Connect with us

ಅಭಿಮಾನಿ ದೇವ್ರು

ಜೆಡಿಎಸ್‌ಗೆ ಸಾಥ್ ನೀಡಿತು ಸಾಹಸಸಿಂಹನ ಅಭಿಮಾನಿ ಪಡೆ!

Published

on

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳ ವಿಷ್ಣು ಸೇನಾ ಸಮಿತಿಯೂ ಸೇರಿದಂತೆ ಸಮಸ್ತ ವಿಷ್ಣು ಅಭಿಮಾನಿಗಳು ಸರಿಯಾದೊಂದು ನಿರ್ಧಾರ ತಳೆದಿದ್ದಾರೆ. ವಿಷ್ಣು ಸೇನಾ ಸಮಿತಿಯ ಮುಖ್ಯಸ್ಥರಾದ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವರು ಲಾಗಾಯ್ತಿನಿಂದಲೂ ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ನಿಸ್ವಾರ್ಥವಾಗಿ ಪ್ರಯತ್ನಿಸಿದ್ದರು. ಆಳೋ ಜನರ ಗಮನ ಸೆಳೆದು ಮನವೊಲಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರವಿತ್ತು.

ಇದೀಗ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿರುವ ಕುಮಾರಸ್ವಾಮಿಯವರು ವಿಷ್ಣು ಸ್ಮಾರಕದ ಬಗ್ಗೆ ಪ್ರಾಮಾಣಿಕವಾದೊಂದು ನಿಲುವು ಪ್ರಕಟಿಸಿದ್ದಾರೆ. ವಿಷ್ಣುವರ್ಧನ್ ಸ್ಮಾರಕದ ವಿಚಾರವಾಗಿ ಎಲ್ಲರನ್ನೂ ಕೂರಿಸಿಕೊಂಡು ಮಾತುಕತೆ ನಡೆಸಿ ಎಲ್ಲವವನ್ನೂ ಪರಿಹರಿಸಿ ಅಭಿಮಾನಿಗಳ ಒತ್ತಾಸೆಯಂತೆಯೇ ನಡೆದುಕೊಳ್ಳುವುದಾಗಿ ಕುಮಾರ ಸ್ವಾಮಿ ಘೋಷಣೆ ಮಾಡಿದ್ದಾರೆ. ಇದು ಕೇವಲ ಬಾಯಿ ಮಾತಿಗೆ ಸೀಮಿತವಾಗಿಲ್ಲ. ಜೆಡಿಎಸ್ ಪಕ್ಷದ ಈ ಚುನಾವಣಾ ಪ್ರಣಾಳಿಕೆಯಲ್ಲಿಯೂ ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಕುಮಾರಸ್ವಾಮಿಯವರು ಇಚ್ಚಾಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಾಹಸ ಸಿಂಹನ ಅಭಿಮಾನಿಗಳು ಖುಷಿಯಾಗಲು ಮತ್ತೇನು ಬೇಕು?

ಇದುವರೆಗೂ ಆಳುವ ಜನರ ಉಡಾಫೆಗಳನ್ನು ಕಂಡು ರೋಸತ್ತು ಹೋಗಿರುವ ಸಾಹಸಸಿಂಹನ ಅಭಿಮಾನಿಗಳು ಕುಮಾರಸ್ವಾಮಿಯವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಬಾರಿ ಇಡೀ ಕರ್ನಾಟಕದ ಸಮಸ್ತ ವಿಷ್ಣು ಅಭಿಮಾನಿಗಳೂ ಕೂಡಾ ಜೆಡಿಎಸ್‌ಗೆ ಬೆಂಬಲ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ಈ ಹಿಂದೆಯೇ ವಿಷ್ಣು ಸೇನಾ ಸಮಿತಿ ಸಾಹಸಸಿಂಹನ ಸ್ಮಾರಕ ನಿರ್ಮಾಣಕ್ಕೆ ಸಹಕರಿಸುವ ಪಕ್ಷಕ್ಕೇ ಬೆಂಬಲ ನೀಡೋದಾಗಿ ಘೋಶಿಸಿತ್ತು. ಇದೀಗ ಕುಮಾರಸ್ವಾಮಿ ಆ ಭರವಸೆ ನೀಡಿದ್ದಾರೆ. ವಿಷ್ಣು ಅಭಿಮಾನಿಗಳು ಆಡಿದ ಮಾತಿಗೆ ತಕ್ಕುದಾಗಿಯೇ ನಡೆದುಕೊಂಡಿದ್ದಾರೆ.

