ಹೊಸ ವರ್ಷದ ಉನ್ಮಾದಕ್ಕೆ ನಟಸಾರ್ವಭೌಮನ ಸಾಥ್!
ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸಾ ವರ್ಷ ಕಣ್ತೆರೆಯಲಿದೆ. ಹಳತನ್ನು ಬೀಳ್ಕೊಟ್ಟು ಹೊಸತನ್ನು ಎದುರುಗೊಳ್ಳೋ ಸಂಭ್ರಮಕ್ಕೆ ಪುನೀತ್ ರಾಜ್ಕುಮಾರ್ ನಟಸಾರ್ವಭೌಮ ಚಿತ್ರದ ಹಾಡೊಂದರ ಮೂಲಕ ಜೊತೆಯಾಗಿದ್ದಾರೆ. ಎಣ್ಣೆ ಹೊಡೆಯೋರ ಮನಗೆದ್ದ, ಆ ಸಂಭ್ರಮವನ್ನು ಹೆಚ್ಚಿಸಿದ, ಹುಚ್ಚೆದ್ದು ಕುಣಿಯುವಂತೆ ಮಾಡಿಡಿದ ಹಾಡುಗಳು ಸಾಕಷ್ಟಿವೆ. ಆ ಸಾಲಿಗೆ ಸೇರುವಂಥಾ ಸಾಂಗೊಂದು ನಟಸಾರ್ವಭೌಮ ಚಿತ್ರದ ಕಡೆಯಿಂಣದ ಬಿಡುಗಡೆಯಾಗಿದೆ. ನಿರ್ದೇಶಕ ಪವನ್ ಒಡೆಯರ್ ಹೊಸಾ ವರ್ಷದ ಸಂಭ್ರಮ ಹೆಚ್ಚಿಸಲೆಂದೇ ನಟಸಾರ್ವಭೌಮದ ಈ ಎಣ್ಣೆ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಬರೆದಿರುವವರು ಯೋಗರಾಜ ಭಟ್. […]
ಕನ್ನಡ ಚಿತ್ರರಂಗದ ಪ್ರೀತಿಯ ಅಂಕಲ್ ಲೋಕನಾಥ್ ಇನ್ನಿಲ್ಲ…
ಕನ್ನಡ ಚಿತ್ರರಂಗದ ಹಿರಿಯರನೇಕರು ಒಬ್ಬರ ಹಿಂದೊಬ್ಬರಂತೆ ಎದ್ದು ಹೋಗುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ತಿಂಗಳಾಗುತ್ತಲೇ ಹಿರಿಯ ನಟ ಅಂಕಲ್ ಲೋಕನಾಥ್ ನಿರ್ಗಮಿಸಿದ್ದಾರೆ. ವಯೋಸಹಜ ಕಾಯಿಲೆಗಳಿದ್ದರೂ ಸದಾ ಸಿನಿಮಾ ಸಂಪರ್ಕದಲ್ಲಿದ್ದ, ಸಮಾರಂಭಗಳಿಗೆ ಉತ್ಸಾಹದಿಂದಲೇ ಹಾಜರಾಗುತ್ತಿದ್ದ ಲೋಕನಾಥ್ ಎಲ್ಲರ ಪ್ರೀತಿ ಪಾತ್ರರಾಗಿದ್ದವರು. ದಶಗಳ ಸಿನಿಮಾ ನಂಟಿನಲ್ಲಿ ಥರ ಥರದ ಪಾತ್ರಗಳಿಂದ ಚಿರಪರಿಚಿತರಾಗಿದ್ದ ಅವರಿನ್ನು ನೆನಪು ಮಾತ್ರ… ಅವರಿಗೆ ತೊಂಭತ್ತು ವರ್ಷವಾಗಿತ್ತು. ಆದರೆ ವಯೋ ಸಹಜವಾದ ಬಳಲಿಕೆ ಬಿಟ್ಟರೆ ಯುವಕರಿಗೂ ಸ್ಫೂರ್ತಿಯಾಗುವಂಥಾ ಲವಲವಿಕೆ ಅವರ ವ್ಯಕ್ತಿತ್ವದ ಪ್ರಧಾನ ಆಕರ್ಷಣೆಯಾಗಿತ್ತು. ಬಹುಶಃ […]
ಕಥೆ ಹೇಳಲು ಬಂದ ಗಿಣಿಗುಂಟು ರಂಗಭೂಮಿಯ ನಂಟು!
