ಸಾಲಿಗ್ರಾಮದಲ್ಲಿರೋದು ಬರೀ ಭೂತವಷ್ಟೇ ಅಲ್ಲ! ಮೊದಲ ಹೆಜ್ಜೆಯಲ್ಲಿ ಸವಾಲಿನ ಹಾದಿ ತುಳಿದ ಹರ್ಷ!
ಕನ್ನಡ ಚಿತ್ರರಂಗದಲ್ಲಿ ಈಗೊಂದು ವರ್ಷದಿಂದೀಚೆಗೆ ಅವ್ಯಾಹತವಾಗಿ ಹಾರರ್ ಚಿತ್ರಗಳ ಗಾಳಿ ಬೀಸಲಾರಂಭಿಸಿವೆ. ಹೊಸಾ ಥರದ ಕಥೆ, ನಿರೂಪಣೆ ಇದ್ದರೆ ಈ ಜಾನರಿನ ಚಿತ್ರಗಳನ್ನು ಪ್ರೇಕ್ಷಕರು ಕೈ ಬಿಡೋದಿಲ್ಲ ಎಂಬ ನಂಬಿಕೆಯೂ ಈಗಾಗಲೇ ಹುಟ್ಟಿಕೊಂಡಿದೆ. ಇದೀಗ ಪೂರ್ಣ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡು ಬಿಡುಗಡೆಗೆ ಸಜ್ಜಾಗಿರೋ ಸಾಲಿಗ್ರಾಮ ಚಿತ್ರವೂ ಹಾರರ್ ಜಾನರಿನದ್ದೇ. ಆದರೆ ಹೆಸರಿಗೆ ತಕ್ಕ ಹಾಗೆ ಈವರೆಗಿನ ಹಾರರ್ ಕಥಾನಕಗಳಿಗಿಂತಲೂ ಈ ಚಿತ್ರವನ್ನು ಭಿನ್ನವಾಗಿ ರೂಪಿಸಿದ ಭರವಸೆ ನಿರ್ದೇಶಕ ಹರ್ಷ ನಾರಾಯಣಸ್ವಾಮಿ ಅವರದ್ದು. ಸಾಲಿಗ್ರಾಮ ಚಿತ್ರ ಹರ್ಷ ನಿರ್ದೇಶನದಲ್ಲಿ […]
ಪ್ರೇಕ್ಷಕರಿಗೆ ಸಿಕ್ಕಿತು ಆರೆಂಜ್ ಟ್ರೈಲರ್ ಸ್ವಾದ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಬಿಡುಗಡೆಗೆ ವಾರ ಮಾತ್ರ ಉಳಿದಿದೆ. ಇದೀಗ ಈ ಚಿತ್ರದ ಅಫಿಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ಆರೆಂಜಿಂನ ಅಸಲೀ ಸ್ವಾದದ ಅಂದಾಜು ಸಿಗುವಂತೆ ಹೊರ ಬಂದಿರೋ ಈ ಟ್ರೈಲರ್ ಈಗ ವ್ಯಾಪಕವಾಗಿ ಸದ್ದು ಮಾಡಲಾರಂಭಿಸಿದೆ. ಅಷ್ಟಕ್ಕೂ ಈ ಟ್ರೈಲರ್ ಇದೇ ನವೆಂಬರ್ ತಿಂಗಳ ೨೪ರಂದೇ ಬಿಡುಗಡೆಯಾಗಬೇಕಿತ್ತು. ನಿರ್ದೇಶಕ ಪ್ರಶಾಂತ್ ರಾಜ್ ಉತ್ಸಾಹದಿಂದಲೇ ಅದಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಆಶ ದಿನವೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ಸಂಭವಿಸಿತ್ತು. ಬಸ್ ನಾಲೆಗೆ ಉರುಳಿ ಹಲವಾರು […]
ರಜನಿ ಸಿನಿಮಾವನ್ನು ಕಾಡಿದ ಪಕ್ಷಿ ದೆವ್ವ!
