ಸರಣಿಕೊಲೆಯ ಮೆರವಣಿಗೆಯ ನಡುವೆ ಮತ್ತೇನೋ ಇದೆ!
ಮೇಣದಬತ್ತಿಯ ಬೆಳಕನ್ನು ಒಂದೇ ಸಮನೆ ನೋಡುವ ಯೋಗವಿಧಾನದ ಹೆಸರು `ತ್ರಾಟಕ’. ಇದಕ್ಕೂ ಸಿನಿಮಾಗೂ ಏನು ಸಂಬಂಧ? ಪಾರ್ಷಿಯಲ್ ಸಿಸರ್ ಕಾಂಪ್ಲೆಂಕ್ಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯನ್ನು ಗುಣ ಮಾಡಲು ವೈದ್ಯೆ ಹೀರೋಯಿನ್ನು ಈ ತ್ರಾಟಕ ವಿದ್ಯೆಯನ್ನು ಬಳಸುತ್ತಿರುತ್ತಾಳೆ. ಹಾಗೆಂದ ಮಾತ್ರಕ್ಕೆ ಇದು ಖಾಯಿಲೆ ಮತ್ತು ಅದನ್ನು ಗುಣಪಡಿಸುವ ಕಥೆಯನ್ನು ಹೊಂದಿದ ಸಿನಿಮಾವಲ್ಲ. ಇದು ಸಿನಿಮಾದಲ್ಲಿರುವ ಒಂದಂಶವಷ್ಟೇ. ಸಿನಿಮಾ ಆರಂಭವಾಗುವುದೇ ಕೊಲೆಯೊಂದರ ಮೂಲಕ. ಆನಂತರವೂ ಒಂದರ ಹಿಂದೊಂದು ಸರಣಿ ಹತ್ಯೆ ನಡೆಯುತ್ತಲೇ ಇರುತ್ತದೆ. ಸಿನಿಮಾದ ಮೊದಲ […]
TRATAKA BEST THRILLER ON SCREEN
Rating : 3.5 / 5 Title – Trataka, Banner – Astha Cinemas, Producer – Rahul Ainapura, Direction – Shiva Ganesh, Cinematography – Vinod Bharathi, Music – Arun Suradha, Cast – Rahul Ainapura, Ajith Jayaraj, Hrudaya, Akshata, Yash Shetty, Bhavani Prakash and others. All thrillers must and should have captivating screenplay. This ‘Trataka’ of producer Rahul […]
ಕಳೆದ ಹೃದಯವನ್ನು ಹುಡುಕಿಕೊಟ್ಟ ತ್ರಾಟಕ!
ಹತ್ತು ವರ್ಷ… ಅಖಂಡ ಹತ್ತು ವರ್ಷ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಯಾವ ನಟ ನಟಿಯರನ್ನಾದರೂ ಜನ ಮರೆತುಬಿಡುತ್ತಾರೆ. ಆದರೆ ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ಮಾಡಿ ಮರೆಯಾದವರನ್ನು ಪ್ರೇಕ್ಷಕರು ಆಗಾಗ ನೆನಪಿಸಿಕೊಳ್ಳೋದೂ ಇದೆ. ಹಾಗೊಂದು ನೆನಪನ್ನು ಪ್ರೇಕ್ಷಕರ ಮನಸಿಗೆ ಮುಟ್ಟಿಸಿ ಮಾಯವಾಗಿದ್ದವರು ಸೌಮ್ಯ. ಹತ್ತು ವರ್ಷದ ಹಿಂದೆ ಒರಟ ಐ ಲವ್ ಯೂ ಚಿತ್ರದ ನಾಯಕಿಯಾಗಿದ್ದ ಸೌಮ್ಯಾ ಇದೇ ಮೊದಲ ಬಾರಿ ತ್ರಾಟಕ ಚಿತ್ರದ ಮೂಲಕ ಹೃದಯಾ ಅವಂತಿ ಎಂದು ಹೆಸರು ಬದಲಾಯಿಸಿಕೊಂಡು ನಾಯಕಿಯಾಗಿಯೇ ಮರಳಿ ಬಂದಿದ್ದಾರೆ! ಬಹಳಷ್ಟು ಮಂದಿ […]
ಇದು ವಿ ನಾಗೇಂದ್ರ ಪ್ರಸಾದ್ ನಟನೆಯ ವಿಶಿಷ್ಟ ಚಿತ್ರ!
ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅಭಿನಯದ ಗುರೂಜಿ ಚಿತ್ರ ಒಂದೇ ಒಂದು ಫಸ್ಟ್ ಲುಕ್ ಟೀಸರ್ ಮೂಲಕ ಎಬ್ಬಿಸಿದ್ದ ಅಲೆ ಸಣ್ಣದೇನಲ್ಲ. ಆದರೆ ನಾಗೇಂದ್ರಪ್ರಸಾದ್ ಹೀರೋ ಆಗಿ ನಟಿಸಿದ್ದ ಗೂಗಲ್ ಚಿತ್ರ ಬಿಡುಗಡೆಯಾದರೂ ಗುರೂಜಿ ಆಗಮಿಸುವ ಸೂಚನೆಗಳು ಸಿಕ್ಕಿರಲಿಲ್ಲ. ಇದೀಗ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ನಾಗೇಂದ್ರಪ್ರಸಾದ್ ಅವರು ನಿರ್ಧರಿಸಿದ್ದಾರೆ. ಅದರನ್ವಯ ಈಗಷ್ಟೇ ಮ್ಯೂಸಿಕ್ ಬಜಾರ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತ್ರೈ ಸ್ಟಾರ್ ಫಿಲ್ಮ್ಸ್ ನಿರ್ಮಾಣ ಮಾಡಿರೋ […]
ಸ್ವಾತಂತ್ರ್ಯಪೂರ್ವದ ರಾಜನಾದ ಸುದೀಪ್!
ತೆಲುಗು ಚಿತ್ರರಂಗ ಕಿಚ್ಚಾ ಸುದೀಪ್ ಪಾಲಿಗೆ ಹೊಸದೇನೂ ಅಲ್ಲ. ಅಲ್ಲಿ ಈಗಲೂ ಅವರು ನಟಿಸಿರೋ ಈಗ ಚಿತ್ರದ ಯಶಸ್ಸು ಹಾರಾಡುತ್ತಲೇ ಇದೆ. ಸುದೀಪ್ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರೋ ಬಹು ತಾರಾಗಣದ ಸೈರಾ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ವಿಚಾರ ಬಹು ಹಿಂದೆಯೇ ಜಾಹೀರಾಗಿತ್ತು. ಆದರೆ ಅದರಲ್ಲಿ ಕಿಚ್ಚನ ಪಾತ್ರವೇನೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇದೀಗ ಸೈರಾ ಚಿತ್ರದಲ್ಲಿ ಸುದೀಪ್ ಅವರ ಪಾತ್ರವೇನೆಂಬುದು ಬಯಲಾಗಿದೆ. ಅವರು ಈ ಚಿತ್ರದಲ್ಲಿ ಅವುಕು ಎಂಬ ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ! ಸೈರಾ ತೆಲುಗುನಾಡಿನ ಸ್ವಾತಂತ್ರ್ಯ […]
ಇಲ್ಲಿದೆ ಅಸಲೀ ವಿವರ….
