One N Only Exclusive Cine Portal

ಸೇತುಪತಿ ಚಿತ್ರದಲ್ಲಿ ನಟಿಸ್ತಾರಾ ಕಿಚ್ಚ ಸುದೀಪ್!

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ತಮಿಳುನಾಡಿನಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವವರು ವಿಜಯ್ ಸೇತುಪತಿ. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ಕೊಡುತ್ತಾ ಸಾಗಿರುವ ಸೇತುಪತಿಯ ಮುಂದಿನ ಚಿತ್ರ ‘ಸೇಯ್ ರಾ’. ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟರದ್ದೊಂದು ಮಹಾ ಸಂಗಮವಾಗಲಿರೋದು ಅಸಲೀ ಕುತೂಹಲ!

ಸುಂದರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಸೇಯ್ ರಾ ಚಿತ್ರವನ್ನು ರಾಮ್ ಚರಣ್ ತೇಜ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದ ತಾರಾಗಣಕ್ಕಾಗಿ ಇತ್ತೀಚೆಗೆ ಚೆನೈನಲ್ಲಿ ಆಡಿಷನ್ ಕೂಡಾ ನಡೆದಿತ್ತು. ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ಸೇತುಪತಿಗೆ ನಾಯಕಿಯಾಗಿ ತಮನ್ನಾ ನಟಿಸುತ್ತಿದ್ದಾಳೆ. ಈ ಹಿಂದೆ ಸೂಪರ್ ಹಿಟ್ ಆಗಿದ್ದ ಧರ್ಮ ದೊರೈ ಚಿತ್ರದಲ್ಲಿಯೂ ಮಿಲ್ಕಿ ಬ್ಯೂಟಿ ತಮನ್ನಾ ಸೇತುಪತಿಗೆ ನಾಯಕಿಯಾಗಿ ನಟಿಸಿದ್ದಳು.

ಇದೀಗ ಶುರುವಾಗಲಿರೋ ಸೇಯ್ ರಾ ಚಿತ್ರ ಒಂಥರಾ ಮಲ್ಟಿ ಸ್ಟಾರರ್ ಚಿತ್ರ. ಬೇರೆ ಭಾಷೆಗಳ ಸ್ಟಾರ್ ನಟರು ಇದರಲ್ಲಿ ನಟಿಸುತ್ತಿರೋದು ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡಿದೆ. ತೆಲುಗು ನಟ ಜಗಪತಿ ಬಾಬು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಭಿನ್ನವಾದ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ಕಿಚ್ಚಾ ಸುದೀಪ್ ಸೇರಿದಂತೆ ಯಾರ ಪಾತ್ರ ಏನೆಂಬುದರ ಬಗ್ಗೆ ಇನ್ನೂ ವಿವರ ಜಾಹೀರಾಗಿಲ್ಲ. ಆದರೆ ಸೇತುಪತಿ ಜೊತೆ ಕಿಚ್ಚ ನಟಿಸಲಿರೋದು ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರ!

Leave a Reply

Your email address will not be published. Required fields are marked *


CAPTCHA Image
Reload Image