One N Only Exclusive Cine Portal

ಸನ್ನಿ ಲಿಯೋನ್‌ಗೆ ಮದುವೆ ವಾರ್ಷಿಕೋತ್ಸವ ಸಂಭ್ರಮ!

ಇತ್ತ ನೀಲಿ ಚಿತ್ರಗಳಲ್ಲಿ ನಟಿಸುತ್ತಲೇ ಅತ್ತ ಸಂಸಾರವನ್ನೂ ಕೂಡಾ ನೀಟಾಗಿ ಮೇಂಟೇನು ಮಾಡುತ್ತಾ ಮುಂದುವರಿಯುತ್ತಿರುವಾಕೆ ಸನ್ನಿ ಲಿಯೋನ್. ಬಹುಶಃ ಈಕೆಯ ವೃತ್ತಿ ಬದುಕಿನ ಬಗ್ಗೆ ಮಾತ್ರವೇ ಗೊತ್ತಿರುವವರಿಗೆ ಈಕೆ ಓರ್ವನನ್ನು ಮದುವೆಯಾಗಿ ಸಾಮಾನ್ಯ ಗೃಹಿಣಿಯಂತೆ ಬದು ಕಟ್ಟಿಕೊಂಡಿದ್ದಾಳೆಂದರೆ ನಂಬಲು ಕಷ್ಟವಾದೀತು. ಆದರೆ ಸನ್ನಿಯ ಸುಖ ಸಂಸಾರಕ್ಕೀಗ ಭರ್ತಿ ಏಳು ವರ್ಷ ತುಂಬಿದೆ!

ತನ್ನ ಗಂಡ ಡೇನಿಯಲ್ ಜೊತೆಗಿನ ಏಳನೇ ವರ್ಷದ ವಿವಾಹ ವಾರ್ಶಿಕೋತ್ಸವವನ್ನು ಸನ್ನಿ ಪಕ್ಕಾ ಭಾರತೀಯ ಶೈಲಿಯಲ್ಲಿಯೇ ಆಚರಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಸನ್ನಿ ಲೊಯೋನ್ ಮತ್ತು ಡೇನಿಯಲ್ ದಂಪತಿ ನವ ವಧೂ ವರರಂತೆ ಶೃಂಗರಿಸಿಕೊಂಡು ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ಏಳನೇ ವರ್ಷವನ್ನು ಸಂಪ್ರದಾಯ ಬದ್ಧವಾಗಿಯೇ ದಾಟಿಕೊಂಡಿದೆ.

ಸನ್ನಿ ಲಿಯೋನ್‌ಳದ್ದುಇ ಒಂಥರಾ ವಿಚಿತ್ರ ಮನಸ್ಥಿತಿ. ಈಗೆ ಏಳು ವರ್ಷದ ಹಿಂದೆ ಡೇನಿಯಲ್‌ನನ್ನು ಮದುವೆಯಾದಾಗ ಆ ಸುದ್ದಿ ಕೇಳಿದ ಮಂದಿ ಬ್ರೇಕಪ್ಪಾದ ಸುದ್ದಿ ಇಷ್ಟರಲ್ಲೇ ಬರುತ್ತದೆ ಅಂತಲೇ ಭಾವಿಸಿದ್ದರು. ಆದರೆ ಒಟ್ಟೊಟ್ಟಾಗಿ ನೀಲಿ ಚಿತ್ರಗಳಲ್ಲಿ ನಟಿಸಿದ್ದ ಡೇನಿಯಲ್ ಮತ್ತು ಸನ್ನಿ ಲಿಯೋನ್ ನಡುವೆ ಚೆಂದದ್ದೊಂದು ಹೊಂದಾಣಿಕೆ ಇದೆ. ಒಬ್ಬರಿಗೊಬ್ಬರು ಹೆಗಲಾಗುವಂಥಾ ಚೆಂದದ ಸ್ನೇಹವೂ ಇವರಿಬ್ಬರ ನಡುವೆ ಇದೆ. ತಮ್ಮ ವಿಚಿತ್ರವಾದ ವೃತ್ತಿ ಬದುಕಿನಾಚೆಗೂ ಒಬ್ಬರಿಗೊಬ್ಬರು ಬದ್ಧರಾಗಿ ಈ ಜೋಡಿ ಏಳು ವರ್ಷಕ್ಕೆ ಅಡಿಯಿರಿಸಿದೆ.

ಈ ವಾರ್ಶಿಕೋತ್ಸವದ ನೆಪದಲ್ಲಿ ಸನ್ನಿ ಲಿಯೋನ್ ರೊಮ್ಯಾಂಟಿಕ್ ಶೈಲಿಯಲ್ಲಿ ಮೆಸೇಜು ಮಾಡುವ ಮೂಲಕ ತನ್ನ ಪತಿಗೆ ಶುಭಾಶಯ ಕೋರಿದ್ದಾಳೆ. ಕಡೇ ಘಳಿಗೆಯ ವರೆಗೂ ಜೊತೆಯಾಗಿ ಮುಂದುವರೆಯುವ ಕನಸುಗಳನ್ನೂ ಹಂಚಿಕೊಂಡಿದ್ದಾಳೆ. ಸದ್ಯ ವೀರ್‍ಮಮ್ದೇವಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಸನ್ನಿ ಲಿಯೋನ್ ಅದರ ನಡುವೆ ಒಂದೆರಡು ದಿನಗಳ ಕಾಲ ಬಿಡುವು ಮಾಡಿಕೊಂಡು ಗಂಡನ ಜೊತೆಗೆ ಕಳೆಯಲಿದ್ದಾಳಂತೆ!

Leave a Reply

Your email address will not be published. Required fields are marked *


CAPTCHA Image
Reload Image