ಬರೋಬ್ಬರಿ ನಾಲಕ್ಕು ವರ್ಷಗಳ ದೀರ್ಘ ಅವಧಿಯನ್ನು ತೆಗೆದುಕೊಂಡು ನಿರ್ದೇಶಕ ಶಂಕರ್ ತಯಾರಿಸಿರುವ ಸಿನಿಮಾ ೨.೦ ಮೊಬೈಲ್ ತರಂಗಗಳು ಮತ್ತದರಿಂದಾಗುತ್ತಿರುವ ಎಡವಟ್ಟುಗಳು ಒಂದೆರಡಲ್ಲ. ಬೇರ್ಯಾವ ದೇಶದಲ್ಲೂ ಇಲ್ಲದಷ್ಟು ಮೊಬೈಲ್ ನೆಟ್ವರ್ಕ್ಗಳು ಇಂಡಿಯಾದಲ್ಲಿವೆ. ಮೊಬೈಲ್ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಕಾರಣಕ್ಕಾಗಿ ನಿಯಮವನ್ನು ಮೀರಿ ಹೆಚ್ಚಿಗೆ ರೇಡಿಯೇಷನ್ ಗಳನ್ನು ಬಳಸುತ್ತಿರುವುದರಿಂದ ಬಹುಮುಖ್ಯವಾಗಿ ಬಾಧೆಗೊಳಗಾಗಿರುವುದು ಪಕ್ಷಿ ಸಂಕುಲ. ಮೊಬೈಲ್ ತರಂಗಾಂತರಗಳಿಂದ ಗುಬ್ಬಚ್ಚಿಯಂತಾ ಪುಟ್ಟ ಗಾತ್ರದ ಪಕ್ಷಿಗಳು ಎದೆ ಸಿಡಿದು ಸಾಯುತ್ತಿವೆ. ಜೀವಪರ ಕಾಳಜಿಯುಳ್ಳ ಸಂಘಟನೆಗಳು, ಪಕ್ಷಿಶಾಸ್ತ್ರಜ್ಞರು ಅದೆಷ್ಟೇ ಕೂಗಾಡಿದರೂ, ಎಲ್ಲ ವಿರೋಧಗಳ […]
ವಿಷ್ಣು ಸ್ಮಾರಕ ವಿವಾದ : ಅತ್ತೆ ಭಾರತಿಯ ಅವಿವೇಕಿ ಅಳಿಯ ಅನಿರುದ್ಧ!
ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮರೆಯಾಗುತ್ತಲೇ ಮತ್ತೆ ವಿಷ್ಣು ಸ್ಮಾರಕದ ವಿಚಾರ ಹೊಗೆಯಾಡಲಾರಂಭಿಸಿದೆ. ನಿಜ, ವಿಷ್ಣುರಂಥಾ ನಟರ ಸ್ಮಾರಕ ನಿರ್ಮಾಣ ಈ ಪಾಟಿ ಕಗ್ಗಂಟಾಗಿರೋದು ಒಳ್ಳೆ ಬೆಳವಣಿಗೆಯಲ್ಲ. ಆದರೆ ಅದಕ್ಕೆ ಕಾರಣ ಸರ್ಕಾರವಲ್ಲ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಭಾರತೀ ಮೇಡಮ್ ಬೇರೇನೋ ಲೆಕ್ಕಾಚಾರ ಹಾಕಿಕೊಂಡು ಕೂತಿರೋದರಿಂದಲೇ ಈ ವಿಚಾರ ಇಷ್ಟು ಜಟಿಲ ರೂಪ ಪಡೆದಿದೆ ಎಂಬುದೂ ಜಾಹೀರಾಗಿದೆ. ಹಾಗಿದ್ದರೂ ಕೂಡಾ ಭಾರತೀ ಅಳಿಯ ಅನಿರುದ್ಧ ಥೇಟು ಅವಿವೇಕಿಯಂತೆ ಮಾತಾಡಿದ್ದಾನೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನೂ ಜರಿದಿದ್ದಾನೆ. ಇದಕ್ಕಾಗಿ ಸಿಎಂ ಕಡೆಯಿಂದಲೇ […]
ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!
ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ! ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ! […]
ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!
ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ! ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ! […]
ಬಿಂದಾಸ್ ಸಂತೋಷ್ ನಿರ್ದೇಶನದಲ್ಲಿ ಮೃತ್ಯುಲಿಪಿ ಪುರಾಣಂ!