ಕುಮಾರಸ್ವಾಮಿಯವರು ಇಂಥಾದ್ದೊಂದು ಅಚಲ ನಿರ್ಧಾರ ತಳೆದಿರುವುದರ ಹಿಂದೆ ವಿಷ್ಣು ಸೇನಾ ಸಮಿತಿಯ ಶ್ರಮವೂ ಹೆಚ್ಚಿನದ್ದಿದೆ. ಈ ಹಿಂದೆಯೇ ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಅವರು ಕುಮಾರಸ್ವಾಮಿಯವರನ್ನು ಭೇಟಿಯಾಗಿ ವಸ್ತು ಸ್ಥಿತಿಯನ್ನು ವಿವರಿಸಿದ್ದರು. ನಂತರ ವಿಷ್ಣು ಸೇನಾ ಸಮಿತಿಯ ಬೆಂಗಳೂರು ನಗರಾಧ್ಯಕ್ಷರು ಮತ್ತು ಬಿಟಿಎಂ ಲೇಔಟ್ ಜೆಡಿಎಸ್‌ನ ಯುವ ಅಧ್ಯಕ್ಷರೂ ಆದ ಯದುನಂದನ್ ಗೌಡ ಅವರೂ ಕೂಡಾ ಕುಮಾರಸ್ವಾಮಿಯವರ ಮನ ಒಲಿಸಿದ್ದರು. ಇದೆಲ್ಲದರ ಪರಿಣಾಮ ಮತ್ತು ಇಡೀ ಕರ್ನಾಟಕದ ವಿಷ್ಣು ಅಭಿಮಾನಿ ಸಂಘಗಳ ಒಗ್ಗಟ್ಟು ಮತ್ತು ಸಾಹಸ ಸಿಂಹನ ಅಭಿಮಾನಿಗಳ ಮನದಾಳದ ಇಂಗಿತದ ಪರಿಣಾಮವಾಗಿ ಸ್ಮಾರಕದ ಬಗ್ಗೆ ಅಚಲವಾದ ರಾಜಕೀಯ ನಿರ್ಧಾರವೊಂದು ಜೆಡಿಎಸ್ ಕಡೆಯಿಂದ ರವಾನೆಯಾಗಿದೆ.

ಹಾಗಾದರೆ ಭಾರತೀ ವಿಷ್ಣುವರ್ಧನ್ ಬೇಡಿಕೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗುತ್ತದಾ ಅಥವಾ ಈಗಿರುವ ವಿಷ್ಣು ಸಮಾಧಿ ಜಾಗದಲ್ಲಿಯೇ ನಿರ್ಮಾಣವಾಗುತ್ತದಾ ಎಂಬುದು ಸಹಜ ಪ್ರಶ್ನೆ. ಈ ಬಗ್ಗೆ ಅಭಿಮಾನಿಗಳು ಮೈಸೂರು ಸೇರಿದಂತೆ ಎಲ್ಲಿ ಯಾರೇನೇ ಮಾಡಿಕೊಂಡರೂ ಈಗಿರುವ ಸಮಾಧಿಯನ್ನು ಪುಣ್ಯಭೂಮಿ ಅಂತ ಘೋಷಣೆ ಮಾಡಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ. ಈ ಒತ್ತಾಸೆಗೆ ಅನುಗುಣವಾಗಿಯೇ ನಡೆದುಕೊಳ್ಳುವ ಭರವಸೆಯೂ ಜೆಡಿಎಸ್ ಪ್ರಣಾಳಿಕೆಯಲ್ಲಿ ಸಿಕ್ಕಿದೆ.