ಕಳೆದ ವರ್ಷದ ಆರಂಭದ ಹೊತ್ತಿಗೆಲ್ಲ ಕನ್ನಡ ಚಿತ್ರರಂಗ ಹೊಸಾ ಆಲೋಚನೆ, ವಿಭಿನ್ನ ಪ್ರಯೋಗಗಳಿಂದ ಸಂಪನ್ನವಾಗಿತ್ತು. ಅದು ಯಥಾಪ್ರಕಾರ ಹಂತ ಹಂತವಾಗಿ ಮುಂದುವರೆದುಕೊಂಡು ಬಂದಿದೆ. ಇದೀಗ ಅದೇ ಸಾಲಿನಲ್ಲಿರೋ ಗಿಣಿ ಹೇಳಿದ ಕಥೆ ಎಂಬ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿ ಜೋರಾಗಿಯೇ ಚಾಲ್ತಿಯಲ್ಲಿದೆ. ಇನ್ನೇನು ಬಿಡುಗಡೆಗೆ ದಿನಗಣನೆ ಎಣಿಸುತ್ತಿರೋ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ನಾಗರಾಜ್ ಉಪ್ಪುಂದ. ಗಿಣಿ ಹೇಳಿದ ಕಥೆಗೆ ಕಥೆ ಬರೆದು, ಚಿತ್ರಕಥೆ ಸಂಭಾಷಣೆಯನ್ನೂ ಸೃಷ್ಟಿಸಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿರುವವರು ದೇವ್ ರಂಗಭೂಮಿ. ಈ ಚಿತ್ರಕ್ಕೆ ನಾಯಕನೂ […]
ಇಂದು ಭುವನ್ ಬರ್ತಡೇ ನಾಳೆ ಸ್ಪೆಷಲ್ ಗಿಫ್ಟು ಕೊಡಲಿದೆ ರಾಂಧವ ಟೀಮ್!
ಬಿಗ್ಬಾಸ್ ಶೋನ ನಂತರ ಭುವನ್ ಭಾರೀ ಸದ್ದು ಮಾಡುತ್ತಿರೋದು ರಾಂಧವ ಚಿತ್ರದ ಮೂಲಕ. ಈ ಸಿನಿಮಾದಿಂದಲೇ ನೆಲೆನಿಲ್ಲೋ ಕನಸು ಹೊಂದಿರೋ ಭುವನ್ ಇಂದು ಹುಟ್ಟಿದ ಹಬ್ಬದ ಸಂಭ್ರಮದಲ್ಲಿದ್ದಾರೆ. ಭುವನ್ ಸಂಭ್ರಮದ ಭಾಗವಾಗಿರೋ ರಾಂಧವ ಚಿತ್ರತಂಡ ನಾಳೆ ಸರಿಯಾದೊಂದು ಗಿಫ್ಟು ಕೊಡಲು ನಿರ್ಧರಿಸಿದೆ! ಆ ಗಿಫ್ಟು ರಾಂಧವ ಚಿತ್ರದ ಟ್ರೈಲರ್ ರೂಪದಲ್ಲಿರಲಿದೆ. ಭುವನ್ ಬರ್ತಡೇ ಸಂಭ್ರಮದ ನೆಪದಲ್ಲಿಯೇ ಈ ಟ್ರೈಲರ್ ಅನ್ನು ಬಿಡುಗಡೆ ಮಾಡಲು ರಾಂಧವ ಚಿತ್ರತಂಡ ಮುಂದಾಗಿದೆ. ಸುಕೃತಿ ಚಿತ್ರಾಲಯ ಬ್ಯಾನರ್ನಡಿಯಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿರೋ […]
ನಾತಿಚರಾಮಿಎಂಬಕಾಡುವ_ಕಥೆ…
” ಜಗತ್ತಿನ ಯಾವುದೇ ಗಂಡು ಅಥವಾ ಹೆಣ್ಣು ,ಮತ್ಯಾವುದೇ ಹೆಣ್ಣು ಅಥವಾ ಗಂಡಿನಿಂದ ಪಡೆಯಬಹುದಾದ ದೈಹಿಕ ಸುಖ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೂ ನಾವು ಇಂಥವರನ್ನೇ ಪ್ರೀತಿಸಬೇಕು , ಇಂಥವರೊಟ್ಟಿಗೇ ಬದುಕಬೇಕು ಎಂಬ ಅಂಶ ಅದೆಷ್ಟು ವಿಸ್ಮಯವನ್ನುಂಟುಮಾಡಬಲ್ಲದು ಅಲ್ಲವೆ ?” ನಾತಿಚರಾಮಿ ಸಿನಿಮಾ ನನಗೆ ಅರ್ಥವಾಗಿದ್ದು ಹೀಗೆ . ತುಂಬಾ ಪ್ರೀತಿಸಿದ ಗಂಡನ ಅಕಾಲಿಕ ಮರಣದಿಂದ ತ್ತತ್ತರಿಸಿದ ಹೆಣ್ಣೋರ್ವಳಿಗೆ ಆತನನ್ನು ಮಾನಸಿಕವಾಗಿ ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕೆಂಬ ಅಸಂಗತ ಬಯಕೆ. ಆದರೆ ವಯೋಸಹಜವಾಗಿ ದೈಹಿಕವಾದ ವಾಂಛೆಗಳು ಗಂಡೊಂದರ ‘ಸಹವಾಸ’ವನ್ನು […]
ಪರದೇಸಿ ಕೇರಾಫ್ ಲಂಡನ್: ಪಕ್ಕಾ ಫ್ಯಾಮಿಲಿ ಎಂಟರ್ಟೈನರ್!
ಒಂದು ಯಶಸ್ವೀ ಚಿತ್ರ ನೀಡಿದ ಜೋಡಿ ಮತ್ತೆ ಒಂದಾದಾಗ ನಿರೀಕ್ಷೆಗಳು ಗರಿಗೆದರೋದು ಸಹಜ. ಅದರಂತೆಯೇ ರಾಜ ಲವ್ಸ್ ರಾಧೆ ಚಿತ್ರದ ಮೂಲಕ ಗೆಲುವು ದಾಖಲಿಸಿದ್ದ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಕಾಂಬಿನೇಷನ್ನಿನ ಎರಡನೇ ಚಿತ್ರ ಪರದೇಸಿ ಕೇರಾಫ್ ಲಂಡನ್ ಬಗ್ಗೆಯೂ ಅಂಥಾದ್ದೇ ಕುತೂಹಲವಿತ್ತು. ಅದೆಲ್ಲವೂ ಈಗ ತಣಿದಿದೆ. ಆರಂಭದಿಂದಲೂ ಸುದ್ದಿಯಲ್ಲಿದ್ದ ಈ ಚಿತ್ರವೀಗ ಅದ್ದೂರಿಯಾಗಿಯೇ ಬಿಡುಗಡೆಗೊಂಡಿದೆ. ನಿರ್ದೇಶಕ ರಾಜಶೇಖರ್ ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿ ಕಟ್ಟಿ ಕೊಟ್ಟಿದ್ದಾರೆ. ಮಜವಾದೊಂದು ಕಥೆ, ಅದಕ್ಕೆ […]
ಬಯಕೆ ತೋಟಕ್ಕೆ ಬೇಲಿ ಬೇಕಾ?
ಹೆಣ್ಣೊಬ್ಬಳ ಒಳತೋಟಿಗಳನ್ನು ಇಂಚಿಂಚಾಗಿ ಬಿಚ್ಚಿಟ್ಟಿರುವ ಸಿನಿಮಾ ನಾತಿಚರಾಮಿ. ಪ್ರೀತಿಸಿ ಎರಡೂ ಕಡೆಯವರ ವಿರೋಧದ ನಡುವೆಯೂ ಮದುವೆಯಾಗಿ, ಐದು ವರ್ಷ ಅನ್ಯೋನ್ಯವಾಗಿ ಬಾಳಿ, ಒಬ್ಬರನ್ನೊಬ್ಬರು ಅರಿತು ಒಬ್ಬರ ಹೆಜ್ಜೆಮೇಲೊಬ್ಬರು ಪಾದವಿಟ್ಟು ನಡೆದ ಜೀವಗಳಿಗೆ ದಾಂಪತ್ಯದ ಪ್ರತೀ ಕ್ಷಣವೂ ರಸಘಳಿಗೆ. ಇಂಥಾ ಸವಿ ಅನುಭವಿಸಿದ ನಂತರ ಆ ಇಬ್ಬರಲ್ಲಿ ಒಬ್ಬರು ಮಿಸ್ಸಾಗಿಬಿಟ್ಟರೆ ಏನಾಗಬೇಡ? ನಾತಿಚರಾಮಿ ಚಿತ್ರದ ಹಿನ್ನೆಲೆ ಕೂಡಾ ಇಂಥದ್ದೇ. ಲವ್ ಮಾಡಿ ಮದುವೆಯಾದ ಹುಡುಗನನ್ನು ತೀರಾ ಹಚ್ಚಿಕೊಂಡು ಬದುಕಿದವಳ ಬಾಳಲ್ಲಿ ಘೋರ ದುರಂತವೊಂದು ನಡೆಯುತ್ತೆ. ಅದೊಂದು ದಿನ ಅಪಘಾತಕ್ಕೆ […]
ಕೆ.ಜಿ.ಎಫ್: ಇದು ಯಾರ ಗೆಲುವು? ನೂರಾರು ಮಂದಿ ಅಗೆಯದಿದ್ದ ಚಿನ್ನ ಸಿಗಲು ಸಾಧ್ಯವೇ?
