ಇದೆಲ್ಲಾ ಬೇಕಿತ್ತಾ ರಕ್ಷಿತಾ?
ಬರೀ ಪ್ರಚಾರಕ್ಕೆ ಮಾತ್ರ ಒತ್ತುಕೊಟ್ಟು ಚಿತ್ರವನ್ನು ಖಿಚಡಿಯಂತೆ ಮಾಡಿದರೆ ಏನಾಗುತ್ತದೆಂಬುದಕ್ಕೆ ದಿ ವಿಲನ್ ಚಿತ್ರ ಸಾಕ್ಷಿಯಾಗಿ ನಿಂತಿದೆ. ಭರ್ಜರಿ ಪ್ರಚಾರ ಮತ್ತು ಶಿವಣ್ಣ, ಸುದೀಪ್ ಫೇಸ್ ವ್ಯಾಲ್ಯೂ ಕಾರಣಕ್ಕೆ ಒಂದೆರಡು ದಿನ ಕಲೆಕ್ಷನ್ನಾಗಿದ್ದು ನಿಜ. ಆದರೀಗ ಪ್ರೇಮ್ ನಿರ್ದೇಶನದ ವಿಲನ್ನು ಬಸವಳಿದಿದ್ದಾನೆ. ಇದನ್ನು ನೋಡಿ ಮಂದಿಯಲ್ಲಿ ಬಹುತೇಕರು ಪ್ರೇಮ್ರನ್ನು ಗೇಲಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬಾ ಪತಿದೇವರಿಗೆ ಈ ಪರಿ ಪೂಜೆ ಪುನಸ್ಕಾರ ನಡೆಯುತ್ತಿರೋದನ್ನು ಕಂಡು ಕಂಗಾಲಾದ ರಕ್ಷಿತಾ ಇದೇ ಭರದಲ್ಲಿ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ. ಅವರು […]
ಪ್ರೇಮಬರಹದಲ್ಲಿ ಚಾನ್ಸ್ ಸಿಕ್ಕದ್ದಕ್ಕೆ ಚೇತನ್ ರಿವೇಂಜ್?
ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ದೌರ್ಜನ್ಯ ಆರೋಪವೀಗ ವಿವಾದದ ಕೇಂದ್ರಬಿಂದುವಾಗಿದೆ. ಬಹುತೇಕರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇದೀಗ ನಟ ಚೇತನ್ ಮತ್ತು ಪ್ರಕಾಶ್ ರೈ ಶ್ರುತಿ ಹರಿಹರನ್ಗೆ ಬೆಂಬಲ ನೀಡಿ ಮಾತಾಡುತ್ತಲೇ ಈ ವಿವಾದಕ್ಕೆ ರಾಜಕೀಯ ಅಜೆಂಡಾ ಹಾಗೂ ಧರ್ಮದ ಬಣ್ಣ ಮೆತ್ತಿಕೊಂಡಿದೆ! ಮೀಟೂ ಅಭಿಯಾನಕ್ಕೂ ಧರ್ಮಕ್ಕೂ ಎಲ್ಲಿಂದೆಲ್ಲಯ ಸಂಬಂಧ ಅನ್ನಿಸೋದು ಸಹಜವೇ. ಆದರೆ ಇಂಥಾದ್ದೊಂದು ಆರಂಭ ಮಾಡುತ್ತಿರುವವರು ಅದಕ್ಕೆ ಪೂರಕವಾದ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಆ ನಿಟ್ಟಿನಲ್ಲಿ […]
ಮಡಿಕೇರಿ ಕಾಡೊಳಗೆ ಕ್ಲೈಮ್ಯಾಕ್ಸ್ ಉದ್ಘರ್ಷ!
