Connect with us

ಅಭಿಮಾನಿ ದೇವ್ರು

ಇನ್ಸ್ಟಾಗ್ರಾಮ್ ಮೂಲಕವೇ ನಶೆಯೇರಿಸಿದಳು ಸನ್ನಿ!

Published

on

ತಾನು ನಟಿಸೋ ಚಿತ್ರಗಳ ಮೂಲಕ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಅಭಿಮಾನಿಗಳನ್ನು ಸದಾ ಕಾಡುತ್ತಿರುವಾಕೆ ಸನ್ನಿ ಲಿಯೋನ್. ಸದ್ಯ ಈಕೆ ಇನ್ಸ್ಟಾಗ್ರ್ಯಾಮ್ ಮೂಲಕ ತನ್ನ ಮಾದಕ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಅಡಿಗಡಿಗೆ ಪಡ್ಡೆಗಳಿಗೆ ನಶೆಯೇರುವಂತೆ ಮಾಡುತ್ತಿದ್ದಾಳೆ. ಇತ್ತೀಚೆಗೆ ಸನ್ನಿ ಅಪ್‌ಲೋಡ್ ಮಾಡಿರೋ ಒಂದಷ್ಟು ಫೋಟೋಗಳಂತೂ ಇತರೇ ನಟಿಯರೇ ಹೊಟ್ಟೆಯುರಿ ಪಟ್ಟುಕೊಳ್ಳುವಂತೆ ವೈರಲ್ ಆಗಿವೆ.

 

ಕಳೆದ ವರ್ಷದ ಹೊತ್ತಿಗೆಲ್ಲಾ ಗೂಗಲ್ ಸರ್ಚ್‌ನಲ್ಲಿ ಸನ್ನಿ ಲಿಯೋನ್ ಯಾರೂ ಸಲೀಸಾಗಿ ಮುರಿಯದಂಥಾ ದಾಖಲೆ ಮಾಡಿದ್ದಳು. ಸಲ್ಮಾನ್ ಖಾನ್‌ರಂಥಾ ನಟರನ್ನು, ಕತ್ರಿನಾ ಮುಂತಾದ ನಟಿಯರನ್ನೇ ಹಿಂದಿಕ್ಕಿ ಸನ್ನಿಯನ್ನು ಗೂಗಲ್‌ನಲ್ಲಿ ಜನ ಸರ್ಚ್ ಮಾಡಿದ್ದರು. ಇದೀಗ ಸನ್ನಿಯ ಹವಾ ಇನ್ಸ್‌ಟಾಗ್ರಾಮ್‌ಗೆ ಶಿಫ್ಟಾಗಿದೆ. ನಿಯಮಿತವಾಗಿ ಫೋಟೋ ಶೂಟ್ ನಡೆಸಿ ಅದರಲ್ಲಿ ಬಹಳಷ್ಟು ಸಮಯ ತೆಗೆದುಕೊಂಡು ಮಾದಕ ಫೋಟೋಗಳನ್ನು ಆಯ್ದುಕೊಂಡು ಸನ್ನಿ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ಗೆ ಅಪ್‌ಲೋಡ್ ಮಾಡುತ್ತಿದ್ದಾಳೆ. ಇದುವರೆಗೆ ಇಂಥಾ ಫೋಟೋಗಳಲ್ಲಿ ಬಹುತೇಕವು ವೈರಲ್ ಆಗಿರೋದು ಅಸಲೀ ವಿಶೇಷ.

ಅಷ್ಟಕ್ಕೂ ಇನ್ಸ್‌ಟಾಗ್ರಾಮ್‌ನಲ್ಲಿ ಸನ್ನಿಯ ಹವಾ ಸಾಮಾನ್ಯದ್ದೇನಲ್ಲ. ಈಕೆಗೆ ಅಖಂಡ ಹನ್ನೆಲರಡು ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಬಹುಶಃ ಬಾಲಿವುಡ್‌ನ ಇತರೇ ನಟಿಯರ‍್ಯಾರೂ ಇನ್ಸ್‌ಟಾಗ್ರಾಮ್‌ನಲ್ಲಿ ಇಂಥಾದ್ದೊಂದು ಅಧಿಪತ್ಯ ಸಾಧಿಸಿಲ್ಲವೇನೋ. ಇಂಥಾ ಫಾಲೋವರ್ಸ ಅನ್ನು ಸದಾ ಸಂತೋಷದಿಂದಿಡುತ್ತಾ ಮತ್ತಷ್ಟು ಫಾಲೋವರ್ಸ್‌ಗಳನ್ನು ಸಂಪಾದಿಸೋದನ್ನು ಸನ್ನಿ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾಳೆ. ಅದಕ್ಕೆಂದೇ ಬಿಡುವು ಮಾಡಿಕೊಂಡು ಕಾಸು ಖರ್ಚು ಮಾಡುತ್ತಾ ಫೋಟೋ ಶೂಟ್ ಅನ್ನೂ ಮಾಡಿಸಿಕೊಳ್ಳುತ್ತಿದ್ದಾಳೆ.

