ವಿಜಯಲಕ್ಷ್ಮಿಗೆ ನೆರವಾದ ಕಿಚ್ಚಾ ಸುದೀಪ್!
ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋದು, ಚಿಕಿತ್ಸಾ ವೆಚ್ಚವನ್ನೂ ಭರಿಸಲಾಗದೆ ಸಹಾಯಕ್ಕಾಗಿ ಚಿತ್ರರಂಗದ ಮುಂದೆ ಅಂಗಲಾಚಿದ್ದೆಲ್ಲ ಗೊತ್ತೇ ಇದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದ ಈ ನಟಿಗೆ ನಾನಾ ದಿಕ್ಕುಗಳಿಂದ ಸಹಾಯಹಸ್ತ ಚಾಚಿಕೊಳ್ಳುತ್ತಿದೆ. ಕಿಚ್ಚಾ ಸುದೀಪ್ ಕೂಡಾ ಈಗ ವಿಜಯಲಕ್ಷ್ಮಿ ಅವರ ಸಂಕಟಕ್ಕೆ ಮಿಡಿದಿದ್ದಾರೆ. ಒಂದು ಲಕ್ಷ ರೂಪಾಯಿಗಳ ನೆರವನ್ನು ಸುದೀಪ್ ನೀಡಿದ್ದಾರೆ. ಈ ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಅವರೇ ಖಚಿತಪಡಿಸಿದ್ದಾರೆ. ಈ […]
ಕಿರುತೆರೆಗೆ ಎಂಟ್ರಿ ಕೊಟ್ರು ವಿನಯ್ ರಾಜ್ ಕುಮಾರ್!
ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಈಗ ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ವಿನಯ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಬರೋದು ಮಾಮೂಲು. ಆದರೆ ವಿನಯ್ ಬಹು ಬೇಡಿಕೆಯಲ್ಲಿರುವಾಗಲೇ ಕಿರುತೆರೆಗೆ ಯಾಕೆ ವಲಸೆ ಹೋದರು ಅನ್ನೋ ಅಚ್ಚರಿ ಕಾಡೋದು ಸಹಜವೇ ಅಂದಹಾಗೆ ವಿನಯ್ ರಾಜ್ ಕುಮಾರ್ ಕಿರುತೆರೆಗೆ ಎಂಟ್ರಿ ಕೊಟ್ಟಿರೋದರ ಹಿಒಂದೆ ಅವರ ತಾಯಿಯ ಆಸೆಯೊಂದಿದೆ! ಒಂದು ಸುದೀರ್ಘ ಗ್ಯಾಪ್ ನ ನಂತರ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ನಡಿಯಲ್ಲಿ […]
ಒಂದು ಕಥೆ ಹೇಳ್ಲಾ: ನಶೆಯೇರಿಸಿತು ಹಾರರ್ ಸೋಬಾನೆ ಹಾಡು!
ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಒಂದು ಕಥೆ ಹೇಳ್ಲಾ. ಗಿರೀಶ್ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿರೋ ಈ ಸಿನಿಮಾ ಇದೇ ಮಾರ್ಚ್ ೮ರಂದು ಬಿಡುಗಡೆಗೆ ಅಣಿಯಾಗಿದೆ. ಅಷ್ಟದಿಕ್ಕುಗಳಿಂದಲೂ ಕುತೂಹಲ, ನಿರೀಕ್ಷೆಗಳು ಮೂಡಿಕೊಂಡಿರುವ ಈ ಘಳಿಉಗೆಯಲ್ಲಿಯೇ ಈ ಚಿತ್ರದ ನಶೆಯ ಹಾಡೊಂದು ಎಲ್ಲರಿಗೂ ಕಿಕ್ಕೇರಿಸುವಂತೆ ಬಿಡುಗಡೆಯಾಗಿದೆ. ಸೋಬಾನೆಂಬೋದೇ ಶಿವನಿಗೆ ಅಂತ ಆರಂಭವಾಗೋ ಈ ಹಾಡು ಧೂಮಲೀಲೆಯ, ಅಗಾಧ ನಶೆಯ ಚಿತ್ರಾವಳಿಗಳ ಮೂಲಕ ಯುವ ಸಮೂಹವನ್ನು ಆವರಿಸಿಕೊಂಡಿದೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ […]
ಪಡ್ಡೆಹುಲಿ ಟ್ರೈಲರ್ ಬಿಡುಗಡೆಗೊಳಿಸಿದರು ಯಜಮಾನ!ಇದು ಪಕ್ಕಾ ಫ್ಯಾಮಿಲಿ ಫ್ಲೇವರ್ ಪಡ್ಡೆಹುಲಿ!
ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ಈ ಹೆಸರು ಕೇಳಿದೇಟಿಗೆ ಒಟ್ಟಾರೆ ಕಥೆಯ ಬಗ್ಗೆ ತಮ್ಮದೇ ಅಂದಾಜು ಹೊಂದಿದ್ದವರನ್ನೆಲ್ಲ ಅಚ್ಚರಿಗೊಳಿಸುವಂತೆ ಈ ಟ್ರೈಲರ್ ಹೊರ ಬಂದಿದೆ. ಇದು ಎಲ್ಲ ಅಂಶಗಳನ್ನೂ ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಎಂಬ ವಿಚಾರವೂ ಈ ಮೂಲಕವೇ ಜಾಹೀರಾಗಿದೆ.ಬಾಲ್ಯ, ಕುಟುಂಬ, ಮಾಸ್, ಪ್ರೀತಿ, ಹಾಸ್ಯ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ನಿರ್ದೇಶಕ ಗುರುದೇಶಪಾಂಡೆ ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ಇದೇ ಈಗ ಯಜಮಾನ […]
ಕಾಡಿಗೆ ಕಿಚ್ಚಿಟ್ಟ ಖೂಳರ ರಹಸ್ಯ ಬಿಚ್ಚಿಟ್ಟರು ದರ್ಶನ್!ಪ್ರಾಣಿಗಳ ವೇದನೆ ಕಂಡು ಮರುಗಿದ ದಾಸ!ಆನೆ ಲದ್ದಿಯಲ್ಲಿದೆ ಮನುಷ್ಯರ ರಾಕ್ಷಸ ಬುದ್ಧಿ!
ಬಂಡೀಪುರದ ದಟ್ಟ ಕಾಡಿಗೆ ಬೆಂಕಿ ಬಿದ್ದು ನೂರಾರು ಎಕರೆಗಳಷ್ಟು ದಟ್ಟ ಕಾಡು ಸುಟ್ಟು ಕರಕಲಾಗಿವೆ. ಮನುಷ್ಯ ಜಗತ್ತಿನ ಸ್ವಾರ್ಥದ ಫಲವೆಂಬಂತೆ ಹಸಿರಿನೊಂದಿಗೆ ಅದೆಷ್ಟೋ ಅಮೂಲ್ಯ ಜೀವ ಸಂಕುಲವೂ ನಾಮಾವಶೇಷಗೊಂಡಿದೆ. ಹೆಚ್ಚೇನಲ್ಲ, ತಿಂಗಳ ಹಿಂದೆಯೇ ಇದೇ ಕಾಡಿನಲ್ಲಿ ಸಫಾರಿ ನಡೆಸಿ, ಫೋಟೋಗ್ರಫಿಯ ಮೂಲಕ ಖುಷಿಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಘಟನೆಯಿಂದಾಗಿ ಆಘಾತಗೊಂಡಿದ್ದಾರೆ. ತಮ್ಮ ಪಾಡಿಗೆ ತಾವು ಸ್ವಚ್ಚಂದವಾಗಿ ಕಾಡೊಳಗೆ ಓಡಾಡಿಕೊಂಡಿದ್ದ ಪ್ರಾಣಿಗಳಿಗೆ ಬಂದೊದಗಿದ ದುರವಸ್ಥೆ ಕಂಡು ಮಮ್ಮಲ ಮರುಗಿದ್ದಾರೆ. ಇದೀಗ ಅವರ ಮುಂದೆ ಒಂದು ಕಾಲದಲ್ಲಿ ಅವರೇ […]
’ಬೆಕ್ಕಿಗೊಂದು ಮೂಗುತಿ’ಯ ಹಾಡು ಬಂತು!
