Connect with us

ಕಲರ್ ಸ್ಟ್ರೀಟ್

ಹದಿನಾಲಕ್ಕು ವರ್ಷದಲ್ಲಿ ಎಷ್ಟೊಂದು ಬದಲಾಗಿದ್ದಾರೆ ತಾಯಿ ಮತ್ತು ಮಗ!

Published

on

ಮೊಗ್ಗಿನ ಮನಸು ಸೇರಿದಂತೆ ನವಿರಾದ, ಸದಭಿರುಚಿಯ ಚಿತ್ರಗಳ ಮೂಲಕವೇ ಮನೆ ಮಾತಾಗಿರುವವರು ನಿರ್ದೇಶಕ ಶಶಾಂಕ್. ಅವರ ಪಾಲಿಗೆ ತಾಯಿಗೆ ತಕ್ಕ ಮಗ ಚಿತ್ರ ತಮ್ಮ ಈ ವರೆಗಿನ ಸಿನಿಮಾ ಯಾನದ ಮೈಲಿಗಲ್ಲಿನಂಥಾ ಚಿತ್ರ. ಇದುವರೆಗೂ ನಿರ್ದೇಶಕರಾಗಿ ಪರಿಚಿತರಾಗಿದ್ದ ಅವರು ಈ ಚಿತ್ರದ ಮೂಲಕ ನಿರ್ಮಾಣದ ಭಾರವನ್ನೂ ಹೆಗಲೇರಿಸಿಕೊಂಡಿದ್ದಾರೆ. ಆದರೆ ಈಗ ಈಗ ಹಬ್ಬಿಕೊಂಡಿರೋ ಅಗಾಧ ಕ್ರೇಜ್ ಕಂಡು ನಿರಾಳವಾಗಿರುವ ಶಶಾಂಕ್ ಇದೇ ೧೬ರಂದು ಚಿತ್ರ ತೆರೆ ಕಾಣುತ್ತಿರೋ ಸಂಭ್ರಮದಲ್ಲಿದ್ದಾರೆ!

ಪ್ರತೀ ಚಿತ್ರದಲ್ಲಿಯೂ ಹೊಸತನ ಕಾಯ್ದುಕೊಂಡು ಬಂದಿರೋ ಶಶಾಂಕ್ ನಿರ್ದೇಶಕರಾಗಿಯೂ ಭಿನ್ನ ಜಾಡು ಹಿಡಿದಿರೋ ಸುಳಿವನ್ನೀಗಲೇ ತಾಯಿಗೆ ತಕ್ಕ ಮಗ ಚಿತ್ರ ನೀಡಿದೆ. ಈಗಾಗಲೇ ಟ್ರೈಲರ್‌ನಿಂದ, ಚೆಂದದ ಹಾಡುಗಳಿಂದ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಲವರ್ ಬಾಯ್ ಆಗಿಯೇ ರಿಜಿಸ್ಟರ್ ಆಗಿದ್ದ ಅಜೇಯ್ ರಾವ್ ಅವರನ್ನು ಪಕ್ಕಾ ಮಾಸ್ ಲುಕ್ಕಲ್ಲಿ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ.

ಅಜೇಯ್ ರಾವ್ ಎಕ್ಸ್‌ಕ್ಯೂಸ್ ಮೀ ಚಿತ್ರದಲ್ಲಿ ಉತ್ಕಟ ಪ್ರೇಮಿಯಾಗಿ, ಮುಗ್ಧ ಹುಡುಗನಾಗಿ ನಟಿಸಿದ್ದರಲ್ಲಾ? ಆ ಚಿತ್ರದಲ್ಲಿ ಅವರ ತಾಯಿಯಾಗಿ ನಟಿಸಿದ್ದವರು ಸುಮಲತಾ ಅಂಬರೀಶ್. ಆ ಚಿತ್ರದ ಮೂಲಕವೇ ಈ ಅಮ್ಮ ಮಗನ ಜೋಡಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅದಾಗಿ ಈಗ ಅಖಂಡ ಹದಿನಾಲಕ್ಕು ವರ್ಷಗಳೇ ಕಳೆದಿವೆ. ಇದೀಗ ಬೇರೆಯದ್ದೇ ರೂಪದಲ್ಲಿ ಈ ಅಮ್ಮ ಮಗ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ಎಕ್ಸ್‌ಕ್ಯೂಸ್‌ಮೀ ಚಿತ್ರದಲ್ಲಿ ಅಜೇಯ್ ಮುಗ್ದ ಹುಡುಗನಾಗಿದ್ದರೆ, ಸುಮಲತಾ ಅಂಥಾ ಮುಗ್ಧತೆಗೇ ಅಮ್ಮನಂಥಾ ಮನಮಿಡಿಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ತಾಯಿಯೂ ಬದಲಾಗಿದ್ದಾರೆ. ತಾಯಿಗೆ ತಕ್ಕಂತೆ ಮಗನೂ ಬದಲಾಗಿದ್ದಾನೆ. ಇಲ್ಲಿ ಸುಮಲತಾ ಅವರದ್ದು ಖಡಕ್ಕು ವಕೀಲೆಯ ಪಾತ್ರ. ಅದೇ ವ್ಯಕ್ತಿತ್ವ ವನ್ನು ತುಂಬಿಕೊಂಡು ದುಷ್ಟರನ್ನು ಸದೆ ಬಡಿಯೋ ಪಾತ್ರ ಅಜೇಯ್‌ರದ್ದು!

