ಚಂಬಲ್: ಜನಸಾಮಾನ್ಯರ ಆಕ್ರೋಶದ ಕಿಡಿಯೇ ಕಥೆಯಾಯ್ತಾ? ಟ್ರೈಲರಿನಲ್ಲಿ ಕಂಡ ನೀನಾಸಂ ಸತೀಶ್ ಮೊದಲಿನಂತಿಲ್ಲ!
ಎಲ್ಲರೂ ಕಾತರದಿಂದ ಕಾಯುತ್ತಿದ್ದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ಸವಾರಿ ಬೇರೆಯದ್ದೇ ದಾರಿಯತ್ತ ಹೊರಳಿಕೊಂಡಿರೋದೂ ಕೂಡಾ ಸ್ಪಷ್ಟವಾಗಿದೆ. ಅಯೋಗ್ಯ ಚಿತ್ರಕ್ಕೆ ಸಿಕ್ಕ ಅಗಾಧ ಗೆಲುವಿನ ಖುಷಿ ಚಂಬಲ್ ಮೂಲಕ ಸತೀಶ್ ಪಾಲಿಗೆ ಮತ್ತೆ ಎದುರಾಗಲಿರೋ ಲಕ್ಷಣವೂ ದಟ್ಟವಾಗಿಯೇ ಗೋಚರಿಸಿದೆ! ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿರೋ ಚಂಬಲ್ ಟ್ರೈಲರ್ ನಿಜಕ್ಕೂ ಪವರ್ ಫುಲ್ಲಾಗಿದೆ. ಭ್ರಷ್ಟಾಚಾರದ ವಿರುದ್ಧ ಎದೆಯೊಡ್ಡಿ ನಿಲ್ಲೋ ಖಡಕ್ ಅಧಿಕಾರಿಯೊಬ್ಬನ ರೋಚಕ ಕಥನವನ್ನ ಈ ಸಿನಿಮಾ […]
ವಿಷ್ಣು ಅಭಿಮಾನಿಗಳಿಗೆ ಪಡ್ಡೆಹುಲಿಯ ಹಾಡು ಅರ್ಪಣೆ! ಸಾಹಸ ಸಿಂಹನ ಭಕ್ತರಿಗೆಂದೇ ವಿಶೇಷ ಪ್ರದರ್ಶನ!
ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ನಾನಾ ರೀತಿಯಲ್ಲಿ ಪಡ್ಡೆಹುಲಿ ಘರ್ಜಿಸಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತ ವಲಯದಲ್ಲಿದ್ದ ಮಂಜು ಮಗನ ಚಿತ್ರದ ಮೂಲಕ ತಮ್ಮ ವಿಷ್ಣು ಅಭಿಮಾನವನ್ನ ಮತ್ತೆ ತೋರ್ಪಡಿಸಿದ್ದಾರೆ. ಪಡ್ಡೆಹುಲಿಯ ವಿಶೇಷವಾದೊಂದು ಹಾಡನ್ನ ವಿಷ್ಣುವರ್ಧನ್ ರಿಗೆ ಅರ್ಪಿಸಿರೋ ಮಂಜು, ಅವರ ಅಭಿಮಾನಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಸಿನಿಮಾ ತಂಡ ಆರಂಭದಿಂದಲೂ ವಿಷ್ಣು ಅಭಿಮಾನದ ಪಥದಲ್ಲಿಯೇ ಸಾಗಿ ಬಂದಿದೆ. ಇದೀಗ […]
ಬೆಂಗಳೂರು ಚಿತ್ರೋತ್ಸವ: ರೇಸಿನಲ್ಲಿ ಗೆದ್ದ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು!
ಲೋಕೇಂದ್ರ ಸೂರ್ಯ ನಿರ್ದೇಶನ ಮಾಡಿ ನಟಿಸಿರುವ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಖಂಡ ಎಪ್ಪತ್ತರಷ್ಟು ಸಿನಿಮಾಗಳ ರೇಸಿನಲ್ಲಿ ಗೆದ್ದು ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ. ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂಡಿಯನ್, ಏಷ್ಯನ್ ಮತ್ತು ಕನ್ನಡ ವಿಭಾಗಳಿರುತ್ತವೆ. ಇದರಲ್ಲಿ ಕನ್ನಡ ವಿಭಾಗದಲ್ಲಿ ಸರಿಸುಮಾರು ಎಪ್ಪತ್ತು ಚಿತ್ರಗಳು ರೇಸಿನಲ್ಲಿದ್ದವು. ಅದರಲ್ಲಿ ಆಯ್ಕಯಾದ ಹದಿನಾರು ಚಿತ್ರಗಳಲ್ಲಿ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರವೂ ಸೇರಿಕೊಂಡಿದೆ. ಇದು ಭಿನ್ನ ಕಥಾ ಹಂದರ ಹೊಂದಿರೋ […]
ಸಿನಿಮಾವನ್ನು ಧ್ಯಾನಿಸೋ ಹುಡುಗನ ಡಿಜಿಟಲ್ ಕ್ಯಾಲೆಂಡರ್!
ನಿರ್ಮಾಪಕ ಬೆಂಕೋಶ್ರೀ ಪುತ್ರ ಅಕ್ಷರ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ತಿಂಗಳ ಹಿಂದೆ ನಿರ್ಮಾಪಕ ಮತ್ತು ವಿತರಕ ಬಿ.ಕೆ.ಶ್ರೀನಿವಾಸ್ ತಮ್ಮ ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿಯೇ ಇಂಥಾದ್ದೊಂದು ಸುಳಿವು ಸಿಕ್ಕಿತ್ತು. ಇದೀಗ ಅಕ್ಷರ್ ತನ್ನ ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿಸಿಕೊಂಡಿದ್ದಾರೆ. ಈತ ಮಾಡಿಕೊಂಡಿಕೊಂಡಿರೋ ತಯಾರಿ, ಕ್ರಿಯೇಟಿವಿಟಿ ನಿಜಕ್ಕೂ ಮೆಚ್ಚಿಕೊಳ್ಳುವಂತಿದೆ. ಈ ತಯಾರಿಗೆ ಸಾಕ್ಷಿಯೆಂಬಂತೆ ಅಕ್ಷರ್ ರೂಪಿಸಿರೋ ಡಿಜಿಟಲ್ ಕ್ಯಾಲೆಂಡರ್ನ ವೀಡಿಯೋ ವರ್ಷನ್ ಇಂದು ಸಂಜೆ ಬಿಡುಗಡೆಯಾಗಲಿದೆ. ಇದನ್ನು ಅಕ್ಷರ್ ತಮಿಳಿನಲ್ಲಿಯೂ […]
ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಿರ್ಮಾಪಕಿ!
ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ’ಈಸ್ ನಾಟ್ ಇಟ್ ರೊಮ್ಯಾಂಟಿಕ್’ ಹಾಲಿವುಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ಮೂರನೇ ಹಾಲಿವುಡ್ ಚಿತ್ರ. ಎರಡು ವರ್ಷಗಳ ಹಿಂದೆ ’ಬೇವಾಚ್’ ಚಿತ್ರದೊಂದಿಗೆ ಹಾಲಿವುಡ್ ಪ್ರವೇಶಿಸಿದ ಅವರ ಎರಡನೇ ಇಂಗ್ಲಿಷ್ ಸಿನಿಮಾ ’ಎ ಕಿಡ್ ಲೈಕ್ ಜೇಕ್’ ಕಳೆದ ವರ್ಷ ತೆರೆಕಂಡಿತ್ತು. ಇದೀಗ ನಟಿ ಪ್ರಿಯಾಂಕಾ ಹಾಲಿವುಡ್ ಚಿತ್ರವೊಂದರ ನಿರ್ಮಾಣಕ್ಕೆ ಸಜ್ಜಾಗಿದ್ದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅವರೇ ನಟಿಸಲಿದ್ದಾರೆ. ಭಾರತೀಯ ಮೂಲದ ವಿವಾದಿತ ಧರ್ಮಗುರು ಓಶೋ ರಜನೀಶ್ ಅವರ […]
ರಾಜೇಂದ್ರ ಪೊನ್ನಪ್ಪನ ಬಗ್ಗೆ ರವಿಮಾಮ ಏನಂದ್ರು?