ಯಜಮಾನ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಟನಿಗೆ ಹೊಡೆದಿದ್ದಾರೆ… ಹೀಗೊಂದು ಸುದ್ದಿ ಕೊಡಿಗೇಹಳ್ಳಿಯ ಶಿವರಾಮ್ ಅವರ ಸ್ಟುಡಿಯೋದಿಂದ ಹೊರ ಬಿದ್ದೇಟಿಗೆ ಒಂದರೆಕ್ಷಣ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ದರ್ಶನ್ ಅವರಿಗೆ ಸಿಟ್ಟು ತುಸು ಜಾಸ್ತಿ. ಅದೇ ಭರದಲ್ಲಿ ಏನೋ ಎಡವಟ್ಟು ಮಾಡಿಕೊಂಡು ಸಹನಟನಿಗೆ ಹೊಡೆದರಾ ಅಂತೊಂದು ಪ್ರಶ್ನೆಯನ್ನಿಟ್ಟುಕೊಂಡು ಹುಡುಕಾಟಕ್ಕಿಳಿದಾಗ ಈ ಬಗೆಗಿನ ಅಸಲೀ ಮ್ಯಾಟರ್ ಹೊರ ಬಿದ್ದಿದೆ! ಸತಃ ಈ ಚಿತ್ರದ ನಿರ್ಮಾಪಕ ಬಿ. ಸುರೇಶ ಸಿನಿಬಜ಼್ ಜೊತೆ ಮಾತಾಡಿ ಘಟನೆಯ ಪೂರ್ತಿ ವಿವರವನ್ನು ನೀಡಿದ್ದಾರೆ… […]
ಯಜಮಾನನನ್ನು ಭೇಟಿ ಮಾಡಿದ ಟಕ್ಕರ್!
ತೂಗುದೀಪ ಕುಟುಂಬದ ಮನೋಜ್ ನಾಯಕನಟನಾಗಿ ಎಂಟ್ರಿ ಕೊಡುತ್ತಿರುವ `ಟಕ್ಕರ್’ ಸಿನಿಮಾ ಶೂಟಿಂಗ್ ಸಮಯದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಸಿನಿಮಾ ಬಹುತೇಕ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣವನ್ನು ಪೂರೈಸುತ್ತಿದೆ. ಆರಡಿ ಹೈಟು, ರಗಡ್ ಲುಕ್ಕು ಹೊಂದಿರುವ ಮನೋಜ್ ಜೊತೆ ಯಂಗ್ ಅಂಡ್ ಎನರ್ಜೆಟಿಕ್ ವಿಲನ್ ಆಗಿ ಭಜರಂಗಿ ಲೋಕಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಎಚ್ ಎಂ ಟಿಯಲ್ಲಿ ಡಿಫರೆಂಟ್ ಡ್ಯಾನಿ ಸಂಯೋಜಿಸಿದ್ದ ಫಯರ್ ಫೈಟ್ ಕೂಡಾ ಅದ್ಭುತವಾಗಿ ಚಿತ್ರೀಕರಣಗೊಂಡಿದೆಯಂತೆ. ಕಿರುತೆರೆಯ […]
ಪಾಕಿಸ್ತಾನದ ಪರವಾಗಿ ಮಾತಾಡಿದರಾ ಉಪ್ಪಿ?
ಸುಮ್ಮನಿರಲಾರದೆ ಅದೇನೋ ಮಾಡಿಕೊಂಡರು ಅಂತಾರಲ್ಲಾ? ರಿಯಲ್ ಸ್ಟಾರ್ ಉಪೇಂದ್ರ ಅದನ್ನೇ ಮಾಡಿಕೊಂಡಂತಿದೆ. ಪ್ರಜಾಕೀಯ ಅಂತೊಂದು ಪಕ್ಷ ಮಾಡಿ ಇಡೀ ರಾಜಕೀಯ ವ್ಯವಸ್ಥೆಯ ದಿಕ್ಕುದೆಸೆಗಳನ್ನೇ ಬದಲಾಯಿಸುತ್ತೇನೆಂಬಂತೆ ಹ್ಞೂಂಕರಿಸುತ್ತಾ ಪುಟಿದೆದ್ದಿದ್ದವರು ಉಪೇಂದ್ರ. ಆದರೆ ನಿಜವಾದ ಯುದ್ಧ ಶುರುವಾಗೋ ಮುನ್ನವೇ ರಣರಂಗದಿಂದ ಪೇರಿಕಿತ್ತಿದ್ದ ಉಪ್ಪಿ ಬಗ್ಗೆ ಬಹುತೇಕರಿಗೆ ಸಿಟ್ಟಿತ್ತು. ಆದರೆ, ಚುನಾವಣೆಯೂ ಮುಗಿದು ಸಮ್ಮಿಶ್ರ ಸರ್ಕಸ್ಸು ಆರಂಭವಾದ ನಂತರ ಪ್ರಜಾಕೀಯವೆಂಬ ಹಳೇ ಸರಕನ್ನು ಎಲ್ಲರೂ ಮರೆತಂತಿದ್ದರು. ಆದರೆ ಉಪೇಂದ್ರ ಇತ್ತೀಚೆಗೆ ಮತ್ತೆ ಟ್ವೀಟ್ಟರ್ ಮೂಲಕ ಪ್ರಜಾಕೀಯದ ಪುಂಗಿಯೂದಿದ್ದಾರೆ. ಅಮೆರಿಕಾದ ನೂತನ ಅಧ್ಯಕ್ಷರು […]
ಟಾಲಿವುಡ್ಡಲ್ಲಿ ಪ್ರಣಾಂ ವೈರಂ!
