Connect with us

cbn

ನೀರ್‌ದೋಸೆಯ ನಂತರ ತೋತಾಪುರಿ!

Published

on

ಅಜೇಯ್ ರಾವ್ ಜೊತೆ ಧೈರ್ಯಂ ಚಿತ್ರದಲ್ಲಿ ನಟಿಸಿದ ನಂತರ ನಾಗಕನ್ನಿಕೆ ಅದಿತಿ ಪ್ರಭುದೇವ ಚಿತ್ರರಂಗದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸಾಲು ಸಾಲಾಗಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರೋ ಅದಿತಿ ಇದೀಗ ನೀರ್‌ದೋಸೆ ಟೀಮಿನ ಹೊಸಾ ಚಿತ್ರಕ್ಕೂ ನಾಯಕಿಯಾಗಿ ಬರೋ ಸಾಧ್ಯತೆಗಳೇ ಹೆಚ್ಚಿವೆ.

ನೀರ್‌ದೋಸೆ ಮೂಲಕ ಗೆವುವೊಂದನ್ನು ಪಡೆದುಕೊಂಡಿದ್ದ ವಿಜಯಪ್ರಸಾದ್ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಅದೇಕೋ ಅನೌನ್ಸ್ ಆದ ಚಿತ್ರವೂ ಪೋಸ್ಟ್ ಪೋನ್ ಆಗಿತ್ತು. ಆದರೀಗ ವಿಜಯ ಪ್ರಸಾದ್ ಮತ್ತೆ ನವರಸ ನಾಯಕ ಜಗ್ಗೇಶ್ ಅವರ ಜೊತೆಗೊಂದು ಚಿತ್ರ ಮಾಡಲು ಮುಂದಾಗಿದ್ದಾರೆ. ಸದ್ದಿಲ್ಲದೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರದ ಹೆಸರು ತೋತಾಪುರಿ!

ನೀರ್‌ದೋಸೆಯ ನಂತರ ತೋತಾಪುರಿ ಚಿತ್ರವನ್ನು ಜಗ್ಗೇಶ್ ಕೂಡಾ ಭಾರೀ ನಿರೀಕ್ಷೆ, ಭರವಸೆಯಿಂದಲೇ ಒಪ್ಪಿಕೊಂಡಿದ್ದಾರೆ. ಅದೇ ಉತ್ಸಾಹದಿಂದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ಆದರೆ ಒಂದು ಹಂತದ ಚಿತ್ರೀಕರಣ ಸಮಾಪ್ತಿಯಾದಾಗಲೂ ನಾಯಕಿ ಯಾರೆಂಬುದು ಮಾತ್ರ ಫೈನಲ್ ಆಗಿರಲಿಲ್ಲ. ಒಂದಷ್ಟು ನಟಿಯರನ್ನು ಮನಸಲ್ಲಿಟ್ಟುಕೊಂಡಿದ್ದರಾದರೂ ಅವರ‍್ಯಾರೂ ಈ ಪಾತ್ರಕ್ಕೆ ಸರಿ ಹೊಂದಿರಲಿಲ್ಲ. ಕಡೆಗೂ ವಿಜಯ ಪ್ರಸಾದ್ ಗಮನ ಅದಿತಿ ಪ್ರಭುದೇವ ಅವರತ್ತ ಹೊರಳಿಕೊಂಡಿದೆ.

ಈಗಾಗಲೇ ಈ ವಿಚಾರವಾಗಿ ಅದಿತಿಯನ್ನು ಅಪ್ರೋಚ್ ಮಾಡಲಾಗಿದೆ. ಕಥೆಯನ್ನೂ ಹೇಳಲಾಗಿದೆ. ಅದು ಅವರಿಗೆ ಇಷ್ಟವೂ ಆಗಿದೆಯಂತೆ. ಇನ್ನೇನಿದ್ದರೂ ಅದಿತಿ ತೋತಾಪುರಿ ಚಿತ್ರದ ನಾಯಕಿಯಾಗಿ ಅಧಿಕೃತವಾಗಿ ಎಂಟ್ರಿ ಕೊಡೋದಷ್ಟೇ ಬಾಕಿ ಉಳಿದುಕೊಂಡಿದೆ.

