One N Only Exclusive Cine Portal

ಕೆಲ ನಟಿಯರ ವ್ಯವಹಾರ ಕುದುರೋದು ಇಲ್ಲೇ!

ಶಾಸಕ ಹ್ಯಾರಿಸು ಪುತ್ರ ನಲಪಾಡ್ ಮಾಡಿರೋ ನಾಲಾಯಕ್ ಕೆಲಸವೊಂದರ ಮೂಲಕ ಹಣದ ಮದವೇರಿಸಿಕೊಂಡವರ ಅಡ್ಡೆಯಂತಿರೋ ಉಬಿ ಸಿಟಿಯ ಫರ್ಬಿ ಕೆಫೆ ರೆಸ್ಟಾರಾಂಟ್ ಮತ್ತೆ ಸುದ್ದಿಯಲ್ಲಿದೆ. ಲೇಟ್ ನೈಟ್ ಪಾರ್ಟಿ ನಡೆಸೋ ಖಯಾಲಿಯ ಹಾಟ್‌ಫೇವರಿಟ್ ಸ್ಥಳವಾದ ಯುಬಿ ಸಿಟಿ ಈವತ್ತು ಕೇವಲ ಹಣದ ನಶೆಯೇರಿಸಿಕೊಂಡು ಕುಣಿದಾಡುವ ಸ್ಥಳ ಮಾತ್ರವಲ್ಲದೇ ನಾನಾ ದಂಧೆಗಳ ಸೆಂಟರ್ ಪಾಯಿಂಟಾಗಿಯೂ ಬದಲಾಗಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ!

ಯುಬಿ ಸಿಟಿ ಎಂಬುದು ಹೈಟೆಕ್ ಪಡ್ಡೆಗಳ ಖಾಯಂ ಅಡ್ಡೆ. ಇಲ್ಲಿ ಹೆಸರಾಂತ ಉದ್ಯಮಿಗಳು, ರಾಜಕಾರಣಿಗಳು ಮತ್ತು ಚಿತ್ರರಂಗದ ಮಂದಿ ಪದೇ ಪದೆ ಪಾರ್ಟಿ ಮಾಡುತ್ತಾರೆ. ಆದರೆ ಹೊಟ್ಟೆ ಸೇರಿದ ಪರಮಾತ್ಮ ಅಹಂಕಾರದ ಜೊತೆ ಸೇರಿಕೊಂಡಾದ ನಂತರ ಆಗಾಗ ಇಂಥಾ ಅನಾಹುತಗಳೂ ನಡೆಯುತ್ತವೆ. ಇಂಥಾ ಅಡ್ಡೆಯಲ್ಲಿರುವ ಫರ್ಬಿ ಕೆಫೆ ಕೂಡಾ ಕುಖ್ಯಾತವೇ. ಇಲ್ಲಿ ಬೇರೇನೇನು ದಂಧೆಗಳು ನಡೆಯುತ್ತವೋ… ಆದರೆ ಸಿನಿಮಾ ಮತ್ತು ಸೀರಿಯಲ್ ಜಗತ್ತನ್ನಾವರಿಸಿಕೊಂಡಿರೋ ಕೆಟ್ಟಾತಿ ಕೆಟ್ಟ ದಂಧೆಯೊಂದಕ್ಕಂತೂ ಈ ಜಾಗವೀಗ ಹೆಡ್ಡಾಫೀಸಿನಂತಾಗಿ ಹೋಗಿದೆ!

ಈ ಅಡ್ಡೆಯಲ್ಲಿ ರಾತ್ರಿಯಾಗುತ್ತಲೇ ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಹಣವಂತರ ಮಕ್ಕಳು ಬಂದು ಜಮೆಯಾಗುತ್ತಾರೆ. ಇಂಥಾ ಪ್ರದೇಶದಲ್ಲಿಯೇ ಕಿರುತೆರೆ ಮತ್ತು ಸಿನಿಮಾ ಸಹ ನಟಿಯರ ಸಖ್ಯ ಹೊಂದಿರೋ ಕೆಲ ಲೇಡಿ ಪಿಂಪ್‌ಗಳೂ ಕೂಡಾ ಝಾಂಡಾ ಊರಿಸುತ್ತಾರೆ. ಇಂಥವರು ನಾನಾ ನೆಪ ಹೇಳಿ ನಟನೆಯ ಆಸೆ ಹೊಂದಿರೋ ಹೆಣ್ಮಕ್ಕಳನ್ನು ಹಣವಂತರ ತೆಕ್ಕೆ ಸೇರಿಸಿ ಕಂತೆ ಕಂತೆ ಕಾಸೆಣಿಸಿಕೊಳ್ಳುವ ದುಷ್ಟತನ ಪ್ರದರ್ಶಿಸುತ್ತಾರೆ.

ಮತ್ತೆ ಕೆಲ ನಟೀ ಮಣಿಯರು ತಮ್ಮ ವ್ಯವಹಾರಕ್ಕೆ ಇಲ್ಲಿಯೇ ಮಿಕಗಳನ್ನು ಹುಡುಕಿಕೊಳ್ಳುತ್ತಾರೆ. ಈ ವತ್ತಿಗೆ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶ ಕೊಡೋದಾಗಿ ಹೇಳಿಕೊಳ್ಳೋ ಒಂದಷ್ಟು ಖದೀಮರು ಪಾಪದ ಹುಡುಗೀರನ್ನು ಹಣವಂತರ ರೂಮಿಗೆ ಬಿಟ್ಟು ಕಾಸೆಣೆಸಿಕೊಳ್ಳುವ ದಂಧೆಯೂ ಅವ್ಯಾಹತವಾಗಿಯೇ ನಡೆಯುತ್ತಿವೆ.
ಇಂಥಾ ಎಲ್ಲ ವ್ಯವಹಾರಗಳ ಕಾರಸ್ಥನವಾಗಿರೋ ಯುಬಿ ಸಿಟಿ ಹೀಗೆಯೇ ಮುಂದುವರೆದರೆ ಮತ್ತೊಂದಷ್ಟು ಅನಾಹುತಗಳಿಗೆ ರೂವಾರಿಯಾಗೋದಂತೂ ಖಚಿತ!

Leave a Reply

Your email address will not be published. Required fields are marked *


CAPTCHA Image
Reload Image