One N Only Exclusive Cine Portal

ಮೋದಿ ಬರಲು ಅಡ್ಡಗಾಲಾಗಿರೋ ಮೂರು ಅಂಶಗಳು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ನಿನ ವಿಲನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಎಲ್ಲರನ್ನೂ ಅಚ್ಚರಿಗೀಡು ಮಾಡಲಿದೆಯಾ? ಸದ್ಯ ಗಾಂಧಿನಗರದ ಅಲ್ಲಿಲ್ಲಿ ಸಣ್ಣಗೆ ಹರಿದಾಡುತ್ತಿರೋ ಮಾಹಿತಿ ಆಧರಿಸಿ ಹೇಳೋದಾದರೆ ಅದು ಅಕ್ಷರಶಃ ನಿಜವಾಗೋ ಎಲ್ಲ ಲಕ್ಷಣಗಳೂ ಇವೆ.
ಏನೇ ಕೆಲಸ ಕಾರ್ಯ ಮಾಡೋದಾದರೂ ಸಾವಿರ ಪಟ್ಟು ಅಧಿಕ ಪಬ್ಲಿಸಿಟಿಯ ಮೂಲಕವೇ ಅಖಾಡಕ್ಕಿಳಿಯೋದು ನಿರ್ದೇಶಕ ಪ್ರೇಮ್ ಅವರ ಹಳೇ ವರಸೆ. ಆದರೆ ವಿಲನ್ ಚಿತ್ರದ ಆಡಿಯೋ ಲಾಂಚ್ ವಿಚಾರದಲ್ಲಿ ಮಾತ್ರ ಇದುವರೆಗಿನ ಸಂಪ್ರದಾಯ ಮುರಿದಂತಿರೋ ಪ್ರೇಮ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಕರೆತರಲು ಒಳಗೊಳಗೇ ಭಾರೀ ಪಯತ್ನ ಮಾಡುತ್ತಿದ್ದಾರೆ!


ಎಲ್ಲವೂ ಅಂದುಕೊಂಡಂತೆಯೇ ಆದರೆ ನರೇಂದ್ರ ಮೋದಿ ವಿಲನ್ ಚಿತ್ರದ ಆಡಿಯೋ ಲಾಂಚ್ ಮಾಡೋದು ಪಕ್ಕಾ. ಈ ಬಗ್ಗೆ ಪ್ರೇಮ್ ಮತ್ತು ಚಿತ್ರಕ್ಕೆ ಸಂಬಂಧಿಸಿದ ಮಂದಿ ಮೋದಿಯವರ ಮನವೊಲಿಸಲು ಇನ್ನಿಲ್ಲದಂತೆ ಶ್ರಮ ವಹಿಸುತ್ತಿದ್ದಾರೆ. ಸಂಸದ ಅನಂತಕುಮಾರ್ ಅವರ ಮೂಲಕ ಮೋದಿ ಮೇಲೆ ಒತ್ತಡ ಹಾಕಿಸಿ ಈ ಕಾರ್ಯಕ್ರಮಕ್ಕೆ ಬರುವಂತೆ ಮಾಡಲು ಶತಾಯ ಗತಾಯ ಶ್ರಮಿಸಲಾಗುತ್ತಿದೆ.


ಇದು ಹೇಳಿ ಕೇಳಿ ಕರ್ನಾಟಕದ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರೋ ಸಮಯ. ಇಂಥಾ ಹೊತ್ತಿನಲ್ಲಿ ಆಡಿಯೋ ರಿಲೀಸಿಗೆ ಬಂದರೆ ಆ ಕಾರ್ಯಕ್ರಮವೂ ಆಗುತ್ತದೆ, ಪ್ರಚಾರ ಕಾರ್ಯವೂ ಆಗುತ್ತದೆ. ಬರೀ ಇಷ್ಟೇ ಲೆಕ್ಕಾಚಾರ ಆಗಿದ್ದರೆ ಮೋದಿ ಕಡೆಯಿಂದ ಅದ್ಯಾವತ್ತೋ ಹಸಿರು ನಿಶಾನೆ ತೋರಲ್ಪಟ್ಟು ಈ ಹೊತ್ತಿಗೆಲ್ಲಾ ಪ್ರೇಮ್ ಮೋದಿ ಬರ್‍ತಾರೆ ಅಂತ ತಮಟೆ ಹಿಡಿದು ಹೊರಟು ಬಿಡುತ್ತಿದ್ದರೇನೋ…
ಆದರೆ ಮೂರು ಕಾರಣಗಳಿಗಾಗಿ ಮೋದಿ ವಿಲನ್ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರಂತೆ!