#

Advertisement
Click to comment

Leave a Reply

Your email address will not be published. Required fields are marked *

cbn

ಬಾರಯ್ಯ ಸಾಕು ಅಂದರು ಯಜಮಾನಿ

Published

on


ಯಜಮಾನ ಸಿನಿಮಾದಿಂದ ಪೊನ್ನುಕುಮಾರ್ ಔಟ್ ಆಗಿ, ಹರಿಕೃಷ್ಣ ನಿರ್ದೇಶಕ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡದ್ದರ ಹಿನ್ನೆಲೆ ಏನು ಅನ್ನೋದು ಇವತ್ತಿಗೂ ಗೌಪ್ಯವಾಗೇ ಇದೆ. ಕತೆ ರೆಡಿಮಾಡೋದರಿಂದ ಹಿಡಿದು ಎಲ್ಲ ಹಂತದಲ್ಲೂ ಹರಿಕೃಷ್ಣ ಇದ್ದರು ಅನ್ನೋದೇನೋ ನಿಜ. ದರ್ಶನ್ ರಂಥಾ ಸೂಪರ್ ಸ್ಟಾರು, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಬಿ.ಸುರೇಶ, ಶೈಲಜಾ ನಾಗ್ ಮತ್ತವರ ಮೀಡಿಯಾ ಹೌಸು… ಇಷ್ಟೆಲ್ಲಾ ಇದ್ದಾಗ ಆ ಸಿನಿಮಾದಿಂದ ನಿರ್ದೇಶಕನನ್ನೇ ಕಿತ್ತು ಬೇರೊಬ್ಬರನ್ನು ಕೂರಿಸುತ್ತಾರೆಂದರೆ ಅದಕ್ಕೆ ದೊಡ್ಡ ಕಾರಣವೇ ಇರುತ್ತದೆ.

ಇದೇನೇ ಆದರೂ ಆರಂಭದಲ್ಲಿದ್ದ ನಿರ್ದೇಶಕನನ್ನು ಕೂಡಾ ಪತ್ರಿಕಾಗೋಷ್ಟಿಗೆ ಕರೆಸಬೇಕು ಅನ್ನೋದು ನಿರ್ಮಾಣ ಸಂಸ್ಥೆಯ ದೊಡ್ಡ ಗುಣವಾ? ಅಥವಾ ಸ್ವತಃ ದರ್ಶನ್ ಆಜ್ಞಾಪಿಸಿದ್ದರಾ ಗೊತ್ತಿಲ್ಲ!

ಒಟ್ಟಾರೆ ಹೊಸ ನಿರ್ದೇಶಕ ಹರಿಕೃಷ್ಣ ಮಾತು ಮುಗಿಸುತ್ತಿದ್ದಂತೇ ಹಳೇ ಡೈರೆಕ್ಟರ್ ಪೊನ್ನುಕುಮಾರ್ ರನ್ನು ಸಹಾ ವೇದಿಕೆಗೆ ಕರೆಸಲಾಯ್ತು. ಪೊನ್ನು ಕೂಡಾ ತಾನು ಎತ್ತಂಗಡಿಯಾಗಿರೋ ನಿರ್ದೇಶಕ ಅನೋದನ್ನೇ ಮರೆತು ಸಿನಿಮಾದ ಒಂದೊಂದು ವಿಭಾಗದ ಬಗ್ಗೆಯೂ ಮಾತಾಡುತ್ತಾ ಹೀರೋ ದರ್ಶನ್ ಅವರಿಗೆ ಉಘೇ ಉಘೇ ಅನ್ನುತ್ತಿತ್ತು. ಅದೆಲ್ಲಿತ್ತೋ ಮೇಡಮ್ಮು ಶೈಲಕ್ಕನಿಗೆ ಸಿಟ್ಟು… ಕೂತಲ್ಲೇ ಬುಸುಬುಸು ಅನ್ನತೊಡಗಿದ್ದರು. ಅದು ಪೊನ್ನುಕುಮಾರು ಅದನ್ನು ಅರ್ಥ ಮಾಡಿಕೊಳ್ಳದೇ ಮಾತಾಡುತ್ತಲೇ ಇತ್ತು. ನೋಡೋ ತನಕ ನೋಡಿದ ಶೈಲಮ್ಮ ಎದ್ದು ನಿಂತವರೇ ‘ಏನ್ರೀ ಎಲ್ಲಾ ನೀವೇ ಮಾತಾಡಿಬಿಟ್ರೆ….. ಬೇರೆಯವರು ಏನು ಮಾತಾಡ್ತಾರೆ. ಬನ್ರೀ ಸಾಕು ಅನ್ನೋ ರೀತಿಯಲ್ಲಿ ತುಂಬಿದ ಪತ್ರಿಕಾಗೋಷ್ಟಿಯಲ್ಲಿ ಅವಾಜು ಬಿಟ್ಟರು. ಶೈಲಜಾ ಅವರ ವಾಯ್ಸಿಗೆ ಅದೆಂಥಾ ತಾಕತ್ತೆಂದರೆ, ಮೈಕಿಲ್ಲದೆಯೂ ಮೈದಾನವನ್ನು ನಡುಗಿಸುತ್ತದೆ. ಇಂಥಾದ್ದರಲ್ಲಿ ಯಜಮಾನಿ ಶೈಲಜಾ ಕೂಗಿಗೆ ಇಡೀ ಪತ್ರಿಕಾಗೋಷ್ಟಿಯೇ ಬೆಚ್ಚಿಬಿದ್ದಿತ್ತು. ಇನ್ನು ಪೊನ್ನು ಕುಮಾರ್ ಪಾಡು ಏನಾಗಬೇಡ. ಗಾಬರಿಯಿಂದ ಸ್ಟೇಜು ಇಳಿದ ಕುಮಾರ್ ಮತ್ತೆ ಯಾರ ಕಣ್ಣಿಗೂ ಕಾಣಿಸಲೇ ಇಲ್ಲ…
ಇದಲ್ಲವೇ ಯಜಮಾನ್ತಿಯ ಗತ್ತು!

