ಕಳೆದ ಒಂದೂವರೆ ವರ್ಷಗಳ ಹಿಂದೆ ತೆರೆ ಕಂಡಿದ್ದ ಸಂಯುಕ್ತ-2 ಚಿತ್ರವನ್ನು ನಿರ್ಮಾಣ ಮಾಡಿದ್ದವರು ಡಾ. ಡಿ ಎಸ್ ಮಂಜುನಾಥ್. ಈ ಸಿನಿಮಾದಲ್ಲಿ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಿದ್ದರು. ಇತ್ತೀಚೆಗಷ್ಟೇ ತೆರೆ ಕಂಡು 2019ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ಮಾಪಕರೂ ಇವರೇ. ಈ ಸಿನಿಮಾದಲ್ಲೂ ವಕೀಲರ ಪಾತ್ರವೊಂದನ್ನು ನಿಭಾಯಿಸಿ ಗಮನ ಸೆಳೆದಿದ್ದರು. ಇಂಥಾ ಮಂಜುನಾಥ್ ೦%ಲವ್ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಮಂಜುನಾಥ್ ಅವರು ಸಿನಿಮಾಗಾಗಿ ಅರ್ಜುನ್ ಎನ್ನುವ ಹೆಸರಿನಿಂದ ಪಾದಾರ್ಪಣೆ ಮಾಡುತ್ತಿರೋದು ವಿಶೇಷ. ಸದ್ಯ ಈ ಚಿತ್ರದ ಎರಡನೇ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಕೃಷ್ಣಮೂರ್ತಿ ಎಲ್ ಮತ್ತು ರವಿಕುಮಾರ್ ಹೆಚ್.ಪಿ ನಿರ್ಮಿಸಿರುವ ಈ ಸಿನಿಮಾವನ್ನು ಅಭಿರಾಮ್ ರಚಿಸಿ ನಿರ್ದೇಶಿಸಿದ್ದಾರೆ.

ಬೆಂಗಳೂರಿನಲ್ಲಿಯೇ ಹೆಚ್ಚಾಗಿ ಚಿತ್ರೀಕರಣಗೊಂಡಿರೋ ಈ ಸಿನಿಮಾ ಗಂಡ ಹೆಂಡತಿಯ ನಡುವೆ ನಡೆಯೋ ಕಥೆ ಹೊಂದಿದೆ. ಗಂಡ ಹೆಂಡಿರಿಬ್ಬರೂ ಸಾಫ್ಟ್ ವೇರ್ ವಲಯದಲ್ಲಿ ಕೆಲಸ ಮಾಡುವಾಗ ಆಗೋ ವಿದ್ಯಮಾನಗಳ ಸುತ್ತಾ ರೋಚಕವಾಗಿ ಸಾಗೋ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಮಂಜುನಾಥ್ ಅವರಿಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಲಿದ್ದಾರೆ. ರೋಚಕವಾದ ಫೈಟುಗಳೂ ಇದರಲ್ಲಿರಲಿವೆಯಂತೆ. ಮಂಜುನಾಥ್ ಅವರ ಎಂಟ್ರಿ ಫೈಟು ಎಲ್ಲರೂ ಬೆಚ್ಚಿ ಬೀಳುವಂತೆ ಮೂಡಿಬಂದಿದೆಯಂತೆ.

ಇನ್ನು ಹಾಡುಗಳ ವಿಚಾರದಲ್ಲಿಯೂ ಕೂಡಾ ಈ ಚಿತ್ರ ಅಲೆಯೆಬ್ಬಿಸೋದು ಗ್ಯಾರೆಂಟಿ. ಯಾಕೆಂದರೆ, ಶ್ರೇಯಾ ಘೋಷಾಲ್, ಸೋನುನಿಗಮ್ ಅವರಂಥಾ ಮೇರು ಗಾಯಕರಿಂದ ಇದರ ಹಾಡನ್ನು ಹಾಡಿಸಲಾಗಿದೆ. ಮಂಜುನಾಥ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಸಂಯುಕ್ತ-2 ಚಿತ್ರದ ಮೂಲಕ. ಅದರಲ್ಲಿ ಒಂದು ಮಹತ್ವದ ಪಾತ್ರ ನಿರ್ವಹಿಸೋ ಮೂಲಕವೂ ಅವರು ಗಮನ ಸೆಳೆದಿದ್ದರು. ಅದನ್ನು ಕಂಡ ಪ್ರತಿಯೊಬ್ಬರೂ ಇವರು ಹೀರೋ ಆದರೆ ಚೆನ್ನಾಗಿರುತ್ತದೆ ಎಂಬಂಥಾ ಭಾವನೆ ಹುಟ್ಟಿಕೊಂಡಿತ್ತು. ನಾಯಕನಾಗಲು ಬೇಕಾದ ಫಿಟ್ನೆಸ್ ಕಾಯ್ದುಕೊಂಡಿರೋ ಮಂಜುನಾಥ್ ಅವರು ಸಂಪೂರ್ಣ ತಯಾರಿಯೊಂದಿಗೇ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾ ಬಗ್ಗೆ ಆಳವಾದ ಆಸಕ್ತಿ ಹೊಂದಿರೋ ಮಂಜುನಾಥ್ ಅವರು ಈ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲುವಂತಾಗಲಿ. ಸದ್ಯಕ್ಕೆ ಈ ಚಿತ್ರದ ಒಂದು ಪೋಸ್ಟರ್ ನಿಮ್ಮ ಮುಂದಿದೆ. ಅದನ್ನು ನೋಡಿ ಕಣ್ತುಂಬಿಕೊಳ್ಳಿ!

CG ARUN

ಓದಿದ್ದು ಏಳನೇ ಕ್ಲಾಸು ನಟಿಸಿದ್ದು ನೂರಾರು ಸಿನಿಮಾ!

Previous article

ಹಾಡುಗಾರ ಹನುಮಂತು ಹುಷಾರಾದ!

Next article

You may also like

Comments

Leave a reply

Your email address will not be published. Required fields are marked *