One N Only Exclusive Cine Portal

ಟಾಯ್ಲೆಟ್ ಕಟ್ಟಿ ಸುದ್ದಿ ಮಾಡಿದ ತ್ರಿಶಾ ಕೃಷ್ಣನ್!


ಸಿನಿಮಾ ನಟಿಯರಿಗೆ ಅದ್ಯಾವಾಗ ಯಾವ ಥರದ ಮೂಡು ಬರುತ್ತದೋ ಹೇಳಲು ಬರೋದಿಲ್ಲ. ಕೆಲವೊಮ್ಮೆ ಖಾಲಿ ಕೂತಾದ ಏನಾದರೊಂದು ಯಡವಟ್ಟು ಮಾಡೋ ಮೂಲಕವೋ, ಇದ್ದಕ್ಕಿದ್ದಂತೆ ಬಟ್ಟೆ ಕಳಚೋ ಮೂಲಕವೋ ಸುದ್ದಿ ಮಾಡೋ ಇಂಥವರು ಆಗಾಗ ಸಾಮಾಜಿಕ ಕಾಳಜಿಯಿಂದ ಗಮನ ಸೆಳೆಯೋದೂ ಇದೆ. ಇದೀಗ ತ್ರಿಶಾ ಕೃಷ್ಣನ್ ಸುದ್ದಿಯಲ್ಲಿರೋದೂ ಕೂಡಾ ಅಂಥಾದ್ದೇ ಕಾರಣಕ್ಕೆ.
ತ್ರಿಶಾ ಯನಿಸೆಫ್‌ನ ರಾಯಭಾರಿಯಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾಳೆ. ಇದರನ್ವಯ ಆಕೆ ಭಾರತದಲ್ಲಿ ಶೌಚಾಲಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸೋ ಅಭಿಯಾನದ ಭಾಗವಾಗಿದ್ದಾಳೆ. ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿರೋ ಹಳ್ಳಿಗಾಡಿನ ಜನರನ್ನು ಭೇಟಿಯಾಗಿ ಈ ಬಗ್ಗೆ ಅರಿವು ಮೂಡಿಸಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗುವಂತೆ ಮಾಡೋದು ತ್ರಿಶಾಳ ಕೆಲಸ. ಆದರೆ ಹೊಸಾ ವರ್ಷದ ಆರಂಭಿಕ ವಾರದಲ್ಲಿ ಆಕೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ತಾನೇ ಶೌಚಾಲಯ ನಿರ್ಮಾಣದ ಕೆಲಸ ಕಾರ್ಯ ಮಾಡೋ ಮೂಲಕ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ತಮಿಳುನಾಡಿನ ಮೂಲೆಯೊಂದರ ಹಳ್ಳಿಯಾದ ವಡನ್ಮೇಲಿಯಲ್ಲಿ ಯುನಿಸೆಫ್ ಕಡೆಯಿಂದ ಈ ಜಾಗೃತಿ ಕಾರ್ಯ ಆಯೋಜನೆಯಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ತ್ರಿಶಾ ಗ್ರಾಮಸ್ಥರ ಜೊತೆ ಮಾತಾಡಿ ಶೌಚಾಲಯ ಕಟ್ಟಲು ಮನವೊಲಿಸಿದ್ದಳು. ಕಡೇಗೆ ಆ ಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕಾರ್ಮಿಕರು ಶುರುವಿಟ್ಟಾಗ ಸ್ವತಃ ತಾನೇ ಹೋಗಿ ಕರ್ಣೆ ಹಿಡಿದು ಗೋಡೆ ಕಟ್ಟಿದ ತ್ರಿಶಾ ಎಲ್ಲರಲ್ಲಿಯೂ ಬೆರಗು ಮೂಡಿಸಿದ್ದಾಳೆ.
ತ್ರಿಶಾ ಪ್ರಚಾರದಾಚೆಗೆ ಈ ಕೆಲಸವನ್ನು ಮನಃಪೂವಃಕವಾಗಿ ಮಾಡುತ್ತಿದ್ದಾಳೆಂಬ ಮೆಚ್ಚುಗೆ ತಮಿಳುನಾಡು ಜನರಿಂದ ಕೇಳಿ ಬರುತ್ತಿದೆ. ವಡನ್ಮೇಲಿಗೆ ಭೇಟಿ ನೀಡಿದಾಗಲೂ ತಾನೋರ್ವ ಸ್ಟಾರ್ ನಟಿ ಎಂಬ ಯಾವುದೇ ಹಮ್ಮಿ ಬಿಮ್ಮಿಲ್ಲದೆ ಹಳ್ಳಿ ಹೆಂಗಸರ ಜೊತೆ ಒಡನಾಡಿರೋ ತ್ರಿಶಾ ತನ್ನ ಈ ಕೆಲಸ ತೃಪ್ತಿ ತಂದಿದೆ ಅಂದಿದ್ದಾಳೆ. ಇದೀಗ ಮಲಯಾಳದಲ್ಲಿ ನಿವಿನ್ ಪೌಲಿ ಜೊತೆಗಿನ ಚಿತ್ರ ಸೇರಿದಂತೆ ಬೇರೆ ಬೇರೆ ಭಾಷೆಗಳ ಹತ್ತಾರು ಚಿತ್ರಗಳಲ್ಲಿ ಬ್ಯುಸಿ ಇರೋ ತ್ರಿಶಾ ಅದರ ನಡುವೆಯೂ ಇಂಥಾ ಸಾಮಾಜಿಕ ಕೆಲಸ ಕಾರ್ಯ ಮಾಡುತ್ತಿರೋದು ಇತರೇ ನಟಿಯರಿಗೂ ಸ್ಫೂರ್ತಿಯ ವಿಚಾರ!

Leave a Reply

Your email address will not be published. Required fields are marked *


CAPTCHA Image
Reload Image