ವಿಷ್ಣುವರ್ಧನ್ ಮರೆಯಾದ ಮೇಲೆ ಮೂವರು ಮುಖ್ಯಮಂತ್ರಿಗಳು ರಾಜ್ಯಭಾರ ನಡೆಸಿದ್ದಾರೆ. ಆದರೆ ಯಾರೂ ಕೂಡಾ ವಿಷ್ಣು ಸ್ಮಾರಕವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಭಿಮಾನಿಗಳ ಇಂಗಿತವನ್ನು ಉಡಾಫೆಯಾಗಿ ತೆಗೆದುಕೊಂಡು ಅವಮಾನಿಸಿದವರೇ ಹೆಚ್ಚು. ಇಂಥಾದ್ದರ ನಡುವೆ ಕುಮಾರಸ್ವಾಮಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು ಜೆಡಿಎಸ್‌ಗೆ ಬೆಂಬಲ ನೀಡಿರೋದರಿಂದ ಅದು ಕರ್ನಾಟಕದ ರಾಜಕೀಯ ಚಿತ್ರಣದ ಮೇಲೆಯೂ ಖಂಡಿತವಾಗಿ ಪರಿಣಾಮ ಬೀರಲಿದೆ!

 

Continue Reading
Click to comment

Leave a Reply

Your email address will not be published. Required fields are marked *

ಅಭಿಮಾನಿ ದೇವ್ರು

ಕೊಡಗು ಜನರ ಕಂಬನಿಗೆ ಮಿಡಿದ ದರ್ಶನ್!

Published

on

ಕಣ್ಣೆದುರೇ ಕೊಡಗು ಸೀಮೆಯಲ್ಲಾಗುತ್ತಿರುವ ಪ್ರಾಕೃತಿಕ ದುರಂತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರರಂಗವೂ ಮಿಡಿದಿದೆ. ತಾರೆಯರೆಲ್ಲ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕೊಡಗಿನ ಜನರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನೂ ಕಳೆದುಕೊಂಡಿರೋ ಕೊಡಗಿನ ಜನರಿಗೆ ಆ ಕ್ಷಣಕ್ಕೆ ಅಗತ್ಯವಿರುವ ಆಹಾರ, ದಿನ ಬಳಕೆಯ ವಸ್ತುಗಳು ಸೇರಿದಂತೆ ಏನೇನೆಲ್ಲ ಸಾಧ್ಯವೋ ಅದನ್ನೆಲ್ಲ ಪೂರೈಕೆ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಈ ಮೂಲಕ ದರ್ಶನ್ ಭಯಾನಕವಾದ ಪ್ರಾಕೃತಿಕ ದುರಂತದಿಂದ ಕಂಗೆಟ್ಟಿರುವ ಕೊಡಗಿನ ಜನತೆಯ ಸಂಕಷ್ಟಕ್ಕೆ ಮಿಡಿದಿದ್ದಾರೆ. ದರ್ಶನ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುವ ಅಭಿಮಾನಿಗಳು ಖಂಡಿತವಾಗಿಯೂ ಈ ಮನವಿಯೆ ಮಿಡಿಯದಿರಲಾರರು. ದರ್ಶನ್ ಅಭಿಮಾನಿಗಳೆಲ್ಲ ಮನಸು ಮಾಡಿದರೆ ಖಂಡಿತವಾಗಿಯೂ ಕೊಡಗು ಜನರ ಒಂದಷ್ಟಾದರೂ ಹಸಿವು ನೀಗುತ್ತದೆ. ಪ್ರತೀ ಕ್ಷಣವೂ ಕುಸಿಯುತ್ತಿರುವ ಪ್ರದೇಶದಲ್ಲಿಯೇ ಜೀವದ ಹಂಗು ತೊರೆದು ಕಾರ್ಯಾಚರಣೆಗಿಳಿದಿರುವ ಎಲ್ಲ ಮಾನವೀಯ ಮನಸುಗಳಿಗೂ ಮತ್ತಷ್ಟು ಕಸುವು ಸಿಕ್ಕಂತಾಗುತ್ತದೆ.

ಇಂದು ಬೆಳಿಗ್ಗೆ ‘ಡಿ ಕಂಪೆನಿಯ ಸದಸ್ಯರು ಮತ್ತು ದರ್ಶನ್ ಅವರ ಮ್ಯಾನೇಜರ್ ಸೀನಣ್ಣ ಸೇರಿದಂತೆ ಒಂದಷ್ಟು ಜನ ಕೊಡಗಿಗೆ ಹೋಗಿ ಒಂದು ಟ್ರಕ್ ಸಾಮಗ್ರಿಗಳನ್ನು ಇಳಿಸಿದ್ದಾರೆ. ಸರಿಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ರುಪಾಯಿ ಬೆಲೆ ಬಾಳುವ ಪದಾರ್ಥಗಳು ಇದರಲ್ಲಿವೆ.


