ಖ್ಯಾತ ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ಸಲೂರಿ ಬಣ್ಣದ ಲೋಕಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಟ್ರೈಗರ್ ಹಿಲ್ಸ್ ಮತ್ತು ಸ್ವಸ್ತಿಕಾ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಳ್ಳಾರಿ ಮೂಲದ ಗಾಜುಲ ವೀರೇಶ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಗಾಳಿ ಸಂದೀಪ್(ಬಳ್ಳಾರಿ) ಲೈನ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಕಿಟ್ಟು ನಲ್ಲೂರಿ ರಚನೆ,ಚಿತ್ರಕತೆ,ನಿರ್ದೇಶನದಲ್ಲಿ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಮೂಡಿ ಬರುತ್ತಿದೆ. ಶೀರ್ಷಿಕೆ ’11:11′ ಇರುವುದರಿಂದ ಶುರುವಿನಿಂದಲೇ ಕುತೂಹಲ ಹುಟ್ಟಿಸಿದೆ. ಮೆಘಾಸ್ಟಾರ್ ಚಿರಂಜೀವಿ ಟೈಟಲ್ ಹಾಗೂ ಫಸ್ಟ್ ಲುಕ್‌ನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಇದರಿಂದ ತಂಡಕ್ಕೆ ಹೆಚ್ಚಿನ ಶಕ್ತಿ ಬಂದಂತೆ ಆಗಿದೆ. ನಾಯಕ ಸ್ಟೈಲಿಶ್ ಆಗಿ ಸೂಟ್‌ಕೇಸ್‌ನ್ನು ಹಿಡಿದುಕೊಂಡಿರುವ ಫಸ್ಟ್ ಲುಕ್ ನೋಡಿದರೆ, ವಿನೂತನ ಕತೆ ಹಾಗೂ ತಾಂತ್ರ್ರಿಕ ಗುಣಮಟ್ಟವನ್ನು ಹೇಳಲಿದೆ.

ಮುಖ್ಯ ಪಾತ್ರದಲ್ಲಿ ರಾಜೀವ್‌ಸಲೂರಿ, ವರ್ಷವಿಶ್ವನಾಥ್ ಇವರೊಂದಿಗೆ ಕೋಟಿಸಲೂರಿ, ಸದನ್, ಲಾವಣ್ಯ, ರಾಜ ರವೀಂದ್ರ, ರಾಜಶ್ರೀ ಮುಂತಾದವರು ನಟಿಸುತ್ತಿದ್ದಾರೆ. ಮಲೋಡಿ ಕಿಂಗ್ ಮಣಿಶರ್ಮ ಸಂಗೀತ, ಈಶ್ವರ್ ಛಾಯಾಗ್ರಹಣ, ರವಿಮನ್ಲ ಸಂಕಲನ, ಸಂಭಾಷಣೆ ಪವನ್.ಕೆ.ಅಚಲ, ಪ್ರಚಾರ ಆರ್.ಚಂದ್ರಶೇಖರ್, ಡಿಜಿಟಲ್ ಮಾರ್ಕೆಟಿಂಗ್ ಪ್ರವೀಣ್‌ಯಾದವ್ ಅವರದಾಗಿದೆ. ತ್ವರಿತವಾಗಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದ್ದು, ಇದರ ಬೆನ್ನಲ್ಲೇ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೆ ಘೋಷಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಟಾಮ್‌ & ಜೆರಿಯ ತತ್ವಶಾಸ್ತ್ರ ಬೋಧನೆ!

Previous article

ಅದ್ಧೂರಿ ಸೆಟ್..25 ಜನ ಡ್ಯಾನ್ಸರ್..’ಸಖತ್’ ಟ್ರ್ಯಾಕ್ ಸೂಪರ್ ಹಿಟ್..!

Next article

You may also like

Comments

Leave a reply

Your email address will not be published.