One N Only Exclusive Cine Portal

ದಳಪತಿಯ ಪೋಸ್ಟರ್ ಹಾಲಿವುಡ್‌ನಿಂದ ಕದ್ದದ್ದು!

ಸಿನಿಮಾ ನೋಡೋದನ್ನೇ ಕಸುಬಾಗಿಸಿಕೊಂಡು ಬೇರೆ ಭಾಷೆಗಳ ಚಿತ್ರಗಳನ್ನೇ ಯಥಾವತ್ತು ಭಟ್ಟಿ ಇಳಿಸುವ ಚೋರ ವಿಕ್ರಮಾದಿತ್ಯರ ದಂಡು ಎಲ್ಲಾ ಭಾಷೆಗಳಲ್ಲಿಯೂ ಇದೆ. ಸಾವಿರದ ಲೆಕ್ಕದಲ್ಲಿ ಸಿನಿಮಾ ನೋಡುತ್ತಾ ಅದನ್ನೇ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಮಾನದಂಡ ಎಂಬಂತೆ ಪೋಸು ಕೊಡೋ ಇಂಥವರೆಲ್ಲ ಗೊತ್ತೇ ಆಗದಂತೆ ಕಥೆ, ದೃಷ್ಯ, ಪೋಸ್ಟರುಗಳನ್ನು ಕದಿಯೋದರಲ್ಲಿ ಭಲೇ ನಿಪುಣರು. ಇಂಥವರು ತಮಿಳು ಚಿತ್ರರಂಗದಲ್ಲಿ ಇಲ್ಲವೇ ಇಲ್ಲ ಅಂದರೆ ಅದಕ್ಕಿಂತಾ ಅವಮಾನ ಬೇರೇನಿದೆ?


ಇಷ್ಟೆಲ್ಲಾ ಹೇಳಲು ಕಾರಣವಾಗಿರೋದು ತಮಿಳು ಸ್ಟಾರ್ ವಿಜಯ್ ನಟಿಸುತ್ತಿರೋ ಧಳಪತಿ ೬೨ ಚಿತ್ರದ ಪೋಸ್ಟರ್. ರಜನೀಕಾಂತ್ ಎಂದಿರನ್ ಚಿತ್ರದ ಪೋಸ್ಟರಿನಲ್ಲಿ ಕೈ ತುಂಬಾ ಎಕೆ ಫಾರ್ಟಿ ಸೆವೆನ್ ಹಿಡಿದು ಬೇರೆಯವರತ್ತ ಗುರಿಯಿಟ್ಟಂಥಾ ಕಾಮಿಡಿ ಸೀನುಗಳಿದ್ದವಲ್ಲಾ? ಅಂಥಾದ್ದೇ ದೃಷ್ಯ ಧಳಪತಿ ಪೋಸ್ಟರಿನಲ್ಲಿದೆ. ಬದಲಾವಣೆಯೆಂದರೆ, ಇಲ್ಲಿ ಹೀರೋ ವಿಜಯ್ ತಲೆಗೆ ಹತ್ತಾರು ರಿವಾಲ್ವರುಗಳು ಗುರಿಯಿಟ್ಟ ದೃಷ್ಯವಿದೆ.


ಆದರೆ ಈ ದೃಷ್ಯವನ್ನು ದಳಪತಿ ಚಿತ್ರ ತಂಡ ಎಂದಿರನ್ ಪೋಸ್ಟರಿಂದ ಕಾಪಿ ಹೊಡೆದಿದೆ ಅಂದುಕೊಳ್ಳಬೇಕಿಲ್ಲ. ಅದು ಜಾನ್ ವಿಕಿ೨ ಎಂಬ ಬಾಲಿವುಡ್ ಸಿನಿಮಾ ಒಂದರ ಯಥಾವತ್ತಾದ ನಕಲು ಇದಾಗಿದೆ. ಕಳೆದ ವರ್ಷದ ಆರಂಭದಲ್ಲಿಯೇ ಬಿಡುಗಡೆಯಾಗಿದ್ದ ಈ ಚಿತ್ರ ದೊಡ್ಡ ಮಟ್ಟದ ಗೆಲುವು ದಾಖಲಿಸಿತ್ತು. ಆದರೆ ಅದಾಗಿ ಒಂದು ವರ್ಷದ ನಂತರ ಅದೇ ಚಿತ್ರದ ಪೋಸ್ಟರನ್ನು ದಳಪತಿ ಕಾಪಿ ಹೊಡೆದಿರೋ ಬಗ್ಗೆ ಎಲ್ಲೆಡೆ ಚರ್ಚೆಗಳಾಗುತ್ತಿವೆ.


ತಮಿಳು ಚಿತ್ರರಂಗ ಹೊಸಾ ಆಲೋಚನೆ, ಬೆರಗಾಗಿಸುವಂಥಾ ಕ್ರಿಯೇಟಿವಿಟಿಗಳಿಂದ ಸದ್ದು ಮಾಡುತ್ತದೆ ಎಂಬ ವಿಚಾರದಲ್ಲಿ ಯಾವ ತಕರಾರೂ ಇಲ್ಲ. ಆದರೆ ಆಗಾಗ ಇಂಥಾ ಕಳವು ಪುರಾಣಗಳೂ ಕೂಡಾ ಜಾಹೀರಾಗುತ್ತಿರುತ್ತವಷ್ಟೆ!

Leave a Reply

Your email address will not be published. Required fields are marked *


CAPTCHA Image
Reload Image