One N Only Exclusive Cine Portal

ಯಜಮಾನ ನಿಗಾಗಿ ಸಂತೆ ಬೀದಿಯ ಸೆಟ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತೊಂದನೇ ಸಿನಿಮಾ `ಯಜಮಾನ’ದ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಅಂತ ಅಭಿಮಾನಿಗಳೆಲ್ಲ ತಲೆ ಕೆಡಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಚಿತ್ರ ತಂಡ ಮಾತ್ರ ಈ ಬಗ್ಗೆ ಒಂದೇ ಒಂದು ವಿಚಾರ, ಯಾವುದೇ ಫೋಟೋಗಳೂ ಲೀಕ್ ಆಗದಂತೆ ಜಾಗರೂಕತೆಯಿಂದ ಮುಂದುವರೆಯುತ್ತಿದೆ.

ಆದರೆ ಇದೀಗ ಯಜಮಾನ ಚಿತ್ರಕ್ಕಾಗಿ ಹಾಕಲಾಗಿರುವ ಆಕರ್ಷಕ ಸೆಟ್ ಒಂದರ ಫೋಟೋ ಸಿನಿಬಜ್ ಕೈ ಸೇರಿದೆ. ಇದು ಹಳ್ಳಿ ಸೀಮೆಯ ಮಾರುಕಟ್ಟೆ ಬೀದಿಯನ್ನು ಮತ್ತೆ ಸೃಷ್ಟಿಸಿದಂಥಾ ಸೆಟ್. ಬಹುಶಃ ಈ ಚಿತ್ರವನ್ನು ನೋಡಿದರೆ ಇದು ಈ ಕಾಲಕ್ಕೆ ಹೊಂದಿಕೆಯಾಗುವ

ಮಾರುಕಟ್ಟೆಯ ಚಿತ್ರಣವಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ. ಹಾಗಾದರೆ, ಯಜಮಾನ ಚಿತ್ರದ ಕಥೆ ಒಂದೆರಡು ತಲೆಮಾರಿನ ಹಿಂದಿನ ಕಥಾ ಹಂದರವನ್ನೂ ಹೊಂದಿದೆಯಾ ಎಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ.

ಈ ಫೋಟೋದ ವಿಚಾರವಾಗಿ ಇನ್ನೂ ವಿಸ್ತಾರವಾಗಿ ಹೇಳ ಬೇಕೆಂದರೆ, ಈ ಸೆಟ್‌ನಲ್ಲಿ ಶೂಟಿಂಗ್ ಕಾರ್ಯ ಸಾಗುತ್ತಿದೆ. ಇದೇ ಹತ್ತನೇ ತಾರೀಕಿನ ಹೊತ್ತಿಗೆ ಈ ಮಾರುಕಟ್ಟೆ ಬೀದಿಯನ್ನು ತೆರವುಗೊಳಿಸಿ ಮತ್ತೊಂದು ಆಕರ್ಷಕವಾದ ಸೆಟ್ ಹಾಕಲಾಗುತ್ತದೆಯಂತೆ. ಅಂದಹಾಗೆ ಖ್ಯಾತ ಕಲಾ ನಿರ್ದೇಶಕರಾದ ಶಶಿಧರ ಅಡಪ ಈ ಸೆಟ್ ಅನ್ನು ರೂಪಿಸಿದ್ದಾರೆ.

ಈ ಸೆಟ್ ಈಗ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಚಿತ್ರರಂಗದ ಅನೇಕರು ನೋಡಿಕೊಂಡು ಬರಲು ಹೊರಟಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image