ಕುಮಾರಿ ೨೧ಎಫ್ ಚಿತ್ರದ ಮೂಲಕವೇ ಸ್ಯಾಂಡಲ್ವುಡ್ಡಿಗೆ ಎಂಟ್ರಿ ಕೊಟ್ಟಿದ್ದವರು ಪ್ರಣಾಮ್. ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರನ ಈ ಚಿತ್ರಕ್ಕೆ ಕನ್ನಡದ ಪ್ರೇಕ್ಷಕರು ಮನಃಪೂರ್ವಕವಾಗಿಯೇ ಬೆಂಬಲಿಸಿದ್ದರು. ಈ ಚಿತ್ರದಲ್ಲಿ ಗಮನಾರ್ಹವಾದ ನಟನೆ ನೀಡಿದ್ದ ಪ್ರಣಾಮ್ ನಾಯಕನಾಗಿ ನೆಲೆ ನಿಲ್ಲುತ್ತಾನೆಂಬ ಭರವಸೆಯೂ ಹುಟ್ಟಿಕೊಂಡಿತ್ತು. ಇದೀಗ ಪ್ರಣಾಮನ ಹೊಸಾ ಚಿತ್ರ ಕನ್ನಡದಲ್ಲಿ ಶುರುವಾಗೋ ಮುನ್ನವೇ ಆತ ತೆಲುಗು ಚಿತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾನೆ. ಸಾಯಿ ಶಿವಾನಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರೋ ಈ ಚಿತ್ರದ ಮೋಷನ್ ಪೋಸ್ಟರ್ ಕೂಡಾ ಈಗಾಗಲೇ […]
ಛಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಶುಭ ಶ್ರಾವಣ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಎರಡೆರಡು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ಈ ಹೊತ್ತಿನಲ್ಲಿಯೇ ಮತ್ತೆರಡು ಹೊಸಾ ಚಿತ್ರಗಳೂ ಟೇಕಾಫ್ ಆಗಿವೆ. ಅದರಲ್ಲಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಚಿತ್ರ ಒಡೆಯ. ಟೈಟಲ್ ವಿವಾದದಿಂದಲೂ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಈ ಚಿತ್ರಕ್ಕೆ ಸೆಪ್ಟೆಂಬರ್ ಹತ್ತರಿಂದ ಚಿತ್ರೀಕರಣ ಚಾಲೂ ಆಗಲಿದೆ! ಕುರುಕ್ಷೇತ್ರ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸದಾ ಜಾರಿಯಲ್ಲಿದೆ. ಅಷ್ಟರಲ್ಲಿಯೇ ಯಜಮಾನ ಕೂಡಾ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ ಯಜಮಾನ ಚಿತ್ರದ ಎರಡು ಹಾಡುಗಳು […]