ಕನಸುಗಾರ ರವಿಚಂದ್ರನ್ ಬಹುನಿರೀಕ್ಷಿತ ಚಿತ್ರ ರಾಜೇಂದ್ರ ಪೊನ್ನಪ್ಪ. ಕ್ರೇಜಿಸ್ಟಾರ್ ಹಳೇ ಸೋಲುಗಳಿಂದ ಮೈ ಕೊಡವಿಕೊಂಡು ಮೇಲೇಳುವ ಜೋಶ್ನೊಂದಿಗೇ ಈ ಸಿನಿಮಾವನ್ನು ಶುರು ಮಾಡಿದ್ದರು. ಆರಂಭದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ರಾಜೇಂದ್ರ ಪೊನ್ನಪ್ಪನ ಸೌಂಡು ಇತ್ತೀಚೆಗೆ ಕಡಿಮೆಯಾದಂತಿದೆ. ಯಾಕೆ ಹೀಗೆ, ಮತ್ತೆ ಏನಾದರೂ ಕಂಟಕ ಎದುರಾಯ್ತಾ ಅಂತ ಅಭಿಮಾನಿಗಳು ಕಸಿವಿಸಿಗೊಂಡಿರುವಾಗಲೇ ಈ ಬಗ್ಗೆ ರವಿಮಾಮ ಮಾತಾಡಿದ್ದಾರೆ! ಎಲ್ಲವೂ ಒಂದೇ ವೇಗದಲ್ಲಿ ನಡೆದಿದ್ದರೆ ಇಷ್ಟು ಹೊತ್ತಿಗೆಲ್ಲ ರಾಜೇಂದ್ರ ಪೊನ್ನಪ್ಪ ಚಿತ್ರ ತಯಾರಾಗಿ ಬಿಡುತ್ತಿತ್ತು. ಆದರೀಗ ಶೇಖಡಾ ಐವತ್ತರಷ್ಟು ಚಿತ್ರೀಕರಣ […]
ಟಾಲಿವುಡ್ಗೆ ಎಂಟ್ರಿ ಕೊಟ್ಟ ಖಲಿ!
ಡಬ್ಲೂಡಬ್ಲೂಎಫ್ ಸೂಪರ್ಸ್ಟಾರ್ ದಿ ಗ್ರೇಟ್ ಖಲಿ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಜಯಂತ್ ಸಿ.ಪರಾಂಜಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ’ನರೇಂದ್ರ’ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ನೀಲೇಶ್ ಮತ್ತು ಇಸಾಬೆಲ್ಲಾ ಪ್ರಮುಖ ಪಾತ್ರದಲ್ಲಿರುವ ಇದೊಂದು ಬಾಕ್ಸಿಂಗ್ ಡ್ರಾಮಾ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಶೆಡ್ಯೂಲ್ನಲ್ಲಿ ಖಲಿ ಕ್ಯಾಮೆರಾ ಎದುರಿಸಲಿದ್ದಾರೆ. ವೃತ್ತಿಪರ ಡಬ್ಲೂಡಬ್ಲೂಎಫ್ ಸ್ಟಾರ್ ದಿ ಗ್ರೇಟ್ ಖಲಿ ಈ ಮೊದಲು ’ದಿ ಲಾಂಗೆಸ್ಟ್ ಯಾರ್ಡ್’ ಇಂಗ್ಲಿಷ್ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ್ದರು. ’ಗೆಟ್ ಸ್ಮಾರ್ಟ್’, […]
ಚಾಲೆಂಜಿಂಗ್ ಸ್ಟಾರ್ ಪಾಶುಪತಾಸ್ತ್ರ!
ದರ್ಶನ್ ಅಭಿಮಾನಿಗಳ ಪಾಲಿಗೆ ಈ ವರ್ಷ ಎಂದಿಗಿಂತಲೂ ವಿಶೇಷ. ಒಂದರ ಹಿಂದೊಂದರಂತೆ ಚಾಲೆಂಜಿಂಗ್ ಸ್ಟಾರ್ ಚಿತ್ರಗಳು ಬಿಡುಗಡೆಗೆ ತಯಾರಾಗಿರುವಾಗಲೇ ಮತ್ತೊಂದಷ್ಟು ಹೊಸಾ ಸಿನಿಮಾಗಳ ವಿವರಗಳೂ ಹೊರ ಬೀಳುತ್ತಿವೆ. ಇತ್ತ ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳಲ್ಲಿ ಯಾವುದು ಐವತ್ತೊಂದನೇ ಚಿತ್ರವಾಗುತ್ತೆ ಅನ್ನೋ ಚರ್ಚೆಗಳು ನಡೆಯುತ್ತಿರುವಾಗಲೇ ಐವತೈದನೇ ಸಿನಿಮಾದ ಟೈಟಲ್ ಹೊರ ಬಿದ್ದಿದೆ! ದರ್ಶನ್ ಅವರ ಐವತ್ತೆರಡನೇ ಚಿತ್ರ ಒಡೆಯ. ಇನ್ನುಳಿದಂತೆ ರಾಬರ್ಟ್ ಐವತ್ಮೂರನೆಯದ್ದಾದರೆ ಗಂಡುಗಲಿ ಮದಕರಿ ನಾಯಕ ಐವತ್ತ ನಾಲಕ್ಕನೇ ಚಿತ್ರ. ಹೀಗಿರುವಾಗಲೇ ದರ್ಶನ್ ಐವತೈದನೇ ಸಿನಿಮಾಕ್ಕೆ ಪಾಶುಪತಾಸ್ತ್ರ […]
ಡಬ್ ಸ್ಮ್ಯಾಶ್ ಹುಡ್ಗೀರ ರ್ಯಾಪ್ ಸಾಂಗ್!