ಪ್ರತಿಷ್ಟಿತ ಸಂಸ್ಥೆ ಲಹರಿ ಕಂಪೆನಿಯಲ್ಲಿ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಲಭ್ಯವಿದೆ. ಸದ್ಯ ಐವತ್ತು ಲಕ್ಷ ಚಂದದಾರರು ಆಗ್ತಾ ಇದ್ದಾರೆಂದು ಲಹರಿವೇಲು ಸಂತಸವನ್ನು ಹಂಚಿಕೊಂಡರು. ’ಬೆಕ್ಕಿಗೊಂದು ಮೂಗುತಿ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಸದರಿ ವಿಷಯವನ್ನು ಮಾದ್ಯಮದವರಿಗೆ ತಿಳಿಸಿದರು. ಮಾತು ಮುಂದುವರೆಸುತ್ತಾ ಮೂರು ದಶಕಗಳಿಂದ ಗಂದದ ಪೆಟ್ಟಿಗೆಯಲ್ಲಿ ಕ್ಯಾಸೆಟ್, ಸಿಡಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು. ಡಾ.ಭೀಮಸೇನ್ಜೋಷಿ, ಡಾ.ರಾಜ್ಕುಮಾರ್, ಇಳಯರಾಜ ಮುಂತಾದವರು ಮುಟ್ಟಿದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಇಡಲಾಗಿದೆ. ಅರ್ಧ ಲಕ್ಷ ಚಂದದಾರರು ಬಂದಿರುವ ಕಾರಣ ಇನ್ನು ಮುಂದೆ ಚಿನ್ನದ ಕೋಟ್ […]
ಪಾರ್ವತಮ್ಮನ ಮಗಳಿಗೆ ಸಿಕ್ಕಿತು ಯು ಸರ್ಟಿಫಿಕೆಟ್!
ದಿಶ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಬಿಡುಗಡೆಗೆ ತಯಾರಾಗಿರುವ ಈ ಚಿತ್ರಕ್ಕೀಗ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಸಿಕ್ಕಿದೆ. ಹರಿಪ್ರಿಯಾ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಇದುವರೆಗಿನ ಸಿನಿ ಕೆರಿಯರ್ನಲ್ಲೇ ಡಿಫರೆಂಟಾದ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಇನ್ವೇಸ್ಟಿಗೇಷನ್ ಆಫಿಸರ್ ಪಾತ್ರ. ಇಡೀ ಚಿತ್ರದ ತುಂಬಾ ಖಡಕ್ ಲುಕ್ಕಿನಲ್ಲೇ ಕಾಣಿಸಿಕೊಳ್ಳಲಿರೋ ಈ ಪಾತ್ರಕ್ಕೆ ಮತ್ತೊಂದು ಶೇಡ್ ಕೂಡಾ ಇದೆಯಂತೆ. ಇದರಲ್ಲಿ ಸುಮಲತಾ ಹರಿಪ್ರಿಯಾ ಅವರ ಅಮ್ಮನಾಗಿ ನಟಿಸಿದ್ದಾರೆ. […]
ಪಡ್ಡೆಹುಲಿಗೆ ಚಾಲೆಂಜಿಂಗ್ ಸ್ಟಾರ್ ಸಾಥ್! ಟ್ರೈಲರ್ ಲಾಂಚ್ ಮಾಡಲಿದ್ದಾರೆ ಡಿ ಬಾಸ್!
ಎಮ್. ರಮೇಶ್ ರೆಡ್ಡಿ ನಿರ್ಮಾಣದ ಪಡ್ಡೆಹುಲಿ ಚಿತ್ರದ ಮೇಲಿನ ನಿರೀಕ್ಷೆ ನಿಗಿನಿಗಿಸಲಾರಂಭಿಸಿದೆ. ಗುರುದೇಶಪಾಂಡೆ ನಿರ್ದೇಶನದ ಈ ಸಿನಿಮಾ ಮೂಲಕ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಹೊಸಾ ಹುಡುಗ ಶ್ರೇಯಸ್ಗೆ ಟ್ರೈಲರ್ ಬಿಡುಗಡೆ ಮಾಡೋ ಮೂಲಕ ಸಾಥ್ ನೀಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾಗಿದ್ದಾರೆ. ನಾಳೆ ಸಂಜೆ ಆರು ಘಂಟೆಯ ಹೊತ್ತಿಗೆಲ್ಲ ಪಡ್ಡೆಹುಲಿ ಟ್ರೈಲರ್ ಅನ್ನು ದರ್ಶನ್ ಪಿಆರ್ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲಿದ್ದಾರೆ. ಪರಿಶ್ರಮ ಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ […]
ಸಂಭ್ರಮಾಶ್ಚರ್ಯವೆಂಬ ಬಾಲ’ಲೀಲೆ!