ಹೀಗೆ… ಅಭಿಮಾನಿಗಳನ್ನು ನೊಂದ ಜನರ ನೆರವಿಗೆ ಧಾವಿಸುವಂತೆ ಪ್ರೇರೇಪಿಸುವ ಮೂಲಕ ದರ್ಶನ್ ನಿಜಕ್ಕೂ ಮಾದರಿಯಾಗಿದ್ದಾರೆ.

Continue Reading

ಅಭಿಮಾನಿ ದೇವ್ರು

ಕನ್ನಡಿಗರೆಲ್ಲರ ಕಣ್ಣು ತೆರೆಸುವಂಥಾ ಕಿರುಚಿತ್ರ ವೈರಲ್ ಆಯ್ತು!

Published

on

ಇಲ್ಲಿದೆ ಲಿಂಕ್

https://m.facebook.com/story.php?story_fbid=2189506438005734&id=1694769344146115

ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಿಲ್ಲ… ಹೀಗೊಂದು ಆರೋಪಕ್ಕೆ ಬಹಳಷ್ಟು ವಯಸಾಗಿದೆ. ಆದರೆ ಇದರಲ್ಲಿ ನಮ್ಮ ಪಾಲೆಷ್ಟು ಅಂತ ಮನಸು ಮುಟ್ಟಿಕೊಂಡು ಕೇಳಿನೋಡುವ ವ್ಯವಧಾನ ಕನ್ನಡಿಗರಾದ ನಮಗೆಲ್ಲ ಇರುವುದಿಲ್ಲ. ಆದರೀಗ ಫೇಸ್‌ಬುಕ್ಕಿನಲ್ಲಿ ವೈರಲ್ ಆಗಿರೋ ಕಿರುಚಿತ್ರವೊಂದು ಅಂಥಾ ಸಂದರ್ಭ ಸೃಷ್ಟಿಸಿ ಬಿಟ್ಟಿದೆ.

`ಕನ್ನಡ ಸಾಮಾನ್ಯವಲ್ಲ, ವಿಶೇಷ. ಕಲಿಸುವ ಅಗತ್ಯವಿಲ್ಲ ಕಲಿಯುತ್ತಾರೆ’ ಎಂಬ ಒಕ್ಕಣೆಯಿರುವ ಈ ಕಿರು ಚಿತ್ರ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಬಿಡುಗಡೆಯಾದ ತುಸು ಸಮಯದಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ. ಇದು ಬರೀ ಅಂಕಿಸಂಖ್ಯೆಗಳ ದಾಖಲೆಗಷ್ಟೇ ಸೀಮಿತವಾಗಿದ್ದರೆ ಜನರಿಂದ ಈ ಥರದ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಅದು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಕನ್ನಡವನ್ನು ಬೇರೆ ರಾಜ್ಯದವರೂ ಕಲಿಯುವಂತೆ ಮಾಡೋದು ಹೇಗೆಂಬ ಕಾರ್ಯಗತ ಉತ್ತರವೂ ಇದರಲ್ಲಿದೆ!

ಪರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವುದಿಲ್ಲ ಅಂತ ಬಾಯಿ ಬಡಿದುಕೊಂಡರೆ, ಬಾಷಣ ಬಜಾಯಿಸಿದರೆ ಆಗೋ ಪರಿಣಾಮ ಏನೂ ಇಲ್ಲ. ಅದಕ್ಕೆ ಕನ್ನಡಿಗರ ಮನಸ್ಥಿತಿ ಬದಲಾಗಬೇಕು. ನಿತ್ಯ ವ್ಯವಹಾರ ನಡೆಯೋ ಜಾಗದಲ್ಲಿ ಮನ್ವಂತರವಾಗಬೇಕೆಂಬ ವಿಚಾರವನ್ನು ಈ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದೆ.

