One N Only Exclusive Cine Portal

ಬೆಡ್ಡಿಂದ ರಣಾಂಗಣಕ್ಕೆ ಜಿಗಿದಳೇಕೆ ಸೆಕ್ಸಿ ಸನ್ನಿ?

ಸನ್ನಿ ಲಿಯೋನ್ ಹೆಸರು ಕೇಳಿದರೇನೇ ನರನಾಡಿಗಳಿಗೂ ಕರೆಂಟು ಪ್ರವಹಿಸಿದಂತೆ ಹುಚ್ಚೇಳೋ ಜನ ಭಾರತದಾದಂತ ತುಂಬಿ ಹೋಗಿದ್ದಾರೆ. ಬಹಿರಂಗವಾಗಿ ಸನ್ನಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವವರೂ ನಡು ರಾತ್ರಿಯ ಹೊತ್ತಿಗೆ ಆಕೆಯ ಖಾಯಂ ಅಭಿಮಾನಿಗಳಾಗಿದ್ದರೂ ಅಚ್ಚರಿಯೇನಿಲ್ಲ. ಬರೀ ‘ಒಳಾಂಗಣ ಚಿತ್ರಗಳ ಮೂಲಕವೇ ಬೆಚ್ಚಿ ಬೀಳುವಂಥಾ ಖ್ಯಾತಿ ಹೊಂದಿರೋ ಸನ್ನಿಗೀಗ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲೂ ಭರಪೂರ ಬೇಡಿಕೆ ಇದೆ. ಈ ಮೂಲಕ ಸನ್ನಿಯೀಗ ಭಾರತದ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾಳೆ!

ನಾಲ್ಕು ಗೋಡೆಗಳ ಮಧ್ಯದ ಸೀಮಿತ ದೃಷ್ಯಾವಳಿಗಳಲ್ಲೂ ಶಕ್ತಿ ಮೀರಿ ನಟಿಸುತ್ತಾ ತನ್ನ ಪ್ರತಿಭೆಯನ್ನು ಖುಲ್ಲಂಖುಲ್ಲ ಜಗತ್ತಿನೆದುರು ಅನಾವರಣಗೊಳಿಸಿರುವಾಕೆ ಸನ್ನಿ ಲಿಯೋನ್. ಬಾಲಿವುಡ್ ಇರಲಿ, ಹಾಲಿವುಡ್ಡೇ ಇರಲಿ, ಅದೆಂಥಾ ಪ್ರತಿಭಾವಂತ ನಟಿಯರೇ ಆಗಿದ್ದರೂ ಸರಿಯೇ; ಅವರ‍್ಯಾರೂ ಸನ್ನಿಗೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಕೊಂಚ ಶ್ರಮ ಹಾಕಿದರೆ ಆ ನಟಿಯರು ನಟಿಸಿದ ಪಾತ್ರಗಳಲ್ಲಿ ಸನ್ನಿ ನಟಿಸಬಹುದು. ಆದರೆ ಸನ್ನಿ ಲಿಯೋನ್ ನಿರ್ವಹಿಸಿರೋ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ಗುಂಡಿಗೆ ಯಾವ ನಟಿಯರಿಗೂ ಇಲ್ಲ!


ಇಂಥಾ ಪ್ರತಿಭೆಯಿಂದಲೇ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿರೋ ಸನ್ನಿ ಇದೀಗ ತಮಿಳುನಾಡಿನ ವೀರ ವನಿತೆ ವೀರಮ್ಮ ದೇವಿಯ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬುದು ಹಾಟ್ ಮತ್ತು ಲೇಟೆಸ್ಟ್ ಸುದ್ದಿ. ವೀರಮ್ಮದೇವಿ ತಮಿಳುನಾಡಿನ ಜನ ಎಂದೂ ಮರೆಯದ ವೀರ ವನಿತೆ. ಆಕೆಯ ಬಗ್ಗೆ ತಮಿಳಿನಲ್ಲಿ ದಂತ ಕಥೆಗಳೇ ಇದ್ದಾವೆ. ಅಂಥಾ ವೀರಮ್ಮದೇವಿಯ ಬಗ್ಗೆ ವಡಿವುಡಯಾನ್ ಎಂಬಾತ ಒಂದು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಆ ಚಿತ್ರದಲ್ಲಿ ಸನ್ನಿ ಲಿಯೋನ್ ವೀರಮ್ಮದೇವಿಯ ಪಾತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ!