Continue Reading

cbn

ಅನುಕ್ತ: ಕ್ರೈಂ ಥಿಲ್ಲರ್ ಕಥೆಗಿದೆ ಭೂತ ಕೋಲದ ನಂಟು!

Published

on


ಸ್ಯಾಂಡಲ್‌ವುಡ್‌ಗೆ ಹೊಸಾ ಪ್ರತಿಭೆಗಳ ಆಗಮನವಾಗುತ್ತಾ, ಹೊಸಾ ಅಲೆಯ ಚಿತ್ರಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಈಗ ಇಂಥಾ ಪ್ರತಿಭಾನ್ವಿತರೇ ಸೇರಿ ರೂಪಿಸಿರೋ ಅನುಕ್ತ ತೆರೆಗಾಣಲು ರೆಡಿಯಾಗಿದೆ. ಈ ಸಿನಿಮಾ ಮೂಲಕ ಕಿರುತೆರೆಯಲ್ಲಿ ಗುರುತಿಸಿಒಕೊಂಡ ಇದ್ದ ಕಾರ್ತಿಕ್ ಅತ್ತಾವರ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಇವರಿಗೆ ಜೋಡಿಯಾಗಿ ಸಂಗೀತಾ ಭಟ್ ಅಭಿನಯಿಸಿದ್ದಾರೆ.

ಅನುಕ್ತ ಕ್ರೈಂ ಥಗರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಇದನ್ನು ಮಂಗಳೂರು  ಮೂಲದ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿದ್ದಾರೆ. ಕರಾವಳಿ ಮೂಲದವರಾದ ಹರೀಶ್ ಬಂಗೇರ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಹೊಸಾ ತಂಡವೊಂದು ಅನುಕ್ತ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದವೂರಿದೆ. ಅನುಕ್ತ ಸಿನಿಮಾ ಮೂಲಕವೇ ಕಾಲೂರಿ ನಿಲ್ಲುವ, ಮತ್ತಷ್ಟು ಚಿತ್ರಗಳನ್ನು ತಯಾರು ಮಾಡುವ ಉತ್ಸಾಹದಿಂದಿದೆ.

ಈ ಸಿನಿಮಾದ್ದು ವಿಶಿಷ್ಟವಾದ ಜಾಡು. ತುಳುನಾಡಿನ ಸಂಸ್ಕೃತಿಯ ಭಾಗವಾದ ಭೂತ ಕೋಲ ಸೇರಿದಂತೆ ಎಲ್ಲವೂ ಇಲ್ಲಿದೆ. ಅದನ್ನೆಲ್ಲ ಕ್ರೈಂ ಥ್ರಿಲ್ಲರ್ ಕಥಾನಕಕ್ಕೆ ಬ್ಲೆಂಡ್ ಮಾಡಲಾಗಿದೆಯಂತೆ. ಆದ್ದರಿಂದಲೇ ಇಡೀ ಚಿತ್ರೀಕರಣ ಕರಾವಳಿ ಭಾಗದಲ್ಲಿಯೇ ನಡೆದಿದೆ. ಇದೆಲ್ಲದರ ನಡುವೆಯೇ ಕನಸಿಗೆ ಅರ್ಥವನ್ನೂ ಹುಡುಕ ಹೊರಟಿರೋ ಅನುಕ್ತ ಇಪ್ಪತ್ತೆಂಟು ದಿನಗಳಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ.