ಒಂದು ಹಾಲಿನ ಬೂತಿನ ವಾತಾವರಣದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಪರ ರಾಜ್ಯಗಳ ಗ್ರಾಹಕರು ಬಂದು ಅವರವರ ಭಾಷೆಯಲ್ಲಿ ಮಾತಾಡಿದರೂ ಕನ್ನಡದಲ್ಲಿಯೇ ವ್ಯವಹರಿಸುತ್ತಾ, ಅವರೂ ಕನ್ನಡ ಮಾತಾಡಲಾರಂಭಿಸಿದಾಗ ಉಚಿತವಾಗಿಯೇ ಹಾಲು ಕೊಟ್ಟು ಪ್ರೋತ್ಸಾಹಿಸೋ ಅಂಗಡಿ ಮಾಲೀಕ ಕನ್ನಡಿಗರೆಲ್ಲರಿಗೂ ಮಾದರಿಯಾಗುತ್ತಾನೆ. ಪರಭಾಷೆಯವರು ಅವರ ಭಾಷೆಯಲ್ಲಿಯೇ ಮಾತಾಡಿದರೂ ಪ್ರತಿಯಾಗಿ ಕನ್ನಡದಲ್ಲೇ ಮಾತಾಡಿದರೆ ಕನ್ನಡ ಕಲಿತೇ ಕಲಿಯುತ್ತಾರೆಂಬ ಸರಳ ಸೂತ್ರವನ್ನು ಈ ಕಿರು ಚಿತ್ರ ಪರಿಣಾಮಕಾರಿಯಾಗಿ ಜಾಹೀರು ಮಾಡಿದೆ. ರೂಪೇಶ್ ರಾಜಣ್ಣ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದರು. ಅದೀಗ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ.

ಬೇರೆ ಭಾಷೆಯಲ್ಲಿ ದಾರಿ ಕೇಳಿದರೂ ಅವರ ಭಾಷೆಯಲ್ಲೇ ಹೇಳಿ ಬಿಡುವ ಔದಾರ್ಯ ಕನ್ನಡಿಗರದ್ದು. ಅಂಗಡಿಗಳಂಥ ಪ್ರದೇಶಗಳಲ್ಲಿ ವ್ಯಾಪಾರಿ ಬುದ್ಧಿಯೂ ಪರಭಾಷಿಕರು ಕನ್ನಡ ಕಲಿಯದಂತೆ ತಡೆಯುತ್ತಿವೆ. ಇಂಥಾ ಕೊರತೆಗಳನ್ನೆಲ್ಲ ನೀಗಿಸಿ ಕನ್ನಡವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಈ ಕಿರು ಚಿತ್ರ ಗಮನ ಸೆಳೆಯುತ್ತದೆ. ಆದ್ದರಿಂದಲೇ ಇದಕ್ಕೆ ಭಾರೀ ಪ್ರತಿಕ್ರಿಯೆಗಳೂ ಸಿಕ್ಕಿವೆ. ಶ್ರೀನಿವಾಸ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಕಿರುತ್ರಕ್ಕೆ ಅಭಿಮಾನ್ ಹಾಡಿದ್ದಾರೆ. ಅಭಿಷೇಕ್ ರಾಯ್ ಸಂಗೀತ ನೀಡಿದ್ದಾರೆ, ರಾಕೇಶ್ ರಾಘವನ್ ಸಂಭಾಷಣೆ ಬರೆದಿದ್ದಾರೆ. ಪ್ರಧಾನ ಪಾತ್ರದಲ್ಲಿ ಅಶೋಕ್ ರಾಯ್ ಅಭಿನಯಿಸಿದ್ದು, ಅಭಿಮನ್ ರಾಯ್ ಅವರ ಪುತ್ರ ಮಾ. ಸೋನು ತೇಜಸರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅಭಿಮನ್ ರಾಯ್ ಅವರ ಕುಟುಂಬದ ಬಹುತೇಕ ಸದಸ್ಯರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮಗ ಸೋನು ತೇಜಸ್ ಪಾಲ್ಗೊಂಡಿದ್ದ ಅಲ್ಬಂಗಳೆಲ್ಲಾ ಸಾಕಷ್ಟು ಹೆಸರು ಮಾಡುತ್ತಿವೆ. ಈಗ ಅಶೋಕ್ ರಾಯ್ ಕೂಡಾ ಕನ್ನಡದ ಕುರಿತಾದ ಕಿರುಚಿತ್ರದ ಮೂಲಕ ಸೌಂಡು ಮಾಡುತ್ತದ್ದಾರೆ.

