಳು ಸನ್ನಿ ಪೋಸ್ಟರುಗಳಿಗೆ ಬೆಂಕಿ ಹಚ್ಚಿ ಆಕೆಯ ಚಿತ್ರವನ್ನು ವಿರೋಧಿಸಿವೆ.

ವೀರಮಹಾದೇವಿ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ತಯಾರಾಗಿದೆ. ಆ ಸಿನಿಮಾ ಕರ್ನಾಟಕದಲ್ಲಿಯೂ ಬಿಡುಗಡೆಯಾಗಲಿದೆ. ಇದಿಲ್ಲಿ ಬಿಡುಗಡೆಯಾಗದಂತೆ ತಡೆಯಬೇಕು, ಆಕೆಯ ಪಾತ್ರವನ್ನು ಕೈ ಬಿಡಬೇಕೆಂಬ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆದಿದೆ. ಈ ಸಂದರ್ಭದಲ್ಲಿಯೇ ಸನ್ನಿ ಚಿತ್ರದ ಪೋಸ್ಟರುಗಳನ್ನು ಸುಟ್ಟು ಸಿಟ್ಟು ಹೊರ ಹಾಕಲಾಗಿದೆ.

ಆದರೆ ನವೆಂಬರ್ ಮೂರರಂದು ಸನ್ನಿ ಈ ಕಾರ್ಯಕ್ರಮಕ್ಕೆ ಬರೋದು ಹೆಚ್ಚೂಕಮ್ಮಿ ಪಕ್ಕಾ ಆಗಿದೆ. ಕೆಲ ಕನ್ನಡ ಪರ ಸಂಘಟನೆಗಳ ಮುಖಂಡರೂ ಈ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ಕೊಟ್ಟರೆ ತಮ್ಮದೇನೂ ಅಭ್ಯಂತರವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ಮತ್ತೊಂದು ಕಡೆಯಿಂದ ಸನ್ನಿ ಬೆಂಗಳೂರಿಗೆ ಬರಲೇ ಬಾರದೆಂಬಂಥಾ ಆಕ್ರೋಶಗಳೂ ವ್ಯಕ್ತವಾಗುತ್ತಿವೆ.

ಕಳೆದ ವರ್ಷವೂ ಇದೇ ಮಾನ್ಯತಾ ಟೆಕ್ ಪಾರ್ಕಿನ ಆರ್ಕಿಡ್ ಹಾಲ್‌ನಲ್ಲಿ ಸನ್ನಿಯ ಕಾರ್ಯಕ್ರಮ ಫಿಕ್ಸಾಗಿತ್ತು. ಆಗಲೂ ಕೆಲ ಸಂಘಟನೆಗಳಿಂದ ಇಂಥಾದ್ದೇ ಪ್ರತಿರೋಧ ವ್ಯಕ್ತವಾಗಿತ್ತು. ಕಡೆಗೂ ಪೊಲೀಸ್ ಇಲಾಖೆ ಭದ್ರತೆಯ ಕಾರಣದಿಂದ ಸನ್ನಿ ಆಗಮನಕ್ಕೆ ಬ್ರೇಕ್ ಹಾಕಿತ್ತು. ಆದರೆ ಈ ಕಳೆದ ಬಾರಿಗೆ ಹೋಲಿಸಿದರೆ ಕೊಂಚ ತಿಳಿಯಾಗಿದೆ. ಆದರೆ ಸನ್ನಿ ಈ ಕಾರ್ಯಕ್ರಮಕ್ಕೆ ಬಂದು ಸೊಂಟ ಬಳುಕಿಸಿದ ನಂತರವಷ್ಟೇ ಆಕೆಯ ಆಗಮನವನ್ನು ನಂಬಬಹುದೇನೋ…

#

LEAVE A REPLY

Please enter your comment!
Please enter your name here

eighteen − ten =