ನಿಮ್ಮ ಈಗೋಗಳನ್ನು ಪಕ್ಕಕ್ಕಿಟ್ಟು ರಿಲೇಷನ್ ಶಿಪ್’ನ ಬಿಲ್ಡ್ ಮಾಡಿಕೊಳ್ಳಿ ಅಂತ ಹೇಳೋಕೆ ಹೊರಟಿರೋ ಸಿನಿಮಾ ಕಿಸ್.
ಕಿಸ್ ಗೆ ತಯಾರಿ ಹೇಗಿತ್ತು?
ಸೀರಿಯಲ್ ಕಂಪ್ಲೀಟ್ ಆಗಿ ಸಿನಿಮಾಗೆ ಬಂದಮೇಲೆ ಹೀರೋ ಆಗೋಕೆ ಡ್ಯಾನ್ಸ್ ಬರಬೇಕು. ಫೈಟ್ಸ್ ಬರಬೇಕು. ನಟನೆ ತುಂಬ ಡೈನಾಮಿಕ್ ಆಗಿ ಮಾಡ್ಬೇಕು. ಎಲ್ಲ ಥರನೂ ನನಗೆ ಟ್ರೇನ್ ಮಾಡೋಕ್ ಹೇಳಿದ್ದು ಅರ್ಜುನ್ ಸರ್. ಅವರು ಹೇಳಿದ ಮೇಲೆ ವರ್ಕ್ ಶಾಪ್ ಅಟೆಂಡ್ ಮಾಡ್ದೆ. ಸ್ಟಂಟ್ ಕ್ಲಾಸ್ ಗೆ ಸೇರಿಕೊಂಡೆ. ಇಮ್ರಾನ್ ಸರ್ ಡ್ಯಾನ್ಸ್ ಗೆ ಟ್ರೇನಿಂಗ್ ಕೊಟ್ಟರು. ಒಬ್ಬ ಆಕ್ಟರ್ ಆಗೋಕೆ ಏನ್ ಏನ್ ಬೇಕೋ ನನ್ನ ಕೈಲಿ ಅರ್ಜುನ್ ಸರ್ ಮಾಡಿಸಿದರು.
ಕಿಸ್ ಅವಕಾಶ ಸಿಕ್ಕಿದ್ದು ಹೇಗೆ?
ನಾನು ಈ ಸಿನಿಮಾ ಬರೋಕು ಮುಂಚೆ ಟೆಲಿವಿಷನ್ ನಲ್ಲಿ ಜೊತೆ ಜೊತೆಯಲಿ ಸೀರಿಯಲ್ ಮಾಡ್ದೆ. ಅದು ಕಂಪ್ಲೀಟ್ ಆದಮೇಲೆ ಸಿನಿಮಾಗೆ ಬರಬೇಕು ಅಂತ ತುಂಬಾ ಟ್ರೈ ಮಾಡ್ತಿದ್ದೆ. ನಾನು ಕಾಲೇಜ್ ಡೇಸ್ ನಲ್ಲಿದ್ದಾಗ ಅದ್ದೂರಿ ರಿಲೀಸ್ ಆಗಿತ್ತು. ನಾನು ಆ ಸಿನಿಮಾದ ತುಂಬ ದೊಡ್ಡ ಫ್ಯಾನ್. ಅದರಲ್ಲಿರೋ ಡ್ಯಾನ್ಸ್ ಆಗಿರಬಹುದು, ಫೈಟ್ಸ್ ಆಗಿರಬಹುದು…
ಒಂದ್ ಒಂದ್ ಸಿನಿಮಾ ಒಬ್ಬರಿಗೆ ಇಷ್ಟ ಆಗುತ್ತಲ್ಲ. ಹಾಗೆ ನನಗೆ ಅದ್ದೂರಿ ತುಂಬ ಇಷ್ಟ ಆಗಿತ್ತು. ಸೋ ಅರ್ಜುನ್ ಸರ್ ಜತೆ ಕೆಲಸ ಮಾಡ್ಬೇಕು ಅಂತ ಪ್ರತಿ ದಿನ ಅವರ ಮನೆ ಹತ್ತಿರ ಹೋಗ್ತಿದ್ದೆ. ಅವರನ್ನ ಮೀಟ್ ಮಾಡೋಕೆ.. ಆದರೆ ಅವರು ಸಿಗುತ್ತಿರಲಿಲ್ಲ. ಇಲ್ಲ ಅಂದ್ರು ಒಂದು ನಲವತ್ತರಿಂದ ನಲವತ್ತೈದು ಸಾರಿ ಅವರ ಮನೆ ಹತ್ತಿರ ಹೋಗಿದ್ದೆ. ಒಂದು ೧೦/೧೫ ದಿನ ಆದಮೇಲೆ ಅವರ ತಾಯಿ ನನ್ನ ಕರೆದು ವಿಚಾರಿಸಿದರು. ಆಗ ಅರ್ಜುನ್ ಸರ್ನ ಮೀಟ್ ಮಾಡ್ಬೇಕು ಸಂತ ಹೇಳ್ದೆ. ಆಗ ಅವರಮ್ಮ ದಿನಾ ಮನೆಗೆ ಕರೆದು ಟೀ ಕುಡಿಸಿ ಕಳುಹಿಸುತ್ತಿದ್ದರು. ಆಗೊಮ್ಮೆ ಅರ್ಜುನ್ ಸರ್ ಗೆ ಒಂದು ಸಾರಿ ನನ್ನ ಬಗ್ಗೆ ಹೇಳಿದ್ರು. ಅರ್ಜುನ್ ಸರ್ ಕರೆದು ಅಮ್ಮ ನಿನ್ ಬಗ್ಗೆ ಹೇಳಿದ್ದಾರೆ. ಆಡಿಷನ್ಗೆ ಬಾ ಅಂತ ಹೇಳಿದ್ರು. ಆಡಿಷನ್ ಗೂ ತುಂಬ ಜನ ಬಂದಿದ್ದರು. ಅಲ್ಲಿ ಆಡಿಷನ್ ನಲ್ಲಿ ಪಾರ್ಟಿಸಿಪೇಟ್ ಮಾಡಿ ಸಕ್ಸಸ್ ಆಗಿದ್ದರ ಜತೆಗೆ ಅಮ್ಮನ ರೆಕಮೆಂಡ್ ನಿಂದ ಫೈನಲಿ ಸೆಲೆಕ್ಟ್ ಆದೆ.
ಕಿಸ್ ಬಗ್ಗೆ ಹೇಳಿ
ನಮ್ಮ ಸಿನಿಮಾ ಕಿಸ್ ಬಂದು ಒಂದು ಕೌಟುಂಬಿಕ ಸಿನಿಮಾ. ಸಂಬಂಧಗಳ ಬಗ್ಗೆ ನಡುವಿನ ಬಾಂದವ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ವಿತ್ ಕಮರ್ಷಿಯಲ್ ಆ?ಯಸ್ಪೆಕ್ಸ್.. ಇಡೀ ಸಿನಿಮಾ ಬ್ಲೆಂಡ್ ಆಗಿದೆ. ನೋಡುವವರಿಗೆ ಎಲ್ಲೂ ಮುಜುಗರ ಅನ್ನಿಸೋಲ್ಲ. ೦.೧% ಕೂಡಾ ವಲ್ಗ್ಯಾರಿಟಿ ಇಲ್ಲ. ಸೆನ್ಸಾರ್ ಯು/ಎ ಸಿಕ್ಕಿದೆ. ಜೀರೋ ಕಟ್ಸ್ ಅಂಡ್ ನೋ ಮ್ಯೂಟ್ಸ್… ಅದರಲ್ಲೇ ನೀವು ಅರ್ಥ ಮಾಡ್ಕೋಬೇಕು. ಇವತ್ತು ಸ್ಟಾರ್ಟ್ ಆಗಿ ನಾಳೆ ಬ್ರೇಕ್ ಆಗೋ ಲವ್ ಮಧ್ಯೆ ಒಂದು ಗಟ್ಟಿಯಾಗಿ ನಿಲ್ಲುವ ಲವ್ ಸ್ಟೋರಿ. ಒಂದು ಹುಡುಗ ಹುಡುಗಿ ಲೈಫ್ ನಲ್ಲಿ ಯಾವುದೇ ಸಿಚುವೇಷನ್ ಬಂದ್ರು ಹೇಗೆ ಪ್ರೀತಿಸುತ್ತಾರೆ. ಒಂದು ಟ್ರೂ ಲವ್ ಒಬ್ಬರ ಮೇಲೆ ಬಂದ್ರೆ ಸಾಯೋವರೆಗೆ ಹೋಗಲ್ಲ ಅಂತ ಹೇಳೋ ಮೆಮೊರಬಲ್ ಸಿನಿಮಾ. ಇಂತಹ ಫ್ರೆಶ್ ಫೀಲ್ ಇರುವ ಸಿನಿಮಾವನ್ನು ಪ್ರತಿಯೊಬ್ಬರು ನೋಡಿ ಅವರ ಲೈಫ್ ಕರೆನ್ಟ್ ಮಾಡಿಕೊಳ್ಳಬಹುದು. ನನ್ನ ಪ್ರಕಾರ ಒಂದು ಹುಡುಗ ಹುಡುಗಿ ಸ್ಕೂಲ್ ನಲ್ಲಿ ಆಗಿರಬಹುದೋ ಕಾಲೇಜ್ ನಲ್ಲಿ ಆಗಿರಬಹುದು. ಲವ್ ಮಾಡಿರುತ್ತಾರೆ. ಈ ಸಿನಿಮಾ ನೋಡಿದಾಗ ಪ್ರತಿಯೊಂದು ಮೆಮೊರಿ ನೆನಪಾಗುತ್ತದೆ. ಇನ್ನು ಸಿನಿಮಾದಲ್ಲಿ ಡ್ಯಾನ್ಸ್ ಚೆನ್ನಾಗಿ ಬಂದಿದೆ. ನೀವು ಗೆಸ್ ಮಾಡೋಕು ಆಗಲ್ಲ. ಋಷಿಕೇಶ್ ನಲ್ಲಿ ೧೪೦೦ ಫೀಟ್ ಜಂಪ್ ಕೂಡ ಮಾಡಿದ್ದೀವಿ. ಆಲ್ ಮೋಸ್ಟ್ ಇದೊಂದು ರೋಲರ್ ಕೋಸ್ಟ್ ರೈಡ್ ಅಂತಾನೇ ಹೇಳಬಹುದು. ಯಾರ್ಯಾರಿಗೆ ಏನ್ ಏನ್ ಬೇಕೋ ಆ ಎಲಿಮೆಂಟ್ಸ್ ಎಲ್ಲ ಇದೆ. ಎಲ್ಲರೂ ಇದೇ ಸೆಪ್ಟೆಂಬರ್ ೨೭ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಮಿಸ್ ಮಾಡ್ದೆ ಕಿಸ್ ಮಾಡಿ..
ಈ ಸಿನಿಮಾದಲ್ಲಿ ಯಾರೊಟ್ಟಿಗೆಲ್ಲಾ ಕೆಲಸ ಮಾಡಿದ್ದೀರ?
ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದೆ. ಅಂದ್ರೆ ಶ್ರೀಲೀಲಾ ಇದ್ದಾರೆ. ಚಿಕ್ಕಣ್ಣ ಸರ್ ಇದ್ದಾರೆ. ದತ್ತಣ್ಣ ಸರ್ ಇದ್ದಾರೆ. ಸಾಧು ಸರ್ ಇದ್ದಾರೆ. ಅವಿನಾಶ್ ಸರ್ ಇದ್ದಾರೆ. ಭಾರ್ಗವಿ ಅಮ್ಮ ಇದ್ದಾರೆ. ಶೂಟಿಂಗ್ ಹೆಂಗಿತ್ತು ಅಂದ್ರೆ ಎಲ್ಲ ಫ್ರೆಂಡ್ಸ್ ಆಗ್ಬಿಟ್ಟಿದ್ವಿ. ಅದರಲ್ಲೂ ಇಡೀ ಸಿನಿಮಾ ನನ್ನ ಜತೆ ನನ್ನ ಬೆಸ್ಟ್ ಫ್ರೆಂಡ್ ಕ್ಯಾರೆಕ್ಟರ್ ಮಾಡ್ತಿರೋದು ಚಿಕ್ಕಣ್ಣ ಸರ್. ಅವರು ಸೆಟ್ ನಲ್ಲಿದ್ದರೆ ಎಲ್ಲರೂ ನಗುತ್ತಿದ್ದರು. ಅವರು ಅಷ್ಟು ಫನ್. ಯಾರೇ ಬೇಜಾರಾಗಿದ್ದರೂ ಕರೆದು ಕಾಮಿಡಿ ಮಾಡ್ತಿದ್ದರು. ಶೂಟ್ ಟೈಮ್ ನಲ್ಲೂ ತುಂಬಾ ನಕ್ಕ ಉದಾಹರಣೆಗಳು ಇದೆ. ಗೋವಾದಲ್ಲಂತೂ ಎಕ್ಸ್ಟ್ರಾರ್ಡಿನರಿ ಕಾಮಿಡಿ ಸೀನ್ಸ್ ಇದೆ. ನೀವೆ ಅರ್ಥ ಮಾಡಿಕೊಳ್ಳಬಹುದು. ಎಷ್ಟು ಫನ್ ಇರಬಹುದು ಸಿನಿಮಾದಲ್ಲಿ ಅಂತ. ಅವರಿಂದ ತುಂಬಾ ಕಲಿತಿದ್ದೇನೆ. ಕಾಮಿಡಿ ಆಗಿರಬಹುದು. ಕಾಮಿಡಿ ಟೈಮಿಂಗ್ ಆಗಿರಬಹುದು. ಇನ್ನು ಸಾಧು ಸರ್.. ಅವರ ಬಗ್ಗೆ ಮಾತನಾಡುವ ಹಾಗಿಲ್ಲ. ಅದ್ಬುತ. ಇನ್ನು ಭಾರ್ಗವಿ ನಾರಾಯಣಮ್ಮ.. ಅವರ ಜತೆ ನಾನು ಸೀರಿಯಲ್ ನಲ್ಲಿ ಮಾಡಿದ್ದೆ. ನಾನು ಅವರನ್ನು ಅಜ್ಜಿ ಅಂತ ಮುಂಚೆಯಿಂದಲೂ ಕರೆಯುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಬೇರೆ ರೀತಿಯ ಬಾಂಡಿಂಗ್ ಇತ್ತು. ಇನ್ನು ದತ್ತಣ್ಣ ಸರ್ ಗೆ ಅಷ್ಟು ಯೇಜ್ ಆಗಿದ್ದರೂ ಅವರ ಜತೆ ಮಾತನಾಡುತ್ತಿದ್ದರೂ ನಾನು ನನ್ನ ಚಡ್ಡಿ ಬಡ್ಡಿ ಮಾತನಾಡಿದ ಫೀಲ್ ಆಗತ್ತೆ. ಅಷ್ಟು ಕ್ಯೂಟ್ ಅವರು. ಅವಿನಾಶ್ ಸರ್ ಸಿನಿಮಾದಲ್ಲಿ ನನ್ನ ಫಾದರ್ ರೋಲ್ ಪ್ಲೇ ಮಾಡ್ತಿದ್ದಾರೆ. ತುಂಬ ಸೆನ್ಸಿಟೀವ್ ಆಗಿ ಸೂಪರ್ ಆಗಿ ಆ?ಯಕ್ಟ್ ಮಾಡಿದ್ದಾರೆ. ಇಷ್ಟು ದೊಡ್ಡ ದಿಗ್ಗಜರ ಮುಂದೆ ನಾನಿನ್ನು ಹೊಸಬ.ಇವರೆಲ್ಲರಿಂದ ತುಂಬ ಕಲ್ತಿದ್ದೀನಿ.
ಒಟ್ಟಾರೆ ಕಿಸ್ ಅಂದ್ರೆ ಏನು?
