ಸಿಂಗಂ ಸೂರ್ಯನ ಮಡದಿ ಜ್ಯೋತಿಕಾ ಗೆ ಇದೀಗ ಜಾಕ್ ಪಾಟ್ ಹೊಡೆಯಿತು. ಏನಪ್ಪಾ ಜಾಕ್ ಪಾಟ್ ಎಂದು ಆಶ್ಚರ್ಯಪಡಬೇಡಿ. ಜ್ಯೋತಿಕಾ ಇದೀಗ ಜಾಕ್ ಪಾಟ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ‘ನಾಚಿಯಾರ್‘ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮನ ಸೆಳೆದಿದ್ದ ನಟಿ ಜ್ಯೊತಿಕಾ ಇದೀಗ ಜಾಕ್ ಪಾಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ‘ಜಾಕ್ ಪಾಟ್ ಚಿತ್ರದ ಮೊದಲ ಲುಕ್ ಬಿಡುಗಡೆ ಆಗಿದೆ. ಕಾಮಿಡಿ ಶೈಲಿಯಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಜ್ಯೋತಿಕಾ ಕಾಪ್ ಅವತಾರದಲ್ಲಿ ಮಗದೊಮ್ಮೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು ಜ್ಯೋತಿಕಾ ಮಾಸ್ ಲುಕ್ ನಲ್ಲಿ ಅವತಾರವೆತ್ತಿದ್ದಾರೆ. ಮುಖ್ಯವಾದ ಸಂಗತಿಯೆಂದರೆ ಈ ಚಿತ್ರದಲ್ಲಿ ಆರು ಫೈಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಸೆಟ್ಟೇರಿದ್ದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿದೆ. ಚಿತ್ರದ ನಿರ್ಮಾಪಕ ಮತ್ತು ಜ್ಯೋತಿಕಾ ಪತಿ ಸೂರ್ಯ, ‘ಜಾಕ್ಪಾಟ್‘ ಚಿತ್ರದ ಮೊದಲ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಸಂತಸದ ವಿಚಾರವೆಂದರೆ ಹಿರಿಯ ನಟಿ ರೇವತಿ ಕಾನ್ಸ್ಟೇಬಲ್ ಆಗಿ ನಟಿಸಿದ್ದು, ಇಡೀ ಸಿನಿಮಾದಲ್ಲಿ ಜ್ಯೋತಿಕಾಗೆ ಅವರು ಸಾಥ್ ನೀಡಲಿದ್ದಾರೆ. ಎಲ್ಲವೂ ಸರಾಗವಾಗಿ ಸಾಗಿದರೆ ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆಯಂತೆ..
No Comment! Be the first one.