ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮುಂದಿನ ಪ್ರಾಜೆಕ್ಟ್ ನ್ನು ಘೋಷಿಸುವ ಮೂಲಕ ತನ್ನ ಎಲ್ಲ ಅಭಿಮಾನಿಗಳಿಗೆ ಸ್ವೀಟ್ ಸುದ್ದಿಯೊಂದನ್ನು ನೀಡಿದ್ದಾರೆ. ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕುರಿತಾದ ಬಯೋಪಿಕ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೆ.ವಿ. ವಿಜಯೇಂದ್ರ ಪ್ರಸಾದ್ ಚಿತ್ರಕತೆ ಬರೆದಿದ್ದು, ಎ.ಎಲ್. ವಿಜಯ್ ನಿರ್ದೇಶನ ಮಾಡಲಿದ್ದಾರೆ. ಚಿತ್ರವು ತಮಿಳಿನಲ್ಲಿ ತಲೈವಿ, ಹಿಂದಿಯಲ್ಲಿ ಜಯ ಎಂಬ ಎರಡು ಭಾಷೆಗಳಲ್ಲಿ ತಯಾರಾಗಲಿದೆ. ಚಿತ್ರದ ಸಲುವಾಗಿ ಈಗಾಗಲೇ ಕಂಗನಾ ಜಯಲಲಿತಾ ಪಾತ್ರಕ್ಕೆ ರೆಡಿಯಾಗುತ್ತಿದ್ದು, ಪಾತ್ರಕ್ಕಾಗಿ ತನ್ನ ಚರ್ಮವನ್ನು ಅಣಿಗೊಳಿಸುತ್ತಿದ್ದಾರೆ. ಅಲ್ಲದೇ ಸಿನಿಮಾ ಸೆಟ್ಟೇರುವಷ್ಟರಲ್ಲಿ ತಮಿಳು ಭಾಷೆಯನ್ನು ಕಲಿಯಲು ನಿರ್ಧರಿಸಿದ್ದಾರೆ.
ಈ ಕುರಿತು ಮಾತನಾಡಿದ ಕಂಗನಾ “ಕೆಲ ದೃಶ್ಯಗಳು ತಮಿಳಿನಲ್ಲಿದೆ. ಪಾತ್ರದಲ್ಲಿ ಒಗ್ಗಿಕೊಳ್ಳುವ ಸಲುವಾಗಿ ತಮಿಳು ಭಾಷೆಯನ್ನು ಕಲಿಯುತ್ತಿದ್ದೇನೆ. ಈಗಾಗಲೇ ನನ್ನ ಭಾಷಾ ತರಗತಿಯ ಮೊದಲ ಹಂತದಲ್ಲಿದ್ದೇನೆ. ನನ್ನ ಹಾಗೂ ಪಾತ್ರವನ್ನು ಹೋಲಿಸಿ ನೋಡಿದರೆ ಆ ಪಾತ್ರದ ಗೆಲುವು ನನ್ನ ಗೆಲುವಿಗಿಂತ ಹಿರಿದಾಗಿದೆ. ಪಾತ್ರವನ್ನು ನ್ಯಾಚುರಲ್ ಗೊಳಿಸುವ ಸಲುವಾಗಿ ಅದು ತನ್ನದೇ ಬಯೋಫಿಕ್, ಪಾತ್ರ ಎಂಬಂತೆ ನಟಿಸಲು ತಯಾರಾಗುತ್ತಿದ್ದೇನೆ. ಅದು ನನ್ನ ಬಹಳ ಆಕರ್ಷಿಸಿದೆ” ಎಂದರು.
ಸದ್ಯ ಬಿಗ್ ಟೌನ್ ನಲ್ಲಿ ಗಾಳಿಸುದ್ದಿಯೊಂದು ಹರಿದಾಡುತ್ತಿದ್ದು, ಕಂಗನಾ ಈ ಚಿತ್ರಕ್ಕೆ ಬರೋಬ್ಬರಿ 24 ಕೋಟಿ ಸಂಭಾವನೆಯನ್ನು ಆಫರ್ ಮಾಡಿದ್ದಾರೆ. ಅವರ ಆಫರ್ ಗೆ ಗ್ರೀನ್ ಸಿಗ್ನಲ್ ದೊರೆತದ್ದೇ ಆದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಕಂಗನಾ ಆಗಲಿರುವುದು ಮಾತ್ರ ಸತ್ಯ.