One N Only Exclusive Cine Portal

ಶಾಲೆ ಉಳಿಸಿಕೊಳ್ಳಲು ಕಣಕ್ಕಿಳಿದ ವಿಷ್ಣುಸೇನಾ ಸಮಿತಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಖಾಸಗಿ ಶಾಲೆಗಳ ಹಾವಳಿಗೆ ಸಿಕ್ಕಿ ರಾಜ್ಯಾದ್ಯಂತ ಅನೇಕ ಸರ್ಕಾರಿ ಶಾಲೆಗಳು ಉಸಿರು ನಿಲ್ಲಿಸಿವೆ. ಖಾಸಗಿ ಎಜುಕೇಷನ್ ಮಾಫಿಯಾದ ಮುಂದೆ ಮಂಡಿಯೂರಿದಂತಿರೋ ಸರ್ಕಾರವೂ ಕೂಡಾ ಸಾವಿರಾರು ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕರುಣಿಸಿದ್ದ ಸರ್ಕಾರಿ ಶಾಲೆಗಳಿಗೆ ಬೀಗ ಭಾಗ್ಯ ಕೊಟ್ಟು ಕೈತೊಳೆದುಕೊಳ್ಳುತ್ತಿದೆ.
ಇದೀಗ ಕನ್ನಡಿರ ಮನಸುಗಳಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿರೋ ಸಾಹಸಸಿಂಹ ಡಾ ವಿಷ್ಣುವರ್ಧನ್ ಓದಿದ ಶಾಲೆಯೇ ಬೀಗ ಜಡಿಯಲ್ಪಟ್ಟಿದೆ. ಇದನ್ನು ಉಳಿಸಿಕೊಳ್ಳಲು ವಿಷ್ಣುಸೇನಾ ಸಮಿತಿ ಹೋರಾಟಕ್ಕಿಳಿದಿದೆ.


ಚಾಮರಾಜಪೇಟೆಯ ಮಾಡೆಲ್ ಸ್ಕೂಲ್ ಎಜುಕೇಶನ್ ಸೊಸೈಟಿ ಸಾಹಸಸಿಂಹ ಓದಿದ ಶಾಲೆ. ಬೆಂಗಳೂರಿನ ಮೊದಲ ಕನ್ನಡ ಶಾಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಆದರೆ ಈ ಶಾಲೆಯನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಒಳ್ಳೆಯ ಫಲಿತಾಂಶ ಬರಲಿಲ್ಲ ಎಂಬ ನೆಪ ಹೇಳಿ ಮುಚ್ಚಲಾಗಿದೆ. ಸರ್ಕಾರದ ಅನುದಾನದಿಂದ ನಡೆಯುತ್ತಿದ್ದ ಈ ಶಾಲೆಯಲ್ಲಿ ವಿಷ್ಣುವರ್ಧನ್, ನಟ ರಮೇಶ್ ಭಟ್ ಸೇರಿದಂತೆ ಅನೇಕರು ಅಕ್ಷರ ಕಲಿತಿದ್ದಾರೆ. ಬಾಸ್ಕೋ ಮನೆಯ ನೂರಾರು ಅನಾಥ ಮಕ್ಕಳ ಪಾಲಿಗೂ ಈ ಶಾಲೆ ಅಕ್ಷರದ ಬೆಳಕು ನೀಡಿತ್ತು. ಇಂಥಾ ಸಂಪನ್ನ ಇತಿಹಾಸ ಹೊಂದಿರೋ ಈ ಶಾಲೆಯನ್ನು ಕುಂಟು ನೆಪ ಹೇಳಿ ಮುಚ್ಚಿರೋ ಸರ್ಕಾರದ ಕ್ರಮವನ್ನು ಪ್ರಜ್ಞಾವಂತ ನಾಗರಿಕರೇ ಪ್ರಶ್ನಿಸುತ್ತಿದ್ದಾರೆ.


ಸರ್ಕಾರ ಈ ಶಾಲೆಯನ್ನು ಮುಚ್ಚಲು ನಿರೀಕ್ಷಿತವಾದ ಫಲಿತಾಂಶ ಇಲ್ಲ ಎಂಬ ಕಾರಣ ನೀಡಿದೆ. ಆದರೆ ನಿರೀಕ್ಷಿತ ಫಲಿತಾಂಶ ಬಾರದಿರೋದಕ್ಕೂ ಸರ್ಕಾರವೇ ಕಾರಣ ಎಂಬುದು ದುರಂತ ವಾಸ್ತವ. ಯಾಕೆಂದರೆ ಈ ಶಾಲೆಗೆ ಗಣಿತ ಪಾಠ ಮಾಡಲು ಈಗ್ಗೆ ಹದಿನೈದು ವರ್ಷಗಳಿಂದ ಶಿಕ್ಷಕರೇ ಇರಲಿಲ್ಲವಂತೆ. ಈ ಬಗ್ಗೆ ಇದುವರೆಗೂ ಬಂದ ಸರ್ಕಾರಗಳ ಬಳಿ ಮೊರೆಯಿಟ್ಟರೂ ಯಾವ ಪ್ರಯೋಜನವೂ ಆಗಿಲ್ಲ. ಸರ್ಕಾರಿ ಶಾಲೆಗಳಿಗೆ ನೆಟ್ಟಗೆ ಶಿಕ್ಷಕರನ್ನು ನೇಮಕ ಮಾಡೋ ಯೋಗ್ಯತೆ ಇಲ್ಲದ ಈ ಸರ್ಕಾರಗಳಿಗೆ ಅದನ್ನು ಮುಚ್ಚುವ ಯಾವ ನೈತಿಕತೆ ಇದೆ ಎಂಬ ಬಗ್ಗೆ ಎಲ್ಲೆಡೆ ಆಕ್ರೋಶ ಹುಟ್ಟಿಕೊಂಡಿದೆ.


ಸಾಹಸ ಸಿಂಹ ವಿಷ್ಣುವರ್ಧನ್ ಓಡಿದ ಈ ಶಾಲೆಯನ್ನು ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳೋ ಹೋರಾಟವೂ ನಡೆಯಬೇಕಿದೆ. ಇದಕ್ಕೆ ವಿಷ್ಣುಸೇನಾ ಸಮಿತಿ ಮುಂದಾದರೆ ಸಾಹಸಸಿಂಹನ ಹೆಸರು ಇನ್ನಷ್ಟು ಅಜರಾಮರವಾಗುತ್ತದೆ.
ಡಾ.ವಿಷ್ಣುವರ್ಧನ್ ಓದಿದ ಶಾಲೆಯನ್ನು ಉಳಿಸಿಕೊಳ್ಳುವ ಸಲುವಾಗಿ ಡಾ.ವಿಷ್ಣು ಸೇನಾ ಸಮಿತಿಯ ನೂರಾರು ಪದಾಧಿಕಾರಿಗಳು ಬಿಇಓ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಕವಿರತ್ನ ನಾಗೇಂದ್ರ ಪ್ರಸಾದ್, ನಟ ಚೇತನ್, ಕನ್ನಡಪರ ಚಳವಳಿಗಾರರಾದ ಪಾರ್ಶ್ವನಾಥ್, ರಾಮೇಗೌಡ, ದಿವ್ಯ ಹರ್ಷ, ಪ್ರಕಾಶಮೂರ್ತಿ ಹಾಜರಿದ್ದರು

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image