ಸದ್ಯ ತಮಿಳು ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್‌ಳಷ್ಟು ನೀಟಾಗಿ ಇನ್ಸ್‌ಟಾಗ್ರಾಮ್ ಅನ್ನು ಸಂಭಾಳಿಸುವ ಮತ್ತೋರ್ವ ನಟಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸಿಗುವುದು ಡೌಟು. ಪ್ರತೀ ದಿನ ಇನ್ಸ್‌ಟಾಗ್ರಾಮ್‌ನಲ್ಲಿ ಸನ್ನಿ ಫೋಟೋಗಳು ರಾರಾಜಿಸಿಯೇ ತೀರುತ್ತವೆ. ಅದೇನೇ ಬ್ಯುಸಿ ಇದ್ದರೂ, ಅದೆಲ್ಲಿಯೇ ಇದ್ದರೂ ಸನ್ನಿ ಇನ್ಸ್‌ಟಾಗ್ರಾಮ್‌ಗೆ ಫೋಟೋ ಅಪ್‌ಲೋಡ್ ಮಾಡೋದನ್ನು ಮಾತ್ರ ಮರೆಯುವುದಿಲ್ಲವಂತೆ!

ಅಭಿಮಾನಿ ದೇವ್ರು

ಇದು ಕನ್ನಡ ಚಿತ್ರರಂಗದ ಖದರ್!

Published

on

ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ ಚಿತ್ರರಂಗದ ಖದರ್ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಗಡಿ ದಾಟಿಕೊಂಡು ಬೇರೆ ಭಾಷೆಗಳಿಗೂ ಪಸರಿಸಿದೆ. ಅಲ್ಲಿನವರನ್ನೂ ಪ್ರಭಾವಿಸಿದೆ!

 

ಈ ಮಾತಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಯುವ ನಟ ಶ್ರೇಯಸ್ ತಲ್ಪಡೆ ಹಂಚಿಕೊಂಡಿರೋ ವಿಚಾರಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ!

ಶ್ರೇಯಸ್ ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಇದುವರೆಗೂ ರಾಜ್‌ಕುಮಾರ್ ಅವರು ನಟಿಸಿರೋ ಅದೆಷ್ಟೋ ಚಿತ್ರಗಳನ್ನು ಶ್ರೇಯಸ್ ನೋಡಿದ್ದಾರಂತೆ. ಈ ಮೂಲಕ ರಾಜಣ್ಣನ ನಟನೆಯಿಂದ ಯಾವ ಪರಿಯಾಗಿ ಶ್ರೇಯಸ್ ಪ್ರಭಾವಿತರಾಗಿದ್ದಾರೆಂದರೆ, ಯಾವಾಗಲೇ ಬಿಡುವು ಸಿಕ್ಕರೂ ಅಣ್ಣವ್ರ ಸಿನಿಮಾಗಳನ್ನು ನೋಡೋ ಹವ್ಯಾಸ ಬೆಳೆಸಿಕೊಂಡಿದ್ದಾರಂತೆ. ಅವರೊಬ್ಬ ಮೇರು ನಟ ಎಂದಿರುವ ಶ್ರೇಯಸ್ ತಾನು ಅವರ ಅಭಿಮಾನಿ ಅಂತ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಆಗು ಹೋಗುಗಳತ್ತಲೂ ಗಮನ ನೆಟ್ಟಿರೋ ಶ್ರೇಯಸ್‌ಗೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಅಂದರೂ ಇಷ್ಟವಂತೆ. ಇದೇ ಸಂದರ್ಭದಲ್ಲಿ ತನಗೇನಾದರೂ ಕನ್ನಡದಲ್ಲಿ ನಟಿಸೋ ಆಫರ್ ಬಂದರೆ ಖಂಡಿತಾ ಒಪ್ಪಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದಾರೆ.

ಶ್ರೇಯಸ್‌ಗೆ ಕನ್ನಡ ಚಿತ್ರಗಳು ಮಾತ್ರವಲ್ಲದೆ ಕನ್ನಡಿಗರೆಂದರೂ ಅಚ್ಚುಮೆಚ್ಚು. ಬೆಂಗಳೂರು ಅಂದರಂತೂ ಭಾರತದ ಮತ್ಯಾವ ನಗರಕ್ಕಿಂತಲೂ ಹೆಚ್ಚೇ ಇಷ್ಟ ಅಂದಿದ್ದಾರೆ ಶ್ರೇಯಸ್. ಅವರಿಗೆ ಅತೀ ಹೆಚ್ಚಿನ ಸ್ನೇಹ ವಲಯ ಇರೋದೂ ಕೂಡಾ ಬೆಂಗಳೂರಿನಲ್ಲಿಯೇ. ಆದ್ದರಿಂದಲೇ ಈ ನಗರದ ಜೊತೆಗೆ ನಂಟು ಹೊಂದಿರೋ ಶ್ರೇಯಸ್ ರಾಜಣ್ಣನ ಅಭಿಮಾನಿ ಎಂಬುದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ?

Continue Reading

ಅಭಿಮಾನಿ ದೇವ್ರು

ಟೈಗರ್ ಅಲೋಕ್ ಕುಮಾರ್ ಮೇಲೆ ಗಾಂಧಿನಗರದ ಕಣ್ಣು!

Published

on

ಖಡಕ್ ಪೊಲೀಸ್ ಅಧಿಕಾರಿಗಳ ಕಥೆ ಸಿನಿಮಾವಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿಯೇ ಸಾಕಷ್ಟಿದೆ. ಇದೀಗ ಕಣ್ಣೆದುರೇ ಕಾರ್ಯ ನಿರ್ವಹಿಸುತ್ತಿರುವ, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿ ನೆಲೆಯಾಗಿರುವ ಒಂದಷ್ಟು ಅಧಿಕಾರಿಗಳತ್ತ ಚಿತ್ರರಂಗದ ಮಂದಿಯ ಕಣ್ಣು ನೆಟ್ಟಿದೆ. ಅತ್ತ ರವಿ ಚನ್ನಣ್ಣನವರ್ ಜೀವನಗಾಥೆ ಚಿತ್ರ ರೂಪ ಪಡೆಯೋ ತಯಾರಿಯಲ್ಲಿರೋವಾಗಲೇ, ಇದೀಗ ಸಿಸಿಬಿಗೆ ಹೆಚ್ಚುವರಿ ಆಯುಕ್ತಾರಾಗಿ ಅಬ್ಬರಿಸುತ್ತಿರುವ ಅಲೋಕ್ ಕುಮಾರ್ ಬಗೆಗೂ ಒಂದು ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹಬ್ಬಿಕೊಂಡಿದೆ.

ಪೊಲೀಸ್ ಅಧಿಕಾರಿಯಾಗಿ ಪ್ರತೀ ಹಂತದಲ್ಲಿಯೂ ಜನಸ್ನೇಹಿಯಾಗಿಯೇ ಗುರಿತಿಸಿಕೊಂಡು ಬಂದವರು ಅಲೋಕ್ ಕುಮಾರ್. ಯಾವುದೇ ವಿಭಾಗಕ್ಕೆ ಹೋದರೂ ತಮ್ಮ ಕಾರ್ಯ ಕ್ಷೇತ್ರದಲ್ಲಿ ಯಾವುದೇ ದುಷ್ಟ ದಂಧೆ ನಡೆಯದಂತೆ ತಡೆಯುವುದು ಅಲೋಕ್ ಕುಮಾರ್ ಅವರ ಕಾರ್ಯ ವೈಖರಿ. ಈ ಹಿಂದೆ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅವಧಿಯಲ್ಲಿ ಅಲೋಕ್ ಕುಮಾರ್ ಪಾತಕ ಲೋಕವೂ ಸೇರಿದಂತೆ ಎಲ್ಲ ದಂಧೆ, ಮಾಫಿಯಾಗಳ ಸದ್ದಡಗಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇಂಥಾ ಕ್ರಮಗಳಿಂದಾಗಿಯೇ ಅಲೋಕ್ ಕುಮಾರ್ ಹೆಸರು ಕೇಳಿದರೇನೇ ಪಾತಕಿಗಳ ಅಳ್ಳೆ ಅದುರುತ್ತದೆ. ದುಷ್ಟ ದಂಧೆಗಳ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಇಂಥಾ ಖಡಕ್ ಅಧಿಕಾರಿ ಇದೀಗ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಕ್ಷಣದಿಂದಲೇ ಅಖಾಡಕ್ಕಿಳಿದು ಬಿಟ್ಟಿದ್ದಾರೆ.

ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ದಿನದೊಪ್ಪತ್ತಿನಲ್ಲಿಯೇ ಪಾತಕಿಗಳನ್ನು ಅಟ್ಟಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಸಂದಿಗೊಂದಿಗಳನ್ನೂ ಆವರಿಸಿಕೊಂಡಿರೋ ಒಂದೊಂದೇ ಮಾಫಿಯಾ ಬುಡಕ್ಕೆ ಬಿಸಿ ನೀರು ಕಾಯಿಸಲಾರಂಭಿಸಿದ್ದಾರೆ. ಇವರ ಆಗಮನದ ಮೂಲಕ ಸಿಸಿಬಿಗೆ ಹೊಸಾ ಬಲ ಬಂದಂತಾಗಿದೆ. ಒಟ್ಟಾರೆ ಅಪರಾಧ ಪ್ರಕರಣಗಳನ್ನು ತಹಬಂದಿಗೆ ತರುವಲ್ಲಿ ಪ್ರಧಾನ ಪಾತ್ರ ವಹಿಸುವ ಸಿಸಿಬಿ ಈಗ ಅಲೋಕ್ ಕುಮಾರ್ ಅವರ ಸಾರಥ್ಯದಲ್ಲಿ ಮತ್ತೆ ನಿಗಿ ನಿಗಿಸುವ ಉತ್ಸಾಹದೊಂದಿಗೆ ಅಖಾಡಕ್ಕಿಳಿದಿದೆ.

ಒಂದರ್ಥದಲ್ಲಿ ವೃತ್ತಿ ಜೀವನದುದ್ದಕ್ಕೂ ರಿಯಲ್ ಸಿಂಗಂ ಆಗಿಯೇ ಕಾರ್ಯ ನಿರ್ವಹಿಸುತ್ತಾ ಬಂದಿರುವವರು ಅಲೋಕ್ ಕುಮಾರ್. ಬೆಂಗಳೂರೆಂಬುದು ನಾನಾ ದಂಧೆಗಳ ದಾವಾ ನಲವಾಗಿ, ಬೇರೆ ಬೇರೆ ರಾಜ್ಯಗಳ ಪಾತಕಿಗಳಿಗೂ ಅಡಗುದಾಣವಾಗಿ ಬದಲಾದ ಆತಂಕ ಸಾರ್ವಜನಿಕರಲ್ಲಿತ್ತು. ಸರಗಳ್ಳತನ, ದರೋಡೆ, ಪುಢಾರಿಗಳ ಪುಂಡಾಟದಿಂದ ಇಲ್ಲಿನ ಜನ ರೋಸತ್ತಿದ್ದರು. ಇಂಥವರೆಲ್ಲ ಅಲೋಕ್ ಕುಮಾರ್ ಅವರ ನಿಷ್ಠುರ ಕಾರ್ಯ ವೈಖರಿ ಕಂಡು ಮೆಚ್ಚಿಕೊಂಡಿದ್ದಾರೆ. ಅಲೋಕ್ ಜನ ಸಾಮಾನ್ಯರ ಕಣ್ಣಿನಲ್ಲಿಯೂ ಹೀರೋ ಆಗಿದ್ದಾರೆ. ಇಂಥಾ ದಕ್ಷ ಅಧಿಕಾರಿಯ ಬಗೆಗೊಂದು ಮಾಸ್ ಸಿನಿಮಾ ಮಾಡೋ ದೊಡ್ಡ ಮಟ್ಟದ ತಯಾರಿಯೊಂದು ಈಗ ನಡೆಯುತ್ತಿದೆ.

