ಅದು 2015ರ ಸಮಯ. ಆಗ ನಟ ವಿಜಯ್ ದೇವರಕೊಂಡ ಅವರಿಗೆ 25ವರ್ಷ. ಮಿನಿಮಮ್ ಬ್ಯಾಲೆನ್ಸ್ 500 ರೂಪಾಯಿ ಇಲ್ಲವೆಂದು ಆಂಧ್ರ ಬ್ಯಾಂಕ್ ಅವರ ಬ್ಯಾಂಕ್ ಅಕೌಂಟ್ ಲಾಕ್ ಮಾಡಿತ್ತು. ಈಗ ಅವರಿಗೆ 26 ವರ್ಷ. ಚಿತ್ರವೊಂದಕ್ಕೆ 8ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರವರು! ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ಅವರ ಚಿತ್ರವೂ ಈಗ ಹತ್ತು ಕೋಟಿ ಮೀರಿ ಬಿಸ್ನೆಸ್ ಮಾಡುತ್ತದೆ.

ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವಿದೆ. ಫೋರ್ಬ್ಸ್ ಗುರುತಿಸಿರುವ 30 ವರ್ಷದೊಳಗಿನ ಭಾರತದ ಸಾಧಕರ ಪಟ್ಟಿಯಲ್ಲಿ ವಿಜಯ್ ದೇವರಕೊಂಡ ಅವರ ಹೆಸರಿದೆ! 2015 ರಲ್ಲಿ ನನಗೆ ಸರಿಯಾದ ಕೆಲಸ, ದುಡಿಮೆ ಇರಲಿಲ್ಲ. ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲವೆಂದು ಬ್ಯಾಂಕ್‌ನವರು ತಕರಾರು ತೆಗೆಯುತ್ತಿದ್ದರು. ಮತ್ತೊಂದೆಡೆ 30 ವರ್ಷದೊಳಗೆ ಸೆಟ್ಲ್ ಆಗಬೇಕೆಂದು ಅಪ್ಪ ತಾಕೀತು ಮಾಡಿದ್ದರು. ಈಗ ೨೦೧೯ರಲ್ಲಿ ಫೋರ್ಬ್ಸ್ ನನ್ನನ್ನು ಸಾಧಕನೆಂದು ಗುರುತಿಸಿದೆ. ಬೆಳವಣಿಗೆಯನ್ನು ಎಂಜಾಯ್ ಮಾಡಲು ಇದಕ್ಕಿಂತ ಸೂಕ್ತ ಕಾಲ ಮತ್ತಾವುದು!? ಎಂದು ಪ್ರಶ್ನಿಸುತ್ತಾರೆ ದಕ್ಷಿಣ ಭಾರತದ ಪ್ರಸ್ತುತ ಹಾಟ್ ಹೀರೋ ವಿಜಯ್ ದೇವರಕೊಂಡ.

ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಳ್ಳಲು ಸರ್ಕಸ್ ಮಾಡುತ್ತಿರುವವರ ಮಧ್ಯೆ ವಿಜಯ್ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಯುವನಟ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರೀಗ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಲವರ್ ಬಾಯ್. ’ಗೀತ ಗೋವಿಂದಂ’ ತೆಲುಗು ಚಿತ್ರದ ದೊಡ್ಡ ಯಶಸ್ಸಿನ ನಂತರ ಅವರ ಸ್ಟಾರ್‌ವ್ಯಾಲ್ಯೂ ಮತ್ತಷ್ಟು ಹೆಚ್ಚಿದೆ. ಅವರ ’ಡಿಯರ್ ಕಾಮ್ರೇಡ್’ ತೆರೆಗೆ ಸಿದ್ಧವಾಗುತ್ತಿದೆ. ಸದ್ಯ ಹೆಸರಿಡದ ರೊಮ್ಯಾಂಟಿಕ್ ಎಂಟರ್‌ಟೇನರ್ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ನಾಲ್ವರು ನಾಯಕಿಯರಿರುವ ಈ ಚಿತ್ರದ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ.

#

Arun Kumar

ಗೋಲ್ಡನ್ ಸ್ಟಾರ್‌ಗೆ ಸಲ್ಲು ಸೋದರನ ಸಾಥ್!

Previous article

’ಧಮಾಲ್’ ಸರಣಿಯ ’ಮುಂಗ್ಡಾ’ ಹಾಡಿಗೆ ಕುಣಿದ ಸೋನಾಕ್ಷಿ!

Next article

You may also like

Comments

Leave a reply

Your email address will not be published. Required fields are marked *