ಈ ಮಾಸ್ ಲುಕ್ಕಿನೊಂದಿಗೇ ರೊಮ್ಯಾಂಟಿಕ್ ಮೂಡಿನಲ್ಲಿಯೂ ಅಜೇಯ್ ರಾವ್ ಗಮನ ಸೆಳೆದಿದ್ದಾರೆ. ಅದಕ್ಕೆ ಆಶಿಕಾ ರಂಗನಾಥ್ ಕೂಡಾ ಸಾಥ್ ನೀಡಿದ್ದಾರೆ. ಅಶಿಕಾ ಭಿನ್ನವಾದೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಹೀಗೆ ಸಾಲು ಸಾಲಾಗಿ ಆಕರ್ಷಣೆಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ತೆರೆಗಾಣಲು ವಾರವಷ್ಟೇ ಬಾಕಿ ಉಳಿದಿದೆ!

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಇದೇ ಶನಿವಾರ ಬರಲಿದೆ ಸುವರ್ಣ ಸುಂದರಿ ಟ್ರೈಲರ್!

Published

on


ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಸುವಣ್ ಸುಂದರಿ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿದೆ. ಇದೀಗ ಚಿತ್ರತಂಡ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ತಯಾರಾಗಿದೆ. ಇದೇ ೧೯ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆಯಾಗಲಿದೆ.

ಎಸ್ ಟೀಮ್ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ತೆಲುಗಿನಲ್ಲಿ ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸೂರ್ಯ ನಿರ್ದೇಶನದ ಈ ಚಿತ್ರ ನಾಲಕ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ರಾಂಗೋಪಾಲ್ ವರ್ಮಾ ಅವರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಾಯಿ ಕಾರ್ತಿಕ್ ಅವರೇ ರಾಗ ಸಂಯೋಜನೆ ಮಾಡಿರೋದು ವಿಶೇಷ. ಬೆಂಗಳೂರು, ಅನಂತಪುರಂ, ಹೈದರಾಬಾದ್, ಬೀದರ್, ಕೇರಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಅಂತಿಮ ಹಂತಕ್ಕೆ ತಲುಪಿಕೊಂಡಿದೆ. ಇದರ ಜೊತೆಗೇ ಒಂದು ಸುಂದರವಾದ ಟ್ರೈಲರ್ ಕೂಡಾ ಇಗಾಗಲೆ ಬಿಡುಗಡೆಗೊಂಡಿದೆ. ಇದೀಗ ವಿಶಿಷ್ಟವಾದ ಎರಡನೇ ಟ್ರೈಲರ್ ನೋಡೋ ಕಾಲ ಹತ್ತಿರಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ ನಲವತೈದು ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗಧೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಲ್ಲಾ ಕೆಲಸ ಕಾರ್ಯಗಳನ್ನೂ ಸಂಪೂರ್ಣವಾಗಿ ಮಗಿಸಿಕೊಂಡಿರುವ ಚಿತ್ರತಂಡ ಇದೀಗ ಟ್ರೈಲರ್ ತೋರಿಸಲು ಮುಂದಾಗಿದೆ.

Continue Reading

ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

Published

on


ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.

ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!

ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

Published

on

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.

ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.

ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್‌ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.

Continue Reading

Trending

Copyright © 2018 Cinibuzz