One N Only Exclusive Cine Portal

ಮದುವೆ ಗೌಜಿನಿಂದ ಪಿಚ್‌ಗೆ ಮರಳೋ ಮನಸು ಮಾಡಿದ ವಿರಾಟ್ ಕೋಹ್ಲಿ!

 

ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ದೂರದ ಲಂಡನ್ನಿನಲ್ಲಿ ಮದುವೆಯಾದರೂ ಇಂಡಿಯಾದ ಮಾಧ್ಯಮಗಳ ಪಾಲಿಗದು ಇಂಟರ್ ನ್ಯಾಷನಲ್ ನ್ಯೂಸ್ ಆಗಿಯೇ ಕಂಡಿತ್ತು. ಈ ಜೋಡಿ ನಿಂತಲ್ಲಿ ಕುಂತಲ್ಲಿ ಕ್ಯಾಮೆರಾ ಹಿಡಿದದ್ದೇ ಹಿಡಿದದ್ದು. ಸುದ್ದಿ ಮಾಡಿದ್ದೇ ಮಾಡಿದ್ದು.
ಇದರಿಂದ ಮಾಧ್ಯಮ ಮಂದಿಗೆ ದಣಿವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅನುಷ್ಕಾ ಮತ್ತು ವಿರಾಟ್ ಜೋಡಿಗಂತೂ ಸುಸ್ತಾದಂತಿದೆ. ಆದ್ದರಿಂದಲೇ ವಾರದೊಪ್ಪತ್ತಿನಲ್ಲೇ ಮತ್ತೆ ತಮ್ಮ ಮೂಲ ಕೆಲಸ ಕಾರ್ಯಗಳತ್ತ ಮರಳೋ ಸೂಚನೆಯನ್ನು ಈ ಜೋಡಿ ನೀಡಿದೆ!
ಎರಡೆರಡು ಸುತ್ತಿನ ರಿಸೆಪ್ಷನ್ ಮುಗಿಸಿಕೊಂಡು ಸಣ್ಣದಾಗೊಂದು ಹನಿಮೂನ್ ಮೂಡಲ್ಲಿ ವಿದೇಶಕ್ಕೆ ಹಾರಿದ್ದ ಈ ಜೋಡಿ ಸದ್ಯ ದಕ್ಷಿಣಾಫ್ರಿಕಾದಲ್ಲಿ ಬೀಡು ಬಿಟ್ಟಿತ್ತು. ಇದೀಗ ಅಲ್ಲಿಂದ ಹೊರಟಿರೋ ಈ ಜೋಡಿ ಇನ್ನೊಂದು ವಾರದಲ್ಲಿಯೇ ಭಾರತಕ್ಕೆ ಬಂದಿಳಿಯಲಿದೆಯಂತೆ. ಆ ನಂತರ ವಿರಾಟ್ ಕ್ರಿಕೆಟ್ ಪಿಚ್‌ಗೆ ಮರಳಿದರೆ ಅನುಷ್ಕಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಲಿದ್ದಾರಂತೆ.


ಮದುವೆ ಮುಗಿಸಿಕೊಂಡು ಬಂದೇಟಿಗೆ ಅನುಷ್ಕಾ ನಟಿಸಲಿರೋ ಚಿತ್ರ ಆನಂದ್ ರೈ ನಿರ್ದೇಶನದಲ್ಲ್ಲಿ ಮೂಡಿ ಬರಲಿದೆ. ಇದರಲ್ಲಿ ಶಾರೂಕ್ ಖಾನ್ ನಾಯಕನಾಗಿರಲಿದ್ದಾರೆ. ಅಲ್ಲಿಗೆ ಮದುವೆಯ ನಂತರವೂ ಅನುಷ್ಕಾ ಹೀರೋಯಿನ್ ಆಗಿ ಮಮುಂದುವರೆಯೋ ಸೂಚನೆ ಸಿಕ್ಕಿರೋದರಿಂದ ಆಕೆಯ ಅಭಿಮಾನಿಗಳು ಖುಷಿಯಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image