ಹೀಗೆ ವೇಗವಾಗಿ ಚಿತ್ರೀಕರಣ ಮುಗಿಸಿಕೊಳ್ಳೋದಕ್ಕೆ ಕಾರಣ ಪ್ಲಾನಿಂಗ್. ಕೇವಲ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಸಮಾಪ್ತಿ ಮಾಡಿಕೊಂಡಿದ್ದರ ಹಿಂದೆ ಎಂಟು ತಿಂಗಳ ಶ್ರಮವಿದೆಯಂತೆ. ತುಳುನಾಡಿನ ಸಂಸ್ಕ್ರತಿ ಅಂದರೆ ಮೊಗೆದಷ್ಟೂ ಮುಗಿಯದ ಅಕ್ಷಯ ಪಾತ್ರೆಯಂಥಾದ್ದು. ಈ ಬಗ್ಗೆ ಪ್ರೇಕ್ಷಕರ ಕೌತುಕ ತಣಿಯುವುದೇ ಇಲ್ಲ. ಅಂಥಾದ್ದರಲ್ಲಿ ಅದನ್ನೇ ಜೀವಾಳವಾಗಿಸಿಕೊಂಡಿರೋ ಅನುಕ್ತ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಬೇರೆ ಭಾಷೆಗಳಿಗೂ ರೀಮೇಕ್‌ಗಾಗಿ ಬಹು ಬೇಡಿಕೆ ಹೊಂದಿರುವ ಅನುಕ್ತ ಬಿಡುಗಡೆಗೆ ಸಜ್ಜುಗೊಂಡಿದೆ. #

Continue Reading

cbn

ಬಿಲ್ಲಾ ರಂಗ ಭಾಷಾ: ಮೂರು ಅವತಾರದಲ್ಲಿ ಮಿಂಚಲಿದ್ದಾರಾ ಸುದೀಪ್?

Published

on


ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಸುದೀಪ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿಗೆ ಎರಡ್ಮೂರು ವರ್ಷ ತುಂಬಿದೆ. ಇಷ್ಟೊಂದು ಕಾಲಾವಧಿಯ ನಂತರ ಅದೀಗ ನಿಜವಾಗಿದೆ. ಈ ಚಿತ್ರಕ್ಕೆ ಬಿಲ್ಲಾ ರಂಗ ಭಾಷಾ ಎಂಬ ಶೀರ್ಷಿಕೆಯೂ ನಿಗಧಿಯಾಗಿ ಅನಾವರಣಗೊಂಡಿದೆ.

ಬಿಲ್ಲಾ ರಂಗ ಭಾಷಾ ಎಂಬ ಶೀರ್ಷಿಕೆ ಕಂಡೇ ಸುದೀಪ್ ಅಭಿಮಾನಿ ಬಳಗ ಖುಷಿಗೊಂಡಿದೆ. ಇದರ ಬೆನ್ನಲ್ಲಿಯೇ ಒಂದಷ್ಟು ಕುತೂಹಲ ಬೆರೆತ ಗೊಂದಲಗಳೂ ಕಾಡಲಾರಂಭಿಸಿವೆ. ಇದರಲ್ಲಿ ಕಿಚ್ಚಾ ಸುದೀಪ್ ಮೂರು ಪಾತ್ರಗಳಲ್ಲಿ ಅಭಿನಯಿಸಲಿದ್ದಾರಾ? ಶೀರ್ಷಿಕೆಯಲ್ಲಿರುವಂತೆ ಮೂರು ಪಾತ್ರಗಳು ಈ ಸಿನಿಮಾದಲ್ಲಿ ಇರಲಿದ್ದಾವಾ ಅಂತೆಲ್ಲ ಪ್ರಶ್ನೆಗಳು ಅಭಿಮಾನಿಗಳಲ್ಲಿವೆ.

 

ಆದರೆ ಅನೂಪ್ ಭಂಡಾರಿ ಅಪ್ಪಿ ತಪ್ಪಿಯೂ ಈ ವಿಚಾರದ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ ಕನ್ನಡ ಚಿತ್ರರಂಗದ ಪಾಲಿಗೆ ಈ ಚಿತ್ರವನ್ನು ವಿಭಿನ್ನವಾಗಿ ನೆಲೆಗಾಣಿಸೋ ಉತ್ಸಾವಂತೂ ಅವರಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ರಂಗಿತಂರಂಗ ಮೂಲಕ ಭರ್ಜರಿ ಗೆಡಲುವು ದಾಖಲಿಸಿದ್ದ ಅನೂಪ್ ಎರಡನೇ ಚಿತ್ರವಾದ ರಾಜರಥದಲ್ಲಿ ಮುಗ್ಗರಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ ಸೋತಿತ್ತು.

ಈ ಸೋಲಿನಿಂದ ಪಾಠ ಕಲಿತಿರೋ ಅನೂಪ್ ಬಿಲ್ಲಾ ರಂಗ ಭಾಷ ಮೂಲಕ ಮತ್ತೆ ಎದ್ದು ನಿಲ್ಲುವ ಹುರುಪಿನೊಂದಿಗೆ ತಯಾರಾಗಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿಗಳನ್ನು ಅನೂಪ್ ಇಷ್ಟರಲ್ಲಿಯೇ ಜಾಹೀರು ಮಾಡಲಿದ್ದಾರೆ.

#

Continue Reading

Trending