ಕನ್ನಡ ಚಿತ್ರಗಳನ್ನು ಆಗಾಗ ಹಾಲಿವುಡ್ ಚಿತ್ರಗಳಿಗೆ ಹೋಲಿಸಿ ಮಾತಾಡುವವರಿದ್ದಾರೆ. ಅಲ್ಲಿನ ಕಥೆ, ಗುಣಮಟ್ಟವನ್ನು ಹಾಡಿ ಹೊಗಳುವವರೂ ಇದ್ದಾರೆ. ಇದೀಗ ಅದೇ ಹಾಲಿವುಡ್ಡಿನ ಆಸುಪಾಸಿಂದಲೇ ಬಂದ ಅಪ್ಪಟ ಕನ್ನಡಿಗ ಹೇಮಂತ್ ‘ಉದ್ದಿಶ್ಯ ಚಿತ್ರದ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಕಥೆರಗಾರನೇ ಬರೆದಿರೋ ಕಥೆ ಹೊಂದಿರೋ ಈ ಚಿತ್ರ ಸದ್ಯ ಕರ್ನಾಟಕದ ತುಂಬಾ ಸಖತ್ ಸೌಂಡ್ ಮಾಡಲಾರಂಭಿಸಿದೆ.

ಕನ್ನಡದ ಮಟ್ಟಿಗೆ ಹೊಸತಾಗಿ ದಾಖಲಾಗಬಹುದಾದ ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ನಿರ್ದೇಶಕರಾಗಿ ಹೇಮಂತ್ ಕೃಷ್ಣಪ್ಪ ಅಡಿಯಿರಿಸಿದ್ದಾರೆ. ಮೂಕಲತಃ ಬೆಂಗಳೂರಿನವರೇ ಆದ ಹೇಮಂತ್ ವಾಸವಿದ್ದದ್ದು ಯುಎಸ್‌ನಲ್ಲಿ. ಕೆಲಸದ ನಿಮಿತ್ತವಾಗಿ ಅಲ್ಲಿಗೆ ತೆರಳಿಸದರೂ ಮಾಸ್ಟರ‍್ಸ್ ಪದವಿ ಪಡೆಯುತ್ತಲೇ ತಮ್ಮೊಳಗಿನ ಸಿನಿಮಾಸಕ್ತಿಯನ್ನು ಅಭಿವ್ಯಕ್ತಿಸುತ್ತಾ ಬಂದಿದ್ದವರು ಹೇಮಂತ್. ಹೊಸತೇನನ್ನೋ ಕಲಿಯಬೇಕು, ಹೊಸಾ ಬಗೆಯ ಚಿತ್ರವೊಂದನ್ನು ಕನ್ನಡದಲ್ಲಿ ಮಾಡಬೇಕೆಂಬ ಹಂಬಲದಿಂದಲೇ ಒಂದಷ್ಟು ಹಾಲಿವುಡ್ ಸಿನಿಮಾ ರೈಟರುಗಳ ಸಂಪರ್ಕವನ್ನೂ ಸಾಧಿಸಿಕೊಂಡಿದ್ದರು.

ಆ ಹಂತದಲ್ಲಿಯೇ ಕೆಲ ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡುತ್ತಾ, ಫೀಚರ್ ಫಿಲಂಗಳಲ್ಲಿ ನಟಿಸುತ್ತಲೇ ಮತ್ತೇನನ್ನೋ ಕಲಿಯುತ್ತಾ ಮುಂದುವರೆದ ಹೇಮಂತ್ ೨೦೧೪ರಲ್ಲಿ ಮನೆ ಮಂದಿಯ ಒತ್ತಾಸೆಯಿಂದ ಬೆಂಗಳೂರಿಗೆ ಮರಳಿದ್ದರು. ಆ ಹೊತ್ತಿಗಾಗಲೇ ಹಾಲಿವುಡ್ ಕಥೆಗಾರ ರಾಬರ್ಟ್ ಗ್ರಿಫಿನ್ ಅವರನ್ನು ಭೇಟಿಯಾಗಿ ಕಥೆಯೊಂದರತ್ತ ಕಣ್ಣಾಡಿಸಿದ್ದರು. ಅದು ಇಷ್ಟವಾದದ್ದೇ ಅವರ ಅನುಮತಿ ಪಡೆದು ಅದನ್ನು ಅನುವಾದ ಮಾಡೋ ಕೆಲಸಕ್ಕೆ ಚಾಲನೆ ನೀಡಿದ್ದ ಹೇಮಂತ್ ಅದಕ್ಕಾಗಿಯೇ ಮೀಸಲಿಟ್ಟಿದ್ದು ಒಂದೂವರೆ ವರ್ಷ. ಅದರ ಫಲವಾಗಿಯೇ ಉದ್ದಿಶ್ಯ ಚಿತ್ರ ತಯಾರಾಗಿದೆ!

ಹೀಗೆ ಬಲು ಆಸ್ಥೆಯಿಂದಲೇ ಹಾಲಿವುಡ್ ಕಥೆಯನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡ ಹೇಮಂತ್ ಕೃಷ್ಣಪ್ಪ, ಒಂದು ಅಚ್ಚುಕಟ್ಟಾದ ಂತಿeಭಾವಂತರ ತಂಡವನ್ನೂ ಕಟ್ಟಿಕೊಂಡಿದ್ದಾರೆ. ಹಲವಾರು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದ ಶೆಡ್ರಾಕ್ ಸಾಲೋಮನ್ ಈ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿಯೂ ಹೊರ ಹೊಮ್ಮಿದ್ದಾರೆ. ಕಲಾತ್ಮಕ ಚಿತ್ರಗಳ ಒಲವಿನ ಚೇತನ್ ರಘುರಾಮ್ ಈ ಚಿತ್ರಕ್ಕೆ ಕಲಾತ್ಮಕವಾಗಿಯೇ ಕ್ಯಾಮೆರಾ ಕಣ್ಣಾಗಿದ್ದಾರೆ. ಇಷ್ಟಲ್ಲದೇ ಹೇಮಂತ್ ಕೃಷ್ಣಪ್ಪ ಈ ಚಿತ್ರದಲ್ಲಿ ತಾವೇ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ.

ಕನ್ನಡದ ಮಟ್ಟಿಗೆ ಇದು ಅತ್ಯಂತ ಫ್ರೆಶ್ ಆದ ಸಿನಿಮಾವಾಗಿ ದಾಖಲಾಗಲಿದೆ ಎಂಬ ಭರವಸೆ ಹೊಂದಿರುವ ಹೇಮಂತ್ ಕೃಷ್ಣಪ್ಪ ಈ ಚಿತ್ರವನ್ನು ಇದೇ ತಿಂಗಳ ಮೂವತ್ತೊಂದರಂದು ತೆರೆಗಾಣಿಸಲು ನಿರ್ಧರಿಸಿದ್ದಾರೆ.

#

LEAVE A REPLY

Please enter your comment!
Please enter your name here

eleven − 7 =