ಸುನೀಲ್ ಕುಮಾರ್ ದೇಸಾಯಿ… ಹೀಗೊಂದು ಹೆಸರು ಕೇಳುತ್ತಲೇ ಒಂದೊಳ್ಳೆ ಚಿತ್ರಗಳ ಸಾಲೇ ಕಣ್ಮುಂದೆ ಬರುತ್ತೆ. ತಾವು ನಿರ್ದೇಶಕನಾಗಿ ಬಂದ ನಂತರ ಜನರೇಷನ್ನೇ ಬದಲಾಗಿದ್ದರೂ ಅದಕ್ಕನುಗುಣವಾಗಿ ಅಪ್ಡೇಟ್ ಆಗಿರೋ ದೇಸಾಯಿ ಇದೀಗ `ಉದ್ಘರ್ಷ’ ಚಿತ್ರದ ಮೂಲಕ ಮೈಕೊಡವಿಕೊಂಡಿದ್ದಾರೆ. ಮಡಿಕೇರಿಯಲ್ಲಿ ನಡೆಯುತ್ತಿರೋ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ರೀತಿ ನೋಡಿದರೆ ಸುನೀಲ್ ಕುಮಾರ್ ದೇಸಾಯಿ ಹಳೇ ಖದರ್ರಿನೊಂದಿಗೆ ಎದ್ದು ನಿಲ್ಲೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ! ಇದೀಗ ಮಡಿಕೇರಿಯ ವಿಷಿಷ್ಠವಾದೊಂದು ಪ್ರದೇಶದಲ್ಲಿ ಉದ್ಘರ್ಷ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಅದು […]
ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಬಿಗ್ಬಾಸ್ ಮನೆಯೊಳಗೆ ರ್ಯಾಪಿಡ್ ಫಯರ್ ಶುರು! ಬಿಗ್ ಬಾಸ್ ರಿಯಾಲಿಟಿ ಶೋನ ಆರನೇ ಆವೃತ್ತಿಗೆ ಅದ್ದೂರಿ ಆರಂಭ ಸಿಕ್ಕಿದೆ. ತಿಂಗಳ ಹಿಂದೆಯೇ ಯಾರ್ಯಾರು ಬಿಗ್ಬಾಸ್ ಮನೆ ಸೇರಿಕೊಳ್ಳಬಹುದೆಂಬ ಬಗ್ಗೆ ಹುಟ್ಟಿಕೊಂಡಿದ್ದ ಕುತೂಹಲ, ಅಂತೆಕಂತೆಗಳಿಗೂ ತೆರೆ ಬಿದ್ದಿದೆ. ಬಿಗ್ ಎಫ್ಎಂ ರೇಡಿಯೋ ಜಾಕಿಯಾಗಿದ್ದುಕೊಂಡೇ ನಟಿಯಾಗಿ, ನಿರೂಪಕಿಯಾಗಿ ಮನೆ ಮಾತಾಗಿರೋ ರ್ಯಾಪಿಡ್ ರಶ್ಮಿ ಪ್ರಧಾನ ಆಕರ್ಷಣೆಯಾಗಿ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ! ಬಿಗ್ ಎಫ್ಎಂ ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ ಅಂದರೆ ಕಣ್ಣರಳಿಸೋ ಅಭಿಮಾನಿ ಪಡೆ ದೊಡ್ಡದಿದೆ. ಪಟ ಪಟನೆ […]
ಇಷ್ಟರಲ್ಲೇ ವೀಕ್ಷಿಸಲಿದ್ದಾರೆ ರವಿ ಚನ್ನಣ್ಣನವರ್!
ವಾರಗಳ ಹಿಂದೆ ತೆರೆ ಕಂಡಿದ್ದ ನಡುವೆ ಅಂತರವಿರಲಿ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ಹೇಳಿಕೊಳ್ಳುವಂಥಾ ಪ್ರಚಾರವಿಲ್ಲದಿದ್ದರೂ ಈ ಚಿತ್ರ ಹಾಡುಗಳ ಮೂಲಕವೇ ಸೌಂಡು ಮಾಡಿತ್ತು. ಪ್ರಚಾರದ ಕೊರತೆಯಾಚೆಗೂ ಕೂಡಾ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಮಾತುಗಳೇ ಈ ಚಿತ್ರವನ್ನು ವಾರದಿಂದ ವಾರಕ್ಕೆ ಟೇಕಾಫ್ ಆಗುವಂತೆ ಮಾಡುತ್ತಿದೆ. ಯುವ ಮನಸುಗಳ ಕಥನ ಹೊಂದಿರೋ ಈ ಚಿತ್ರವನ್ನೀಗ ಕುಟುಂಬ ಸಮೇತರಾಗಿ ಬಂದು ನೋಡುವವರ ಸಂಖ್ಯೆ ಹೆಚ್ಚಿದೆ. ಇದು ಪ್ರಚಾರದ ದುನಿಯಾ. ಹೀನಾಮಾನ ಪ್ರಚಾರ ಮಾಡಿ ಹೈಪು ಸೃಷ್ಟಿಸಿದ […]
ಮಾಸ್ ಬಿಲ್ಡಪ್ಪಿಲ್ಲದೆಯೂ ಮನಮಟ್ಟುವ ಪ್ರಶಾಂತ ತವಕ!