ಈ ಬಗ್ಗೆ ಸನ್ನಿಲಿಯೋನ್ ತುಂಬಾ ಥ್ರಿಲ್ಲಿಂಗ್ ಮೂಡಿನಲ್ಲಿದ್ದಾಳೆ. ಈ ಚಿತ್ರದ ಬಗ್ಗೆ ಟ್ವಿಟರ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡೋ ಮೂಲಕ ತನ್ನ ಅಭಿಮಾನಿಗಳ ಮುಂದೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ವಿಶೇಷವೆಂದರೆ ಈ ವೀಡಿಯೋ ಇದೀಗ ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗಿದೆ. ಅದು ಭಾರೀ ಟ್ರೆಂಡ್ ಅನ್ನೂ ಹುಟ್ಟು ಹಾಕಿದೆಯಂತೆ!


ಅಂದಹಾಗೆ ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ನೂರೈವತ್ತು ದಿನಗಳ ಭರ್ಜರಿ ಕಾಲ್‌ಶೀಟ್ ಕೊಟ್ಟಿದ್ದಾಳೆ. ಇದುವರೆಗೂ ಹಾಸಿಗೆಯಲ್ಲೇ ನಾನಾ ಭಂಗಿಗಳ ಥರ ಥರದ ಯುದ್ಧ ಮಾಡಿರೋ ಸನ್ನಿ ಸದರಿ ಚಿತ್ರದ ಮೂಲಕ ಬೆಡ್ಡಿಂದ ರಣಾಂಗಣಕ್ಕಿಳಿದು ಕಾದಾಟ ನಡೆಸಲು ತಯಾರಿ ನಡೆಸಲಾರಂಭಿಸಿದ್ದಾಳೆ. ಅಷ್ಟಕ್ಕೂ ವೀರಮ್ಮದೇವಿಯಂಥಾ ಪಾತ್ರ ಮಾಡೋದೆಂದರೆ ಸಾಮಾನ್ಯ ಸಂಗತಿಯೇನಲ್ಲ. ಅದಕ್ಕಾಗಿ ಅಸಲೀ ಯುದ್ಧದ ಪಟ್ಟುಗಳನ್ನು ಕರಗತ ಮಾಡಿಕೊಳ್ಳುವ ಸವಾಲು ಸನ್ನಿಯ ಮುಂದಿದೆ. ಅದನ್ನು ಖುಷಿಯಿಂದಲೇ ಸ್ವೀಕರಿಸಿರೋ ಸನ್ನಿ ಮಾರ್ಷಲ್ ಆರ್ಟ್ಸ್, ಕುದುರೆ ಸವಾರಿ ಮುಂತಾದ ಕಲೆಗಳ ಬಗ್ಗೆ ಮುಂಬೈನಲ್ಲಿ ಬಿಡುವಿರದೇ ತರಬೇತಿ ಪಡೆಯುತ್ತಿದ್ದಾಳಂತೆ!


ಈಗ ಹೊರ ಬಿದ್ದಿರೋ ಮಾಹಿತಿಯ ಪ್ರಕಾರ ನೋಡ ಹೋದರೆ ಈ ಸಿನಿಮಾ ಸಾಮಾನ್ಯವಾದುದೇನಲ್ಲ. ಸಾಕ್ಷಾತ್ ಸನ್ನಿ ಲಿಯೋನ್ ಮುಖ್ಯ ಭೂಮಿಕೆಯಲ್ಲಿರೋದರಿಂದ ನಿರ್ಮಾಪಕರು ಬಿಗ್‌ಬಜೆಟ್ಟಿನ ಮೂಲಕ ಈ ಚಿತ್ರವನ್ನು ರೂಪಿಸಲು ಸನ್ನದ್ಧರಾಗಿದ್ದಾರೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ ತಯಾರಾಗುತ್ತಿರೋ ಈ ಚಿತ್ರ ಅದೇ ಸಮಯದಲ್ಲಿ ಕನ್ನಡದಲ್ಲೂ ತಯಾರಾಗುತ್ತದೆ ಎಂಬುದು ಕನ್ನಡದ ಸನ್ನಿ ಲಿಯೋನ್ ಅಭಿಮಾನಿಗಳ ಪಾಲಿಗೆ ಹೊಸಾ ವರ್ಷದ ಸಿಹಿ ಸುದ್ದಿ!