ಈ ಚಿತ್ರವನ್ನು ಖ್ಯಾತ ನಿರ್ಮಾಪಕರೊಬ್ಬರು ಬಹಳಷ್ಟು ಕನಸಿಟ್ಟುಕೊಂಡು ನಿರ್ಮಾಣ ಮಾಡಲಿದ್ದಾರೆ. ಇದರ ನಿರ್ದೇಶಕರ್‍ಯಾರು, ಅಲೋಕ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬೋ ನಟನ್ಯಾರು ಎಂಬೆಲ್ಲ ವಿಚಾರಗಳು ಶೀಘ್ರದಲ್ಲಿಯೇ ಹೊರ ಬೀಳಲಿವೆ.

Continue Reading

ಅಭಿಮಾನಿ ದೇವ್ರು

ಇದು ಉಪ್ಪಿ ಅಭಿಮಾನಿಯ ಚೊಚ್ಚಲ ಚಿತ್ರ!

Published

on

ಉಪ್ಪಿ-2 ಚಿತ್ರದ ಕ್ರಿಯೇಟಿವ್ ಪೋಸ್ಟರ್ ಡಿಸೈನುಗಳು ಒಂದು ಥರದ ಅಚ್ಚರಿಗೆ ಕಾರಣವಾಗಿತ್ತಲ್ಲಾ? ಅದನ್ನು ವಿನ್ಯಾಸಗೊಳಿಸಿದ್ದವರು ವಿಜಯ್ ಸೂರ್ಯ ಎಂಬ ಪ್ರತಿಭೆ. ಆ ಚಿತ್ರದ ಪೋಸ್ಟರ್ ಡಿಸೈನಿಂಗ್ ಜೊತೆಗೆ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದ ವಿಜಯ್ ಮೂಲತಃ ಉಪ್ಪಿ ಅಭಿಮಾನಿ. ಬಹುಶಃ ಆ ಕಾರಣದಿಂದಲೇ ಉಪೇಂದ್ರ ಗರಡಿ ಸೇರಿಕೊಂಡು ಭಿನ್ನವಾಗಿ ಆಲೋಚಿಸುವ ವಿಧಾನವನ್ನೂ ಸಿದ್ಧಿಸಿಕೊಂಡಂತಿರೋ ಅವರೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅದರ ಫಲವಾಗಿಯೇ ಇದೀಗ `ಎ ಪ್ಲಸ್’ ಚಿತ್ರದ ಹಂಗಾಮಾ ಶುರುವಾಗಿ ಬಿಟ್ಟಿದೆ!

ಈಗ `ಎ ಪ್ಲಸ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟರೇ ಈ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಒಂದೂವರೆ ನಿಮಿಷದ ಈ ಟ್ರೈಲರ್ ಸೃಷ್ಟಿಸಿರೋ ಸೆನ್ಸೇಷನ್ ಎಂಥವರೂ ಬೆರಗಾಗುವಂತಿದೆ. ಒಂದಷ್ಟು ಮಂದಿಗಿದು ಅಂಡರ್‌ವರ್ಲ್ಡ್ ಬೇಸ್ಡ್ ಲವ್ ಸ್ಟೋರಿಯಂತೆ ಕಂಡರೆ ಮತ್ತೆ ಕೆಲವರಿಗೆ ಬೇರೆಯದ್ದೇ ರೀತಿಯಲ್ಲಿ ಗೋಚರಿಸಿದೆ. ಒಟ್ಟಾರೆಯಾಗಿ ಈ ಚಿತ್ರದ ಮೇಲೀಗ ಎಲ್ಲರ ದೃಷ್ಟಿ ನೆಟ್ಟಿದೆ. ಈ ಮೂಲಕ ಆರಂಭಿಕ ಹೆಜ್ಜೆಯಲ್ಲಿಯೇ ನಿರ್ದೇಶಕ ವಿಜಯ್ ಸೂರ್ಯ ಭರವಸೆ ಮೂಡಿಸಿದ್ದಾರೆ.