ಆ ಕಾರಣಗಳ್ಯಾವುವೆಂದು ಹುಡುಕ ಹೋದರೆ ಒಂದಷ್ಟು ಸೂಕ್ಷ್ಮ ವಿಚಾರಗಳು ಹೊರ ಬೀಳುತ್ತವೆ. ಮೊದಲನೆಯದ್ದು ಚಿತ್ರದ ಶೀರ್ಷಿಕೆ. ಹೇಳಿ ಕೇಳಿ ಇದೀಗ ಮೋದಿ ಭಾರತದ ಹೀರೋ ಎಂಬಂತೆ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ವಿಲ್ಲನ್ ಎಂಬ ಹೆಸರಿನ ಚಿತ್ರದ ಆಡಿಯೋ ಲಾಂಚ್ ಮಾಡಿದರೆ ವಿರೋಧಿಗಳ ತಿವಿತಕ್ಕೆ ತಾವೇ ಅಸ್ತ್ರ ಹುಡುಕಿಕೊಟ್ಟಂತಾಗುತ್ತದೆಂಬ ಅಂಜಿಕೆ ಮೋದಿ ಪಾಳೆಯದಲ್ಲಿದೆ. ಮೋದಿ ಹಿಂದೇಟು ಹಾಕಲು ಇನ್ನೆರಡು ಪ್ರಧಾನವಾದ ಕಾರಣ ಸುದೀಪ್ ಮತ್ತು ಸುದೀಪ್!


ಎಲ್ಲರೂ ಮೋದಿ ಜಾರಿಗೆ ತಂದಿದ್ದ ಜಿಎಸ್‌ಟಿ ಜಪ ಮಾಡುತ್ತಿದ್ದ ಕಾಲದಲ್ಲಿಯೇ ಸುದೀಪ್ ಜಿಎಸ್‌ಟಿ ವಿರುದ್ಧ ಮಾತಾಡಿದ್ದರು. ಈ ಮೂಲಕ ಬಿಜೆಪಿ ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದರು. ಈ ವಿಚಾರ ಮೋದಿಗೂ ತಲುಪಿಕೊಂಡಿತ್ತು. ಇನ್ನೊಂದು ಕಾರಣವೆಂದರೆ ಈಗಾಗಲೇ ಸುದೀಪ್ ಮುಂಬರೋ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯೋದು ಖಚಿತ ಎಂಬ ವಾತಾವರಣವಿದೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯ ಬಿಜೆಪಿ ಮಂದಿಯೇ ಸುದೀಪ್ ಅಭಿನಯದ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಮೋದಿ ಬರಬಾರದೆಂಬ ಒತ್ತಡ ಹಾಕುತ್ತಿದ್ದಾರಂತೆ. ಇದಲ್ಲದೇ ಮತ್ತೊಂದು ಕಾರಣವೆಂದರೆ ಈ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ಜೆಡಿಎಸ್ ಪಕ್ಷದ ಎಂ.ಎಲ್.ಸಿ. ಆಗಿರೋದು.


ಇನ್ನುಳಿದಂತೆ ಸುದೀಪ್ ಅವರ ಎಲ್ಲ ನಡಾವಳಿಗಳ ಬಗೆಗೂ ಈಗಾಗಲೇ ಮೋದಿಗೆ ಮಾಹಿತಿ ಹೋಗಿದೆಯಂತೆ. ಆದರೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಚಿತ್ರದ ಟೈಟಲ್ ಮೋದಿ ವಿರುದ್ಧದ ಪ್ರಹಾರಕ್ಕೆ ಆಹಾರ ಒದಗಿಸೀತೆಂಬುದೂ ಕೂಡಾ ಮೋದಿ ಹಿಂದೇಟು ಹಾಕಲು ಪ್ರಮುಖ ಕಾರಣ. ಇನ್ನೇನಾದರೂ ಅನಂತಕುಮಾರ್ ಒತ್ತಡದ ಮೇರೆಗೆ ಮೋದಿ ವಿಲನ್ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬರುವಂತಾದರೂ ಅಚ್ಚರಿಯೇನಿಲ್ಲ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image