ಈ ಚಿತ್ರದ ಇನ್ನೂ ವಿಶೇಷವಾದ ವಿಚಾರವೆಂದರೆ, ಇದಕ್ಕಾಗಿ ಪ್ರಸಿದ್ಧ ತಂತ್ರಜ್ಞರ ದಂಡೇ ನೆರೆಯಲಿದೆಯಂತೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಬಂದಿತ್ತಲ್ಲಾ? ಅದರ ವೈಭವವನ್ನೇ ಸರಿಗಟ್ಟುವಂತೆ ಈ ಚಿತ್ರವನ್ನು ರೂಪಿಸಲು ನಿರ್ಧರಿಸಲಾಗಿದೆಯಂತೆ. ಈ ವಿಚಾರವೇ ವೀರಮ್ಮ ದೇವಿ ಚಿತ್ರದ ಬಗ್ಗೆ ದೇಶಾಧ್ಯಂತ ಕುತೂಹಲ ಹುಟ್ಟಲು ಕಾರಣವಾಗಿದೆ. ಅಂದಹಾಗೆ ಈ ಅದ್ದೂರಿ ಚಿತ್ರವನ್ನು ಫಾನ್ಸ್ ಸ್ಟೀಫನ್ ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ ಸನ್ನಿ ಲಿಯೋನ್ ಓರ್ವ ಪರಿಪೂರ್ಣವಾದ ನಟಿಯಾಗಿ ಬಾಲಿವುಡ್‌ನಲ್ಲಿ ನೆಲೆ ನಿಂತಿದ್ದಾಳೆ. ಈಕೆಯ ಚಿತ್ರಗಳು ಪಡೆಯೋ ಭಾರೀ ಪ್ರಚಾರ ಕಂಡು ಬಾಲಿವುಡ್ ನಟಿಯರನೇಕರು ಕರುಬುತ್ತಿದ್ದಾರೆ. ಅಂಥಾ ಕೆಲ ನಟಿಯರು ಸನ್ನಿ ವಿರುದ್ಧ ಹೇಳಿಕೆ ನೀಡೋ ಮೂಲಕ ತಮ್ಮ ಅಸಹನೆ ಹೊರ ಹಾಕಿದಷ್ಟೂ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಲಾರಂಭಿಸಿದೆ. ಆದರೆ ತಮಿಳು ಸೇರಿದಂತೆ ಬಹು ಭಾಷೆಯಲ್ಲಿ ತಯಾರಾಗುತ್ತಿರೋ ವೀರಮ್ಮದೇವಿ ಚಿತ್ರದಲ್ಲಿ ಸಿಕ್ಕ ಅವಕಾಶ ಸನ್ನಿ ಲಿಯೋನ್‌ಗೆ ಬೇರೆಯದ್ದೇ ಇಮೇಜ್ ತಂದು ಕೊಡಲಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದು ಬಾಲಿವುಡ್‌ನ ಬಹುತೇಕರ ಹೊಟ್ಟೆ ಉರಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದರೂ ಅಚ್ಚರಿಯೇನಿಲ್ಲ!