ತೆಲುಗು ಸ್ಟಾರ್ ನಟ ಬಾಲಯ್ಯ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ನಟ. ಆಂಧ್ರ ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲೂ ಬಾಲಕೃಷ್ಣರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ತೆರೆ ಮೇಲೆ ಸಿಂಹದಂತೆ ಗರ್ಜಿಸೋ ಬಾಲಯ್ಯ ಚಿತ್ರದ ಖಳರ ವಿರುದ್ಧ ನಡೆಸುವ ಆಟಾಟೋಪಗಳು ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತಾಡೋ ಬಾಲಯ್ಯನ ಡೈಲಾಗ್ಸ್ಗೆ ಚಪ್ಪಾಳೆ ಶಿಳ್ಳೆ ಖಚಿತ. ಇಂತಿಪ್ಪ ಬಾಲಯ್ಯ ರಿಯಲ್ ಲೈಫಿನಲ್ಲಿ ಆಡುವ ಮಾತೊಂದು ಆಂಧ್ರದಲ್ಲಿ ಅಪಹಾಸ್ಯಕ್ಕೀಡಾಗಿದೆ. ಗೊತ್ತೋ ಗೊತ್ತಿಲ್ಲದೆಯೋ ಬಾಲಯ್ಯ ಒಂದು ಪದವನ್ನ ಮಾತಾಡುತ್ತಲೇ ಇದ್ದಾರೆ, ಆ ಮಾತು […]
ರಾಯ್, ಮಾವಿನಕಾಯಿ ಮತ್ತು ಗರ್ಭಿಣಿ!
ಒಬ್ಬಲ್ಲಾ ಒಬ್ಬ ನಟನ ಜೊತೆ ಸದಾ ಕಾಲ ಹೆಸರು ತಳುಕು ಹಾಕಿಕೊಂಡಿರುವ ನಟಿಯೇನಾದರೂ ಇದ್ದರೆ ಅದು ಲಕ್ಷ್ಮಿ ರಾಯ್ ಎಂಬುದು ನಿಸ್ಸಂಶಯ. ಚಿತ್ರರಂಗಕ್ಕೆ ಬಂದು ಹದಿನೈದು ಸಂವತ್ಸರಗಳನ್ನ ಸವೆಸಿರುವ ಲಕ್ಷ್ಮಿ ರಾಯ್, ಈ ಕಾರಣದಿಂದಲೇ ಒಮ್ಮೊಮ್ಮೆ ರೇಜಿಗೀಡಾಗುತ್ತಾರಂತೆ. ‘ಸಿನಿಮಾ ಪ್ರವೇಶ ಮಾಡುವುದಕ್ಕೆ, ಅವಕಾಶ ಪಡೆಯುವುದಕ್ಕೆ ನನಗೆ ಸಮಸ್ಯೆಗಳೆದುರಾಗಲಿಲ್ಲ. ಆದರೆ ಅದನ್ನ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗಿಬಿಡುತ್ತಿತ್ತು. ಯಾಕೆಂದರೆ ಆರಂಭಿಕ ದಿನಗಳಲ್ಲಿ ನನ್ನನ್ನ ದಿಕ್ಕು ತಪ್ಪಿಸುವುದಕ್ಕೆಂದೇ ಕೆಲವರು ಸಿದ್ಧವಾಗಿರುತ್ತಿದ್ದರು. ಅವರಿಂದಾಗಿಯೂ ನಾನು ವಿವಾದಗಳನ್ನ ಫೇಸ್ ಮಾಡಬೇಕಾಯ್ತು. ಈಗ […]