ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ನಟಿಸೋದು ಅಂದರೆ ಸಲೀಸಲ್ಲ. ೧೯ ಏಜ್ ನಾನ್ಸೆನ್ಸ್ ಎನ್ನುವ ಸಿನಿಮಾ ಟೈಟಲ್ಲಿನ ಕಾರಣಕ್ಕೇ ಕುತೂಹಲ ಕ್ರಿಯೇಟ್ ಮಾಡಿದೆಯಲ್ಲಾ? ಈ ಚಿತ್ರದ ಹೀರೋ ಮನುಷ್.

ಮನುಷ್‌ಗೆ ಮೊದಲಿಂದಲೂ ಸಿನಿಮಾ ಅಂದರೆ ಒಂಥರಾ ಹುಚ್ಚು. ಇವರ ತಂದೆ ಲೋಕೇಶ್ ಕಟ್ಟಡ, ದೇವಸ್ಥಾನಗಳಿಗೆ ಸ್ಟೋನ್ ಕ್ಲಾಡಿಂಗ್ ಕೆಲಸ ಮಾಡಿಸುತ್ತಾರೆ. ಮಗ ಕಾಲೇಜಿಗೆ ಚಕ್ಕರ್ ಹಾಕಿ ವಾರಕ್ಕೆ ಮೂರು ನಾಲ್ಕು ಸಿನಿಮಾ ನೋಡುತ್ತಿದ್ದದ್ದನ್ನು ಸ್ವತಃ ಲೋಕೇಶ್ ಗಮನಿಸಿದ್ದರು. ‘ಯಾಕೋ ಮಗನೆ ಹಿಂಗೆ ಮಾಡ್ತಿಯಾ? ಅಂದರೆ ‘ಅಪ್ಪಾ ನನಗೆ ಸಿನಿಮಾ ಅಂದ್ರೆ ಅಷ್ಟಿಷ್ಟ.. ಅನ್ನುತ್ತಿದ್ದನಂತೆ. ಅದೇ ಹೊತ್ತಿಗೆ ಲೋಕೇಶ್ ಅವರ ಬಹುಕಾಲದ ಸ್ನೇಹಿತ ಗಿಣಿ ಸಿನಿಮಾವೊಂದನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದರಂತೆ. “ಹೇಗೂ ನೀನು ಡೈರೆಕ್ಟರ್ ಆಗಬೇಕು ಅಂತಾ ಬಯಸಿರುವೆ, ನನ್ನ ಮಗನನ್ನೇ ಹೀರೋ ಮಾಡು, ನಾನೇ ಬಂಡವಾಳ ಹಾಕ್ತೀನಿ…. ಅಂದುಬಿಟ್ಟಿದ್ದರು ಲೋಕೇಶ್.

ಮಕ್ಕಳು ಸಿನಿಮಾ, ಥಿಯೇಟರು ಅಂತಾ ಓಡಾಡುತ್ತಿದ್ದರೆ, ಅವರ ಮೂತಿಗೆ ತಿವಿಯೋ ಪೋಷಕರೇ ಹೆಚ್ಚು. ಆದರೆ ಲೋಕೇಶ್ ಹಾಗೆ ಮಾಡಲಿಲ್ಲ, ನಿನಗೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಅದರ ಬಗ್ಗೆ ತಿಳಿದುಕೋ. ನಟನೆಯನ್ನು ಕಲಿ ಅಂತಾ ಹೇಳಿದ್ದೇ, ರಂಗಭೂಮಿ, ಸಿನಿಮಾರಂಗದಲ್ಲಿ ಕೆಲಸ ನಿರ್ವಹಿಸುತ್ತಾ ನಟನೆಯ ಪಾಠವನ್ನೂ ಮಾಡುವ ರಂಗಸ್ವಾಮಿ ಎಂಬುವವರ ಬಳಿ ಕಳಿಸಿ ತರಬೇತಿ ಕೊಡಿಸಿದ್ದಾರೆ. ಮುರಳಿ ಅವರ ಬಳಿ ಡ್ಯಾನ್ಸ್ ಕಲಿಸಿದ್ದಾರೆ. ಮಗ ಬಯಸಿದ ಕ್ಷೇತ್ರದಲ್ಲಿ ಬೆಳೆಯಲಿ ಅನ್ನೋ ಕಾರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾವನ್ನೂ ನಿರ್ಮಿಸಿದ್ದಾರೆ. ಹಾಗೆ ರೂಪುಗೊಂಡ ಸಿನಿಮಾ ೧೯ ಏಜ್ ನಾನ್ಸೆನ್ಸ್. ಹತ್ತೊಂಭತ್ತನೇ ವರ್ಷ ಯವುದೇ ಹುಡುಗರ ಬದುಕಿನ ನಿರ್ಣಾಯಕ ಘಟ್ಟ. ಆ ಹೊತ್ತಲ್ಲಿ ನಾನ್ಸೆನ್ಸ್ ತೀರ್ಮಾನಗಳೇ ಹೆಚ್ಚು ತೆಗೆದುಕೊಳ್ಳುತ್ತಾರೆ. ಹತ್ತೊಂಬತ್ತನೇ ವಯಸ್ಸಿನ ಗೊಂದಲದ ಬದುಕನ್ನೇ ಕಥೆಯಾಗಿಸಿ ನಿರ್ದೇಶಕ ಗಿಣಿ ಸುಂದರವಾದ ಸಿನಿಮಾ ಸೃಷ್ಟಿಸಿದ್ದಾರೆ.

ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿರುವ ವೆಟ್ರಿ ಈ ಹಿಂದೆಯೇ ತಮಿಳು ಚಿತ್ರವೊಂದನ್ನು ಮಾಡಲು ಕಥೆ ರೆಡಿ ಮಾಡಿಕೊಂಡಿದ್ದರು. ನೋಟ್ ಬ್ಯಾನ್ ಆದ ಕಾರಣ ಆ ಪ್ರಾಜೆಕ್ಟು ನಿಂತುಹೋಗಿತ್ತು. ಈಗ ಮತ್ತೆ ಆ ಸಿನಿಮಾಗೆ ಜೀವ ಬಂದಿದೆ. ಅದರಲ್ಲಿ ಮನುಷ್ ನಾಯಕನಟನಾಗಿ ನಟಿಸುತ್ತಿದ್ದಾನೆ. ಡಿಸೆಂಬರ್ ಕೊನೆಯ ವೇಳೆಗೆ ಅಥವಾ ಸಂಕ್ರಾಂತಿಯ ಸಮಯಕ್ಕೆ ಈ ಚಿತ್ರ ಆರಂಭವಾಗುತ್ತದೆ. ಅಷ್ಟರಲ್ಲಿ ೧೯ ಏಜ್ ನಾನ್ಸೆನ್ಸ್ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿರುತ್ತದೆ. ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ತಮಿಳಿನ ಸಿನಿಮಾದಲ್ಲಿ ಅವಕಾಶ ಪಡೆದಿರುವ ಮನುಷ್ ಲೈಫು ಗೆಲುವಿನಿಂದ ಮುಂದುವರೆಯಲಿ…

CG ARUN

ಹಿರಿಯ ನಿರ್ದೇಶಕ ಹ.ಸೂ. ರಾಜಶೇಖರ್ ಇನ್ನಿಲ್ಲ

Previous article

ಗರ್ಭಿಣಿ ಯಜ್ಞಾಶೆಟ್ಟಿ ಹ್ಯೂಮನ್ ಬಾಂಬರ್!

Next article

You may also like

Comments

Leave a reply

Your email address will not be published. Required fields are marked *