ಸನ್ನಿ ಲಿಯೋನ್ ಅಂದರೆ ನೀಲಿ ಚಿತ್ರಗಳ ನಟಿ ಅಂತ ಮೂಗು ಮುರಿಯುತ್ತಿದ್ದ ಮಂದಿಯೇ ಹುಬ್ಬೇರಿಸುವಂತೆ ನಟಿಯಾಗಿ ರೂಪುಗೊಂಡ ಸನ್ನಿಯನ್ನು ಅದೊಂದು ವಿಚಾರದಲ್ಲಿ ಒಪ್ಪದಿರಲು ಸಾಧ್ಯವಿಲ್ಲ. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಂತರ ಆಕೆಯೊಳಗಿನ ಥರ ಥರದ ಪ್ರತಿಭೆಗಳೂ ಹೊರ ಬಂದಿವೆ. ಸನ್ನಿ ಜನಪ್ರಿಯ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಿರೂಪಕಿಯಾಗಿಯೂ ಹೊರ ಹೊಮ್ಮಿದ್ದಾಳೆ. ಈ ಸಲ ಹಿಂದಿಯ ಖ್ಯಾತ ರಿಯಾಲಿಟಿ ಶೋ ಸ್ಪಿಟ್ಸ್‌ವಿಲ್ಲ ಈಕೆಯ ನಿರೂಪಣೆಯಲ್ಲೇ ಕಳೆಗಟ್ಟಿಕೊಂಡಿತ್ತು. ಈ ಹಿಂದೆ ಈಕೆ ಮ್ಯಾನ್ ವರ್ಸಸ್ ವೈಲ್ಡ್ ಎಂಬ ರಿಯಾಲಿಟಿ ಶೋದ ಮೂಲಕ ಮತ್ತಷ್ಟು ಖ್ಯಾತಿ ಹೊಂದಿದ್ದಳು.
ಇಂಥಾ ಸನ್ನಿ ಯಾವುದೇ ಚಿತ್ರದಲ್ಲಿ ಕೆಲ ನಿಮಿಷ ಬಂದು ಹೋದರೂ ಸಾಕೆಂಬ ಇರಾದೆಯಿಂದ ಬಹು ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಮಂದಿ ಈವತ್ತಿಗೂ ಕಾದು ಕೂತಿದ್ದಾರೆ. ಇದೀಗ ವೀರಮ್ಮದೇವಿ ಚಿತ್ರದ ವಿಭಿನ್ನ ಪಾತ್ರದ ಮೂಲಕ ಸನ್ನಿ ದೇಶಾದಂತ ಇನ್ನಷ್ಟು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದರೂ ಅಚ್ಚರಿಯೇನಿಲ್ಲ.


ಸನ್ನಿ ಲಿಯೋನ್ ಅಂದರೆ ನೀಲಿ ಚಿತ್ರಗಳ ಛಾಯೆ ಹಾದು ಹೋಗುತ್ತದೆ. ಆದರೆ ಅದರಾಚೆಗೂ ಒಂದಷ್ಟು ಮಾನವೀಯ ಮುಖ ಹೊಂದಿರೋ ಸನ್ನಿ ಈಗ ಓರ್ವ ಜವಾಬ್ದಾರಿಯುತ ತಾಯಿಯಾಗಿದ್ದಾಳೆ. ಮಗಳು ನಿಶಾ ಜೊತೆ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾಳೆ. ಅಂದಹಾಗೆ ಈ ನಿಶಾ ಎಂಬ ಮಗುವನ್ನು ಸನ್ನಿ ಮಹರಾಷ್ಟ್ರದ ಲಾಟೂರ್ ಎಂಬ ಹಳ್ಳಿಯಿಂದ ದತ್ತು ಪಡೆದುಕೊಂಡಿದ್ದಾಳೆ. ಹೀಗೆ ಗಂಡ ಮಕ್ಕಳು ಎಂಬ ಜವಾಬ್ದಾರಿಯ ನಡುವೆಯೂ ಸನ್ನಿ ಲಿಯೋನ್ ನಂಬರ್ ಒನ್ ನಟಿಯಾಗಿ ಗುರುತಿಸಿಕೊಳ್ಳೋ ದಿನ ಹತ್ತಿರದಲ್ಲೇ ಇರುವಂತಿದೆ!

Leave a Reply

Your email address will not be published. Required fields are marked *


CAPTCHA Image
Reload Image