ಕೆ.ಜಿ.ಎಫ್ ಎನ್ನುವ ಸಿನಿಮಾ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಕನ್ನಡ ಸಿನಿಮಾವೊಂದು ಭಾರತದಾದ್ಯಂತ ಮಾರುಕಟ್ಟೆ ಸ್ಥಾಪಿಸಿಕೊಂಡಿದೆ. ಈ ಹಿಂದೆ ಒಂದಷ್ಟು ಸಿನಿಮಾಗಳು ಹೊರರಾಜ್ಯಗಳಲ್ಲಿ ಬಿಡುಗಡೆಗೊಂಡು ಖಾತೆ ತೆರೆದಿದ್ದವಾದರೂ ಈ ಮಟ್ಟಿಗೆ ಸೌಂಡು ಮಾಡಿರಲಿಲ್ಲ ಅನ್ನೋದು ನಿಜ. ಆದರೆ ಇಂಥಾ ಒಂದು ಗೆಲುವಿನಿಂದ ಈಗ ಸಿಕ್ಕ ಸ್ಥಾನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆಂದುಕೊಂಡರೆ ಅದಕ್ಕಿಂತ ಸಿನಿಕತನ ಬೇರೊಂದಿಲ್ಲ. ಹಾಗೆ ಸಿಕ್ಕ ಜಾಗವನ್ನು ನಮ್ಮದಾಗಿಸಿಕೊಳ್ಳಲು ಇಂಥಾ ಇನ್ನೊಂದಷ್ಟು ಗೆಲುವುಗಳು ಖಂಡಿತಾ ಬೇಕೇಬೇಕು. ಅಂಥಾ ಎರಡನೇ ಪ್ರಯತ್ನಕ್ಕೆ ಕೆಜಿಎಫ್ ಎರಡನೇ ಅಧ್ಯಾಯದ ಮೂಲಕ […]
ಶೆಪ್ ಅಶ್ವಿನ್ ಕೊಡಂಗೆ ಸಾರಥ್ಯದ ಸ್ವಾರ್ಥರತ್ನ!
ತಾರಾ ಹೋಟೆಲ್ಲುಗಳ ನಂಬರ್ ಒನ್ ಶೆಪ್ ಆಗಿಯೇ ಪ್ರಖ್ಯಾತರಾಗಿದ್ದವರು ಅಶ್ವಿನ್ ಕೊಡಂಗೆ. ಇದಕ್ಕಾಗಿ ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದ ಅವರು ಸಿನಿಮಾದತ್ತ ಆಕಷೀತರಾಗಿ ಈ ಕ್ಷೇತ್ರಕ್ಕೆ ಅಡಿಯಿರಿಸಿ ಎಂಟು ವರ್ಷಗಳೇ ಕಳೆದಿವೆ. ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಅವರ ಸ್ವಾರ್ಥರತ್ನ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರೌನಿಂಗ್ ಹಾರ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಸ್ವಾರ್ಥರತ್ನ ನಾಳೆ ರಾಜ್ಯಾರ್ಧಯಂತ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಆದರ್ಶ್ ಭಾರಧ್ವಾಜ್ ಮತ್ತು ಇಶಿಕಾ ವರ್ಷ […]