ರ್ಯಾಪ್ ಸಾಂಗ್ಗಳಿಗೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಅದರಲ್ಲಿ ಹೊಸಾ ಥರದ ಪ್ರಯೋಗಗಳೂ ವ್ಯಾಪಕವಾಗಿ ನಡೆಯುತ್ತಿವೆ. ಅದೇ ಹಾದಿಯಲ್ಲಿ ವಿಜೇತ್ ಸಂಗೀತ ಸಂಯೋಜನೆಯಲ್ಲೊಂದು ರ್ಯಾಪ್ ಸಾಂಗ್ ಬಿಡುಗಡೆಗೊಂಡಿದೆ. ಹುಡುಗೀರನ್ನು ಆವರಿಸಿಕೊಳ್ಳುತ್ತಾ, ಬಣ್ಣದ ಕನಸು ಬಿತ್ತುವ ಡಬ್ ಸ್ಮ್ಯಾಶ್ ಥೀಮ್ನಲ್ಲಿ ತಯಾರಾಗಿರೋ ಈ ಹಾಡೀಗ ಜನಪ್ರಿಯಗೊಳ್ಳುತ್ತಿದೆ. ಈ ವೀಡಿಯೋ ಸಾಂಗ್ ಅನ್ನು ಉದಯ್ ಪಿಸುಮಾತು ನಿರ್ದೇಶನ ಮಾಡಿದ್ದಾರೆ. ಜೀವಿತಾ ಸುಬ್ರಮಣ್ಯ ನಿರ್ಮಾಣ ಮಾಡಿದ್ದಾರೆ. ಹರ್ಷಿತಾ ಸುಬ್ರಹ್ಮಣ್ಯ ಈ ಹಾಡನ್ನು ಹಾಡಿ ನಟಿಸಿದ್ದಾರೆ. ರ್ಯಾಪ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಜೇತ್ […]
ಮೇಲೊಬ್ಬ ಮಾಯಾವಿ: ಇದು ಎಲ್.ಎನ್ ಶಾಸ್ತ್ರಿಯವರ ಕಡೇಯ ಹಾಡು!
ಎಲ್.ಎನ್ ಶಾಸ್ತ್ರಿ ತಮ್ಮ ಕಡೇಯ ದಿನಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದ, ಹಾಡಿದ್ದ ಕೊನೆಯ ಚಿತ್ರ ಮೇಲೊಬ್ಬ ಮಾಯಾವಿ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮುಖ್ಯ ಪಾತ್ರವನ್ನೂ ಕೂಡಾ ಈ ಸಿನಿಮಾದಲ್ಲಿ ಚಂದ್ರಚೂಡ್ ನಿರ್ವಹಿಸಿದ್ದಾರೆ. ಇದೀಗ ಮೇಲೊಬ್ಬ ಮಾಯಾವಿ ಹಾಡುಗಳು ಎಲ್ಲಡೆ ಹರಿದಾಡುತ್ತಿವೆ. ಖ್ಯಾತ ಗಾಯಕ ಎಲ್. ಎನ್ ಶಾಸ್ತ್ರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಹಂತದಲ್ಲಿ ಅನಾರೋಗ್ಯದಿಂದ ಕಂಗಾಲಾಗಿದ್ದರೂ ತಮ್ಮ ಕೆಲಸವನ್ನವರು ಉತ್ಸಾಹದಿಂದಲೇ ನಿರ್ವಹಿಸಿದ್ದರು. ಕಡೆಗೆ ರೆಕಾರ್ಡಿಂಗಿಗೂ ಬರಲಾರದ ಪರಿಸ್ಥಿತಿ ಹೊಂದಿದ್ದರೂ ಕೂಡಾ […]