ಕಿಸ್ ಅಂದ್ರೆ ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್. ಈ ಜನರೇಷನ್ ನಲ್ಲಿ ಹೇಗಿದೆ ಅಂದ್ರೆ ಹುಡುಗ ಹುಡುಗಿ ಹೊರತಾಗಿ ಯಾವುದೇ ರಿಲೇಷನ್ ಶಿಪ್ ಆಗಿರಬಹುದು ಯಾರೂ ಡೇಲಿ ಹ್ಯಾಪಿ ಆಗಿ ಇರೋಲ್ಲ. ಒನ್ ಸ್ಮಾಲ್ ಈಗೋ ಕ್ಲಾಷಸ್ ಇರುತ್ತೆ. ಅಥವಾ ಒಂದು ಮಿಸ್ ಅಂಡರ್ ಸ್ಟಾಡಿಂಗ್ ಬರಬಹುದು. ಕೆಲವು ಸಾರಿ ಏನಾಗುತ್ತೆ. ಚಿಕ್ಕದನ್ನು ಬೆಳೆಸಿ ಬೆಳೆಸಿ ಆ ರಿಲೇಷನ್ನೇ ಹಾಳಾಗುತ್ತೆ. ಕೀಪ್ ಇಟ್ ಸ್ಟಾರ್ಟ್ ಅಂಡ್ ಸ್ವೀಟ್ ಆಗಿ ನಿಮ್ಮ ಈಗೋಗಳನ್ನು ಪಕ್ಕಕ್ಕಿಟ್ಟು ರಿಲೇಷನ್ ಶಿಪ್’ನ ಬಿಲ್ಡ್ ಮಾಡಿಕೊಳ್ಳಿ ಅಂತ ಹೇಳೋಕೆ ಹೊರಟಿರೋ ಸಿನಿಮಾ ಕಿಸ್. ಈ ಸಿನಿಮಾದಲ್ಲಿ ಒಂದು ಹುಡುಗ ಹುಡುಗೀಗಾಗಿ ಏನೆಲ್ಲಾ ಎಕ್ಸ್ ಸ್ಟ್ರೀಮ್ ಆಗಿ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾನೆ. ಪ್ರತಿಯೊಬ್ಬ ಹುಡುಗಿ ಕಿಸ್ ನೋಡ್ದಾಗ ನನಗೂ ಈ ತರ ಹುಡುಗ ಇರಬೇಕಿತ್ತು ಅನ್ನಿಸುತ್ತೆ. ಹುಡುಗರಿಗೆ ಆ ಹುಡುಗಿಯ ಗುಣ ಇಷ್ಟ ಆಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಇವತ್ತು ಸ್ಟಾರ್ಟ್ ಆಗಿ ನಾಳೆಗೆ ಮುಗಿಯೋ ಫಾಸ್ಟ್ ಫುಡ್ ಲವ್ ಸ್ಟೋರಿ ಮಧ್ಯೆ ಕಿಸ್ ಒಂದು ಮನೆ ಊಟ. ಸಂಬಂಧಗಳು ಅಂದ್ರೇನು? ಟ್ರೂ ಲವ್ ಅಂದ್ರೇನು ಅಂತ ತೋರಿಸಿರುವ ಸಿನಿಮಾ. ಇದನ್ನು ಆರು ವರ್ಷದ ಮಗುವಿನಿಂದ ಹಿಡಿದು ಅರವತ್ತು ವರ್ಷದ ಹಿರಿಯರವರೆಗೂ ಮುಜುಗರ ಇಲ್ಲದೇ ನೋಡಬಹುದು. ಇದು ಡೇಲಿ ಊಟ ಅಲ್ಲ ಹಬ್ಬದ ಊಟ.
ಕನಸಿನ ರಾಣಿ ಹೇಗಿರಬೇಕು
ಸುಮಾರು ಹತ್ತು ವರ್ಷದಿಂದ ಒಂದೇ ಹುಡುಗಿ ಕನಸಿಗೆ ಬರುತ್ತಿದ್ದಾಳೆ. ಸ್ವಲ್ಪ ಕಪ್ಪಗಿದ್ದಾಳೆ. ತುಂಬ ಪ್ರಯತ್ನ ಪಡ್ತಿದ್ದೀನಿ. ಯಾವಾಗ ಭೇಟಿ ಆಗ್ತೀನಿ ಅಂತ ಗೊತ್ತಿಲ್ಲ. ಮುಂದೆ ಮದುವೆ ಆಗೋ ಹುಡುಗಿ ಒಳ್ಳೆ ಗುಣ ಇರೋಳಾಗಿರಬೇಕು. ಹುಡುಗರು ಅಷ್ಟೇ ನಿರೀಕ್ಷೆ ಮಾಡೋದು…
No Comment! Be the first one.