One N Only Exclusive Cine Portal

ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕನಸಿನ ಟಗರು!

ದುನಿಯಾ ಸೂರಿಯಂಥಾ ಬೇರೆಯದ್ದೇ ಟೇಸ್ಟಿನ ನಿರ್ದೇಶಕನದ್ದೊಂದು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಕೂಡಾ ಒಂದು ಕಲಾ ಪ್ರೇಮ ಬೇಕೇ ಬೇಕು. ವ್ಯವಹಾರದಾಚೆಗೆ ಸಿನಿಮಾವನ್ನು ಪ್ರೀತಿಸುವವರು ಮಾತ್ರವೇ ಸೂರಿಯಂಥವರ ಚಿತ್ರಗಳನ್ನು ನಿರ್ಮಾಣ ಮಾಡಲು ಸಾಧ್ಯ. ಟಗರು ವಿಚಾರದಲ್ಲಿ ಅಂಥಾದ್ದೊಂದು ಮಹಾ ಸಂಗಮ ಸಂಭವಿಸಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೂರಿ ಕನಸಿಗೆ ಬಣ್ಣ ತುಂಬುತ್ತಲೇ ಟಗರು ಚಿತ್ರವನ್ನು ಭರ್ಜರಿಯಾಗಿ ನಿರ್ಮಾಣ ಮಾಡಿದ ಖುಷಿ ಹೊಂದಿದ್ದಾರೆ!

ಕಳೆದೊಂದೂವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಬೆಳೆಯುತ್ತಲೇ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾಬಂದವರು ಕೆ.ಪಿ. ಶ್ರೀಕಾಂತ್. ಕನಕಪುರ ಶ್ರೀನಿವಾಸ್ ಅವರ ಆರ್.ಎಸ್. ಪ್ರೊಡಕ್ಷನ್ನಿನಲ್ಲಿ ಸರಿಸುಮಾರು ಹದಿನೈದು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ತೊಡಗಿಸಿಕೊಂಡು ಬಂದವರು ಶ್ರೀಕಾಂತ್. ಕೇವಲ ಶ್ರೀನಿವಾಸ್ ಪಾಲಿಗೆ ಮಾತ್ರವಲ್ಲ, ಶಿವರಾಜ್ ಕುಮಾರ್ ಸೇರಿದಂತೆ ಅನೇಕರ ಪಾಲಿಗೆ ಶ್ರೀಕಾಂತ್ ಒಂಥರಾ ಪವರ್!

ಸಿನಿಮಾಗಳಿಗೆ ಸಂಬಂಧಿಸಿದ ವಿಚಾರ ಮಾತ್ರವಲ್ಲ, ಚಿತ್ರರಂಗದವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಬಲ್ಲ ವ್ಯಕ್ತಿತ್ವ ಕೆ.ಪಿ. ಶ್ರೀಕಾಂತ್ ಅವರದ್ದು. ಇದೇ ಕೆ.ಪಿ. ಶ್ರೀಕಾಂತ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಯುವರಾಜ ಎನ್ನುವ ಸಿನಿಮಾ ಬಂದ ದಿನದಿಂದಲೂ ಶಿವಣ್ಣ ಮತ್ತು ಶ್ರೀಕಾಂತ್ ನಡುವೆ ಅನ್ಯೋನ್ಯ ಒಡನಾಟ ಇದ್ದೇ ಇತ್ತು. ಅದು ಸಂತ ಚಿತ್ರದ ನಂತರ ಮತ್ತಷ್ಟು ಗಟ್ಟಿಯಾಯ್ತು. ಶಿವಣ್ಣ ಯಾರ ನಿರ್ಮಾಣದ, ಯಾವ ನಿರ್ದೇಶಕನ ಚಿತ್ರದಲ್ಲೇ ನಟಿಸಿದರೂ ಶ್ರೀಕಾಂತ್ ಶಿವಣ್ಣನ ನೆರಳಾಗಿ ಓಡಾಡಿಕೊಂಡಿದ್ದರು.

ಟಗರು ಚಿತ್ರವನ್ನು ಶಿವಣ್ಣನ ವೃತ್ತಿ ಬದುಕಿನಲ್ಲಿಯೇ ಮೈಲಿಗಲ್ಲಿನಂಥಾ ಚಿತ್ರವಾಗಿ ರೂಪಿಸ ಬೇಕೆಂಬ ಕನಸಿಟ್ಟುಕೊಂಡೇ ಕೆ ಪಿ ಶ್ರೀಕಾಂತ್ ನಿರ್ಮಾಣಕ್ಕೆ ಕೈ ಹಾಕಿದ್ದರಂತೆ. ಅದೇ ರೀತಿ ಚಿತ್ರ ಏನು ಕೇಳುತ್ತದೋ ಅದಕ್ಕಿಂತ ಒಂದು ಹಿಡಿ ಹೆಚ್ಚೇ ಖರ್ಚು ಮಾಡಿ ಟಗರನ್ನು ರೂಪಿಸಿದ್ದಾರೆ. ಅಂಥಾದ್ದೊಂದು ಶ್ರದ್ಧೆಯ ಕಾರಣದಿಂದಲೇ ಇಂದು ಈ ಚಿತ್ರ ಆಸುಪಾಸಿನ ಚಿತ್ರ ರಂಗದ ಮಂದಿಯೂ ಕಣ್ಣರಳಿಸಿ ನೋಡುವಂತೆ ಆರ್ಭಟಿಸುತ್ತಿದೆ!

Leave a Reply

Your email address will not be published. Required fields are marked *


CAPTCHA Image
Reload Image