Continue Reading

ಅಭಿಮಾನಿ ದೇವ್ರು

ಕಿಚ್ಚನ ಬರ್ತಡೇ ದಿನವೇ ಬರಲಿದೆ ಕೋಟಿಗೊಬ್ಬ 3 ಟೀಸರ್!

Published

on

ಸೂರಪ್ಪ ಬಾಬು ನಿರ್ಮಾಣ ಮಾಡಿರುವ ಕೋಟಿಗೊಬ್ಬ-೩ ಚಿತ್ರದ ಬಗ್ಗೆ ಸ್ವತಃ ಸುದೀಪ್ ಅವರೇ ಅನೇಕ ಸಲ ಮೆಚ್ಚುಗೆಯ ಮಾತಾಡಿದ್ದಾರೆ. ಅದು ಈ ಸರಣಿ ಗೆಲುವಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರತಂಡ ಕಿಚ್ಚ ಸುದೀಪ್ ಅವರ ಬರ್ತಡೇಯನ್ನು ಸ್ಪೆಷಲ್ ಆಗಿಸಲು ತೀರ್ಮಾನಿಸಿದೆ.

ಸೆಪ್ಟೆಂಬರ್ ೨ನೇ ತಾರೀಕು ಕಿಚ್ಚಾ ಸುದೀಪ್ ಅವರ ಹುಟ್ಟುಹಬ್ಬವಿದೆ. ಅದೇ ದಿನ ಕೋಟಿಗೊಬ್ಬ ೩ ಚಿತ್ರದ ಸ್ಪೆಷಲ್ ಟೀಸರ್ ಒಂದನ್ನು ಬಿಡುಗಡೆ ಮಾಡಲು ಸೂರಪ್ಪ ಬಾಬು ನಿಧರಿಸಿದ್ದಾರೆ. ಈ ಚಿತ್ರದ ಪ್ರತೀ ವಿಚಾರಗಳ ಬಗ್ಗೆಯೂ ಕಾತರದಿಂದ ಕಾದು ಕೂತಿದ್ದ ಅಭಿಮಾನಿಗಳಿಗೆಲ್ಲ ಇದು ನಿಜಕ್ಕೂ ಹಬ್ಬದಂಥಾದ್ದೇ ಸಂಗತಿ!

ಕನ್ನಡದ ಸ್ಟಾರ್ ನಿರ್ಮಾಪಕ ಎಂದೇ ಹೆಸರಾಗಿರುವ ಸೂರಪ್ಪ ಬಾಬು ಅವರು ಕೋಟಿಗೊಬ್ಬ ೩ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ಶಿವಕಾರ್ತಿಕ್ ಎಂಬ ಉತ್ಸಾಹಿ ಯುವಕನಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುವ ಮೂಲಕವೂ ಸೂರಪ್ಪ ಬಾಬು ಹೊಸಾ ಹೆಜ್ಜೆ ಇಟ್ಟಿದ್ದಾರೆ.

ಈಗಾಗಲೇ ಕೋಟಿಗೊಬ್ಬ ೩ ಚಿತ್ರ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರದ ಬಗೆಗಿನ ಒಂದಲ್ಲ ಒಂದು ವಿಚಾರ ಸದಾ ಸುದ್ದಿಯಲ್ಲಿರುತ್ತಾ ಬಂದಿದೆ. ಅಂತೂ ಸುದೀಪ್ ಬರ್ತಡೇ ದಿನವೇ ಟೀಸರ್ ಬಿಡುಗಡೆಯಾಗುತ್ತಿರೋದರಿಂದ ಅಭಿಮಾನಿಗಳೆಲ್ಲರೂ ಆ ಕ್ಷಣದ ನಿರೀಕ್ಷೆಯಲ್ಲಿದ್ದಾರೆ.

Continue Reading

Trending

Copyright © 2018 Cinibuzz