One N Only Exclusive Cine Portal

ನಾಳೆ ಬಿಜೆಪಿಗೆ ಸೇರಲಿದ್ದಾರಾ ಬುದ್ಧಿವಂತ ಉಪ್ಪಿ?

ಉಪೇಂದ್ರ ಬಿಜೆಪಿ ಸೇರಲಿದ್ದಾರೆ… ಇಂಥಾದ್ದೊಂದು ವಿಚಾರವನ್ನು ಪ್ರಜ್ಞಾವಂತರು ಆರಂಭಿಕವಾಗಿಯೇ ಅಂದಾಜಿಸಿದ್ದರು. ಆದರೆ ಅಚಾನಕ್ಕಾಗಿ ಪ್ರಜಾಕೀಯ ಪಾರ್ಟಿ ಮಾಡಿದಾಗಲೂ ಇದು ಯಾವತ್ತಿದ್ದರೂ ಬಿಜೆಪಿ ಜೊತೆ ವಿಲೀನವಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಅದು ತುಸು ಬೇಗನೇ ಆಗುವ ಲಕ್ಷಣಗಳಿವೆ. ಉಪೇಂದ್ರ ನಾಳೆ ಅಧಿಕೃತವಾಗಿ ಬಿಜೆಪಿ ಸೇರಲಿರೋದು ಖಚಿತ ಎಂಬಂಥಾ ವಾತಾವರಣವಿದೆ.

ನಿನ್ನೆ ಉಪೇಂದ್ರ ಟ್ವೀಟ್ ಮಾಡಿ ಇದುವರೆಗಿನ ಪರೀಕ್ಷೆಯ ಫಲಿತಾಂಶ ಅರನೇ ತಾರೀಕು ಹೊರ ಬರಲಿದೆ ಎಂಬರ್ಥದಲ್ಲಿ ಬರೆದುಕೊಂಡಿದ್ದರು. ಆ ನಿಟ್ಟಿನಲ್ಲಿ ನೋಡ ಹೋದರೆ, ನಾಳೆ ಉಪೇಂದ್ರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಉಪೇಂದ್ರ ಆರಂಭ ಕಾಲದಿಂದಲೂ ಬಿಜೆಪಿ ಅಜೆಂಡಾದ ಆಜುಬಾಜಿನಲ್ಲಿಯೇ ತಮ್ಮ ಬುದ್ದಿವಂತಿಕೆಯ ವಿಚಾರಗಳನ್ನು ಹರಿ ಬಿಡುತ್ತಾ ಬಂದಿದ್ದವರು. ಇಂಥಾ ಉಪ್ಪಿ ರಾಜಕೀಯ ಸೇರುತ್ತಾರೆಂಬ ಮಾತು ಕೇಳಿ ಬಂದಾಕ್ಷಣ ಬಹುತೇಕರು ಬಿಜೆಪಿ ಸೇರುತ್ತಾರೆಂದೇ ಅಂದುಕೊಂಡಿದ್ದರು. ಆದರೆ ಅಚಾನಕಾಗಿ ಅವರು ಪ್ರಜಾಕೀಯ ಪಕ್ಷ ಶುರು ಮಾಡಿದಾಗಿನಿಂದಲೂ ಬಿಜೆಪಿ ಅವರನ್ನು ಸೆಳೆಯೋ ಪ್ರಯತ್ನವನ್ನು ಮಾಡಿಕೊಂಡೇ ಬಂದಿತ್ತು.

ಯಾಕೆಂದರೆ ಈ ಉಪೇಂದ್ರ ಅದೇನೇ ರಂಗು ರಂಗಾದ ಸ್ಕ್ರಿಪ್ಟು ರೆಡಿ ಮಾಡಿಕೊಂಡರೂ ಬಿಜೆಪಿ ಪಾಲಿನ ಮತಗಳೇ ಪ್ರಜಾಕೀಯದ ಪಾಲಾಗೋದು ಖಚಿತವಿತ್ತು. ಈ ಬಾರಿ ಶತಾಯಗತಾಯ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಇರಾದೆ ಹೊಂದಿರೋ ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಉಪೇಂದ್ರರನ್ನು ಸೆಳೆಯುವಲ್ಲಿ ಗೆಲುವು ಕಂಡಿದೆ.

ಒಂದು ಮೂಲದ ಪ್ರಕಾರ ಈಗಾಗಲೇ ಬಿಜೆಪಿ ಸೇರ್ಪಡೆಗೆ ಎಲ್ಲ ತಯಾರಿಯನ್ನೂ ಉಪ್ಪಿ ಮುಗಿಸಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಅನಂತ ಕುಮಾರ್ ಅವರ ಜೊತೆ ಮಾತಾಡಿದ್ದಾರೆ. ಈ ಬಗ್ಗೆ ಅಮಿತ್ ಶಾ ಕೂಡಾ ಅಸ್ತು ಅಂದಿದ್ದಾರೆ. ಈಗಾಗಲೇ ಟಿಕೆಟು ಹಂಚಿಕೆ ವಿಚಾರದಲ್ಲಿ ಪ್ರಜಾಕೀಯ ಪಕ್ಷದ ಮುಖಂಡರು ರೆಬೆಲ್ ಆಗಿರೋದೂ ಕೂಡಾ ಉಪ್ಪಿ ಬಿಜೆಪಿಯನ್ನು ಅಪ್ಪಿಕೊಳ್ಳಲು ಪ್ರಮುಖ ಕಾರಣ ಅನ್ನಲಾಗುತ್ತಿದೆ!

Leave a Reply

Your email address will not be published. Required fields are marked *


CAPTCHA Image
Reload Image