ಒಟ್ಟಾರೆಯಾಗಿ ಈ ಚಿತ್ರದ ಬಗ್ಗೆ ನಿರ್ದೇಶಕ ವಿಜಯ್ ಸೂರ್ಯ ಕುತೂಹಲದ ಕೆಂಡಕ್ಕೆ ತುಪ್ಪ ಸುರಿಯುವಂಥಾ ಮತ್ತೊಂದಷ್ಟು ವಿಚಿತ್ರ ವಿಚಾರಗಳನ್ನೇ ಹೊರ ಹಾಕಿದ್ದಾರೆ. ಒಂದು ಚಿತ್ರವೆಂದ ಮೇಲೆ, ಅದರಲ್ಲಿಯೂ ಕಮರ್ಷಿಯಲ್ ಚಿತ್ರಗಳಲ್ಲಿ ಹಾಡು ಮತ್ತು ಫೈಟ್ ಸೀನುಗಳು ಇರಲೇ ಬೇಕೆಂಬ ಸೂತ್ರವಿದೆ. ಆದರೆ ಈ ಚಿತ್ರದಲ್ಲಿ ಹಾಡೂ ಇಲ್ಲ. ಫೈಟಿಂಗೂ ಇಲ್ಲ. ಅರೇ ಟ್ರೈಲರ್ ನೋಡಿದರೆ ಭೂಗತ ಲೋಕದ ಕಥೆ ಇದ್ದಂತಿದೆ. ಫೈಟಿಂಗ್ ಇಲ್ಲ ಅಂದರೆ ಏನರ್ಥ ಎಂಬ ಪ್ರಶ್ನೆ ನಿರ್ದೇಶಕರಿಗೆ ಹೋದಲ್ಲಿ ಬಂದಲ್ಲಿ ಎದುರಾಗುತ್ತಿವೆಯಂತೆ. ಈ ಚಿತ್ರದುದ್ದಕ್ಕೂ ಫೈಟಿಂಗ್ ಇದೆ ಆದ್ರೆ ಕಾಣೋದಿಲ್ಲ ಅನ್ನೋ ಮೂಲಕ ನಿರ್ದೇಶಕ ವಿಜಯ ಸೂರ್ಯ ಮತ್ತಷ್ಟು ಕೌತುಕ ಕುದಿಯುವಂತೆ ಮಾಡುತ್ತಿದ್ದಾರೆ.

ಹೀಗೆ ಮೊದಲ ಚಿತ್ರದಲ್ಲಿಯೇ ಈ ಪಾಟಿ ಸಂಚಲನ ಸೃಷ್ಟಿಸಿರುವ ವಿಜಯ್ ಸೂರ್ಯ ಮೂಲತಃ ಬೆಂಗಳೂರಿನವರೇ. ಕಾಮಾಕ್ಷಿಪಾಳ್ಯದ ಬಡ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಅವರಿಗೆ ಯಾವ ಸಿನಿಮಾ ಹಿನ್ನೆಲೆಯೂ ಇಲ್ಲ. ಸಿನಿಮಾ ಬಗ್ಗೆ ಕನಸು ಕಾಣುವಂಥಾ ವಾತಾವರಣವೂ ಇರಲಿಲ್ಲ. ಆದರೆ ಆರಂಭದಿಂದಲೂ ಇವರಿಗೆ ಸಿನಿಮಾಸಕ್ತಿ ಇತ್ತು. ಬರ ಬರುತ್ತಾ ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಅಭಿಮಾನವೂ ಹುಟ್ಟಿಕೊಂಡಿತ್ತು. ಈ ನಡುವೆ ವಿಜಯ್ ಅವರನ್ನು ಅವರ ಬಾಲ್ಯ ಸ್ನೇಹಿತ ಆ ಕಾಲಕ್ಕೆ ನಟರಾಗಿದ್ದ ಮಂಡ್ಯ ಜಗದೀಶ್ ಬಳಿ ಬಿಟ್ಟಿದ್ದರು. ಈಗ ನಿರ್ಮಾಪಕರಾಗಿರೋ ಜಗದೀಶ್ ನಂತರ ವಿಜಯ್‌ರನ್ನು ನಿರ್ದೇಶಕ ಅನೀಲ್ ಅವರಿಗೆ ಪರಿಚಯಿಸಿದ್ದರು. ಅದಾದ ಬಳಿಕ ವಿಜಯ್ ಅನಿಲ್ ಅವರ ಮನೆಯಲ್ಲಿಯೇ ಮನೆ ಮಗನಂತೆ ಆರೇಳು ವರ್ಷ ಕಲಿತಿದ್ದರು. ಸಿನಿಮಾ, ನಿರ್ದೇಶನದ ಬಗ್ಗೆಯೂ ತಿಳಿದುಕೊಂಡಿದ್ದರು.