ಪಾರ್ವತಮ್ಮ ರಾಜ್ಕುಮಾರ್ ಅವರ ತಂಗಿ ಮಗ ಸಂತೋಷ್ ಕುಮಾರ್ ಮತ್ತೊಂದು ಚಿತ್ರದೊಂದಿಗೆ ಮರಳಿದ್ದಾರೆ. ಈ ಹಿಂದೆ ಸ್ಟೂಡೆಂಟ್ಸ್, ಬಿಂದಾಸ್ ಗೂಗ್ಲಿ ಎಂಬ ಯುವ ಕಥನಗಳನ್ನು ಚಿತ್ರವಾಗಿಸಿದ್ದ ಸಂತೋಷ್, ಇದೀಗ ಹಾರರ್ ಥ್ರಿಲ್ಲರ್ ಕಥಾನಕದೊಂದಿಗೆ ಬರಲು ತಯಾರಾಗಿದ್ದಾರೆ. ಸಂತೋಷ್ ಕುಮಾರ್ ಅವರ ಹೊಸಾ ಚಿತ್ರಕ್ಕೆ ‘ಮೃತ್ಯುಲಿಪಿ ಪುರಾಣಂ’ ಎಂಬ ಶೀರ್ಷಿಕೆಯೂ ಫೈನಲ್ ಆಗಿದೆ. ಈ ಚಿತ್ರವನ್ನು ಅದ್ದೂರಿಯಾಗಿಯೇ ತಯಾರಿಸಲು ರೆಡಿಯಾಗಿರೋ ಅವರು, ಏಕಕಾಲದಲ್ಲಿಯೇ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿಯೂ ಈ ಚಿತ್ರವನ್ನು ರೂಪಿಸಲಿದ್ದಾರೆ. ದಕ್ಷಿಣ ಭರತೀಯ ಚಿತ್ರರಂಗದಲ್ಲಿ ಭಾರೀ […]
ವಿದೇಶದಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ರೀ ರಿಲೀಸ್ ಬಂದ ಹಣದಲ್ಲಿ ನಡೆಯಲಿದೆ ಸಾರ್ಥಕ ಕೆಲಸ!
ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಗುರುದತ್ ನಿರ್ದೇಶನದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೂಲಕವೇ […]
ಬಿಗ್ಬಾಸ್ ರಾಕಿ: ಟಾಸ್ಕಿಗೆ ಚಕ್ಕರ್ ಹುಡ್ಗೀರಿದ್ದಲ್ಲಿ ಹಾಜರ್!
ಬಿಗ್ಬಾಸ್ ಶೋನ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಸೀಜನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಆಂಡಿಯೆಂಬಾತನಂತೂ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಾನೆ. ಒಂದು ವೇಳೆ ಪ್ರೇಕ್ಷಕರ ಓಟೇ ಅಂತಿಮ ಅಂತಾಗಿದ್ದರೆ ಈತ ಎರಡೇ ವಾರಕ್ಕೆ ಎಗರಿ ಬೀಳುತ್ತಿದ್ದ. ಈ ಆಂಡಿ, ಅಕ್ಷತಾ ಮುಂತಾದ ವಿಚಿತ್ರ ಎಲಿಮೆಂಟುಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವಾತ ರಾಕೇಶ್! ತಾನು ರೇಡಿಯೋ ಜಾಕಿ, ಮಹಾನ್ ಸಾಧಕ ಮತ್ತು ಅಖಂಡ ಇನ್ನೂರು ಹುಡುಗೀರನ್ನು ಮೇಂಟೇನು ಮಾಡಿದ ಸಾಧಕ ಅಂತ ಪುಂಗುತ್ತಲೇ ಬಿಗ್ಬಾಸ್ ಮನೆ […]
ಚರಂತಿ ಪಟ್ಟ ಕಷ್ಟವೂ ಸಾರ್ಥಕವಾಯ್ತೆಂದರು ಡಾ ಪರಶುರಾಮ ರಾವಲ್!
ಉತ್ತರಕರ್ನಾಟಕ ಶೈಲಿಯ ಜಬರ್ದಸ್ತ್ ಚಿತ್ರ ಚರಂತಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಡುಗಳು ಮತ್ತು ಟ್ರೈಲರ್ ಮೂಲಕವೇ ಪ್ರೇಕ್ಷಕರನ್ನು ಆಕರ್ಷಿಸಿರೋ ಈ ಚಿತ್ರವನ್ನು ಮಹೇಶ್ ರಾವಲ್ ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಎದುರಾದ ಅಡೆತಡೆ, ಒಂದಷ್ಟು ನಿರಾಸೆಗಳನ್ನೆಲ್ಲ ಜಯಿಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ಡಾ. ಪರಶುರಾಮ ರಾವಲ್. ಪರಶುರಾಮ ರಾವಲ್ ನಟ, ನಿರ್ದೇಶಕ ಮಹೇಶ್ ರಾವಲ್ ಅವರ ಖಾಸಾ ಸಹೋದರ. ಬನಹಟ್ಟಿಯ ಜನರ ಪಾಲಿಗೆ ಅವರು ಚಿರಪರಿಚಿತರು. ಆತ್ಮೀಯರು. ವೃತ್ತಿಯಲ್ಲಿ ವೈದ್ಯರಾಗಿರೋ ಅವರು […]