One N Only Exclusive Cine Portal

The King of Dance Returns…..

ಕನ್ನಡದ ಕುವರ ಪ್ರಭುದೇವಾ ಕನ್ನಡದಲ್ಲೇ ಬಿಜ಼್‌ನೆಸ್ ಮಾಡಲು ಹೊರಟಿದ್ದಾರೆ. ಒಬ್ಬರೇ ಅಲ್ಲ. ಜೊತೆಗೆ ಅವರ ತಂದೆಯೂ ಕೂಡಾ ಈ ಬಾರಿ ಅವರೊಟ್ಟಿಗೆ ಸೇರಿದ್ದಾರೆ.
ಈ ಹಿಂದೆ ಹೆಚ್ ಟೂ ಓ ಮತ್ತು ಒನ್ ಟೂ ಥ್ರೀ ಸಿನಿಮಾಗಳಲ್ಲಿ ಪ್ರಭುದೇವಾ ನಟಿಸಿದ್ದರು. ಆ ನಂತರ ಸ್ಯಾಂಡಲ್ ವುಡ್ ಗೆ ಮತ್ತೆ ಬರಬೇಕು ಅನ್ನೋದು ಪ್ರಭುದೇವಾ ಬಯಕೆಯಾಗಿತ್ತಾದರೂ ಸೌತ್ ಇಂಡಿಯಾ ಚಿತ್ರರಂಗಗಳಲ್ಲಿ ಅವರು ಸಾಕಷ್ಟು ಬ್ಯುಸಿ ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.
ಈಗ ಪ್ರಭುದೇವಾ ಅವರ ಖಾಸಾ ಸಂಬಂದಿಯಾಗಿರುವ ಸತೀಶ್ ಎಂಬ ಯುವ ನಿರ್ದೇಶಕನ ‘ಬಿಜ಼್‌ನೆಸ್’ ಚಿತ್ರದಲ್ಲಿ ಪ್ರಭುದೇವಾ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೇ ತಿಂಗಳ ಹನ್ನೆರಡನೇ ತಾರೀಖು ಬಿಜ಼್‌ನೆಸ್ ಚಿತ್ರದ ಫೋಟೋಶೂಟ್ ನಡೆಯುತ್ತಿದ್ದು, ಈ ಫೋಟೋಶೂಟ್ ನಲ್ಲಿ ಪ್ರಭುದೇವಾ ತಂದೆ ಮೂಗೂರು ಸುಂದರಂ ಪಾಲ್ಗೊಳ್ಳುತ್ತಿದ್ದಾರೆ. ಮೂಗೂರು ಸುಂದರಂ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಸರಿಸುಮಾರು ನಾಲ್ಕೈದು ದಶಕಗಳಿಂದ ಕನ್ನಡದ ಹಲವಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಮೂಗೂರು ಸುಂದರಂ ಒಂದಷ್ಟು ಚಿತ್ರಗಳಲ್ಲಿ ಅಭಿನಯವನ್ನೂ ನೀಡಿದ್ದಾರೆ. ಇತ್ತೀಚೆಗೆ ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಹೆಸರು ಮಾಡಿದ್ದಾರೆ. ಒಂದೇ ಚಿತ್ರದಲ್ಲಿ ತಂದೆ ಮಗ ಇಬ್ಬರೂ ತೆರೆ ಹಂಚಿಕೊಳ್ಳುತ್ತಿರುವುದು ಸದ್ಯದ ವಿಶೇಷ.
ಹಾಗೆ ನೋಡಿದರೆ ಬಿಜ಼್‌ನೆಸ್ ಚಿತ್ರ ಕಳೆದ ವರ್ಷವೇ ಸೆಟ್ಟೇರಬೇಕಿತ್ತು. ಈ ಚಿತ್ರದ ಧ್ವನಿ ಮುದ್ರಣ ಸಹಾ ನೆರವೇರಿತ್ತು. ಆದರೆ ಕಾರಣಾಂತರಗಳಿಂದ ಸ್ವಲ್ಪ ಲೇಟಾಗಿ ಶುರುವಾಗುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image