ಅನಿಲ್ ಅವರೇ ಉಪ್ಪಿ ೨ ಚಿತ್ರದ ಸಮಯದಲ್ಲಿ ವಿಜಯ್ ರನ್ನು ಉಪೇಂದ್ರ ಅವರ ಬಳಿ ಹೋಗುವಂತೆ ಮಾಡಿದ್ದರು. ಹಾಗೆ ಹೋಗುವಾಗ ಉಪ್ಪಿ ೨ ಚಿತ್ರದ ಕೆಲ ಪೋಸ್ಟರುಗಳನ್ನೂ ಡಿಸೈನು ಮಾಡಿದ್ದರಲ್ಲಾ ವಿಜಯ್? ಅದು ಉಪ್ಪಿಗೆ ತುಂಬಾ ಇಷ್ಟವಾಗಿತ್ತು. ಆ ಕಾರಣದಿಂದಲೇ ಉಪ್ಪಿ ವಿಜಯ್‌ರನ್ನು ಡಿಸೈನರ್ ಕಂ ಅಸೋಸಿಯೇಟ್ ಆಗಿ ಮೇಮಿಸಿಕೊಂಡಿದ್ದರು. ಇದಕ್ಕೂ ಮೊದಲೇ ವಿಜಯ್ ವಿಜಯಾ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ತರಬೇತಿ ಪಡೆದು ಬಂದು ಆರಂಭದಲ್ಲಿಯೇ ಒರಟ ಐಲವ್ ಯೂ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆ ಬಳಿಕ ದೀನ, ಶಕ್ತಿ, ವೀರ, ಮುದ್ದು ಮನಸೇ, ಮುಂತಾದ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆ ಎಲ್ಲ ಅನುಭವಗಳು ಸ್ಪಷ್ಟವಾಗಿ ಮಾಗಿಕೊಂಡಿದ್ದ ಉಪ್ಪಿಯ ಸಮ್ಮುಖದಲ್ಲಿಯೇ.

ಉಪ್ಪಿ ೨ ಚಿತ್ರವಾದ ನಂತರದಲ್ಲಿ ವಿಜಯ್ `ಎ ಪ್ಲಸ್’ ಚಿತ್ರದ ಕಥೆ ಬರೆದು ಅದನ್ನು ಉಪೇಂದ್ರರಿಗೆ ಹೇಳಿದ್ದರಂತೆ. ಅದನ್ನು ಇಷ್ಟಪಟ್ಟ ಉಪ್ಪಿ ಈ ಟೈಟಲ್ಲೇ ಏಕೆ ಬೇಕು ಅಂತೆಲ್ಲ ವಿಚಾರಿಸಿ ಆ ಬಳಿಕ ಒಪ್ಪಿಕೊಂಡಿದ್ದರಂತೆ. ಆ ನಂತರ ನಿರ್ಮಾಪಕರಾದ ಸೌಂದರ್ಯ ಜಗದೀಶ್ ಕೂಡಾ ಈ ಕಥೆಯನ್ನು ಇಷ್ಟಪಟ್ಟಿದ್ದರಂತೆ. ಕಡೆಗೂ ವಿ. ಪ್ರಭು ಕುಮಾರ್ ಕಥೆ, ಕ್ರಿಯೇಟಿವ್ ಅಂಶಗಳಿಗೆ ಮನಸೋತ ವಿ ಪ್ರಭುಶಂಕರ್ ಈ ಚಿತ್ರ ನಿರ್ಮಾಣ ಮಾಡಲು ಮುಂದಾಗಿ ಅದನ್ನು ಪೂರೈಸಿಕೊಂಡಿದ್ದಾರೆ.

ಈ ಮೂಲಕ ಅನೀಲ್ ಸಿದ್ದು ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ಹರ ಹರ ಮಹಾದೇವ ಸೀರಿಯಲ್ಲಿನಲ್ಲಿ ಸತಿಯಾಗಿ ನಟಿಸಿದ್ದ ಸಂಗೀತಾ ಶೃಂಗೇರಿ ಈ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ಸೂರ್ಯ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

Continue Reading

Trending

Copyright © 2018 Cinibuzz