ಒರಟ ಐ ಲವ್ ಯೂ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಶಾಂತ್. ಆ ನಂತರದಲ್ಲಿ ಒರಟ ಪ್ರಶಾಂತ್ ಎಂದೇ ಹೆಸರಾದ ಅವರು ನಟಿಸಿದ್ದೆಲ್ಲ ಮಾಸ್ ಪಾತ್ರಗಳಲ್ಲಿಯೇ. ನಿಜವಾದ ಕಲಾವಿದನಿಗೆ ಒಂದೇ ವೆರೈಟಿಯ ಪಾತ್ರಗಳು ಅದೆಷ್ಟೇ ಆಕರ್ಷಕವಾಗಿ ಕಂಡರೂ ಏಕತಾನತೆ ಹುಟ್ಟಿಸಿ ಬಿಡುತ್ತವೆ. ಪ್ರಶಾಂತ್ ಹೇಳಿಕೇಳಿ ರಂಗಭೂಮಿಯಲ್ಲಿಯೇ ನಟನಾಗಿ ರೂಪುಗೊಂಡವರು. ಸೂಕ್ಷ್ಮತೆಯನ್ನು ತುಸು ಹೆಚ್ಚೇ ಧರಿಸಿಕೊಂಡಿರುವ ಅವರು ಅಂಥಾದ್ದೊಂದು ಏಕತಾನತೆಗೀಡಾಗಿ ಬದಲಾವಣೆ ಬಯಸಿ ಬಹು ಕಾಲವಾಗಿದೆ. ಅದಕ್ಕೆ ಪೂರಕವಾಗಿ ಸಿಕ್ಕಿದ್ದು ಕಿರಣ್ ಗೋವಿ […]
ಆವತ್ತೇ ಮೀಟಬಹುದಿತ್ತಲ್ಲಾ ತಾಯಿ!
ಈಗ ದೇಶಾದಂತ ಮೀಟೂ ಅಭಿಯಾನವೊಂದು ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಗುರಿಯಿಟ್ಟಿರೋ ಈ ಹೋರಾಟ ಗೌರವಿಸುವಂಥಾದದ್ದೇ. ಆದರೆ ಇದೀಗ ಈ ಅಭಿಯಾನ ಕಹಳತಪ್ಪಿದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಕೆಲ ನಟಿಯರು ಮೀಟೂ ಆರೋಪ ಮಾಡೋ ಮೂಲಕ ಯಾರದ್ದೋ ಮಾನ ಹರಾಜು ಹಾಕಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವ ಖಯಾಲಿ ಆರಂಭಿಸಿದ್ದಾರೆ. ಈ ಕಾಯಿಲೆ ಬಾಲಿವುಡ್ನಲ್ಲಿಯೂ ಇದೆ. ಈಗ ಸ್ಯಾಂಡಲ್ವುಡ್ಡಿಗೂ ಅಮರಿಕೊಂಡಿದೆ! ಈ ಕಾಯಿಲೆ ಸ್ಯಾಂಡಲ್ವುಡ್ಡಿಗೂ ಕಾಲಿಟ್ಟಿದ್ದರ ಸೂಚನೆ ಎಂಬಂತೆ ನಟಿ ಶ್ರುತಿ ಹರಿಹರನ್ ಅರ್ಜುನ್ […]
ಇದು ಕನ್ನಡಪ್ರೇಮಿ ಹುಡುಗನ ಮೊದಲ ಕನಸು!
ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳ ಅಲೆಯಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಂಡಿರೋ ಚಿತ್ರ ರುದ್ರಾಕ್ಷಿಪುರ. ಹೆಸರಲ್ಲೇ ಒಂಥರಾ ರಹಸ್ಯ ಬಚ್ಚಿಟ್ಟುಕೊಂಡಿರೋ ಈ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ ಎಂಬುದಷ್ಟೇ ಈವರೆಗೆ ಬಯಲಾಗಿರೋ ಅಂಶ. ಇದನ್ನು ಹೊರತಾಗಿಸಿ ಮತ್ತೆಲ್ಲವನ್ನೂ ನಿಗೂಢವಾಗಿಟ್ಟಿರೋ ನಿರ್ದೇಶಕ ಈಶ್ವರ್ ಪೋಲಂಕಿ ಪಾಲಿಗಿದು ಮೊದಲ ಕನಸು! ಶಿಲ್ಪಿಯೂ ಆಗಿರುವ ನಾಗರಾಜ್ ಮುರುಡೇಶ್ವರ್ ನಿರ್ಮಾಣದ ಚಿತ್ರ ರುದ್ರಾಕ್ಷಿಪುರ. ದಾವಣಗೆರೆಯ ಹುಡುಗ ಅರ್ಜುನ್ ಸಹಾನ್ ಮತ್ತು ರೂಪಿಕ ಈ ಚಿತ್ರದಲ್ಲಿ ನಾಯಕ, ನಾಯಕಿಯರಾಗಿ ಅಭಿನಯಿಸಿದ್ದಾರೆ. ರವಿ ಚೇತನ್ ವಿಲನ್ ಆಗಿ ಆರ್ಭಟಿಸಿದ್ದಾರೆ. ಥ್ರಿಲ್ಲರ್ […]
ಎಂಥೋಳನ್ನು ಹಿಡ್ಕೊಂಡ್ಬಂದ್ರಿ ಭೈರೇಗೌಡ್ರೇ!
ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. ಆದರೆ ವಿಲನ್ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆಮಿ ಜಾಕ್ಸನ್ ಎಂಬ ಅವಿವೇಕಿಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿಲ್ಲ! ವಿಲನ್ ಚಿತ್ರ ತೆರೆಕಾಣುತ್ತಿರೋ ವಿಷಯವೊಮದನ್ನು ಅರ್ಥ ಮಾಡಿಕೊಂಡಿರುವ ಲಂಡನ್ ರಾಣಿ ಆಮಿ ಟ್ವಟರ್ ಮೂಲಕ ಕಾಟಾಚಾರಕ್ಕೊಂದು ವಿಶ್ ಮಾಡಿದ್ದಾಳೆ. ತಾನೇ ನಟಿಸಿದ ಚಿತ್ರದ […]
ಅಯ್ಯಪ್ಪ ಮಾಲೆ ಧರಿಸಿ ಮಾದಕ ಪೋಸು!
ಸುಪ್ರೀಂ ಕೋರ್ಟ್ ಅಯ್ಯಪ್ಪ ಸ್ವಾಮಿ ದೇವಳದ ಬಗ್ಗೆ ನೀಡಿರೋ ತೀರ್ಪೊಂದು ಈಗ ವಿವಾದದ ಕೇಂದ್ರರ ಬಿಂದುವಾಗಿದೆ. ಒಂದು ವಲಯದ ಮಂದಿಯನ್ನು, ಸಂಘಟನೆಗಳನ್ನು ಕೆರಳಿಸಿದೆ. ದೇವಳದೊಳಗೆ ಮಹಿಳೆಯರೇನಾದರೂ ಪ್ರವೇಶ ಮಾಡಿದರೆ ಎಲ್ಲ ಧಾರ್ಮಿಕ ವಿಧಿ ವಿಧಾನದಿಂದ ದೂರವಿರೋದಾಗಿ ಪಂದಳ ಮನೆತನದ ಮಂದಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಅಯ್ಯಪ್ಪನ ಮಾಲೆ ಧರಿಸಿ ಪೊಲೀಸ್ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡದವಳು ರೆಹಾನಾ ಫಾತಿಮಾ! cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ https://www.instagram.com/cinibuzzsandalwood/?fbclid=IwAR2Y-mLeHQy5S4BVSEErCUaOzCJf6y9DFpJUAkQqrVIX0NhgN75gxHQcQ_0 ಈಕೆ ವರ್ಷಾಂತಗಳ ಹಿಂದೆ ಕೇರಳದಲ್ಲಿ ಕಿಸ್ ಆಫ್ […]